10 ನೇ ತರಗತಿ ಪಾಸಾದವರಿಗೂ ಭಾರತೀಯ ಅಂಚೆ ಇಲಾಖೆಯಲ್ಲಿ ಹುದ್ದೆ; ಏಪ್ರಿಲ್‌ 21 ರವರೆಗೆ ಅವಕಾಶ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ಉತ್ತೀರ್ಣಗೊಂಡಿರಬೇಕು. ಗಣಿತ, ಇಂಗ್ಲೀಷ್ ಹಾಗೂ ಐಚ್ಛಿಕ ವಿಷಯದಲ್ಲಿ ಕನಿಷ್ಟ ಮಟ್ಟದ ಅಂಕಗಳನ್ನು ಗಳಿಸಿರುವುದು ಕಡ್ಡಾಯ. 60 ದಿನಗಳ ಕಾಲ ಬೇಸಿಕ್ ಕಂಪ್ಯೂಟರ್ ತರಬೇತಿ ಪೂರೈಸಿದ ದಾಖಲಾತಿ ಹೊಂದಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತೀಯ ಅಂಚೆಯು ಮಾರ್ಚ್ 21ಕ್ಕೆ ಆಹ್ವಾನಿಸಿದ್ದ ಕೇರಳ ಸರ್ಕಲ್ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಯ ಅರ್ಜಿ ದಿನಾಂಕವನ್ನು ಏಪ್ರಿಲ್ 21ರವರೆಗೆ ಮುಂದೂಡಿದೆ. ಈ ಹಿಂದೆ ಏಪ್ರಿಲ್ 15ಕ್ಕೆ ದಿನಾಂಕ ನಿಗದಿಪಡಿಸಿತ್ತು. ಇದೀಗ ಅರ್ಜಿ ದಿನಾಂಕವನ್ನು ಮುಂದೂಡಿ ಆದೇಶ ಹೊರಡಿಸಿದೆ.

  ಸುಮಾರು 1,421 ಹುದ್ದೆಗಳಿಗೆ ಅಂಚೆ ಕಚೇರಿಯು ಅರ್ಜಿಗಳನ್ನು ಆಹ್ವಾನಿಸಿದೆ. ಇದರಲ್ಲಿ ಪಾಸಾದ ಅಭ್ಯರ್ಥಿಗಳನ್ನು ವಿಭಾಗದ ಪೋಸ್ಟ್ ಮಾಸ್ಟರ್, ವಿಭಾಗದ ಸಹಾಯಕ ಪೋಸ್ಟ್ ಮಾಸ್ಟರ್, ಡಾಕ್ ಸೇವಕರಾಗಿ ನಿಯೋಜಿಸಲಾಗುವುದು. ಇದುವರೆಗೆ ಅರ್ಜಿ ಸಲ್ಲಿಸಲಾಗದ ಅಭ್ಯರ್ಥಿಗಳು ಈ ಮೊದಲೇ ಹೇಳಿದ https://indiapostgdsonline.in/gdsonlinec3p6/reference.aspx ವೆಬ್‍ಸೈಟ್ ವಿಳಾಸಕ್ಕೆ ತೆರಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

  ಅರ್ಹತೆ:

  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ಉತ್ತೀರ್ಣಗೊಂಡಿರಬೇಕು. ಗಣಿತ, ಇಂಗ್ಲೀಷ್ ಹಾಗೂ ಐಚ್ಛಿಕ ವಿಷಯದಲ್ಲಿ ಕನಿಷ್ಟ ಮಟ್ಟದ ಅಂಕಗಳನ್ನು ಗಳಿಸಿರುವುದು ಕಡ್ಡಾಯ. 60 ದಿನಗಳ ಕಾಲ ಬೇಸಿಕ್ ಕಂಪ್ಯೂಟರ್ ತರಬೇತಿ ಪೂರೈಸಿದ ದಾಖಲಾತಿ ಹೊಂದಿರಬೇಕು. ಇನ್ನು ಅಭ್ಯರ್ಥಿಗಳು ಸೈಕಲ್ ಕಲಿತಿರಬೇಕು. ನಂತರ ಅಭ್ಯರ್ಥಿಗಳನ್ನು ಶ್ರೇಣಿಯ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.

  Coronavirus Maharashtra: ಕೊರೋನಾ ಹರಡುವಿಕೆಯಲ್ಲಿ ಹೊಸ ದಾಖಲೆ ಬರೆದ ಮಹಾರಾಷ್ಟ್ರ

  ಭಾರತೀಯ ಅಂಚೆ ಜಿಡಿಸಿ ನೇಮಕಾತಿ 2020 ಕೇರಳ ವಲಯ: ಅರ್ಜಿ ಸಲ್ಲಿಸುವುದು ಹೇಗೆ?
  ಭಾರತೀಯ ಅಂಚೆ ಜಿಡಿಸಿ ನೇಮಕಾತಿ ಅರ್ಜಿ ಸಲ್ಲಿಕೆಯು ಹಲವು ಹಂತಗಳನ್ನು ಒಳಗೊಂಡಿದೆ.

  ಮೊದಲ ಹಂತ: ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‍ಸೈಟ್ https://appost.in/gdsonline/Home ಹೋಗಿ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

  ಎರಡನೇ ಹಂತ: ವೆಬ್‍ಸೈಟ್ ಕೇಳಿದ ಎಲ್ಲಾ ಮಾಹಿತಿಗಳನ್ನು ದಾಖಲಿಸಿ ನಮ್ಮ ರಿಜಿಸ್ಟರ್ ನಂಬರ್ ಮತ್ತು ಪಾಸ್‍ವಲ್ರ್ಡ್‍ನ್ನು ಪಡೆದು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

  ಮೂರನೇ ಹಂತ:ನೋಂದಣಿಯಾದ ಬಳಿಕ ಶುಲ್ಕವನ್ನು ಆನ್‍ಲೈನ್ ಮೂಲಕ ಕಟ್ಟಬೇಕು. ಶುಲ್ಕದ ಆಯ್ಕೆ ಹೋಗಿ ಅಲ್ಲಿ ಯಾವ ಆಯ್ಕೆಯನ್ನು ನೀಡಿರುತ್ತಾರೋ ಅದರಂತೆ ಶುಲ್ಕ ಪಾವತಿಸಬೇಕು. ಸಾಮಾನ್ಯ/ ಒಬಿಸಿ/ ಇಡಬ್ಲೂಎಸ್/ಟ್ರಾನ್ಸ್ ಮೇಲ್ ಇವರು 100 ರೂ. ಶುಲ್ಕ ಪಾವತಿಸಬೇಕು. ಇನ್ನು ಎಸ್‍ಸಿ/ಎಸ್‍ಟಿ/ಮಹಿಳೆ/ಟ್ರಾನ್ಸ್ ಫೀಮೇಲ್‍ಗೆ ಶುಲ್ಕದಲ್ಲಿ ವಿನಾಯತಿ ನೀಡಲಾಗಿದೆ.

  ನಾಲ್ಕನೇ ಹಂತ: ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಹಂತಗಳನ್ನು ಮುಗಿಸಿದ ಬಳಿಕ ಭಾರತೀಯ ಅಂಚೆ ಇಲಾಖೆಯ ಮುಖಪುಟದಲ್ಲಿ ಅಪ್ಲೈ ಆನ್‍ಲೈನ್ ಟ್ಯಾಬ್ ಸಿಗುತ್ತದೆ.

  ಸ್ಟೇಜ್1: ನೋಂದಣಿ ಸಂಖ್ಯೆ, ಪಾಸ್‍ವರ್ಡ್‌ ಹಾಗೂ ಯಾವ ಸ್ಥಳ ಎಂಬುದನ್ನು ಆಯ್ಕೆ ಮಾಡಿ ಲಾಗಿನ್ ಆಗಬೇಕು.
  ಸ್ಟೇಜ್ 2: ವೆಬ್‍ಸೈಟ್‍ನಲ್ಲಿರುವ ಅರ್ಜಿಯಲ್ಲಿ ಕೇಳಿದ ವಿವರಗಳನ್ನು ಸಮರ್ಪಕವಾಗಿ ಭರ್ತಿ ಮಾಡಿ ನಂತರ ಸಲ್ಲಿಸಬೇಕು.
  ಸ್ಟೇಜ್ 3: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ತಮ್ಮ ಬಳಿ ಇರಿಸಿಕೊಳ್ಳಬೇಕು.

  ಈ ಎಲ್ಲಾ ಹಂತಗಳನ್ನು ಸರಿಯಾದ ಕ್ರಮದಲ್ಲಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗುತ್ತಾರೆ. ನಂತರ ಇದರಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುತ್ತದೆ. ಈ ಅಭ್ಯರ್ಥಿಗಳ ಪ್ರತಿ ತಿಂಗಳ ವೇತನ 10,000 ದಿಂದ 14,500ದವರೆಗೆ ಇರುತ್ತದೆ.

  1421 ಹುದ್ದೆಗಳು

  ಯುಆರ್ - 784, ಇಡಬ್ಲೂಎಸ್ - 167, ಒಬಿಸಿ - 297, ಪಿಡಬ್ಲ್ಯೂಡಿ-ಎ- 11, ಪಿಡಬ್ಲ್ಯೂಡಿ-ಬಿ- 22, ಪಿಡಬ್ಲ್ಯೂಡಿ-ಸಿ- 19, ಪಿಡಬ್ಲ್ಯೂಡಿ ಡಿಇ - 2, ಎಸ್‍ಸಿ - 105, ಎಸ್‍ಟಿ - 14
  Published by:Latha CG
  First published: