Indian Air Force Recruitment 2021: ಖಾಲಿ ಇರುವ 255 ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಹಬೇಕು. ಲಿಖಿತ ಪರೀಕ್ಷೆಯು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿರುತ್ತದೆ.

jobs

jobs

 • Share this:
  ಭಾರತೀಯ ವಾಯುಸೇನೆ ಖಾಲಿ ಇರುವ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ.

  ವಾಯುಸೇನೆಯಲ್ಲಿ ಗ್ರೂಪ್​ ಸಿ ನಾಗರಿಕ ಹುದ್ದೆಯಡಿ ಹೆಚ್​ಕ್ಯು ಸೌತ್​ ವೆಸ್ಟರ್ನ್​​ ಏರ್​ ಕಮಾಂಟ್​​​​ ಹುದ್ದೆಗಳಿಗೆ ನೇರ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ.

  ಆಯ್ಕೆ ಪ್ರಕ್ರಿಯೆ ಹೇಗೆ?

  ವಯಸ್ಸಿನ ಮಿತಿ, ಕನಿಷ್ಠ ಅರ್ಹತೆ, ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಕರೆ ಪತ್ರ ನೀಡಲಾಗುವುದು.

  ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಹಬೇಕು. ಲಿಖಿತ ಪರೀಕ್ಷೆಯು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿರುತ್ತದೆ.

  ಶಿಕ್ಷಣೆ ಅರ್ಹತೆ, ವಯಸ್ಸು, ನಿವಾಸ, ಪ್ರಮಾಣ ಪತ್ರ, ಅನುಭವ ಮತ್ತ ಜಾತಿ ಪ್ರಮಾಣಪತ್ರ ಇತ್ಯಾದಿಗಳನ್ನು ಅರ್ಜಿಯಲ್ಲಿ ಧೃಢೀಕರಿಸಿ ನಂತರ ಸಲ್ಲಿಸಬೇಕು.

  ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  airmenselection.cdac.in. ವೆಬ್​ಸೈಟ್​ಗೆ ಭೇಟಿ ನೀಡಿ, ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಇತ್ತೀಚಿನ ಪಾಸ್​ಪೋರ್ಟ್​ ಗಾತ್ರದ ಫೋಟೋದೊಂದಿಗೆ ಅರ್ಜಿಯಲ್ಲಿ ಅಂಟಿಸಿ  ಮಾರ್ಚ್​ 13ರೊಳಗೆ ಅರ್ಜಿ ಸಲ್ಲಿಸಬೇಕು.

  ಪ್ರಮುಖ ದಿನಾಂಕಗಳು

  ಅರ್ಜಿ ಸಲ್ಲಿಸುವ ದಿನಾಂಕ: ಫೆಬ್ರವರಿ 12, 2021

  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 13, 2021
  Published by:Harshith AS
  First published: