• Home
  • »
  • News
  • »
  • lifestyle
  • »
  • India's First Christmas Cake: ಭಾರತದಲ್ಲಿ ತಯಾರಾದ ಮೊದಲ ಕ್ರಿಸ್‌ಮಸ್ ಕೇಕ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

India's First Christmas Cake: ಭಾರತದಲ್ಲಿ ತಯಾರಾದ ಮೊದಲ ಕ್ರಿಸ್‌ಮಸ್ ಕೇಕ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

First Christmas Cake Story: ಕೋವಿಡ್‌ನಿಂದ ಮಂಕಾಗಿದ್ದ ಆಚರಣೆಗಳು ಎರಡು ವರ್ಷಗಳ ಬಳಿಕ ಪುನಃ ಕಳೆಗಟ್ಟಿದೆ ಹಾಗೂ ರಾಜ್ಯವು ಅದ್ಭುತ ಕ್ರಿಸ್‌ಮಸ್‌ ಆಚರಣೆಗೆ ಸಜ್ಜಾಗಿದೆ.

  • Share this:

ಭಾರತದಲ್ಲಿ (India) ತಯಾರಾದ ಪ್ರಥಮ ಕ್ರಿಸ್‌ಮಸ್ ಕೇಕ್ (Christmas Cake) ಅತ್ಯಂತ ವಿಶೇಷವಾದುದು ಹಾಗೂ ಮಹತ್ತರ ಇತಿಹಾಸವನ್ನು (History) ಹೊಂದಿದೆ. ಈ ಕಥೆಯ ಆರಂಭವಾಗುವುದೇ ನವೆಂಬರ್ 1883 ರಂದು. ಮುರ್ಡಾಕ್ ಬ್ರೌನ್ ಎಂಬ ವ್ಯಾಪಾರಿ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ರಾಯಲ್ ಬಿಸ್ಕೇಟ್ ಫ್ಯಾಕ್ಟ್ರಿ ಹೆಸರಿನ ಬೇಕರಿಗೆ ಭೇಟಿ ನೀಡಿ ಬೇಕರಿ ಯಜಮಾನ ಮಾಂಬಳ್ಳಿ ಬಾಪು ಅವರಲ್ಲಿ ತನಗಾಗಿ ಕ್ರಿಸ್‌ಮಸ್ ಕೇಕ್ ಅನ್ನು ತಯಾರಿಸಿಕೊಡಬಹುದೇ ಎಂದು ವಿನಂತಿಸುತ್ತಾರೆ. ಮಲಬಾರ್ ಪ್ರದೇಶದಲ್ಲಿ ಬೃಹತ್ ದಾಲ್ಚಿನ್ನಿ ತೋಟವನ್ನು ನಡೆಸುತ್ತಿದ್ದ ವ್ಯಾಪಾರಿ ಬ್ರಿಟನ್‌ನಿಂದ ಕೇಕ್‌ನ ಮಾದರಿಯನ್ನು ತಂದಿದ್ದರು ಹಾಗೂ ಬಾಪುವಿಗೆ ಕೇಕ್‌ನ ತಯಾರಿಯ ಕುರಿತು ಮಾಹಿತಿ ನೀಡಿದ್ದರು.


ಮೊದಲ ಬಾರಿಗೆ ಕೇಕ್ ತಯಾರಿಸಿದ ಬಾಪು


ಬಾಪುವಿಗೆ ಬೇಕರಿಯ ಜ್ಞಾನವನ್ನು ಪಡೆದುಕೊಂಡಿದ್ದರು ಅಂತೆಯೇ ಬ್ರೆಡ್ ಹಾಗೂ ಬಿಸ್ಕತ್ತು ತಯಾರಿಯ ಬಗ್ಗೆ ತಿಳಿದಿತ್ತು. ಬರ್ಮಾದಿಂದ ಬಿಸ್ಕತ್ತು ತಯಾರಿಯ ಕೌಶಲ್ಯವನ್ನು ಅರಿತುಕೊಂಡಿದ್ದರು. ಆದರೆ ಇದುವರೆಗೆ ಕೇಕ್ ಅನ್ನು ತಯಾರಿಸಿರಲಿಲ್ಲ. ಆದರೂ ವ್ಯಾಪಾರಿ ಬ್ರೌನ್ ತಿಳಿಸಿದ ಕೇಕ್ ಮಾಡುವ ವಿಧಾನವನ್ನು ಅರಿತುಕೊಂಡು ತಯಾರಿಸಲು ಮುಂದಡಿ ಇಟ್ಟರು.


ಸ್ಥಳೀಯ ಪರಿಕರ ಬಳಸಿ ಕೇಕ್ ತಯಾರಿ


ಕೇಕ್‌ಗೆ ಬ್ರಾಂಡಿಯನ್ನು ಬಳಸುವ ಬದಲಿಗೆ ಗೋಡಂಬಿ ಹಾಗೂ ಸೇಬಿನಿಂದ ತಯಾರಿಸಿದ ಸ್ಥಳೀಯ ಸಾರಭಟ್ಟಿಯನ್ನು ಬಳಸಿ ಕೇಕ್‌ನ ಹಿಟ್ಟನ್ನು ತಯಾರಿಸಿದರು. ಕೇಕ್ ಮಾಡುವ ಈ ಪ್ರಯೋಗ ಯಶಸ್ವಿಯಾಗಿದ್ದು ಮಾತ್ರವಲ್ಲದೆ ಸ್ಥಳೀಯ ಪರಿಕರಗಳನ್ನು ಬಳಸಿ ರುಚಿಕರ ಪ್ಲಮ್ ಕೇಕ್‌ ಅನ್ನು ಬಾಪು ತಯಾರಿಸಿದ್ದರು. ಖುಷಿಗೊಂಡ ಬ್ರೌನ್ ಇನ್ನಷ್ಟು ಕೇಕ್‌ಗಳಿಗೆ ಆರ್ಡರ್ ನೀಡಿದರು.


ಭಾರತದಲ್ಲಿ ತಯಾರಾಯಿತು ಮೊತ್ತಮೊದಲ ಕೇಕ್


ಹೀಗೆ ಭಾರತದಲ್ಲಿ ಮೊತ್ತಮೊದಲ ಕ್ರಿಸ್‌ಮಸ್ ಕೇಕ್ ಅನ್ನು ತಯಾರಿಸಲಾಯಿತು ಎಂದು ಬಾಪು ಅವರ ಸೋದರಳಿಯನ ಮೊಮ್ಮಗ ಪ್ರಕಾಶ್ ಮಾಂಬಳ್ಳಿ ತಿಳಿಸಿದ್ದಾರೆ. ಈ ಕಥೆಗೆ ಯಾವುದೇ ಅಧಿಕೃತ ದಾಖಲೆ ಇಲ್ಲದೇ ಇದ್ದರೂ ಮಾಂಬಳಿ ಬಾಪು ಆರಂಭಿಸಿದ ಬೇಕರಿ ಇನ್ನೂ ತಲಶ್ಶೇರಿಯಲ್ಲಿ ಉತ್ತಮವಾಗಿ ನಡೆಯುತ್ತಿದೆ ಹಾಗೂ ಕ್ರಿಸ್‌ಮಸ್ ಆಚರಣೆಯ ಒಂದು ಭಾಗವಾಗಿ ಮಾರ್ಪಟ್ಟಿದೆ.


ಇದನ್ನೂ ಓದಿ: ಕ್ರಿಸ್​ಮಸ್​ ಸಂಭ್ರಮದಲ್ಲಿ ಸುಂದರವಾಗಿ ಕಾಣಲು ಇಲ್ಲಿದೆ ಟಿಪ್ಸ್


ಬ್ರಿಟೀಷರ ಅಭಿರುಚಿ ಭಾರತದಲ್ಲಿ ಜನಪ್ರಿಯಗೊಂಡಿತು


ನಾಲ್ಕು ತಲೆಮಾರುಗಳ ನಂತರ, ಬಾಪು ಅವರ ವಂಶಸ್ಥರು ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೆ. ಬ್ರಿಟೀಷರ ಅಭಿರುಚಿಯನ್ನು ಭಾರತೀಯರಲ್ಲಿ ಬಾಪು ಜನಪ್ರಿಯಗೊಳಿಸಿದರು ಎಂದು ಪ್ರಕಾಶ್ ಮಾಂಬಳ್ಳಿ ಹೆಮ್ಮೆಯಿಂದ ಹೇಳುತ್ತಾರೆ. ಬಾಪು ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಸೈನಿಕರಿಗೆ ಕೇಕ್ ಹಾಗೂ ಬಿಸ್ಕತ್ತುಗಳನ್ನು, ಸಿಹಿತಿಂಡಿಗಳನ್ನು ಪೂರೈಸಿದ್ದಾರೆ ಎಂದು ತಿಳಿಸಿದ್ದಾರೆ.


ಮಾಂಬಳ್ಳಿ ಪರಿವಾರವು ನಗರದಲ್ಲಿ ವಿವಿಧ ಹೆಸರುಗಳಲ್ಲಿ ಮಳಿಗೆಗಳನ್ನು ತೆರೆದಿದ್ದು, ಕೇಕ್ ಪ್ರಿಯರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.


ಬೇಕರಿ ಉದ್ಯಮದಲ್ಲಿ ಕೈಜೋಡಿಸಿರುವ ಮಾಂಬಳ್ಳಿ ಕುಟುಂಬ


ತಲಶ್ಶೇರಿಯಲ್ಲಿರುವ ಕುಟುಂಬದ ಮೂಲ ಬೇಕರಿಯನ್ನು ಈಗ ಶ್ರೀ ಮಾಂಬಳ್ಳಿಯವರು ನಡೆಸುತ್ತಿದ್ದಾರೆ. ಅವರ ಅಜ್ಜ ಗೋಪಾಲ್ ಮಾಂಬಳ್ಳಿ ಆ ಸಮಯದಲ್ಲಿ ಕೇರಳದ ಸಂಪ್ರದಾಯದಂತೆ ಬೇಕರಿಯನ್ನು ಮಾತೃವಂಶದ ಉತ್ತರಾಧಿಕಾರಿಯ ನೆಲೆಯಲ್ಲಿ ಪಡೆದುಕೊಂಡಿದ್ದರು. ಗೋಪಾಲ್ ಮಾಂಬಳ್ಳಿಗೆ 11 ಜನ ಮಕ್ಕಳಿದ್ದು ಅವರೆಲ್ಲರೂ ಬೇಕರಿ ಉದ್ಯಮಕ್ಕೆ ಕೈ ಜೋಡಿಸಿದ್ದಾರೆ.


ಕೇರಳವು ಕ್ರಿಸ್‌ಮಸ್ ಕೇಕ್‌ಗಳ ಪ್ರಮುಖ ಕೇಂದ್ರ


ತಲಶ್ಶೇರಿಯಲ್ಲಿ ಪ್ರಾರಂಭವಾದ ಸಣ್ಣ ಮಳಿಗೆ ಇದೀಗ ಬೇಕರಿ ತಿನಿಸು ಪ್ರಿಯರ ನೆಚ್ಚಿನ ತಾಣವಾಗಿದೆ ಹಾಗೂ ಎಲ್ಲರಿಗೂ ಬೇಕರಿಯ ತಿನಿಸು ಲಭಿಸುವಂತೆ ಮಾಡಲು ನೆರೆಹೊರೆಯ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಂಬಳ್ಳಿ ತಿಳಿಸಿದ್ದಾರೆ.
ಕೇರಳವು ಕ್ರಿಸ್‌ಮಸ್ ಕೇಕ್‌ಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿರುವುದು ಆಶ್ಚರ್ಯದ ಸಂಗತಿಯೇನಿಲ್ಲ ಇದಕ್ಕೆ ಕಾರಣ ರಾಜ್ಯದ 33 ಮಿಲಿಯನ್ ಜನರಲ್ಲಿ ಕ್ರಿಶ್ಚಿಯನ್ನರು 18% ರಷ್ಟಿದ್ದಾರೆ. ರಾಜ್ಯವು ಸಣ್ಣ ಬೇಕರಿಗಳು ಮತ್ತು ಸಿಹಿತಿಂಡಿಗಳಿಗೆ ಹೆಸರುವಾಸಿಯಾದ ಕೆಫೆಗಳಿಂದ ಕೂಡಿದೆ. ಜನವರಿ 2020 ರಲ್ಲಿ, ರಾಜ್ಯದ ಬೇಕರ್ಸ್ ಅಸೋಸಿಯೇಷನ್ 5.3 ಕಿಮೀ (3.2 ಮೈಲುಗಳು) ಉದ್ದದ ಕೇಕ್ನೊಂದಿಗೆ ವಿಶ್ವದ ಅತಿ ಉದ್ದದ ಕೇಕ್‌ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿತು, ಚೀನಾದ 3.2 ಕಿಮೀ ಕೇಕ್ ದಾಖಲೆಯನ್ನು ಸೋಲಿಸಿತು.


ಇದನ್ನೂ ಓದಿ: ಮಂಕಾಗುತ್ತಿದೆ ಕ್ರಿಸ್‌ಮಸ್ ಆಚರಣೆ - ಪಾರ್ಟಿ, ಕ್ಲಬ್‌ಗಳಿಗೆ ಸೀಮಿತವಾಗುತ್ತಿದೆಯೇ ಹಬ್ಬ?


ಕೋವಿಡ್‌ನಿಂದ ಮಂಕಾಗಿದ್ದ ಆಚರಣೆಗಳು ಎರಡು ವರ್ಷಗಳ ಬಳಿಕ ಪುನಃ ಕಳೆಗಟ್ಟಿದೆ ಹಾಗೂ ರಾಜ್ಯವು ಅದ್ಭುತ ಕ್ರಿಸ್‌ಮಸ್‌ ಆಚರಣೆಗೆ ಸಜ್ಜಾಗಿದೆ.

Published by:Sandhya M
First published: