• Home
  • »
  • News
  • »
  • lifestyle
  • »
  • Independence Day 2022: ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಪುಸ್ತಕಗಳು ಇವು, ಬಿಡುವಾದಾಗ ನೀವೂ ಓದಿ

Independence Day 2022: ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಪುಸ್ತಕಗಳು ಇವು, ಬಿಡುವಾದಾಗ ನೀವೂ ಓದಿ

ಭಾರತದ ತ್ರಿವರ್ಣ ಧ್ವಜ

ಭಾರತದ ತ್ರಿವರ್ಣ ಧ್ವಜ

ಬ್ರಿಟೀಷ್ ಆಳ್ವಿಕೆಯಿಂದ ಮುಕ್ತಿ ಪಡೆದು ಭಾರತದ ಸ್ವಾತಂತ್ರ್ಯವನ್ನು ಸ್ಮರಿಸಲು ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ನಮ್ಮ ದೇಶವು ಇಲ್ಲಿಯವರೆಗೆ ಎದುರಿಸುತ್ತಿರುವ ಹೋರಾಟಗಳ ಬಗ್ಗೆ ನಿಮಗೆ ತಿಳಿಸುವ ಪುಸ್ತಕಗಳು ಇವಿ. ನೀವು ಬಿಡುವಾದಾಗ ಓದಿ

  • Share this:

    ಬ್ರಿಟೀಷ್ (British) ಆಳ್ವಿಕೆಯಿಂದ ಮುಕ್ತಿ ಪಡೆದು ಭಾರತದ (India) ಸ್ವಾತಂತ್ರ್ಯವನ್ನು ಸ್ಮರಿಸಲು ಆಗಸ್ಟ್ 15 (August) ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ವೀರ ಹೃದಯಗಳ ತ್ಯಾಗವನ್ನು ಗೌರವಿಸಲು ನಾವು ಈ ದಿನವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಟವು ದೀರ್ಘವಾಗಿತ್ತು ಮತ್ತು ಹೋರಾಟದಲ್ಲಿ ಹಲವಾರು ಜೀವಗಳನ್ನು ಕಳೆದುಕೊಂಡಿತು. ಅದು 15 ಆಗಸ್ಟ್ 1947 ರಂದು, ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ದೆಹಲಿಯ ಕೆಂಪು ಕೋಟೆಯಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದರು. ಈ ಬಾರಿ ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ನಡೆದಿದೆ. ಕೆಂಪುಕೋಟೆಯ ಐತಿಹಾಸಿಕ ಕೋಟೆಯಿಂದ ಒಂಬತ್ತನೇ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮಾತನಾಡಿದ್ದಾರೆ.


    ಈ ವಿಶೇಷ ದಿನವನ್ನು ಆಚರಿಸುವ ಸಲುವಾಗಿ, ನಮ್ಮ ದೇಶವು ಇಲ್ಲಿಯವರೆಗೆ ಎದುರಿಸುತ್ತಿರುವ ಹೋರಾಟಗಳ ಬಗ್ಗೆ ನಿಮಗೆ ತಿಳಿಸುವ ಪುಸ್ತಕಗಳು ಇವಿ. ನೀವು ಬಿಡುವಾದಾಗ ಓದಿ


    ಪುಸ್ತಕ-ಭಾರತದ ವಿಭಜನೆ, ಲೇಖಕರು-ಹೈಮಂತಿ ರಾಯ್
    ಲೇಖಕರು ವಿಭಜನೆಯ ಮೂರು ಅಂಶಗಳತ್ತ ಗಮನ ಸೆಳೆಯುತ್ತಾರೆ. ಪುಸ್ತಕವು ಸಂಕ್ಷಿಪ್ತವಾದ ವಿವರವನ್ನು ಹೊಂದಿದೆ. ಮತ್ತು ಸಂಕ್ಷಿಪ್ತವಾಗಿ ಓದುಗರಿಗೆ ಕಾರಣ, ಹಿಂಸೆ ಮತ್ತು ನಷ್ಟ ಮತ್ತು ರಾಷ್ಟ್ರ ನಿರ್ಮಾಣದ ಸಂದರ್ಭೋಚಿತ ಇತಿಹಾಸಗಳನ್ನು ತಿಳಿಸಿಕೊಡುತ್ತೆ. ಹೈಮಂತಿ ರಾಯ್ ಅವರ ಪುಸ್ತಕವು ವಿಭಜನೆಯು 1947 ಕ್ಕೆ ಸೀಮಿತವಾಗಿರದೆ ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದೆ ಎಂಬುದನ್ನು ತಿಳಿಸಿಕೊಡುತ್ತೆ.


    Independence day 2022, 75th Independence Day celebrations, Books That Depict India’s Freedom Struggle, ಸ್ವಾತಂತ್ರ್ಯ ದಿನಾಚರಣೆ, ಹರ್ ಘರ್ ತಿರಂಗಾ ಅಭಿಯಾನ,75ನೇ ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಪುಸ್ತಕಗಳು, Kannada news, Karnataka news,
    ಭಾರತದ ವಿಭಜನೆ


    ಪುಸ್ತಕ- ಸ್ವಾತಂತ್ರ್ಯದ ಹಾದಿಗಳು: ವಸಾಹತುಶಾಹಿ ಭಾರತದಲ್ಲಿ ಕೈದಿಗಳು, ಲೇಖಕರು- ಮುಶಿರುಲ್ ಹಸನ್
    ಮುಶಿರುಲ್ ಹಸನ್ ಅವರ ಸ್ವಾತಂತ್ರ್ಯದ ಹಾದಿಗಳು: ವಸಾಹತುಶಾಹಿ ಭಾರತದಲ್ಲಿ ಕೈದಿಗಳು ವಸಾಹತುಶಾಹಿ ಭಾರತದಲ್ಲಿ ಜೈಲು ಮತ್ತು ಕೈದಿಗಳ ಇತಿಹಾಸದ ಬಗ್ಗೆ ಬರೆದಿದ್ದಾರೆ. ಪುಸ್ತಕವು ಕೈದಿಗಳ ಪರಿಸ್ಥಿತಿಗಳು ಮತ್ತು ಆರ್ಕೈವಲ್ ಸಂಶೋಧನೆಯ ಆಧಾರದ ಮೇಲೆ ಸ್ವಾತಂತ್ರ್ಯ ಚಳವಳಿಯ ಅವರ ದೃಷ್ಟಿಯನ್ನು ತೋರಿಸುತ್ತದೆ.


    ಇದನ್ನೂ ಓದಿ:Azadi Ka Amrit Mahotsav: ತ್ರಿವರ್ಣ ಬಣ್ಣಗಳಿಂದ ಮಿಂದೆದ್ದ ದೇಶದ ಐತಿಹಾಸಿಕ ಸ್ಮಾರಕಗಳು, ಕಟ್ಟಡಗಳು 


    ಇದಲ್ಲದೆ, ಪುಸ್ತಕವು ಕೆಲವು ಖಾಸಗಿ ಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳು, ಆತ್ಮಚರಿತ್ರೆಗಳು ಇತ್ಯಾದಿಗಳನ್ನು ಒಳಗೊಂಡಿದೆ.


    Independence day 2022, 75th Independence Day celebrations, Books That Depict India’s Freedom Struggle, ಸ್ವಾತಂತ್ರ್ಯ ದಿನಾಚರಣೆ, ಹರ್ ಘರ್ ತಿರಂಗಾ ಅಭಿಯಾನ,75ನೇ ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಪುಸ್ತಕಗಳು, Kannada news, Karnataka news,
    ಸ್ವಾತಂತ್ರ್ಯದ ಹಾದಿಗಳು: ವಸಾಹತುಶಾಹಿ ಭಾರತದಲ್ಲಿ ಕೈದಿಗಳು (ಕೃಪೆ: ಆಕ್ಸ್‍ಪರ್ಢ್)


    ಪುಸ್ತಕ- ಡಿಸ್ಕವರಿ ಆಫ್ ಇಂಡಿಯಾ, ಲೇಖಕರು-ಜವಾಹರಲಾಲ್ ನೆಹರು
    ಇತಿಹಾಸಪೂರ್ವ ಕಾಲದಿಂದ ಬ್ರಿಟಿಷ್ ರಾಜ್ ಕೊನೆಯ ವರ್ಷಗಳವರೆಗೆ, ಜವಾಹರಲಾಲ್ ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾ ರಾಷ್ಟ್ರದ ಶ್ರೀಮಂತ ಸಾಂಸ್ಕøತಿಕ ಭೂತಕಾಲವನ್ನು ಒಳಗೊಂಡಿದೆ. ನೆಹರೂ ಅವರು ಮಹಾರಾಷ್ಟ್ರದ ಅಹಮದ್‍ನಗರ ಕೋಟೆಯಲ್ಲಿ ಸೆರೆವಾಸದಲ್ಲಿದ್ದಾಗ (1942-46) ತಮ್ಮ ಪುಸ್ತಕ-ಡಿಸ್ಕವರಿ ಆಫ್ ಇಂಡಿಯಾವನ್ನು ಬರೆದರು.


    Independence day 2022, 75th Independence Day celebrations, Books That Depict India’s Freedom Struggle, ಸ್ವಾತಂತ್ರ್ಯ ದಿನಾಚರಣೆ, ಹರ್ ಘರ್ ತಿರಂಗಾ ಅಭಿಯಾನ,75ನೇ ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಪುಸ್ತಕಗಳು, Kannada news, Karnataka news,
    ಡಿಸ್ಕವರಿ ಆಫ್ ಇಂಡಿಯಾ


    ಪುಸ್ತಕ- ಪ್ರತ್ಯೇಕತೆಯ ಅವಶೇಷಗಳು, ಲೇಖಕರು-ಆಂಚಲ್ ಮಲ್ಹೋತ್ರಾ
    ಆಂಚಲ್ ಮಲ್ಹೋತ್ರಾ ಅವರ ಪುಸ್ತಕವು ವಿಭಜನೆಯ ನಿರಾಶ್ರಿತರು ತಮ್ಮೊಂದಿಗೆ ಗಡಿಯುದ್ದಕ್ಕೂ ಸಾಗಿಸಿದ ವಸ್ತುಗಳ ಮೂಲಕ ವಿಭಜನೆಯನ್ನು ಮರುಪರಿಶೀಲಿಸುವ ಪ್ರಯತ್ನವಾಗಿದೆ. ಅವರ ವಸ್ತುಗಳು ಭಾರತೀಯ ಇತಿಹಾಸದಲ್ಲಿ ಕೆಲವು ಕಠಿಣ ದಿನಗಳಲ್ಲಿ ಅವರ ಹೋರಾಟ ಮತ್ತು ತ್ಯಾಗದ ಕಥೆಗಳನ್ನು ಹೇಳುತ್ತವೆ.


    Independence day 2022, 75th Independence Day celebrations, Books That Depict India’s Freedom Struggle, ಸ್ವಾತಂತ್ರ್ಯ ದಿನಾಚರಣೆ, ಹರ್ ಘರ್ ತಿರಂಗಾ ಅಭಿಯಾನ,75ನೇ ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಪುಸ್ತಕಗಳು, Kannada news, Karnataka news,
    ಪ್ರತ್ಯೇಕತೆಯ ಅವಶೇಷಗಳು


    ಪುಸ್ತಕ- ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ಲೇಖಕರು-ಎನ್.ಪಿ. ಶಂಕರನಾರಾಯಣ ರಾವ್
    ಸ್ವಾತಂತ್ರ್ಯ ಗಂಗೆಯ ವೈಶಾಲ್ಯ, ಜಲಾಧಿಕ್ಯ, ಸ್ವಚ್ಛತೆಗೆ ಕೂಡು/ಸಂಗಮ ನದಿಗಳ ಕೊಡುಗೆ. ಇವುಗಳ ಸಮೀಕ್ಷಣೆ ಈ ಗ್ರಂಥದ ವಸ್ತು. ಪೂರ್ವರಂಗವಾಗಿ ಸ್ವಾತಂತ್ರ್ಯವನ್ನು ಹೇಗೆ ಕಳೆದು ಕೊಂಡೆವು ಎಂಬುದೂ ವಿಮರ್ಶೆಗೆ ಒಳಗಾಗಿದೆ. ವಸಾಹತುಶಾಹಿ ಆಕ್ರಮಣದ ಪರಿಣಾಮವಾಗಿ ಭಾರತದ ಆರ್ಥಿಕ ಬೆನ್ನೆಲುಬು ಹೇಗೆ ಜರ್ಝರಿತಗೊಂಡಿತೆಂದು ತಿಳಿಯದೆ ಇಲ್ಲಿಯ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸುವುದು ಅಸಮರ್ಪಕವಾದ ವಿಧಾನ.


    ಇದನ್ನೂ ಓದಿ: Google Doodle India: ಸ್ವಾತಂತ್ರ್ಯ ದಿನಾಚರಣೆಯನ್ನು ಗೂಗಲ್ ಹೇಗೆಲ್ಲ ಪ್ರದರ್ಶಿಸಿತ್ತು? ಇಲ್ಲಿದೆ ನೋಡಿ 


    ಇಂಥ ಬರವಣಿಗೆಗೆ ಒಂದು ಒಳ್ಳೆಯ ಮಾದರಿ. ಓದುತ್ತ ಹೋದಂತೆ ಲೇಖಕರ ಸಮಗ್ರ ಭಾರತೀಯ ದೃಷ್ಟಿ ಮೆಚ್ಚಿಗೆಯಾಗುತ್ತದೆ. ಈ ಕೃತಿ ಕಳೆದ ಐನೂರು ವರ್ಷಗಳ ಭಾರತದ ಇತಿಹಾಸದ ಅಧ್ಯಯನದ ಆಕರ ಗ್ರಂಥವಾಗಿ ಉಳಿಯುತ್ತದೆ.

    Published by:Savitha Savitha
    First published: