• Home
 • »
 • News
 • »
 • lifestyle
 • »
 • Pollution Effects: ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದ ಈ ರೋಗಗಳ ಅಪಾಯ ಅಧಿಕ!

Pollution Effects: ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದ ಈ ರೋಗಗಳ ಅಪಾಯ ಅಧಿಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದ ಪ್ರಮುಖ ನಗರಗಳಲ್ಲಿ ಮಾಲಿನ್ಯ ಮಿತಿ ಮೀರುತ್ತಿದೆ. ಇದು ನಗರಗಳ ಜನರ ಜೀವಕ್ಕೆ ಕುತ್ತು ತರುತ್ತಿದೆ. ಅದರಲ್ಲೂ ರಾಜಧಾನಿ ದೆಹಲಿಯ ಗಾಳಿ ವಿಷಕಾರಿ ಆಗತೊಡಗಿದೆ. ಹಬ್ಬದಂದು ಹಾರಿಸುವ ಪಟಾಕಿಗಳಿಂದಾಗಿ ವಾಯು ಮಾಲಿನ್ಯ ಹೆಚ್ಚುತ್ತದೆ. ಈ ಹಬ್ಬದ ಬಗ್ಗೆ ಆರೋಗ್ಯ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
 • Share this:

  ಇತ್ತೀಚಿನ ದಿನಗಳಲ್ಲಿ ಭೂಮಿಯ (Earth) ಮೇಲಿನ ಸುಂದರವಾದ ಮೇಲ್ಮೈ ವಾತಾವರಣ (Weather) ಕಲುಷಿತಗೊಳ್ಳುತ್ತಿದೆ. ಮನುಷ್ಯನ (Human) ಪ್ರಲೋಭಕ್ಕೆ ಸಿಲುಕಿ ಪ್ರಕೃತಿ (Nature) ನಾಶವಾಗುತ್ತಿದೆ. ಪರಿಸರದ (Environment) ಮುಖ್ಯ ಮೂಲಭೂತ ಅಂಶಗಳಾದ ಗಾಳಿ, ನೀರು, ಭೂಮಿ, ಅರಣ್ಯ, ಗಿಡ ಮರಗಳು ವಿನಾಶಗೊಳ್ಳುತ್ತಿವೆ. ಎಲ್ಲೆಂದರಲ್ಲಿ ಕಟ್ಟಗಳು, ಕೈಗಾರಿಕೆಗಳು, ವಸಾಹತು, ಬೃಹತ್ ತ್ಯಾಜ್ಯ ಹೀಗೆ ಮನುಷ್ಯ ಕೃತಕವಾದ ತನ್ನದೇ ಸಾಮ್ರಾಜ್ಯ ನಿರ್ಮಾಣ ಮಾಡಿಕೊಂಡಿದ್ದಾನೆ. ಮನುಷ್ಯನ ಅತಿಯಾಸೆ, ದುರಹಂಕಾರ, ಕೃತಕ ವೈಭವೋಪೇರಿತ ಸಂಗತಿಗಳು ಪರಿಸರದ ಮಾಲಿನ್ಯಕ್ಕೆ ಕಾರಣವಾಗಿವೆ. ನೀರು, ಗಾಳಿ, ಶಬ್ದ, ಮಣ್ಣು ಮಾಲಿನ್ಯಕ್ಕೆ ತುತ್ತಾಗುತ್ತಿದೆ. ಈಗ ಸಂಪೂರ್ಣ ವಾತಾವರಣ ಗದಗೆಟ್ಟಿದ್ದು, ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ.


  ಹೆಚ್ಚುತ್ತಿದೆ ಪರಿಸರ ಮಾಲಿನ್ಯ


  ಇನ್ನ ದೇಶದ ಪ್ರಮುಖ ನಗರಗಳಲ್ಲಿ ಮಾಲಿನ್ಯ ಮಿತಿ ಮೀರುತ್ತಿದೆ. ಇದು ನಗರಗಳ ಜನರ ಜೀವಕ್ಕೆ ಕುತ್ತು ತರುತ್ತಿದೆ. ಅದರಲ್ಲೂ ರಾಜಧಾನಿ ದೆಹಲಿಯ ಗಾಳಿ ವಿಷಕಾರಿ ಆಗತೊಡಗಿದೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI), ದೆಹಲಿಯ ಅನೇಕ ಪ್ರದೇಶಗಳಲ್ಲಿರುವ ಗಾಳಿಯನ್ನು ಅನಾರೋಗ್ಯಕರ ಎಂದು ವಿವರಿಸಿದೆ.


  ಭಾರತದ ಅತ್ಯಂತ ಕಲುಷಿತ ರಾಜ್ಯ


  ದೆಹಲಿಯು ಭಾರತದ ಅತ್ಯಂತ ಕಲುಷಿತ ರಾಜ್ಯಗಳಲ್ಲಿ ಒಂದಾಗಿದೆ. ಅಂತಹ ವೇಳೆ ಇಲ್ಲಿನ ಜನರ ಜೀವದ ಅಪಾಯ ಹಲವು ಪಟ್ಟು ಹೆಚ್ಚಾಗುತ್ತದೆ. ದೀಪಗಳ ಅತಿದೊಡ್ಡ ಹಬ್ಬ ದೀಪಾವಳಿ ಅಕ್ಟೋಬರ್ 24 ರಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.


  ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


  ಎಲ್ಲರೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಹಬ್ಬದಂದು ಹಾರಿಸುವ ಪಟಾಕಿಗಳಿಂದಾಗಿ ವಾಯು ಮಾಲಿನ್ಯ ಹೆಚ್ಚುತ್ತದೆ. ಈ ಹಬ್ಬದ ಬಗ್ಗೆ ಆರೋಗ್ಯ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪ್ರತಿ ವರ್ಷ ದೀಪಾವಳಿಯಂದು ಪಟಾಕಿಯಿಂದ ಮಾಲಿನ್ಯವು ಹಲವು ಪಟ್ಟು ಹೆಚ್ಚಾಗುತ್ತದೆ.


  ವಾಯು ಮಾಲಿನ್ಯ ಅನೇಕ ಮಾರಣಾಂತಿಕ ಕಾಯಿಲೆ ಉಂಟು ಮಾಡುತ್ತದೆ. ಹಾಗಾಗಿ ಈ ರೋಗಗಳ ಬಗ್ಗೆ ತಿಳಿಯುವುದು ಮತ್ತು ಅವುಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು.


  ವಾಯು ಮಾಲಿನ್ಯ ಸಾವುಗಳಿಗೆ ಕಾರಣವಾಗುತ್ತದೆ


  ದಿ ಲ್ಯಾನ್ಸೆಟ್‌ ವರದಿ ಪ್ರಕಾರ, ವಾಯು ಮಾಲಿನ್ಯ ಪ್ರತಿ ವರ್ಷ ವಿಶ್ವಾದ್ಯಂತ 6.5 ಮಿಲಿಯನ್ ಮರಣಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ವಾಯುಮಾಲಿನ್ಯದಿಂದ ಸಾವನ್ನಪ್ಪಿದವರ ಸಂಖ್ಯೆ 1.5 ಮಿಲಿಯನ್ ಆಗಿದೆ.


  ಅಕಾಲಿಕ ಮರಣ ಹೆಚ್ಚುತ್ತಿದೆ


  ಅಮೇರಿಕನ್ ಲಂಗ್ ಅಸೋಸಿಯೇಷನ್ ​​ಪ್ರಕಾರ, ಹೆಚ್ಚು ಅಥವಾ ಕಡಿಮೆ ಸಮಯ ಅನೈರ್ಮಲ್ಯದ ಗಾಳಿಗೆ ಒಡ್ಡಿಕೊಳ್ಳುವುದು ಅಕಾಲಿಕ ಮರಣ ಅಪಾಯ ಹೆಚ್ಚಿಸಿದೆ. ಅವು ನಿಮ್ಮ ಉಸಿರಾಟದ ವ್ಯವಸ್ಥೆ ಮತ್ತು ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಇದು ನಿಮ್ಮ ಅಕಾಲಿಕ ಮರಣಕ್ಕೆ ಕಾರಣವಾಗುವ ಮಾರಣಾಂತಿಕ ಕಾಯಿಲೆಗೆ ಕಾರಣ.


  ಉಬ್ಬಸ ಸಮಸ್ಯೆ


  ಕಲುಷಿತ ಗಾಳಿಯ ಉಸಿರಾಟವು ಅಸ್ತಮಾ ದಾಳಿಯ ಅಪಾಯ ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಿದೆ. ಈ ಸಮಸ್ಯೆ ಎಷ್ಟು ತೀವ್ರವಾಗಿದೆ ಎಂದರೆ ಕೆಲವು ಸಂದರ್ಭಗಳಲ್ಲಿ ವ್ಯಕ್ತಿ ಮಾರಣಾಂತಿಕವಾಗಿದೆ.


  ಶ್ವಾಸಕೋಶದ ಕ್ಯಾನ್ಸರ್


  ಕಲುಷಿತ ಗಾಳಿ ಉಸಿರಾಡುವ ಜನರು ಇತರೆ ಜನರಿಗಿಂತ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಿನ ಅಪಾಯ ಹೊಂದಿದ್ದಾರೆ. ಉಸಿರಾಟದ ಮೂಲಕ ನಿಮ್ಮ ಶ್ವಾಸಕೋಶ ತಲುಪುವ ವಿಷಕಾರಿ ಗಾಳಿಯು ಅದನ್ನು ಶ್ವಾಸಕೋಶಕ್ಕೆ ಹಾನಿ ಮಾಡಿ, ದುರ್ಬಲಗೊಳಿಸುತ್ತದೆ. ಇದು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.


  ಹೃದಯ ರೋಗ ಅಪಾಯ


  ವಾಯುಮಾಲಿನ್ಯ ಹೃದಯಾಘಾತ ಮತ್ತು ಸ್ಟ್ರೋಕ್ ಮ್ಯಾನಿಫೋಲ್ಡ್ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಇದು ಜೀವಕ್ಕೆ ಅಪಾಯಕಾರಿ ವೈದ್ಯಕೀಯ ಸ್ಥಿತಿ. ಈಗಾಗಲೇ ಹೃದ್ರೋಗದಿಂದ ಬಳಲುತ್ತಿರುವವರು ಹೆಚ್ಚು ಜಾಗ್ರತೆ ವಹಿಸಿ.


  ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!  


  ಶ್ವಾಸಕೋಶದ ಊತ 


  ಆರೋಗ್ಯಕರ ಶ್ವಾಸಕೋಶ ಹೊಂದಿರುವ ಜನರು ವಾಯು ಮಾಲಿನ್ಯದಿಂದ ಕಿರಿಕಿರಿ ಮತ್ತು ಉರಿಯೂತ ಸಮಸ್ಯೆಗೆ ತುತ್ತಾಗುತ್ತಾರೆ. ಅಸ್ತಮಾ ಮತ್ತು COPD ಯಂತಹ ದೀರ್ಘಕಾಲದ ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಹಾನಿಕರ.

  Published by:renukadariyannavar
  First published: