ಪುದೀನಾ ಎಲೆಗಳ ಆರೋಗ್ಯಕರ ಲಾಭಗಳು ಒಂದೇ, ಎರಡೇ?

ಇಂತಹ ಸಂದರ್ಭದಲ್ಲಿ ಆಹಾರದಲ್ಲಿ ಪುದೀನಾವನ್ನು ಬಳಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ಪುದೀನಾ ಎಲೆಗಳ ಪೇಸ್ಟ್ ಅಥವಾ ಅದರ ರಸವನ್ನು ಮುಖಕ್ಕೆ ನಿಯಮಿತವಾಗಿ ಹಚ್ಚಿಕೊಳ್ಳಿ.

zahir | news18-kannada
Updated:August 10, 2019, 3:35 PM IST
ಪುದೀನಾ ಎಲೆಗಳ ಆರೋಗ್ಯಕರ ಲಾಭಗಳು ಒಂದೇ, ಎರಡೇ?
ಪುದೀನಾ
  • Share this:
ಸಾಮಾನ್ಯವಾಗಿ ಪುದೀನಾ ಎಲ್ಲೆಡೆ ಸುಲಭವಾಗಿ ಸಿಗುತ್ತದೆ. ಆದರೆ ಆಹಾರದಲ್ಲಿ ಇದರ ಬಳೆಕೆ ಮಾಡುವುದು ತೀರಾ ವಿರಳ. ಪುದೀನಾ ಎಲೆಗಳನ್ನು ಸದ್ಗುಣ ಗಣಿ ಎನ್ನಲಾಗುತ್ತದೆ. ಈಎಲೆಗಳನ್ನು ನಿಮ್ಮ ದಿನನಿತ್ಯದ ಯಾವುದಾದರೊಂದು ಆಹಾರದಲ್ಲಿ ಬಳಸುತ್ತಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಕಾಣಬಹುದು. ಇನ್ನು ಈ ಸಸಿ ಔಷಧಿ ಗುಣಗಳನ್ನು ಹೊಂದಿದ್ದು, ಅನೇಕ ರೀತಿಯ ಬ್ಯಾಕ್ಟೀರಿಯಾ ಸಮಸ್ಯೆಗಳಿಗೆ ಮನೆ ಮದ್ದಾಗಿಯೂ ಇದನ್ನು ಬಳಸಬಹುದು.

- ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಪುದೀನಾ ರಸವನ್ನು ಕುಡಿಯುವುದು ಉತ್ತಮ. ಇದರಿಂದ ಆಯಾಸ ನಿವಾರಣೆಯಾಗುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.

- ಕಾಲರಾ ರೋಗ ಕಾಣಿಸಿಕೊಂಡಿದ್ದರೆ ಪುದೀನಾ, ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕುಡಿಯುವುದು ಪ್ರಯೋಜನಕಾರಿ.

- ಹೊಟ್ಟೆ ನೋವಿನ ಸಂದರ್ಭದಲ್ಲಿ ಪುದೀನಾ, ಜೀರಿಗೆ ಮತ್ತು ಕರಿಮೆಣಸಿನ ಮಿಶ್ರಣ ತಿನ್ನುವುದು ಅಥವಾ ಕುಡಿದರೆ ಪರಿಹಾರ ಕಾಣಬಹುದು.

- ಅರ್ಧ ಕಪ್ ಪುದೀನಾ ರಸ ಕುಡಿಯುವುದರಿಂದ ವಾಂತಿ ನಿಲ್ಲುತ್ತದೆ.

- ಸೌತೆಕಾಯಿಯಂತೆ, ಪುದೀನಾವನ್ನು ಚರ್ಮವನ್ನು ಕಾಂತಿಯನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಪುದೀನಾ ಎಲೆಗಳ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತಾಜಾತನ ಮತ್ತು ತೇವಾಂಶ ಸಿಗುತ್ತದೆ. ಅಲ್ಲದೆ, ಪುದೀನಾ ಎಲೆಗಳ ರಸವನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ತ್ವಚ್ಛೆಯ ಕ್ರೀಮ್​ ಆಗಿ ಬಳಸಬಹುದು.

- ಸುಕ್ಕುಗಟ್ಟುವಿಕೆಯನ್ನು ತಡೆಯುವಲ್ಲಿಯು ಸಹ ಪುದೀನಾ ಪ್ರಯೋಜನಕಾರಿ. ಪುದೀನಾ ಎಲೆಗಳ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವ ಮೂಲಕ ಚರ್ಮದ ಯೌವ್ವನವನ್ನು ಕಾಪಾಡಿಕೊಳ್ಳಬಹುದು.- ಬದಲಾಗುತ್ತಿರುವ ಹವಾಮಾನದಿಂದ ಚರ್ಮವು ಒಣಗುವುದು ಸಹಜ. ಇಂತಹ ಸಂದರ್ಭದಲ್ಲಿ ಆಹಾರದಲ್ಲಿ ಪುದೀನಾವನ್ನು ಬಳಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ಪುದೀನಾ ಎಲೆಗಳ ಪೇಸ್ಟ್ ಅಥವಾ ಅದರ ರಸವನ್ನು ಮುಖಕ್ಕೆ ನಿಯಮಿತವಾಗಿ ಹಚ್ಚುವುದರಿಂದ ಚರ್ಮದ ಬಣ್ಣವನ್ನು ಹೆಚ್ಚಿಸಬಹುದು.

First published:August 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading