Army Diet: ಭಾರತೀಯ ಯೋಧರ ಸದೃಢ ಆರೋಗ್ಯಕ್ಕೆ ಈ ಆಹಾರ ಪದ್ಧತಿ ಫಾಲೋ ಮಾಡ್ತಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏನೇ ಬಂದರೂ ಎದೆಗುಂದದೆ ಎದುರಿಸುವ ನಮ್ಮ ಭಾರತೀಯ ಸೈನಿಕರು ಫಿಟ್ ಆಗಿರಲು ಮತ್ತು ಆರೋಗ್ಯವಾಗಿರಲು ಯಾವ ರೀತಿಯ ಡಯಟ್ ಮತ್ತು ಆಹಾರ ಸೇವನೆ ಮಾಡ್ತಾರೆ? ಇಷ್ಟೊಂದು ಬಲಿಷ್ಠ ಮತ್ತು ಸದೃಢ ಕಾಯ ಹೊಂದಿರುವ ಯೋಧರ ಶಕ್ತಿ ಮತ್ತು ಆರೋಗ್ಯಕ್ಕೆ ಯಾವ ಆಹಾರ ಸೇವನೆ ಪ್ರಯೋಜನ ನೀಡಿದೆ ಎಂದು ಇಲ್ಲಿ ತಿಳಿಯೋಣ.

ಮುಂದೆ ಓದಿ ...
 • Share this:

  ದೇಶದ ಜನರು (Country People) ಸುಖವಾಗಿ, ಶಾಂತಿಯಿಂದ ಬದುಕುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಯೋಧರು (Soldiers) ಅಂದ್ರೆ ತಪ್ಪಾಗಲಿಕ್ಕಿಲ್ಲ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಡುವ ವೀರ ಯೋಧರನ್ನು ಎಷ್ಟು ಶ್ಲಾಘಿಸಿದ್ರೂ ಕಡಿಮೆಯೇ. ಗಡಿಯಲ್ಲಿ (Border) ನಿಂತು ಗುಂಡಿಗೆ ಎದೆಯೊಡ್ಡಿ, ಭಾರತಾಂಬೆಗೆ ತಮ್ಮ ಜೀವವನ್ನೇ ಸಮರ್ಪಿಸುವ ಯೋಧರಿಗೆ ನಮ್ಮದೊಂದು ಸೆಲ್ಯೂಟ್. ಈಗ ಯಾಕೆ ಯೋಧರ ಬಗ್ಗೆ ಹೇಳ್ತಿದ್ದೀವಿ ಅಂದುಕೊಂಡ್ರಾ? ಯಾಕಂದ್ರೆ ನಾಳೆ ಅಂದ್ರೆ ಜನವರಿ 26 ರಂದು ಗಣರಾಜ್ಯೋತ್ಸವದ (Republic Day) ಸಂಭ್ರಮದಲ್ಲಿ ನಾವಿದ್ದೇವೆ. ದೇಶಕ್ಕಾಗಿ ಹಗಲಿರುಳು ಜೀವ ಮತ್ತು ಜೀವನ ಸವೆಸುವ ಯೋಧರ ಆರೋಗ್ಯ (Soldiers Health) ಸದೃಢವಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಹೊಣೆಗಾರಿಕೆ.


  ಯೋಧರ ಸದೃಢ ಆರೋಗ್ಯಕ್ಕೆ ಯಾವ ಡಯಟ್ ಕಾರಣವಾಗಿದೆ?


  ಏನೇ ಬಂದರೂ ಎದೆಗುಂದದೆ ಎದುರಿಸುವ ನಮ್ಮ ಭಾರತೀಯ ಸೈನಿಕರು ಫಿಟ್ ಆಗಿರಲು ಮತ್ತು ಆರೋಗ್ಯವಾಗಿರಲು ಯಾವ ರೀತಿಯ ಡಯಟ್ ಮತ್ತು ಆಹಾರ ಸೇವನೆ ಮಾಡ್ತಾರೆ ಎಂಬುದನ್ನು ನಾವು ಇಲ್ಲಿ ನೋಡೋಣ.


  ಭಾರತವು 26 ಜನವರಿ 2023 ರಂದು 74 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದೆ. ಅಲ್ಲದೇ ಈ ದಿನದಂದು ಇಡೀ ಜಗತ್ತು ಭಾರತೀಯ ಸಶಸ್ತ್ರ ಪಡೆಗಳ ಶಕ್ತಿ ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸುತ್ತದೆ. ಮಿಲಿಟರಿ ಪಡೆಗಳು ತಾಕತ್ತು ಪ್ರದರ್ಶನ ರೋಮಾಂಚನಗೊಳಿಸುತ್ತದೆ.
  ಸೇನೆ, ವಾಯುಪಡೆ ಮತ್ತು ನೌಕಾಪಡೆ ಹಾಗೂ ಪ್ಯಾರಾ ಮಿಲಿಟರಿ ಪಡೆಗಳು ಶಕ್ತಿ ಪ್ರದರ್ಶನ ಮಾಡುತ್ತವೆ. ಜೊತೆಗೆ ಗಣರಾಜ್ಯೋತ್ಸವದ ಪರೇಡ್‌ ನಲ್ಲಿ ನಮ್ಮ ಯೋಧರು ಭಾಗಿಯಾಗ್ತಾರೆ. ಇಷ್ಟೊಂದು ಬಲಿಷ್ಠ ಮತ್ತು ಸದೃಢ ಕಾಯ ಹೊಂದಿರುವ ಯೋಧರ ಶಕ್ತಿ ಮತ್ತು ಆರೋಗ್ಯಕ್ಕೆ ಯಾವ ಆಹಾರ ಸೇವನೆ ಪ್ರಯೋಜನ ನೀಡಿದೆ ಎಂದು ಇಲ್ಲಿ ತಿಳಿಯೋಣ.


  ಯೋಧರಿಗೆ ಭಾರತ ಸರ್ಕಾರವು ಯಾವ ರೀತಿಯ ಆರೋಗ್ಯಕರ ಆಹಾರ ಪೂರೈಸುತ್ತದೆ? ಯೋಧರ ಆಹಾರ ಕ್ರಮ ಹೇಗಿರುತ್ತದೆ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತ್ತದೆ. ಯೋಧರ ಆಹಾರ ಕ್ರಮದಲ್ಲಿ ಅವರ ದೇಹಕ್ಕೆ ಅಗತ್ಯವಾದ ಪ್ರತಿಯೊಂದು ಪೋಷಣೆ ನೀಡುವ ಪದಾರ್ಥಗಳಿರುತ್ತವೆ.  ಒಳಗೊಂಡಿರುತ್ತದೆ. ಭಾರತೀಯ ಸೈನಿಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಈ ಆಹಾರ ಪ್ರಯೋಜನ ನೀಡುತ್ತದೆ.


  ಮಾಜಿ ಸಿಐಎಸ್ ಎಫ್ ಯೋಧರ ಜೊತೆಗೆ ನವಭಾರತ್ ಟೈಮ್ಸ್ ಸುದ್ದಿ ವಾಹಿನಿ ಮಾತುಕತೆ ನಡೆಸಿದೆ. ಯೋಧರ ಜೊತೆ ಆಹಾರ ಮತ್ತು ಪೋಷಣೆಯ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ಇಲ್ಲಿ ತಿಳಿಯೋಣ.


  ಯೋಧರಿಗೆ ಊಟ ಕೊಡುವ ಮೊದಲು ಸುದೀರ್ಘ ಚರ್ಚೆ ನಡೆಯುತ್ತದೆ


  ಭಾರತೀಯ ಸೈನಿಕರ ಆಹಾರ ಕ್ರಮದ ಬಗ್ಗೆ ಸಿಐಎಸ್‌ ಎಫ್‌ ನ ಮಾಜಿ ಹೆಡ್‌ ಕಾನ್ಸ್‌ಟೇಬಲ್ ನಿಶಾಂತ್ ಕುಮಾರ್ ಮಾತನಾಡಿದ್ದಾರೆ. ಯೋಧರಿಗೆ ಆಹಾರ ನೀಡುವ ಮೊದಲು ಇಂದು ಯಾವ ರೀತಿಯ ಆಹಾರ ನೀಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗುತ್ತದೆ ಅಂತಾ ಹೇಳಿದರು.


  ಯೋಧರಿಗೆ ಆಹಾರ ನೀಡುವ ಬಗ್ಗೆ ಉನ್ನತ ಅಧಿಕಾರಿಗಳು ಸಭೆ ನಡೆಸುತ್ತಾರೆ. ದೇಶದಾದ್ಯಂತ ಒಂದೇ ಪಡೆಗೆ ಒಂದೇ ರೀತಿಯ ಆಹಾರ ಯೋಜನೆ ಇದೆ. ಹೀಗಾಗಿ ಅಧಿಕಾರಿಗಳ ಸಭೆಯ ಬಳಿಕವೇ ಆಹಾರ ನೀಡುವ ಬಗ್ಗೆ ಮತ್ತು ಬದಲಾವಣೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಅಂತಾ ಹೇಳಿದರು.


  ಸಾಂದರ್ಭಿಕ ಚಿತ್ರ


  ಪ್ರತಿ ದಿನ ವಿಭಿನ್ನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ


  ಯೋದರ ಆಹಾರ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಅಗತ್ಯ ಖಾದ್ಯ ಮತ್ತು ಪೌಷ್ಟಿಕಾಂಶ ಸೇರಿಸಲಾಗುತ್ತದೆ. ಹೀಗಾಗಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಮೆನುವನ್ನು ಪ್ರತಿ ದಿನವೂ ಪ್ರತ್ಯೇಕವಾಗಿ ಇರಿಸಲಾಗುತ್ತದೆ.


  ಬೆಳಗಿನ ಉಪಾಹಾರದಲ್ಲಿ ಹಾಲು, ಮೊಟ್ಟೆ, ಬಾಳೆಹಣ್ಣು


  ಸಿಐಎಸ್‌ ಎಫ್‌ ನ ಡಯಟ್ ಚಾರ್ಟ್‌ ನಲ್ಲಿ ಪ್ರತಿದಿನ ಬೆಳಗಿನ ಉಪಾಹಾರದಲ್ಲಿ ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ಇದ್ದೇ ಇರುತ್ತದೆ. ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ದೈಹಿಕ ಶಕ್ತಿ ನೀಡುತ್ತವೆ.


  ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೊಟೀನ್ ಇದೆ. ಬಾಳೆಹಣ್ಣಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಂ ಇದೆ. ಹಾಗೆಯೇ ಮೊಟ್ಟೆಯಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ಅನೇಕ ಖನಿಜಗಳಿವೆ.


  ಮಧ್ಯಾಹ್ನದ ಊಟಕ್ಕೆ ಪನೀರ್, ಚಿಕನ್ ಮತ್ತು ಮೀನು


  ಯೋಧರಿಗೆ ಮಧ್ಯಾಹ್ನದ ಊಟಕ್ಕೆ ಪನೀರ್, ಕೋಳಿ ಮತ್ತು ಮೀನು ನೀಡಲಾಗುತ್ತದೆ. ಇದು ಆರೋಗ್ಯಕರ ಆಹಾರವೂ ಆಗಿದೆ. ಪನೀರ್ ನಲ್ಲಿ ವಿಟಮಿನ್ ಡಿ ಜೊತೆಗೆ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಎ ಇದೆ. ಚಿಕನ್ ದೇಹಕ್ಕೆ ಉತ್ತಮ. ಮೀನು ಮೆದುಳಿಗೆ ಅಗತ್ಯವಾದ ಪೋಷಣೆ ನೀಡುತ್ತದೆ.


  ರಾತ್ರಿ ಭೋಜನಕ್ಕೆ ಕಾಲೋಚಿತ ತರಕಾರಿ ಮತ್ತು ಹಣ್ಣುಗಳು


  ಯೋಧರಿಗೆ ರಾತ್ರಿ ಸಮತೋಲಿತ ಆಹಾರ ನೀಡುತ್ತಾರೆ. ಇದರಲ್ಲಿ ಋತುಮಾನದ ಹಣ್ಣು ಮತ್ತು ತರಕಾರಿ ಸೇರಿಸಲಾಗುತ್ತದೆ. ಕಾಲೋಚಿತ ಪದಾರ್ಥಗಳು ಆರೋಗ್ಯಕ್ಕೆ ಅಗತ್ಯ ಪೋಷಣೆ ನೀಡುತ್ತವೆ. ಕೆಮ್ಮು ಮತ್ತು ಶೀತ, ಜ್ವರದಂತಹ ಸಮಸ್ಯೆ ಕಡಿಮೆ ಮಾಡುತ್ತವೆ.


  ಇದನ್ನೂ ಓದಿ: ನಿಮಗೆ 30 ವರ್ಷ ದಾಟಿದೆಯಾ? ಕಡ್ಡಾಯವಾಗಿ ಈ ಕೆಲಸ ಮಾಡಿ


  ಪ್ರತಿದಿನ ವ್ಯಾಯಾಮ


  ಭಾರತೀಯ ಸೈನಿಕರು ಕಡ್ಡಾಯವಾಗಿ ದಿನವೂ ನಿಯಮಿತವಾಗಿ ವ್ಯಾಯಾಮ ಮಾಡ್ತಾರೆ. ಇದು ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿರಿಸುತ್ತದೆ.

  Published by:renukadariyannavar
  First published: