ಮಲಗುವ ಮುನ್ನ ಎರಡು ಏಲಕ್ಕಿ ಸೇವಿಸಿ: ಆಮೇಲೆ ಕಾಣುವಿರಿ ಸಕಾರಾತ್ಮಕ ಪರಿಣಾಮ

ಸಣ್ಣ ಏಲಕ್ಕಿಯಲ್ಲಿ ಪೊಟಾಷಿಯಂ, ಮೆಗ್ನೀಷಿಯಂ, ವಿಟಮಿನ್ ಬಿ 1, ಬಿ 6 ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿವೆ. ಇದು ದೇಹದ ಕೊಬ್ಬನ್ನು ಕರಗಿಸುತ್ತದೆ.

zahir | news18
Updated:January 29, 2019, 5:00 PM IST
ಮಲಗುವ ಮುನ್ನ ಎರಡು ಏಲಕ್ಕಿ ಸೇವಿಸಿ: ಆಮೇಲೆ ಕಾಣುವಿರಿ ಸಕಾರಾತ್ಮಕ ಪರಿಣಾಮ
ಸಾಂದರ್ಭಿಕ ಚಿತ್ರ
  • News18
  • Last Updated: January 29, 2019, 5:00 PM IST
  • Share this:
ಆಧುನಿಕ ಜೀವನ ಶೈಲಿಯಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳಲ್ಲಿ ಬೊಜ್ಜಿನ ಸಮಸ್ಯೆ ಕೂಡ ಒಂದು. ಪ್ರತಿಯೊಬ್ಬರು ಹೊಟ್ಟೆಯನ್ನು ಕರಗಿಸಿ ಸುಂದರವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ದೈನಂದಿನ ಜೀವನ ಶೈಲಿ ಮತ್ತದೇ ಸಮಸ್ಯೆಯನ್ನು ತಂದೊಡುತ್ತದೆ. ಮುಖ್ಯವಾಗಿ ಕಚೇರಿಗಳಲ್ಲಿ ಕೂತು ಕೆಲಸ ಮಾಡುವವರು ಡೊಳ್ಳು ಹೊಟ್ಟೆಯ ಸಮಸ್ಯೆಗೆ ಈಡಾಗಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ದೀರ್ಘವಾಧಿವರೆಗೆ ಕುಳಿತುಕೊಳ್ಳುವುದು ಮತ್ತು ನಾವು ಸೇವಿಸುವ ಆಹಾರ ಪದಾರ್ಥಗಳಾಗಿವೆ. ದೇಹದಲ್ಲಿ ಕೊಬ್ಬು ಹೆಚ್ಚಾದಂತೆ ಸಮಸ್ಯೆಗಳೂ ಕಾಡಲಾರಂಭಿಸುತ್ತದೆ.

ವಾಸ್ತವವಾಗಿ ಹೊಟ್ಟೆಯು ಚೆನ್ನಾಗಿದ್ದರೆ ಮಾತ್ರ ಮನುಷ್ಯನು ಆರೋಗ್ಯವಾಗಿರುತ್ತಾನೆ. ಹೀಗಾಗಿ ಹೊಟ್ಟೆಯನ್ನು ಕರಗಿಸಿಕೊಳ್ಳಲು ನಾನಾ ಸರ್ಕಸ್​ ಮಾಡುವವರೇ ಹೆಚ್ಚು. ಆದರೆ ಪುರುಷರಿಗೆ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಲು ಸುಲಭ ಉಪಾಯವೊಂದಿದೆ. ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ ನೀರಿನೊಂದಿಗೆ ಎರಡು ಏಲಕ್ಕಿಯನ್ನು ತಿನ್ನುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಇದರಿಂದ ನಿಮ್ಮ ದೇಹದ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ: ರಾಯಚೂರು ಕಂದಾಯ ಇಲಾಖೆ ನೇಮಕಾತಿ: ಆಯ್ಕೆಯಾದ ಅಭ್ಯರ್ಥಿಗೆ ಸಿಗಲಿದೆ 42 ಸಾವಿರ ರೂ. ವೇತನ

ಸಣ್ಣ ಏಲಕ್ಕಿಯಲ್ಲಿ ಪೊಟಾಷಿಯಂ, ಮೆಗ್ನೀಷಿಯಂ, ವಿಟಮಿನ್ ಬಿ 1, ಬಿ 6 ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿವೆ. ಇದು ದೇಹದ ಕೊಬ್ಬನ್ನು ಕರಗಿಸುತ್ತದೆ. ಹಾಗೆಯೇ ಇದರಲ್ಲಿರುವ ಫೈಬರ್​ ಮತ್ತು ಕ್ಯಾಲ್ಸಿಯಂ ತೂಕವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: ನಿಖಿಲ್​ ಕುಮಾರಸ್ವಾಮಿ ಕೈ ತಪ್ಪಿತಾ ಟಿಕೆಟ್: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್​ ಫಿಕ್ಸ್?

ಅಷ್ಟೇ ಅಲ್ಲದೆ ಏಲಕ್ಕಿಯಲ್ಲಿರುವ ಪೊಟಾಷಿಯಂ ಮತ್ತು ಫೈಬರ್​ ಅಂಶಗಳು ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರಲಿದೆ. ಏಲಕ್ಕಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಯೂರಿನ್ ಇಂಫೆಕ್ಷನ್​ ಅನ್ನು ದೂರ ಮಾಡಬಹುದು. ಹೊಟ್ಟೆಯ ಸಮಸ್ಯೆಗಳಿಗೂ ಪರಿಹಾರವಾಗಿ ಏಲಕ್ಕಿಯನ್ನು ರಾತ್ರಿ ಹೊತ್ತಲ್ಲಿ ಬಿಸಿ ನೀರಿನೊಂದಿಗೆ ಸೇವಿಸುವುದು ಉತ್ತಮ. ಈ ರೀತಿಯಾಗಿ ನೈಸರ್ಗಿಕವಾಗಿ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು.

ಇದನ್ನೂ ಓದಿ: ವಿವೋ ಭರ್ಜರಿ ಆಫರ್​: ದುಬಾರಿ ಮೊಬೈಲ್​ಗಳಿಗೆ ಕೇವಲ 101 ರೂ. ಮಾತ್ರ!
First published:January 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading