'ಆಕಾಶ'ದಿಂದ ಮದುವೆ ಮಂಟಪಕ್ಕೆ ಸೂಪರ್ ಎಂಟ್ರಿ: ವಿಡಿಯೋ ವೈರಲ್

groom

groom

ಭಾರತೀಯ ಮೂಲದ ಅಮೆರಿಕ ನಿವಾಸಿ ಆಕಾಶ್ ಯಾದವ್ ಇಂತಹದೊಂದು ಸಾಹಸ ಮಾಡಿ ಸುದ್ದಿಯಾಗಿರುವವರು. ಮೆಕ್ಸಿಕೋದ ಲಾಸ್ ಕ್ಯಾಬೋಸ್‍ನಲ್ಲಿ ಗಗನ್‍ಪ್ರೀತ್ ಸಿಂಗ್ ಎಂಬವರೊಂದಿಗೆ ಮದುವೆ ಫಿಕ್ಸ್ ಮಾಡಲಾಗಿತ್ತು.

  • Share this:

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಥೀಮ್​ ವೆಡ್ಡಿಂಗ್ ಕಾನ್ಸೆಪ್ಟ್​ಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವವರೇ ಹೆಚ್ಚು. ಕೆಲವರು ಬ್ಯಾಂಡ್ ಬಜಾಯಿಸುತ್ತಾ ಆಗಮಿಸಿದರೆ, ಇನ್ನು ಕೆಲ ನವ ವಧು-ವರರು ಕುಣಿದು ಕುಪ್ಪಳಿಸುತ್ತಾ ಮಂಟಪಕ್ಕೆ ಎಂಟ್ರಿ ಕೊಡುತ್ತಾರೆ.

ಆದರೆ ಇವೆಲ್ಲವನ್ನು ಮೀರಿಸುವಂತೆ ಮಧುಮಗನೊಬ್ಬ ಸೂಪರ್ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾರೆ. ಹೌದು, ಸ್ಕೈ ಡೈವಿಂಗ್ ಮೂಲಕ ವರ ತನ್ನ ಮದುವೆಗೆ ಎಂಟ್ರಿ ಕೊಟ್ಟ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತೀಯ ಮೂಲದ ಅಮೆರಿಕ ನಿವಾಸಿ ಆಕಾಶ್ ಯಾದವ್ ಇಂತಹದೊಂದು ಸಾಹಸ ಮಾಡಿ ಸುದ್ದಿಯಾಗಿರುವವರು. ಮೆಕ್ಸಿಕೋದ ಲಾಸ್ ಕ್ಯಾಬೋಸ್‍ನಲ್ಲಿ ಗಗನ್‍ಪ್ರೀತ್ ಸಿಂಗ್ ಎಂಬವರೊಂದಿಗೆ ಮದುವೆ ಫಿಕ್ಸ್ ಮಾಡಲಾಗಿತ್ತು. ಅದರಂತೆ ಮಂಟಪದಲ್ಲಿ ಮಧುಮಗನಿಗಾಗಿ ಕಾದು ಕುಳಿತಿದ್ದವರಿಗೆ ಕಂಡಿದ್ದು ಆಕಾಶದಿಂದ ಇಳಿದು ಬರುತ್ತಿರುವ ವರ.

ಆಕಾಶ್ ಸ್ಕೈ ಡೈವಿಂಗ್ ಮಾಡುವ ಮೂಲಕ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದರು. ಪ್ಯಾರಾಚೂಟ್ ಮೂಲಕ ಧರೆಗಿಳಿದ ಮಧುಮಗನ ನೋಡುತ್ತಿದ್ದಂತೆ ನೆರೆದಿದ್ದವರೆಲ್ಲರೂ ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್

ವೃತ್ತಿಯಲ್ಲಿ ಡ್ಯಾನ್ಸರ್ ಆಗಿರುವ ಆಕಾಶ್, ಕೆಲ ಶಾರ್ಟ್​ ಫಿಲಂಸ್​ಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇನ್ನು ತಮ್ಮ ಮದುವೆ ವಿಭಿನ್ನವಾಗಿಸುವ ಸಲುವಾಗಿ ಇಂತಹದೊಂದು ಸ್ಪೆಷಲ್ ಪ್ರಯೋಗ ಮಾಡಿರುವುದಾಗಿ ಆಕಾಶ್ ಹೇಳಿಕೊಂಡಿದ್ದಾರೆ. ಸದ್ಯ ಮಧುಮಗನ ಸೂಪರ್ ಎಂಟ್ರಿಯ ವಿಡಿಯೋವಂತು ಸಖತ್ ವೈರಲ್ ಆಗಿದೆ.First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು