• Home
  • »
  • News
  • »
  • lifestyle
  • »
  • Pregnancy Health: ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುವ ನೈಸರ್ಗಿಕ ಮಾರ್ಗ ಯಾವುದು?

Pregnancy Health: ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುವ ನೈಸರ್ಗಿಕ ಮಾರ್ಗ ಯಾವುದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಿಮೋಗ್ಲೋಬಿನ್ ಕೆಂಪು ರಕ್ತಕ್ಕೆ ಅಗತ್ಯವಾದ ಪ್ರೋಟೀನ್ ಆಗಿದೆ. ಇದು ಜೀವಕೋಶಗಳಿಗೆ ಆಮ್ಲಜನಕ ಸಾಗಿಸಲು ಮತ್ತು ಶ್ವಾಸಕೋಶದ ಸಹಾಯದಿಂದ ಇಂಗಾಲದ ಡೈಆಕ್ಸೈಡ್ ನ್ನು ಹೊರಕ್ಕೆ ತೆಗೆಯಲು ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್‌ ವಿಚಾರವಾಗಿ ತಜ್ಞರು ಏನು ಹೇಳಿದ್ದಾರೆ ನೋಡೋಣ.

  • Share this:

    ನಮ್ಮ ದೇಹದ (Body) ಜೀವಕೋಶಗಳು (Cells) ನಮ್ಮನ್ನು ಆರೋಗ್ಯವಾಗಿ (Healthy) ಇರಿಸುವಲ್ಲಿ ತುಂಬಾ ಮುಖ್ಯ ಪಾತ್ರ ವಹಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ. ಅದರಲ್ಲೂ ಬಿಳಿ ರಕ್ತ ಕಣಗಳು ಪ್ರತಿರಕ್ಷಣಾ ವ್ಯವಸ್ಥೆಯ (Immunity System) ಅತ್ಯಗತ್ಯ ಭಾಗ ಆಗಿದೆ. ದೇಹವು ರೋಗಗಳು (Disease) ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಬಿಳಿ ರಕ್ತ ಕಣಗಳು ಸಹಾಯ ಮಾಡುತ್ತದೆ. ಹಾಗಾಗಿ ದೇಹದ ಆರೋಗ್ಯ ಕಾಪಾಡಲು ಕೆಂಪು ರಕ್ತ ಕಣಗಳು ಸಹ ಅಷ್ಟೇ ಮುಖ್ಯವಾಗಿ ಬೇಕು. ಇದು ರಕ್ತದೊಂದಿಗೆ ಕರುಳಿನಿಂದ ಅಂಗಾಂಶಗಳಿಗೆ ಆಮ್ಲಜನಕ ಸಾಗಿಸಲು ಸಹಾಯ ಮಾಡುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದರೆ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ.


    ಗರ್ಭಾವಸ್ಥೆಯಲ್ಲಿ ಹಿಮೋಗ್ಲೋನಿನ್ ಹೆಚ್ಚಿಸುವ ನೈಸರ್ಗಿಕ ಮಾರ್ಗ? ಹಿಮೋಗ್ಲೋಬಿನ್ ಕೆಂಪು ರಕ್ತಕ್ಕೆ ಅಗತ್ಯವಾದ ಪ್ರೋಟೀನ್ ಆಗಿದೆ. ಇದು ಜೀವಕೋಶಗಳಿಗೆ ಆಮ್ಲಜನಕ ಸಾಗಿಸಲು ಮತ್ತು ಶ್ವಾಸಕೋಶದ ಸಹಾಯದಿಂದ ಇಂಗಾಲದ ಡೈಆಕ್ಸೈಡ್ ನ್ನು ಹೊರಕ್ಕೆ ತೆಗೆಯಲು ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್‌ ವಿಚಾರವಾಗಿ ತಜ್ಞರು ಏನು ಹೇಳಿದ್ದಾರೆ ನೋಡೋಣ.


    ವಯಸ್ಸಿನ ಮಟ್ಟಕ್ಕೆ ಅನುಗುಣವಾಗಿ ಹಿಮೋಗ್ಲೋಬಿನ್ ಮಟ್ಟ ಎಷ್ಟಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ. ದೇಹದಲ್ಲಿ ಸರಿಯಾದ ಪ್ರಮಾಣದ ಹಿಮೋಗ್ಲೋಬಿನ್ ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಇದು ರೋಗಗಳ ಬೆಳವಣಿಗೆ ಅಪಾಯ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಡಾ.ಪಿ.ಎನ್.ಚೌಧರಿ ಅವರ ಪ್ರಕಾರ, ನವಜಾತ ಶಿಶುವಿನಲ್ಲಿ ಹಿಮೋಗ್ಲೋಬಿನ್ ಸಾಮಾನ್ಯ ಮಟ್ಟ 17 ಗ್ರಾಂ ಡಿಎಲ್, ಮಕ್ಕಳಲ್ಲಿ 11 ಗ್ರಾಂ ಡಿಎಲ್, ವಯಸ್ಕ ಪುರುಷರಲ್ಲಿ ಸಾಮಾನ್ಯ ಹಿಮೋಗ್ಲೋಬಿನ್ ಮಟ್ಟವು 14 ಗ್ರಾಂ ಡಿಎಲ್, ವಯಸ್ಕ ಮಹಿಳೆಯರಲ್ಲಿ ಈ ಮಟ್ಟವು 12 ಗ್ರಾಂ ಡಿಎಲ್ ಇರಬೇಕು ಎಂದಿದ್ದಾರೆ.


    ಕಡಿಮೆ ಹಿಮೋಗ್ಲೋಬಿನ್ ಮಟ್ಟದ ಮುಖ್ಯ ಲಕ್ಷಣಗಳು


    ಕಡಿಮೆ ಹಿಮೋಗ್ಲೋಬಿನ್ ಮಟ್ಟಗಳ ಮುಖ್ಯ ಲಕ್ಷಣಳೆಂದರೆ ದಣಿವು, ದೌರ್ಬಲ್ಯ ಮತ್ತು ತಲೆತಿರುಗುವಿಕೆ ಆಗಿದೆ. ಜೊತೆಗೆ ರಕ್ತದ ಕೊರತೆಯಿಂದ ರಕ್ತಹೀನತೆ ಸಮಸ್ಯೆ ಸಹ ಉಂಟಾಗುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.


    ಹಿಮೋಗ್ಲೋಬಿನ್ ಕೊರತೆಗೆ ಏನು ಕಾರಣ?


    ತಜ್ಞರ ಪ್ರಕಾರ, ಹಿಮೋಗ್ಲೋಬಿನ್ ಕೊರತೆ ರಕ್ತಹೀನತೆಯ ಸಮಸ್ಯೆ ಆಗಿದೆ. ರಕ್ತದ ಕೊರತೆಯನ್ನು ವೈದ್ಯಕೀಯ ಭಾಷೆಯಲ್ಲಿ ರಕ್ತಹೀನತೆ ಎನ್ನುತ್ತಾರೆ.


    ರಕ್ತಹೀನತೆ ಕೊರತೆಯ ತೊಂದರೆಗಳು


    ರಕ್ತಹೀನತೆಯಿಂದ ಬಳಲುತ್ತಿರುವ ಜನರು ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಾರೆ. ರಕ್ತದ ಕೊರತೆ, ಹೃದಯ ಮತ್ತು ಶ್ವಾಸಕೋಶದಲ್ಲಿ ಅನೇಕ ತೊಡಕು ಉಂಟು ಮಾಡುತ್ತದೆ. ವೇಗವಾದ ಹೃದಯ ಬಡಿತ ಹಾಗೂ ಕೆಲವೊಮ್ಮೆ ಹೃದಯ ವೈಫಲ್ಯದ ಅಪಾಯ ಸಹ ಇರುತ್ತದೆ.


    ಹಿಮೋಗ್ಲೋಬಿನ್ ಹೆಚ್ಚಿಸುವ ಆಹಾರ ಪದಾರ್ಥಗಳು


    ಹಸಿರು ಎಲೆಗಳ ತರಕಾರಿಗಳು


    ಹಿಮೋಗ್ಲೋಬಿನ್ ಹೆಚ್ಚಿಸಲು ಗರ್ಭಿಣಿಯರು ಕೆಲವು ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಪಾಲಕ್ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.


    ಕಾಲೋಚಿತ ಹಣ್ಣು


    ಹಣ್ಣುಗಳ ಬಗ್ಗೆ ಮಾತನಾಡುತ್ತಾ ದಾಳಿಂಬೆ, ಬೀಟ್ಗೆಡ್ಡೆ, ಬಾಳೆಹಣ್ಣು, ಕ್ಯಾರೆಟ್, ಪೇರಲ, ಸೇಬು, ದ್ರಾಕ್ಷಿ, ಕಿತ್ತಳೆ ಸೇವನೆ ಪ್ರಯೋಜನಕಾರಿ ಆಗಿದೆ.


    ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥ


    ಖರ್ಜೂರ, ಬಾದಾಮಿ ಮತ್ತು ಒಣದ್ರಾಕ್ಷಿಗಳನ್ನು ಬಾದಾಮಿ ಹಾಲು, ಬೆಲ್ಲ, ಬೆಲ್ಲದ ಚಹಾ ಮತ್ತು ಒಣ ಹಣ್ಣುಗಳಲ್ಲಿ ತಿನ್ನುವುದು ಗರ್ಭಿಣಿಯರಿಗೆ ಪ್ರಯೋಜನಕಾರಿ ಆಗಿದೆ.


    ಇದನ್ನೂ ಓದಿ: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಈ ಹಣ್ಣು ಪ್ರಯೋಜನಕಾರಿ


    ಮಾಂಸಾಹಾರಿ ಆಹಾರ


    ಮಾಂಸಾಹಾರಿ ಆಹಾರಗಳಲ್ಲಿ ಮೊಟ್ಟೆ, ಕೋಳಿ ಅಥವಾ ಮೀನು ಕೂಡ ಗರ್ಭಿಣಿಯರಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    Published by:renukadariyannavar
    First published: