ಜಾಗತೀಕರಣ (Globalisation), ಆರ್ಥಿಕ ಬೆಳವಣಿಗೆ, ವಯಸ್ಸಾಗುತ್ತಿರುವವ ಸಂಖ್ಯೆ, ಹಾಗೂ ಜೀವನ ಶೈಲಿಯ ಬದಲಾವಣೆಯಿಂದಾಗಿ ಭಾರತವು (India) ಕ್ಯಾನ್ಸರ್ನಂತಹ (cancer) ಕಾಯಿಲೆಗಳಿಗೆ ಹೆಚ್ಚು ಒಳಗಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಇಂತಹ ಆರೋಗ್ಯ ಸಮಸ್ಯೆಗಳನ್ನು (Health Issue) ಎದುರಿಸಲು ತಂತ್ರಜ್ಞಾನ (Technology) ಸಂಬಂಧಿತ ವೈದ್ಯಕೀಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುವ ಲಸಿಕೆಗಳು, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳು, ಬಯಾಪ್ಸಿಗಳಿಂದ ಕ್ಯಾನ್ಸರ್ ರೋಗನಿರ್ಣಯವನ್ನು ಇದೀಗ ಮಾಡಬಹುದಾಗಿದೆ ಅಂತೆಯೇ ಕ್ಯಾನ್ಸರ್ಗೆ ಆರೈಕೆಯನ್ನು ಕಂಡುಕೊಳ್ಳಬಹುದು ಎಂಬುದು ವೈದ್ಯಕೀಯ ಆಂಕೊಲಾಜಿ ವಿಭಾಗದ ಅಧ್ಯಕ್ಷ ಡಾ. ಜೇಮ್ ಅಬ್ರಹಾಂ ಅಭಿಪ್ರಾಯವಾಗಿದೆ.
ರೋಗಿಗಳು ಹಾಗೂ ವೈದ್ಯರ ನಡುವಿನ ಸಂವಹನ
ಡಿಜಿಟಲ್ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಹೆಲ್ತ್ ರೋಗಿಗಳು ಮತ್ತು ತಜ್ಞರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಅದೂ ಅಲ್ಲದೆ ಗ್ರಾಮೀಣ ವ್ಯವಸ್ಥೆ ಸೇರಿದಂತೆ ನಮ್ಮ ದೇಶದ ದೂರದ ಭಾಗಗಳಲ್ಲಿ ತಜ್ಞರ ಆರೈಕೆಯ ಲಭ್ಯತೆಯನ್ನು ಸಮರ್ಥವಾಗಿ ಹೆಚ್ಚಿಸುತ್ತದೆ ಎಂಬುದು ಅಬ್ರಹಾಂ ಸಲಹೆಯಾಗಿದೆ.
ಭಾರತಕ್ಕೆ ಸವಾಲಾಗಿದೆ
ಈ ಆಧುನಿಕ ತಂತ್ರಜ್ಞಾನಗಳು ಕ್ಯಾನ್ಸರ್ಗೆ ಪರಿಣಾಮಕಾರಿಯಾಗಿವೆ ಹಾಗೂ ಚಿಕಿತ್ಸೆಗೆ ಉತ್ತಮವಾಗಿವೆ ಎಂಬುದು ಇದೀಗ ಖಾತ್ರಿಯಾಗಿದ್ದರೂ ಅದನ್ನು ಸಾವಿರಾರು ಜನರಿಗೆ ಲಭಿಸುವಂತೆ ಮಾಡುವುದು ಭಾರತಕ್ಕೆ ದೊಡ್ಡ ಸವಾಲಾಗಿದೆ ಎಂಬುದು ಅಬ್ರಹಾಂ ಮಾತಾಗಿದೆ.
ಕ್ಯಾನ್ಸರ್ನಿಂದ ಉಂಟಾಗಿರುವ ಮರಣಗಳು
ಗ್ಲೋಬೋಕನ್ ಅಂದಾಜಿನ ಪ್ರಕಾರ, ಜನಸಂಖ್ಯಾ ಬದಲಾವಣೆಗಳಿಂದಾಗಿ 2040 ರಲ್ಲಿ ವಿಶ್ವಾದ್ಯಂತ ಕ್ಯಾನ್ಸರ್ನಿಂದ 28.4 ಮಿಲಿಯನ್ ಪ್ರಕರಣಗಳು ಹೆಚ್ಚಾಗಲಿದ್ದು, 2020 ರಿಂದ 47% ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಜಾಗತೀಕರಣ ಮತ್ತು ಬೆಳೆಯುತ್ತಿರುವ ಆರ್ಥಿಕತೆಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳನ್ನು ಹೆಚ್ಚಿಸುವ ಮೂಲಕ ರೋಗ ಉಲ್ಬಣಗೊಳ್ಳಬಹುದು ಎನ್ನಲಾಗಿದೆ. 2020 ರಲ್ಲಿ ಪ್ರಪಂಚದಾದ್ಯಂತ ಅಂದಾಜು 19.3 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು ಸುಮಾರು 10.0 ಮಿಲಿಯನ್ ಕ್ಯಾನ್ಸರ್ ಸಾವುಗಳು ವರದಿಯಾಗಿವೆ.
ಸ್ತ್ರೀಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಶ್ವಾಸಕೋಶದ ಕ್ಯಾನ್ಸರ್ ಅನ್ನು ಮೀರಿಸಿದ್ದು, ಶ್ವಾಸಕೋಶದ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದೆ. ಅಂದಾಜು 1.8 ಮಿಲಿಯನ್ ಮರಣಗಳು ದಾಖಲಾಗಿದ್ದು (18%), ಯಕೃತ್ತು (8.3%), ಹೊಟ್ಟೆ (7.7%), ಮತ್ತು ಸ್ತನ ಕ್ಯಾನ್ಸರ್ (6.9%) ಹೀಗೆ ಅಂಕಿಅಂಶಗಳಾಗಿವೆ.
ಕ್ಯಾನ್ಸರ್ ಲಸಿಕೆಗಳು ಹೇಗೆ ಉತ್ತಮವಾಗಿವೆ?
ಅಬ್ರಹಾಂ ತಿಳಿಸುವಂತೆ ಕ್ಯಾನ್ಸರ್ ಲಸಿಕೆಗಳು ವಿವಿಧ ರೀತಿಯ ಕ್ಯಾನ್ಸರ್ಗಳಿಂದ ಜನರನ್ನು ರಕ್ಷಿಸುವ ವಿಧಾನವಾಗಿದೆ ಹಾಗೂ ಇದೊಂದು ಉತ್ತಮ ಸಂಶೋಧನೆಯಾಗಿದೆ ಎಂದು ತಿಳಿಸಿದ್ದಾರೆ.
ಸ್ತನ ಕ್ಯಾನ್ಸರ್ಗಾಗಿ ಕ್ಲಿನಿಕಲ್ ಪರೀಕ್ಷೆ
ಕ್ಯಾನ್ಸರ್ಗಾಗಿ ಸಂಶೋಧಕರು mRNA-ಆಧಾರಿತ ಕ್ಯಾನ್ಸರ್ ಚಿಕಿತ್ಸೆ ಲಸಿಕೆಗಳನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಸಣ್ಣ ಪ್ರಯೋಗಗಳಲ್ಲಿ ಪರೀಕ್ಷಿಸಿದ್ದಾರೆ ಎಂಬುದು ಅಬ್ರಹಾಂ ಮಾತಾಗಿದೆ. ಪ್ರಸ್ತುತ ತಂಡವು ಕ್ಯಾನ್ಸರ್ನಲ್ಲೇ ಅಪಾಯಕಾರಿಯಾಗಿರುವ ಸ್ತನ ಕ್ಯಾನ್ಸರ್ಗಾಗಿ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ತಿಳಿಸಿರುವ ಅಬ್ರಹಾಂ ಕೃತಕ ಬುದ್ಧಿಮತ್ತೆಯನ್ನು ಬಳಸುವ ಕಂಪ್ಯೂಟರ್ಗಳಲ್ಲಿ ಬಯಾಪ್ಸಿಯಲ್ಲಿನ ಅಸಹಜ ಮಾದರಿಗಳನ್ನು ಗುರುತಿಸಬಹುದು ಇದು ಮಾನವನ ಕಣ್ಣಿಗಿಂತ ಹೆಚ್ಚು ನಿಖರವಾಗಿದೆ ಎಂಬುದು ಅಬ್ರಹಾಂ ಹೇಳಿಕೆಯಾಗಿದೆ.
ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿರ್ವಹಣೆ
ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅನ್ನು ಮೇಲ್ವಿಚಾರಣೆ ಮಾಡುವುದು ಅಗತ್ಯವಾಗಿದೆ ಹಾಗೂ ಇದಕ್ಕಾಗಿ ಸೂಕ್ತ ಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತಿದೆ ಇದರಿಂದ ಆರಂಭದಲ್ಲಿಯೇ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದು ಎಂಬುದು ಅಬ್ರಹಾಂ ಮಾತಾಗಿದೆ.
ಇದನ್ನೂ ಓದಿ: Explained: ಅಮೆರಿಕಾದಲ್ಲಿ ಕ್ಯಾನ್ಸರ್ನಿಂದ ಸಾಯುತ್ತಿರುವವರ ಪ್ರಮಾಣ ಇಳಿಕೆ; 1991 ರಿಂದ 33% ಕಡಿಮೆಯಾಗಲು ಕಾರಣವೇನು?
ಕ್ಯಾನ್ಸರ್ ರೋಗನಿರ್ಣಯಿಸಲು ಸ್ಕ್ಯಾನ್ಗಳು, ಕೆಲವೊಂದು ಚಿಕಿತ್ಸೆಗಳು ಬಳಕೆಯಲ್ಲಿದ್ದರೂ ಗಡ್ಡೆಯನ್ನು ಪತ್ತೆಹಚ್ಚುವ ಹೊತ್ತಿಗೆ ತಡವಾಗುತ್ತದೆ ಹೀಗಾಗಿ ಕ್ಯಾನ್ಸರ್ ರೋಗ ನಿರ್ಣಯಕ್ಕೆ ಇನ್ನಷ್ಟು ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಮಾಡುವುದು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ