Benefits Of Bamboo Shoots: ಕಳಲೆ ಅಂದ್ರೆ ಮೂಗು ಮುರಿತೀರಾ? ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಗೊತ್ತಾದ್ರೆ ತಿನ್ನದೇ ಇರಲ್ಲ..

Health Benefits Of Bamboo Shoots: ಜಪಾನ್, ಚೀನಾ, ತೈವಾನ್‌ನಾದ್ಯಂತ ಬೆಳೆಯುವ  ಈ ಕಳಲೆಯನ್ನು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ. ನಮ್ಮ ದೇಶದಲ್ಲಿ, ಈ ರುಚಿಕರವಾದ  ಪದಾರ್ಥ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಜಾರ್ಖಂಡ್, ಒಡಿಶಾ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ  ಲಭ್ಯವಿದ್ದು ಮಳೆಗಾಲದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿದಿರು ಚಿಗುರುಗಳು (Bamboo shoots)ಎಂದೂ ಕರೆಯಲ್ಪಡುವ  ಕಳಲೆ ಆಗ್ನೇಯ ಏಷ್ಯಾದ  ಆಹಾರ ಪದ್ದತಿಗಳಲ್ಲಿ ಮತ್ತು ಭಾರತದ ಕೆಲವು ಭಾಗಗಳಲ್ಲಿ ವಿವಿಧ ಭಕ್ಷ್ಯಗಳು ಮತ್ತು ಸೂಪ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಿದಿರು ಚಿಗುರುಗಳು ಹೆಚ್ಚು ಜನಪ್ರಿಯವಾಗಿವೆ, ಅದರ ಅತ್ಯಂತ ಪ್ರಭಾವಶಾಲಿ ಪೌಷ್ಟಿಕಾಂಶವೇ ಜನರು ಹೆಚ್ಚಾಗಿ ಬಳಸಲು ಕಾರಣ.  ಕಚ್ಚಾ  ಕಳಲೆಯಲ್ಲಿ ಸೈನೋಜೆನಿಕ್ ಗ್ಲೈಕೋಸೈಡ್ಸ್ (Cyanogenic Glycosides)ಎಂದು ಕರೆಯಲಾಗುವ ಒಂದು ರೀತಿಯ ನೈಸರ್ಗಿಕ ವಿಷವನ್ನು ತುಂಬಿರುತ್ತದೆ. ಈ  ವಿಷಾಂಶಗಳು ಅಡುಗೆ  ಮಾಡುವಾಗ ನಾಶವಾಗುತ್ತವೆ, ಸಾಮಾನ್ಯವಾಗಿ ಕತ್ತರಿಸಿದ  ಕಳಲೆಯನ್ನು ನೀರಿನಲ್ಲಿ ಹಲವಾರು ಬಾರಿ ಕುದಿಸಿ ನಂತರ ಬಳಸುವುದು ಉತ್ತಮ.

ಜಪಾನ್, ಚೀನಾ, ತೈವಾನ್‌ನಾದ್ಯಂತ ಬೆಳೆಯುವ  ಈ ಕಳಲೆಯನ್ನು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ. ನಮ್ಮ ದೇಶದಲ್ಲಿ, ಈ ರುಚಿಕರವಾದ  ಪದಾರ್ಥ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಜಾರ್ಖಂಡ್, ಒಡಿಶಾ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ  ಲಭ್ಯವಿದ್ದು ಮಳೆಗಾಲದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಅನೇಕ ಪುರಾತನ ಸಾಂಪ್ರದಾಯಿಕ ಔಷಧ ಗ್ರಂಥಗಳಲ್ಲಿ, ಅದರ ಅಸಂಖ್ಯಾತ ಚಿಕಿತ್ಸಕ ಗುಣಗಳಿಂದಾಗಿ ಬಿದಿರು ಚಿಗುರುಗಳನ್ನು 'ಬಡವರ ಮರ', 'ಸಾವಿರ ಗಿಡದ ಗಿಡ', 'ಹಸಿರು ಚಿನ್ನ' ಎಂದು ವಿವರಿಸಲಾಗಿದೆ. ಬಿದಿರು ಚಿಗುರುಗಳ ಔಷಧೀಯ ಬಳಕೆಗಳನ್ನು ಮೊದಲು ಕ್ರಿಸ್ತಶಕ 618-907ರ ಚೀನೀ ಪುಸ್ತಕಗಳಲ್ಲಿ ವಿವರಿಸಲಾಗಿದೆ ಮತ್ತು ಜಪಾನ್‌ನಲ್ಲಿ ಇದನ್ನು ಅರಣ್ಯ ತರಕಾರಿಗಳ ರಾಜ ಎಂದು  ಕರೆಯಲಾಗುತ್ತದೆ.

ಕಳಲೆಗಳು ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಖನಿಜಗಳ ಶಕ್ತಿಕೇಂದ್ರವಾಗಿದೆ. ಇವು ತುಂಬಾ ಕಡಿಮೆ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿದ್ದು ಇದು ಮಧುಮೇಹಿಗಳಿಗೆ ಸೂಕ್ತವಾದ ಆಹಾರ. ನ್ಯೂಟ್ರಾಸ್ಯುಟಿಕಲ್ಸ್ ಎಂದು ಕರೆಯಲ್ಪಡುವ ಫೈಬರ್ ಇದರಲ್ಲಿ ಇದ್ದು,  ಕರುಳಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಎಮ್ಮೆ ಹಾಲನ್ನು ಕುಡಿಯೋದು ಎಷ್ಟು ಒಳ್ಳೆದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹಲವಾರು ಅಧ್ಯಯನಗಳು  ಕಳಲೆಯಲ್ಲಿ ಸಾಕಷ್ಟು ಪ್ರಮಾಣದ  ಆ್ಯಂಟಿ ಆಖ್ಸಿಡೆಂಅಟ್​  ಗಳಿದ್ದು, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ವಿರೋಧಿ, ಪ್ರತಿಜೀವಕ ಮತ್ತು ವೈರಾಣು ವಿರೋಧಿ ಗುಣಗಳನ್ನು ಹೊಂದಿದೆ ಎಂದು ಸಾಬೀತು ಮಾಡಿದೆ. ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ 6, ಥಯಾಮಿನ್, ರಿಬೋಫ್ಲಾವಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫಾಸ್ಫರಸ್, ತಾಮ್ರ, ಸತು, ಮ್ಯಾಂಗನೀಸ್ ಮತ್ತು ಇತರ ಪ್ರಮುಖ ಖನಿಜಗಳ ಲಾಭಗಳನ್ನು ಪಡೆಯಲು ಈ ಕಳಲೆ ಸೇವನೆ ಉತ್ತಮ.

ಹೃದ್ರೋಗ ತಜ್ಞರು ಪ್ರತಿದಿನ  ಕಳಲೆ ಸೆವನೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಇದು ಹೃದಯವನ್ನು ವಿವಿಧ ಹೃದಯ ಕಾಯಿಲೆಗಳಿಂದ ರಕ್ಷಿಸುತ್ತದೆ. ಫೈಟೊಸ್ಟೆರಾಲ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಿಂದ ತುಂಬಿರುವ ಇದರ ಸೇವನೆ ಮುಚ್ಚಿಹೋಗಿರುವ ಅಪಧಮನಿಗಳನ್ನು ತೆರವುಗೊಳಿಸಲು ಮತ್ತು ಕೆಟ್ಟ ಅಥವಾ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ.

ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಈ  ಕಳಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನಿಂದ ದೂರವಿರಲು ಮಳೆಗಾಲದಲ್ಲಿ ಮತ್ತು ಚಳಿಗಾಲದ ಆರಂಭದಲ್ಲಿ ಇವುಗಳನ್ನು ಸೇವಿಸುವುದು ಒಳ್ಳೆಯದು.

ಭಾರತದಲ್ಲಿ, ಈ  ಕಳಲೆಯಿಂದ ಹೊರತೆಗೆಯಲಾದ ರಸವು ವಿಷದ ವಿರುದ್ಧ ಕೆಲಸ ಮಾಡುತ್ತದೆ, ವಿಶೇಷವಾಗಿ ಹಾವು, ಚೇಳು ಮತ್ತು ಇತರ ವಿಷ ಜೀವಿಗಳು ಕಚ್ಚಿದಾಗ ಈ ರಸವನ್ನು  ಸೇವನೆ ಮಾಡಿದರೆ  ಅಥವಾ ಕಚ್ಚಿರುವ ಜಾಗಕ್ಕೆ ಹಚ್ಚಿದರೆ  ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮುಖದ ಅಂದ ಹೆಚ್ಚಿಸಿಕೊಳ್ಳಬೇಕಾ? ಹಾಗಾದ್ರೆ ಟೀ ಟ್ರೀ ಎಣ್ಣೆ ಬಳಕೆ ಮಾಡಿ..

ಕಳಲೆ ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸಬಹುದು, ಹೀಗಾಗಿ  ಆರಾಮದಾಯಕ ಹೆರಿಗೆಗೆ ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಚೈನೀಸ್ ಔಷಧಿಯಲ್ಲಿ ಗರ್ಭಿಣಿಯರಿಗೆ ಗರ್ಭಧಾರಣೆಯ ಕೊನೆಯ  ತಿಂಗಳುಗಳಲ್ಲಿ ಹೆರಿಗೆಗೆ ಅನುಕೂಲವಾಗುವಂತೆ ಬಿದಿರಿನ ಖಾದ್ಯಗಳನ್ನು ಸಣ್ಣ ಪ್ರಮಾಣದಲ್ಲಿ ಸೇವನೆ ಮಾಡಲು ಸಲಹೆ ನೀಡಲಾಗಿದೆ.
Published by:Sandhya M
First published: