ಇತ್ತೀಚಿನ ದಿನಗಳಲ್ಲಿ (Now A Days) ಮಹಿಳೆಯರು (Women’s) ತಮ್ಮ ಫಿಟ್ನೆಸ್ (Fitness) ಬಗ್ಗೆ ತುಂಬಾ ಕಾಳಜಿ (Care) ವಹಿಸುತ್ತಿದ್ದಾರೆ. ಹೆಚ್ಚಾಗುವ ತೂಕ ನಿಯಂತ್ರಣ (Weight Manage) ಮಾಡಲು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಅದರಲ್ಲಿ ವ್ಯಾಯಾಮವೂ ಒಂದು. ಆಹಾರ ನಿಯಂತ್ರಣ ಕ್ರಮ, ಕಡು ಬಯಕೆ ನಿಗ್ರಹ ಮಾಡುವ ಮೂಲಕ ತೂಕ ನಿಯಂತ್ರಣ ಮಾಡೋದು ಈಗ ಕಾಮನ್ ಆಗಿದೆ. ನಮ್ಮ ತಾಯಂದಿರು, ಅಜ್ಜಿಯರು ತಮ್ಮ ಫಿಟ್ನೆಸ್ ಮತ್ತು ಲುಕ್ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಆದರೆ ಈಗ ಅವರ ಕಾಲ ಕಳೆದು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೊಜ್ಜು ಎಷ್ಟೋ ಪಟ್ಟು ಹೆಚ್ಚಿ ದೇಹದಲ್ಲಿ ಹಲವಾರು ರೋಗಗಳು ಅಂಟಿಕೊಳ್ಳುತ್ತಿರುವುದು ಇತ್ತೀಚೆಗೆ ಕಾಮನ್ ಆಗಿದೆ.
ಮಹಿಳೆಯರಲ್ಲಿ ಫಿಟ್ ನೆಸ್ ಅರಿವು
ಸ್ಥೂಲಕಾಯತೆ ಮಹಿಳೆಯರನ್ನು ಹಲವು ರೀತಿಯಲ್ಲಿ ಬಾಧಿಸುತ್ತದೆ. ಮೂವತ್ತು ವರ್ಷದ ನಂತರ ಬೋನ್ ಡೆನ್ಸಿಟಿ ಕಡಿಮೆಯಾಗುತ್ತಾ ಹೋಗುತ್ತದೆ. ಈಗೆಲ್ಲಾ ಕಡಿಮೆ ವಯಸ್ಸಿನಲ್ಲೇ ಮಹಿಳೆಯರು ಬೆನ್ನು ನೋವು ಮತ್ತು ಮೊಣಕಾಲು ನೋವಿಗೆ ಹೆಚ್ಚು ತುತ್ತಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಮುಖ್ಯ. ಈಗ ಮಹಿಳೆಯರು ಜಿಮ್, ಜುಂಬಾ, ಯೋಗ ಅಥವಾ ವ್ಯಾಯಾಮ ಮಾಡುವ ಮೂಲಕ ಫಿಟ್ ನೆಸ್ ಕಾಯ್ದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಈ ಕ್ರಮಗಳನ್ನು ಫಾಲೋ ಮಾಡಿ!
ಎಲ್ಲಾ ವಯಸ್ಸಿನ ಮಹಿಳೆಯರು ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಲು ಬಯಸುತ್ತಾರೆ. ಮತ್ತು ಇದಕ್ಕಾಗಿ ಕೆಲವು ವ್ಯಾಯಾಮ ಮಾಡುತ್ತಾರೆ. ಒಂದು ದಿನದಲ್ಲಿ ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು ಮತ್ತು ಮಹಿಳೆಯರು ಯಾವ ವ್ಯಾಯಾಮವನ್ನು ಎಷ್ಟು ಸಮಯ ಮಾಡಬೇಕು ಎಂಬುದನ್ನು ನಾವು ಇಂದು ಇಲ್ಲಿ ನೋಡೋಣ.
ತೂಕ ಇಳಿಸುವ ವ್ಯಾಯಾಮ
ಹೆಚ್ಚಿನ ಮಹಿಳೆಯರು ತೂಕ ಇಳಿಸಲು ವ್ಯಾಯಾಮ ಮಾಡುತ್ತಾರೆ. ತೂಕ ನಷ್ಟಕ್ಕೆ ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಅಥವಾ ಇತರ ಯಾವುದೇ ದೈಹಿಕ ಚಟುವಟಿಕೆ ಅಗತ್ಯ. ತೂಕ ನಷ್ಟಕ್ಕೆ ನೀವು ವಾರಕ್ಕೆ 200 ರಿಂದ 300 ನಿಮಿಷದವರೆಗೆ ವ್ಯಾಯಾಮ ಮಾಡಬೇಕು.
ಲಘು ಜೀವನಕ್ರಮಗಳು ತೂಕ ಕಡಿಮೆ ಮಾಡುವುದಿಲ್ಲ ಎಂಬುದನ್ನು ನೆನಪಿಡಿ. ತೂಕ ಕಳೆದುಕೊಳ್ಳಲು, ಪ್ರತಿದಿನ 30 ನಿಮಿಷಗಳ ಓಟ ಅಥವಾ ವೇಗದ ನಡಿಗೆ ಮಾಡುವುದು ಅವಶ್ಯಕ.
ಏರೋಬಿಕ್ ಆಕ್ಟಿವಿಟಿ
ಇತ್ತೀಚಿನ ದಿನಗಳಲ್ಲಿ ಏರೋಬಿಕ್ಸ್ ಮೂಲಕ ತೂಕ ಇಳಿಸುವ ಪ್ರವೃತ್ತಿ ಮಹಿಳೆಯರಲ್ಲಿ ಹೆಚ್ಚಿದೆ. ಏರೋಬಿಕ್ ವ್ಯಾಯಾಮದಲ್ಲಿ ನೀವು ನೃತ್ಯ ಮಾಡುತ್ತಾ ವ್ಯಾಯಾಮ ಮಾಡುತ್ತೀರಿ.
ಏರೋಬಿಕ್ ಚಟುವಟಿಕೆಯು ಒಟ್ಟಾರೆ ದೇಹದ ಫಿಟ್ನೆಸ್ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ನೀವು ವಾರಕ್ಕೆ ಕನಿಷ್ಠ 75 ರಿಂದ 100 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಬೇಕು. ಪ್ರತಿದಿನ 15-20 ನಿಮಿಷ ನೃತ್ಯ, ಜುಂಬಾ, ಈಜು ಅಥವಾ ಸೈಕ್ಲಿಂಗ್ ಏರೋಬಿಕ್ ವ್ಯಾಯಾಮ ಮಾಡುವುದು ಅವಶ್ಯಕ.
ಸ್ನಾಯು ಸಾಮರ್ಥ್ಯ ತರಬೇತಿ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ನಾಯು ಬಲದ ತರಬೇತಿ ಸಹ ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡಲು ಇಷ್ಟ ಪಡುತ್ತಾರೆ.
ಆದರೆ ಸ್ನಾಯುಗಳ ಬಲವರ್ಧನೆಗೆ ಮಹಿಳೆಯರು, ವಾರದಲ್ಲಿ ಕನಿಷ್ಠ ಎರಡು ದಿನ ಎಲ್ಲಾ ಸ್ನಾಯುಗಳ ವ್ಯಾಯಾಮ ಮಾಡಬೇಕು. ಸುಮಾರು 12 ರಿಂದ 15 ಬಾರಿ ನಂತರ ನಿಮ್ಮ ಸ್ನಾಯುಗಳನ್ನು ಆಯಾಸಗೊಳಿಸುವ ವ್ಯಾಯಾಮ ನೀವು ಮಾಡಬೇಕು.
ಇದನ್ನೂ ಓದಿ: ತ್ವಚೆ, ಕೂದಲಿನ ಆರೋಗ್ಯಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಬಳಸುವ ಮುನ್ನ ಎಚ್ಚರಿಕೆ ವಹಿಸಿ!
ಫಿಟ್ನೆಸ್ ವರ್ಕೌಟ್
ನಿಮ್ಮ ಫಿಟ್ನೆಸ್ಗಾಗಿ ಮಾತ್ರ ನೀವು ವ್ಯಾಯಾಮ ಮಾಡುತ್ತಿದ್ದರೆ, ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಮಾಡಿ. ವಾರಕ್ಕೆ 150 ರಿಂದ 200 ನಿಮಿಷ ನಡೆಯುವುದು ಆರೋಗ್ಯಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ