Benefits of Nutmug: ನಿಮ್ಮ ಆರೋಗ್ಯದ ಮೇಲೆ ಜಾಯಿಕಾಯಿ ಮ್ಯಾಜಿಕ್ ಏನು ಗೊತ್ತಾ?

Nutmug : ಜಾಯಿಕಾಯಿಯು ಕೂಡ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಈ ಮರದ ಎಲೆಗಳು, ಚಕ್ಕೆಗಳನ್ನು ಹಲವಾರು ರೀತಿಯ ಎಣ್ಣೆಗಳನ್ನು ತಯಾರಿಸಲು ಬಳಸಲಾಗುತ್ತದೆ.

ಜಾಯಿಕಾಯಿ

ಜಾಯಿಕಾಯಿ

  • Share this:
ಜಾಯಿಕಾಯಿ ಬೀಜದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದೊಂದು ಮಸಾಲ ಪದಾರ್ಥ.  ಸಾಮಾನ್ಯವಾಗಿ ಇಂಡೋನೇಷ್ಯಾ, ವೆಸ್ಟ್ ಇಂಡೀಸ್ ನಂತಹ ದೇಶಗಳಲ್ಲಿ ಇದನ್ನು ಹೆಚ್ಚು ಬೆಳೆಯಲಾಗುತ್ತದೆ. ಹಾಗೆಯೇ ಮಲೇಶಿಯಾ, ಕ್ಯಾರಿಬಿಯನ್ ಹಾಗೂ ದಕ್ಷಿಣ ಭಾರತದಲ್ಲೂ ಕೂಡ ಇದನ್ನು ಕೆಲವು ಪ್ರದೇಶಗಳಲ್ಲಿ  ಬೆಳೆಯಲಾಗುತ್ತಿದೆ. ಈ ಮಸಾಲ ಪದಾರ್ಥ ತನ್ನ ಖಾರವಾದ ಘಾಟಿನಂತಹ ವಾಸನೆಗೆ  ಹೆಸರುವಾಸಿ. ಬಹಳ ಹಿಂದೆ ರೋಮನ್ ಜನರು ಇದನ್ನು ತಮ್ಮ ಕೋಣೆಯ ಪರಿಮಳಕ್ಕಾಗಿ ಉಪಯೋಗಿಸುತ್ತಿದ್ದರು ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಜಾಯಿಕಾಯಿಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ಜಾಯಿಕಾಯಿಯ ಬೀಜ, ಮತ್ತೊಂದು ಜಾಯಿಕಾಯಿಯನ್ನು ಸುತ್ತುವರೆದಿರುವ ನಾರಿನ ಪದಾರ್ಥ. ಈ ನಾರಿನ ಪದಾರ್ಥಗಳನ್ನು ಹಲವು ಅಡುಗೆಗಳಲ್ಲಿ ಬಳಕೆ ಮಾಡುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ ಕೇರಳ ರಾಜ್ಯದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕೇರಳದಲ್ಲಿರುವ ಜನರು ತಮ್ಮ ಮಾಂಸಾಹಾರಗಳಲ್ಲಿ, ಸಿಹಿಗಳಲ್ಲಿ, ಉಪ್ಪಿನಕಾಯಿಗಳಲ್ಲಿ ಇದನ್ನು ಬಳಸುತ್ತಾರೆ. ಮೊಗಲರ ಅಡುಗೆ ಪದಾರ್ಥಗಳಲ್ಲಿ ಇದು ಸರ್ವೇಸಾಮಾನ್ಯವಾಗಿದೆ. ಹಿಂದಿಯಲ್ಲಿ ಇದನ್ನು ಜಾಯಿಫಲ ಎಂದು ಕರೆಯಲಾಗುತ್ತದೆ.

ಜಾಯಿಕಾಯಿಯು ಕೂಡ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಈ ಮರದ ಎಲೆಗಳು, ಚಕ್ಕೆಗಳನ್ನು ಹಲವಾರು ರೀತಿಯ ಎಣ್ಣೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರಲ್ಲಿ ಬಹಳಷ್ಟು ಪೋಷಕಾಂಶಗಳು ಇರುತ್ತವೆ. ಇದರಲ್ಲಿ ಮೆಗ್ನೀಷಿಯಂ, ಮ್ಯಾಂಗನೀಸ್, ಕಾಪರ್, ವಿಟಮಿನ್ ಬಿ1, ವಿಟಮಿನ್ ಬಿ6 ಎಂಬಂತಹ ಅಪರೂಪವಾದ ಪೌಷ್ಟಿಕಾಂಶಗಳಿವೆ.

ಇದನ್ನೂ ಓದಿ: ತೂಕ ಇಳಿಸಬೇಕೆಂದರೆ ಮೊದಲು ಈ 5 ತಪ್ಪು ಕಲ್ಪನೆಗಳು, ಭ್ರಮೆಗಳಿಂದ ಹೊರ ಬನ್ನಿ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಜಾಯಿಕಾಯಿಯಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಶಿಯಂ, ಮ್ಯಾಂಗನೀಸ್ ಅಂಶಗಳು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಉತ್ತಮ

ಜಾಯಿಕಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ನಿಮ್ಮ ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಚರ್ಮದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳಿಗೆ ಇದು ಪರಿಹಾರ ನೀಡುತ್ತದೆ. ಜಾಯಿಕಾಯಿ ಪುಡಿ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಮ್ಮ ಮೊಡವೆಗಳ ಮೇಲೆ ಹಚ್ಚಿ 20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ ಅಥವಾ ಜಾಯಿಕಾಯಿಯ ಪುಡಿಗೆ ಹಾಲನ್ನು ಸೇರಿಸಿ ಅದನ್ನು ಚರ್ಮಕ್ಕೆ ಹಚ್ಚಿ, ನಿಮಗೆ ಉತ್ತಮ ಪರಿಹಾರ ಲಭಿಸುತ್ತದೆ.

ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ

ಬಾಯಿಯ ದುರ್ವಾಸನೆ ಸಾರ್ವಜನಿಕವಾಗಿ ನಿಮಗೆ ಅವಮಾನವಾಗುವಂತೆ ಮಾಡುತ್ತದೆ. ನೀವು ಇದರಿಂದ ಮುಕ್ತಿ ಪಡೆಯಲು ಹಲವು ಪ್ರಯತ್ನಗಳನ್ನು ಮಾಡಿರುತ್ತೀರಿ, ಆದರೆ ಅದ್ಯಾವುದು ಫಲ ನೀಡಿರುವುದಿಲ್ಲ. ಇಂಥಹ ಸಂದರ್ಭದಲ್ಲಿ ಜಾಯಿಕಾಯಿ ಒಳ್ಳೆಯ ಫಲಿತಾಂಶ ನೀಡುತ್ತದೆ. ಜಾಯಿಕಾಯಿ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುವುದಲ್ಲದೆ ಯಕೃತ್ತು ಹಾಗೂ ಮೂತ್ರಪಿಂಡಗಳ ಕಾರ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವ ಜಾಯಿಕಾಯಿ ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಜಾಯಿಕಾಯಿ ನಿಮ್ಮ ಮೆದುಳಿನಲ್ಲಿರುವ ನರಗಳನ್ನು ಉತ್ತೇಜಿಸುತ್ತದೆ ಇದು ಡಿಪ್ರೆಶನ್, ಆತಂಕ. ಅತಿಯಾದ ಸುಸ್ತು ಇಂಥಹ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ. ತುಂಬಾ ಆತಂಕ ಅನುಭವಿಸುತ್ತಿರುವ ಸಮಯದಲ್ಲಿ ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sharath Sharma Kalagaru
First published: