• Home
  • »
  • News
  • »
  • lifestyle
  • »
  • Turmeric And Salt: ಬೇಯಿಸುವ ಮುನ್ನ ಮೀನಿಗೆ ಉಪ್ಪು, ಅರಶಿನ ಬೆರೆಸಿ ಇಡೋದರ ಹಿಂದಿನ ಆರೋಗ್ಯಕಾರಿ ರಹಸ್ಯ

Turmeric And Salt: ಬೇಯಿಸುವ ಮುನ್ನ ಮೀನಿಗೆ ಉಪ್ಪು, ಅರಶಿನ ಬೆರೆಸಿ ಇಡೋದರ ಹಿಂದಿನ ಆರೋಗ್ಯಕಾರಿ ರಹಸ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಹಾರದ ತಾಜಾತನವನ್ನು ಉಳಿಸುವಲ್ಲಿ ಇವೆರಡೂ ಸಹಕಾರಿಯಾಗಿದೆ. ಮೀನು ಪ್ರೋಟೀನ್‌ನ ಆಗರವಾಗಿದ್ದು ಇದು ಬೇಗನೇ ಕೆಡುತ್ತದೆ, ಇದರಿಂದ ಉಪ್ಪು ಬಳಸಿ ಅದನ್ನು ನೆನೆಸಿಡುವುದು ಮೀನನ್ನು ಹೆಚ್ಚುಕಾಲ ಹಾಳಾಗದಂತೆ ಕಾಪಾಡುತ್ತದೆ.

  • Trending Desk
  • 5-MIN READ
  • Last Updated :
  • Share this:

ಭಾರತೀಯ ಪಾಕ ಪದ್ಧತಿಯಲ್ಲಿ (Indian Food) ಅರಶಿನ (Turmeric) ಹಾಗೂ ಉಪ್ಪು (Salt) ತನ್ನದೇ ಆದ ವಿಶೇಷ ಮಹತ್ವನ್ನು ಹೊಂದಿವೆ. ಸಾಂಪ್ರದಾಯಿಕ ಮಾಂಸಾಹಾರಿ ಅಡುಗೆ ಪದ್ಧತಿಯಲ್ಲಿ (Non Veg Cooking) ಮೀನು ಇಲ್ಲವೇ ಮಾಂಸವನ್ನು (Fish And Meat)  ಬೇಯಿಸುವ ಮೊದಲು ಉಪ್ಪು, ಅರಶಿನ ಮೊದಲಾದ ಮಸಾಲೆಗಳನ್ನು ಮಿಶ್ರ ಮಾಡಿ ನೆನೆಸಲಾಗುತ್ತದೆ (ಮ್ಯಾರಿನೇಟ್), ಅದೇ ರೀತಿ ಪಾಶ್ಚಾತ್ಯ ಅಡುಗೆ ಪದ್ಧತಿಯಲ್ಲಿ (Western Cooking Style) ಮೀನು ಇಲ್ಲವೇ ಮಾಂಸವನ್ನು ಉಪ್ಪು, ಮೆಣಸು, ಗಿಡಮೂಲಿಕೆಗಳನ್ನು ಬಳಸಿ ನೆನೆಸಿಡಲಾಗುತ್ತದೆ.


ಮೀನು ಹಾಗೂ ಮಾಂಸವನ್ನು ನೆನೆಸುವುದು ಏಕೆ ಮುಖ್ಯ?


ಯಾವುದೇ ಮಾಂಸಾಹಾರಿ ಖಾದ್ಯವನ್ನು ಮಾಡುವ ಮೊದಲು, ಮಾಂಸವನ್ನು ಉಪ್ಪು ಮತ್ತು ಅರಿಶಿನದೊಂದಿಗೆ ಬೇಯಿಸಲಾಗುತ್ತದೆ. ಮೀನಿನ ಖಾದ್ಯಗಳನ್ನು ತಯಾರಿಸುವ ಸಮಯದಲ್ಲಿ ಮೀನಿನ ದುರ್ನಾತವನ್ನು ತೆಗೆದುಹಾಕಲು ಉಪ್ಪು ಹಾಗೂ ಅರಶಿನ ಬಳಸಿಕೊಂಡು ಮೀನನ್ನು ತೊಳೆಯುವ ಕ್ರಮ ಕೂಡ ಇದೆ.


ಇದರ ಜೊತೆಗೆ ಉಪ್ಪು ಹಾಗೂ ಅರಶಿನವನ್ನು ಪ್ರಧಾನವಾಗಿ ಬಳಸಿಕೊಂಡು ಇತರ ಮಸಾಲೆ ಪದಾರ್ಥಗಳೊಂದಿಗೆ ಮೀನು ಹಾಗೂ ಮಾಂಸವನ್ನು ನೆನೆಸಲಾಗುತ್ತದೆ.


ಭಾರತದಲ್ಲಿ ಉಪ್ಪು ಹಾಗೂ ಅರಶಿನವನ್ನು ಪ್ರಧಾನವಾಗಿ ಬಳಸಿಕೊಂಡು ಮಾಂಸ ಹಾಗೂ ಮೀನನ್ನು ನೆನೆಸುವುದನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.


ಹಾಗಿದ್ದರೆ ಬೇಯಿಸುವುದಕ್ಕಿಂತ ಮುನ್ನ ಈ ನೆನೆಸುವಿಕೆ ಕ್ರಿಯೆಯನ್ನು ಏಕೆ ಕೈಗೊಳ್ಳಲಾಗುತ್ತದೆ.. ಇದರ ಹಿಂದಿರುವ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳೋಣ


ಆಯ್ದ ಮಸಾಲೆಗಳನ್ನು ಬಳಸಿಕೊಂಡು ಏಕೆ ನೆನೆಸುತ್ತಾರೆ?


ಭಾರತೀಯ ಪಾಕಪದ್ಧತಿಯು ಕೆಲವೊಂದು ಆರೋಗ್ಯಕಾರಿ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಅರಶಿನವನ್ನು ಭಾರತೀಯ ಪಾಕ ಪದ್ಧತಿಯಲ್ಲಿ ಔಷಧವಾಗಿ ಬಳಸಲಾಗುತ್ತದೆ ಹಾಗೂ ಅಡುಗೆಯ ಸ್ವಾದವನ್ನು ಹೆಚ್ಚಿಸುವ ಮಸಾಲೆಯಾಗಿ ಇದು ಸ್ಥಾನ ಪಡೆದುಕೊಂಡಿದೆ.


ಮೀನು ಹಾಗೂ ಮಾಂಸವನ್ನು ಅರಶಿನ ಬಳಸಿ ನೆನೆಸುವುದು ಇದು ಆಹಾರ ಪದಾರ್ಥವನ್ನು ತಾಜಾ ಆಗಿ ಇರಿಸುತ್ತದೆ ಹಾಗೂ ಉಪ್ಪು ಬಳಸುವುದು ಒಂದು ರೀತಿಯಲ್ಲಿ ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.


ಅಂತೆಯೇ ಆಹಾರದ ತಾಜಾತನವನ್ನು ಉಳಿಸುವಲ್ಲಿ ಇವೆರಡೂ ಸಹಕಾರಿಯಾಗಿದೆ. ಮೀನು ಪ್ರೋಟೀನ್‌ನ ಆಗರವಾಗಿದ್ದು ಇದು ಬೇಗನೇ ಕೆಡುತ್ತದೆ, ಇದರಿಂದ ಉಪ್ಪು ಬಳಸಿ ಅದನ್ನು ನೆನೆಸಿಡುವುದು ಮೀನನ್ನು ಹೆಚ್ಚುಕಾಲ ಹಾಳಾಗದಂತೆ ಕಾಪಾಡುತ್ತದೆ.


ಹೀಗೆ ಉಪ್ಪು ಹಾಕಿದ ಮೀನುಗಳು ಉತ್ಕರ್ಷಣ ನಿರೋಧಕ ಎಂದೆನಿಸಿದ್ದು ನಿರ್ದಿಷ್ಟ ಮಸಾಲೆಗಳನ್ನು ಬಳಸಿ ಮೀನನ್ನು ನೆನೆಸುವುದು ಆ್ಯಂಟಿರ್ಮೈಕ್ರೊಬಿಯಲ್ ಅಂಶಗಳನ್ನು ಒಳಗೊಂಡಿವೆ.


ಉಪ್ಪು ಹಾಗೂ ಅರಶಿನವನ್ನೇ ಏಕೆ ಆರಿಸಿಕೊಳ್ಳಲಾಗಿದೆ?


ಅರಶಿನವು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿದ್ದು ನಂಜಿನ ಅಂಶಗಳನ್ನು ನಿವಾರಿಸುತ್ತದೆ ಎಂಬುದಾಗಿ ಆಯುರ್ವೇದದಲ್ಲಿ ತಿಳಿಸಲಾಗಿದೆ.


ಹಸಿಮೀನಿನಲ್ಲಿರುವ ಸೂಕ್ಷ್ಮಜೀವಿ ಹಾಗೂ ಇತರೆ ವಿಷಕಾರಿ ಅಂಶಗಳನ್ನು ನಿವಾರಿಸಲು ಅರಶಿನವನ್ನು ನೆನೆಸುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಆಹಾರವನ್ನು ತಾಜಾ ಆಗಿಡುವುದಕ್ಕೆ ಸಹಾಯ ಮಾಡುವ ಜೊತೆಗೆ ಇದು ಸೂಕ್ಷ್ಮಾಣುಜೀವಿಗಳ ಸಂತಾನಾಭಿವೃದ್ಧಿಯನ್ನೂ ತಡೆಯುತ್ತದೆ.


ಹೆಚ್ಚಾಗಲಿದೆ ರುಚಿ


ಉಪ್ಪು ಕೂಡ ಕೆಲವೊಂದು ಸಂರಕ್ಷಕ ಗುಣಗಳನ್ನು ಹೊಂದಿದ್ದು ಅರಶಿನ ಹಾಗೂ ಉಪ್ಪಿನ ಮಿಶ್ರಣ ಆಹಾರದ ರುಚಿಯನ್ನು ಇಮ್ಮಡಿಗೊಳಿಸುತ್ತದೆ ಹಾಗೂ ಬೇಯಿಸುವ ಸಮಯದಲ್ಲಿ ವಿಶಿಷ್ಟವಾದ ಸುವಾಸನೆಯನ್ನು ಒದಗಿಸುತ್ತದೆ.


ಇದನ್ನೂ ಓದಿ: Cooking Tips: ಈ ಸೂಪರ್ ಹ್ಯಾಕ್ಸ್​ ಯೂಸ್​ ಮಾಡಿದ್ರೆ ನಿಮ್ಮ ಅಡುಗೆ ಬೇಗ ಆಗುತ್ತೆ


ಮೀನು ಹಾಗೂ ಮಾಂಸ ಕೆಡುವುದು ಬಹುಬೇಗವಾದ್ದರಿಂದ ಅವುಗಳ ನಿರ್ವಹಣೆಯಲ್ಲಿ ಕೂಡ ಕೆಲವೊಂದು ಮುನ್ನೆಚ್ಚರಿಕೆಯನ್ನು ಪಾಲಿಸಬೇಕು


ಮೀನು ಹಾಗೂ ಮಾಂಸವನ್ನು ಕೆಡದಂತೆ ಹೇಗೆ ಸಂರಕ್ಷಿಸಬಹುದು?


ಮೀನು ಹಾಗೂ ಮಾಂಸವನ್ನು ಫ್ರೀಜರ್‌ನಲ್ಲಿರಿಸುವುದಕ್ಕಿಂತ ಉಪ್ಪು, ಅರಶಿನ ಹಾಗೂ ವಿನೇಗರ್ ಬಳಸಿ ನೆನೆಸುವುದು ಪ್ರಮುಖ. ಇದು ಮಾಂಸ ಹಾಗೂ ಮೀನಿನ ತಾಜಾತನವನ್ನು ಹಾಗೆಯೇ ಇರಿಸುತ್ತದೆ.


ಇದರೊಂದಿಗೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಗೂ ಮೆಣಸಿನ ಹುಡಿಯನ್ನು ಚಿಮುಕಿಸುವುದು ಮೀನು ಹಾಗೂ ಮಾಂಸವನ್ನು ಹುರಿಯುವಾಗ ಖಾದ್ಯಕ್ಕೆ ಇನ್ನಷ್ಟು ಸ್ವಾದವನ್ನು ಉಂಟು ಮಾಡುತ್ತದೆ.


ಇದನ್ನೂ ಓದಿ: Cooking Tips: ನೀವು​ ಮಾಡಿರೋ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿದ್ರೆ ಚಿಂತೆ ಬೇಡ, ಇಲ್ಲಿದೆ ಸಿಂಪಲ್ ಪರಿಹಾರ


ಮೀನು ಹಾಗೂ ಮಾಂಸವನ್ನು ಎಣ್ಣೆಯಲ್ಲಿ ಹುರಿಯುವ ಮುನ್ನ ಎಣ್ಣೆಗೆ ಚಿಟಿಕೆ ಉಪ್ಪು ಸೇರಿಸುವುದು ಎಣ್ಣೆ ಸಿಡಿಯುವುದನ್ನು ತಡೆಗಟ್ಟುತ್ತದೆ

Published by:Mahmadrafik K
First published: