10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ: ತಿಂಗಳ ವೇತನ 20 ಸಾವಿರ..!

India Post Office Jobs 2019: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಲೈಟ್ ಮತ್ತು ಹೆವಿ ಮೋಟಾರು ವಾಹನಗಳ ಪರವಾನಗಿ ಪಡೆದಿರಬೇಕು. ಅದೇ ರೀತಿ ವಾಹನ ಚಾಲನೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.

zahir | news18-kannada
Updated:September 20, 2019, 8:16 AM IST
10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ: ತಿಂಗಳ ವೇತನ 20 ಸಾವಿರ..!
JOB
  • Share this:
India Post office Staff Car Driver Vacancies: ಅಂಚೆ ಇಲಾಖೆಯು ಸಾರ್ವಜನಿಕ ವಲಯದ (ಪಿಎಸ್‌ಯು) ಅಡಿಯಲ್ಲಿ 'ಸ್ಟಾಫ್ ಕಾರ್ ಡ್ರೈವರ್' ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲೈಟ್ ಮತ್ತು ಹೆವಿ ಮೋಟಾರು ವಾಹನಗಳ ಚಾಲನಾ ಪರವಾನಗಿ ಹೊಂದಿರಬೇಕು. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ಸಂಬಳ ನೀಡಲಾಗುವುದು ಎಂಬುದು ವಿಶೇಷ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಕೆಳಗಿನಂತಿವೆ.

ಒಟ್ಟು ಹುದ್ದೆಗಳ ಸಂಖ್ಯೆ:
10 ಹುದ್ದೆಗಳು

ಹುದ್ದೆಗಳ ಮೀಸಲಾತಿ:
ಸಾಮಾನ್ಯ ವರ್ಗಕ್ಕೆ- 5 ಹುದ್ದೆಗಳು
ಒಬಿಸಿ- 2 ಹುದ್ದೆ
ಎಸ್‌ಸಿ- 1 ಹುದ್ದೆಎಸ್‌ಟಿ- 1 ಹುದ್ದೆ
ಇಡಬ್ಲ್ಯೂಎಸ್‌- 1 ಹುದ್ದೆ
ಇಎಸ್​ಎಂ- 1 ಹುದ್ದೆ

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಲೈಟ್ ಮತ್ತು ಹೆವಿ ಮೋಟಾರು ವಾಹನಗಳ ಪರವಾನಗಿ ಪಡೆದಿರಬೇಕು. ಅದೇ ರೀತಿ ವಾಹನ ಚಾಲನೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾದರೆ ಏನು ಮಾಡಬೇಕು: ಈಗ ಫೋನ್​ಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭ

ಅರ್ಜಿ ಸಲ್ಲಿಕೆ:
ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು 13 ನವೆಂಬರ್ 2019 ರಂದು ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.

ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಲೆವೆಲ್ 7 ಪೇ ಮ್ಯಾಟ್ರಿಕ್ಸ್ ಪ್ರಕಾರ 19,900 ರೂ. ವೇತನ ನೀಡಲಾಗುತ್ತದೆ.

ಇದನ್ನೂ ಓದಿ: ಜಿಯೋ  ಡಿಟಿಹೆಚ್​ ಎಫೆಕ್ಟ್: ಗ್ರಾಹಕರಿಗೆ ಉಚಿತ ಸೇವೆ, ಕ್ಯಾಶ್​ಬ್ಯಾಕ್ ಆಫರ್ ​ನೀಡಿದ ಡಿಶ್ ಟಿವಿ ಕಂಪೆನಿಗಳು

ವಯೋಮಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.

ಹೆಚ್ಚಿನ ಮಾಹಿತಿ:
ಇಂಡಿಯಾ ಪೋಸ್ಟ್ ಆಫೀಸ್​ನ ಅಧಿಕೃತ ವೆಬ್​ಸೈಟ್​ www.indiapost.gov.in ನ ಭೇಟಿ ನೀಡುವ ಮೂಲಕ ಈ ಖಾಲಿ ಹುದ್ದೆಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.
First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading