Indian Army Recruitment: ಭಾರತೀಯ ಸೇನಾ ಧಾರ್ಮಿಕ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Army Recruitment 2019 : ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯನ್ನು 23 ಫೆಬ್ರವರಿ 2020 ರಂದು ನಡೆಸಲಾಗುವುದು.

zahir | news18-kannada
Updated:October 1, 2019, 7:47 AM IST
Indian Army Recruitment: ಭಾರತೀಯ ಸೇನಾ ಧಾರ್ಮಿಕ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
job
  • Share this:
Indian Army Recruitment 2019 : ಭಾರತೀಯ ಸೇನಾ ವಿಭಾಗದ ಧಾರ್ಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಇದರ ಅಡಿಯಲ್ಲಿ ಒಟ್ಟು 152 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಈ ಹುದ್ದೆಗಳ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯನ್ನು 23 ಫೆಬ್ರವರಿ 2020 ರಂದು ನಡೆಸಲಾಗುವುದು. ಧಾರ್ಮಿಕ ಶಿಕ್ಷಕರು ಸೈನಿಕರಲ್ಲಿ ಧಾರ್ಮಿಕ ಗ್ರಂಥಗಳನ್ನು ಬೋಧನೆ ಮತ್ತು ರೆಜಿಮೆಂಟಲ್ / ಘಟಕದಲ್ಲಿ ವಿವಿಧ ಆಚರಣೆಗಳ ನೇತೃತ್ವವಹಿಸಲಿದ್ದಾರೆ.

ಹುದ್ದೆಗಳ ಹೆಸರು ಮತ್ತು ಸಂಖ್ಯೆ:

ಪಂಡಿತ್ - 118 ಹುದ್ದೆಗಳು
ಪಂಡಿತ್ (ಗೂರ್ಖಾ) - 7 ಹುದ್ದೆಗಳು
ಗ್ರಂಥಿ - 9 ಹುದ್ದೆಗಳು
ಮೌಲ್ವಿ (ಸುನ್ನಿ) - 9 ಹುದ್ದೆಗಳುಮೌಲ್ವಿ (ಶಿಯಾ) - 1 ಪೋಸ್ಟ್ (ಲಡಾಖ್‌ಗೆ)
ಪಾಸ್ಟರ್ - 4 ಹುದ್ದೆಗಳು
ಬೌದ್ಧ ಸನ್ಯಾಸಿ (ಮಹಾಯಾನ) - 4 ಹುದ್ದೆಗಳು (ಲಡಾಖ್‌ಗೆ)

ಇದನ್ನೂ ಓದಿ: ಪ್ರವಾಹದಿಂದ ಜನರಿಗೆ ಪ್ರಾಣ ಸಂಕಟ: ನಟಿಗೆ ಚೆಲ್ಲಾಟ..!

ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಪ್ರಾರಂಭ - ಸೆಪ್ಟೆಂಬರ್ 30
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 29 ಅಕ್ಟೋಬರ್
First published:October 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ