Pollution Problem: ರಾಜಧಾನಿ ದೆಹಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚುತ್ತಿದೆ ಮಾಲಿನ್ಯ, ಹೀಗಿರಲಿ ಮುನ್ನೆಚ್ಚರಿಕೆ

ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಹೀಗಿರುವಾಗ ನೀವು ಮನೆಯೊಳಗೆ ಇರಬೇಕು. ಆಗಾಗ್ಗೆ ಹೊರಗೆ ಹೋಗುವುದನ್ನು ತಪ್ಪಿಸಿ. ಮತ್ತು ಹೊರಾಂಗಣ ತಾಲೀಮು ಮತ್ತು ವ್ಯಾಯಾಮ ಕಡಿಮೆ ಮಾಡಿ. ನಿತ್ಯವೂ ಬೆಳಗಿನ ವಾಕಿಂಗ್‌ಗೆ ಹೋಗುವ ವೃದ್ಧರು ಜಾಗರೂಕರಾಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಶದ (Country) ರಾಜಧಾನಿ ನವದೆಹಲಿಯನ್ನು (New Delhi) ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ (Polluted City) ಒಂದೆಂದು ಎಣಿಕೆ (Count) ಮಾಡಲಾಗ್ತಿದೆ. ಕೆಟ್ಟ ಗಾಳಿಯು ಪ್ರತಿ ವರ್ಷ ಲಕ್ಷಾಂತರ ಜನರನ್ನು ತನ್ನ ಅಜಾನುಬಾಹುವಿನ ತೆಕ್ಕೆಗೆ ತೆಗೆದುಕೊಳ್ತಿದೆ. ಇತ್ತೀಚೆಗಷ್ಟೇ ವಾಯು ಮಾಲಿನ್ಯದ ಬಗ್ಗೆ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಚಿಕಾಗೋ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ವರದಿ ಹೇಳುವ ಪ್ರಕಾರ, ದೆಹಲಿಯನ್ನು ವಿಶ್ವದ ಅತ್ಯಂತ ಕಲುಷಿತ ನಗರ ಎಂದು ಹೆಸರಿಸಲಾಗಿದೆ. ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಜನರ ಜೀವನದ ಆಯಸ್ಸು 10 ವರ್ಷಗಳಷ್ಟು ಕಡಿಮೆಯಾಗುತ್ತಿದೆ.

  ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಮಾಲಿನ್ಯದ ದೇಶವಾಗಿದೆ

  ಮಾಲಿನ್ಯದ ವಿಷಯದಲ್ಲಿ ಬಾಂಗ್ಲಾದೇಶದ ನಂತರ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಮಾಲಿನ್ಯದ ದೇಶವಾಗಿದೆ. ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ (AQLI) ವರದಿಯ ಪ್ರಕಾರ, 2020 ರಲ್ಲಿ ದೆಹಲಿ ವಾರ್ಷಿಕ ಗಾಳಿಯ ಗುಣಮಟ್ಟದ ಮಾನದಂಡವು 107 µg/m3 ಆಗಿತ್ತು. ಇದು WHO ಯ ಮಾರ್ಗಸೂಚಿಗಿಂತ 21 ಪಟ್ಟು ಹೆಚ್ಚಾಗಿದೆ.

  ಭಾರತದ ಜನಸಂಖ್ಯೆಯ ಶೇಕಡಾ 63 ಕ್ಕಿಂತ ಹೆಚ್ಚು ಜನರು ದೇಶದ ರಾಷ್ಟ್ರೀಯ ವಾಯು ಗುಣಮಟ್ಟದ 40 µg/m3 ಅನ್ನು ಮೀರಿದ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ವಾಯು ಮಾಲಿನ್ಯದ ಮಟ್ಟ ಪ್ರತೀ ವರ್ಷ ಹೀಗೆಯೇ ಏರುತ್ತ ಹೋದರೆ, ಖಂಡಿತವಾಗಿ ಪಂಜಾಬ್‌ನಿಂದ ಪಶ್ಚಿಮ ಬಂಗಾಳದವರೆಗಿನ ಅರ್ಧ ಶತಕೋಟಿಗೂ ಹೆಚ್ಚು ಜನರ ಆಯುಷ್ಯ 7.6 ವರ್ಷಗಳಷ್ಟು ಕಡಿಮೆಯಾಗುತ್ತದೆ.

  ಇದನ್ನೂ ಓದಿ: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

  ವಾಯು ಮಾಲಿನ್ಯವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯ. ಹಾಗಾದರೆ ವಾಯುಮಾಲಿನ್ಯದ ಕೆಟ್ಟ ಸ್ಥಿತಿ ತಪ್ಪಿಸಲು ನಾವು ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಇಲ್ಲಿ ತಿಳಿಯೋಣ.

  ಮನೆಯೊಳಗೆ ಇರುವುದು

  ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಹೀಗಿರುವಾಗ ನೀವು ಮನೆಯೊಳಗೆ ಇರಬೇಕು. ಆಗಾಗ್ಗೆ ಹೊರಗೆ ಹೋಗುವುದನ್ನು ತಪ್ಪಿಸಿ. ಮತ್ತು ಹೊರಾಂಗಣ ತಾಲೀಮು ಮತ್ತು ವ್ಯಾಯಾಮ ಕಡಿಮೆ ಮಾಡಿ. ನಿತ್ಯವೂ ಬೆಳಗಿನ ವಾಕಿಂಗ್‌ಗೆ ಹೋಗುವ ವೃದ್ಧರು ಜಾಗರೂಕರಾಗಿರಬೇಕು. ಮಕ್ಕಳು ಹೊರಗೆ ಹೋಗುವ ಬದಲು ಮನೆಯಲ್ಲಿ ಚಟುವಟಿಕೆ ಆನಂದಿಸಿ.

  ಏರ್ ಪ್ಯೂರಿಫೈಯರ್ ಬಳಸಿ

  ಗಾಳಿಯನ್ನು ಶುದ್ಧೀಕರಿಸಲು ಏರ್ ಪ್ಯೂರಿಫೈಯರ್ ಬಳಸಿ. ಅದು ಕೊಳಕು ಗಾಳಿಯಿಂದ ಕಣಗಳನ್ನು ತೆಗೆದು ಹಾಕುತ್ತದೆ. ಮನೆಯೊಳಗಿನ ಗಾಳಿಯು ಹೊರಗಿನ ಗಾಳಿಯಂತೆ ಹಾನಿಕಾರಕ. ಏಕೆಂದರೆ ಮಾಲಿನ್ಯಕಾರಕಗಳು ನಿಮ್ಮ ಮನೆಗಳಿಗೆ ಹೊರಗಿನಿಂದ ಬರಬಹುದು. ಏರ್ ಪ್ಯೂರಿಫೈಯರ್ ನಿಮ್ಮ ಮನೆಯಲ್ಲಿ ಗಾಳಿಯನ್ನು ಸ್ವಚ್ಛಗೊಳಿಸಲು ಮತ್ತು ಶುದ್ಧೀಕರಿಸುತ್ತದೆ.

  ಹೊರಗೆ ಹೋಗುವಾಗ ಮಾಸ್ಕ್ ಧರಿಸಿ

  SARS cov-2 ವೈರಸ್ ಅನ್ನು ತಪ್ಪಿಸಲು ಫೇಸ್ ಮಾಸ್ಕ್ ಧರಿಸಿ. ವಾಯು ಮಾಲಿನ್ಯವನ್ನು ತಪ್ಪಿಸಲು ಮಾಸ್ಕ್ ಧರಿಸಬೇಕು. ಇದು ವಿಷಕಾರಿ ಗಾಳಿಯನ್ನು ತೆಗೆದು ಹಾಕುತ್ತದೆ ಮತ್ತು ಹಾನಿಕಾರಕ ಮಾಲಿನ್ಯಕಾರಕಗಳಿಂದ ನಿಮ್ಮ ಶ್ವಾಸಕೋಶವನ್ನು ರಕ್ಷಿಸುತ್ತದೆ.

  ಗಾಳಿಯನ್ನು ಶುದ್ಧೀಕರಿಸುವ ಸಸಿಗಳನ್ನು ನೆಡಿ

  ಮನೆಯ ಗಾಳಿಯ ಸ್ವಚ್ಛತೆ ಹೊರಗಿನ ಗಾಳಿಯಂತೆಯೇ ಮುಖ್ಯ. ಅಲೋವೆರಾ, ಎರಿಕಾ ಪಾಮ್, ಐವಿ, ಸ್ನೇಕ್ ಪ್ಲಾಂಟ್, ಬಿದಿರು ಪಾಮ್, ವಾರ್ನೆಕ್ ಡ್ರಾಕೇನಾ ಮುಂತಾದ ಸಸ್ಯಗಳು ವಾಯು ಮಾಲಿನ್ಯವನ್ನು ಶುದ್ಧೀಕರಿಸುತ್ತವೆ. ಇವು ಪರಿಸರಕ್ಕೆ ಸಹಕಾರಿ.

  ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

  ಆರೋಗ್ಯಕರ ಆಹಾರವೂ ಮುಖ್ಯವಾಗಿದೆ

  ವಾಯು ಮಾಲಿನ್ಯ ತಪ್ಪಿಸಲು ಆರೋಗ್ಯಕರ ಆಹಾರ ಸೇವಿಸಿ. ಉಸಿರಾಟ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳು, ತರಕಾರಿಗಳು, ಬೀಜಗಳು, ಬೀನ್ಸ್ ಮತ್ತು ಆರೋಗ್ಯಕರ ಕೊಬ್ಬು ಸೇರಿಸಿ. ಇದು ನಿಮ್ಮ ದೇಹವು ವಾಯು ಮಾಲಿನ್ಯದ ಹಾನಿ ತಪ್ಪಿಸಲು ಸಹಕಾರಿ. ದೇಹವನ್ನು ಹೈಡ್ರೀಕರಿಸಿ.
  Published by:renukadariyannavar
  First published: