10ನೇ ತರಗತಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ ಪಡೆಯುವ ಸುವರ್ಣಾವಕಾಶ

India Post Office Recruitment 2019: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳ ಒಳಗಿರಬೇಕು. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

zahir | news18-kannada
Updated:October 16, 2019, 11:01 AM IST
10ನೇ ತರಗತಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ ಪಡೆಯುವ ಸುವರ್ಣಾವಕಾಶ
jobs
zahir | news18-kannada
Updated: October 16, 2019, 11:01 AM IST
India Post Recruitment 2019: ಭಾರತೀಯ ಅಂಚೆ ಇಲಾಖೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಈ ಹುದ್ದೆಗಳಿಗೆ 14 ನವೆಂಬರ್ 2019 ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ appost.in/gdsonline ಗೆ ಭೇಟಿ ನೀಡಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಕನಿಷ್ಠ 10,000 ರಿಂದ 14,500 ರೂ. ವೇತನ ದೊರೆಯಲಿದೆ.

ಭಾರತೀಯ ಅಂಚೆ ಸೇವಾ ಇಲಾಖೆಯ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬ್ರಾಂಚ್ ಪೋಸ್ಟ್ ಮಾಸ್ಟರ್, ಬಿಪಿಎಂ), ಸಹಾಯಕ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಮತ್ತು ಅಂಚೆ ಸೇವಕ್ (ಡಾಕ್ ಸೇವಕ್) ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಒಟ್ಟು ಹುದ್ದೆಗಳ ಸಂಖ್ಯೆ:
ಈ ವಿಭಾಗದಲ್ಲಿ ಒಟ್ಟು 5476 ಹುದ್ದೆಗಳು ಖಾಲಿಯಿವೆ.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳ ಒಳಗಿರಬೇಕು. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Loading...

ವಿದ್ಯಾರ್ಹತೆ:
ಅಭ್ಯರ್ಥಿ 10 ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಪ್ರಾದೇಶಿಕ ಭಾಷೆ ಮತ್ತು ಕಂಪ್ಯೂಟರ್‌ನ ಜ್ಞಾನವೂ ಇರಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಆನ್‌ಲೈನ್ ಅರ್ಜಿ ನಮೂನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. 10 ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಅನ್ವಯಿಸುವುದು ಹೇಗೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indiapost.gov.in ಅಥವಾ appost.in/gdsonline ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 14, 2019

ಇದನ್ನೂ ಓದಿ: ನಾನು ನಟಿಯಾಗಬೇಕೆಂದು ತಿಳಿಸಿದಾಗ ಮನೆಯಿಂದ ಹೊರದಬ್ಬಿದ್ದರು, ಆದರೀಗ..!
First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...