Child Obesity: ಮಕ್ಕಳಲ್ಲಿ ಹೆಚ್ಚುತ್ತಿರುವ ತೂಕ ಮುಂದೆ ಈ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ!

ಅನೇಕ ಬಾರಿ ಮಕ್ಕಳ ಆಹಾರ ಕ್ರಮ ಹಾಗೂ ದೈಹಿಕ ಚಟುವಟಿಕೆಗಳ ಬಗ್ಗೆ ಪೋಷಕರು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚುತ್ತಿದೆ. ಮತ್ತು ಇದರಿಂದಾಗಿ ಅನೇಕ ರೀತಿಯ ರೋಗಗಳ ಅಪಾಯ ಹೆಚ್ಚುತ್ತಾ ಹೋಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯಾರೇ ಆಗಿ ತಾವು ಮತ್ತು ತಮ್ಮ ಮಕ್ಕಳು (Children’s) ಚೆನ್ನಾಗಿ ಇರಬೇಕು. ದೈಹಿಕ (Physical) ಮತ್ತು ಮಾನಸಿಕವಾಗಿ (Mental) ಆರೋಗ್ಯ (Health) ಹೊಂದಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಪ್ರತಿ ತಂದೆ ತಾಯಿ (Parents) ತಮ್ಮ ಮಕ್ಕಳು ಆರೋಗ್ಯದಿಂದ ಇರಬೇಕು ಎಂದೇ ಬಯಸುತ್ತಾರೆ. ಆದರೆ ಇತ್ತೀಚಿನ ವಾತಾವರಣ (Weather) ಬದಲಾವಣೆ ಮಕ್ಕಳ ಆರೋಗ್ಯಕ್ಕೆ ತುಂಬಾ ಮಾರಕ ಆಗಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದೊಂದು ತುಂಬಾ ಗಂಭೀರ ಸಮಸ್ಯೆ ಆಗಿದೆ. ಭವಿಷ್ಯದ ಮಕ್ಕಳ ಅನಾರೋಗ್ಯ ನಿಜಕ್ಕೂ ಚಿಂತಾಜನಕ. ವಯಸ್ಸಾದ ನಂತರ ಬರುತ್ತಿದ್ದ ಕಾಯಿಲೆಗಳು ಚಿಕ್ಕ ಮಕ್ಕಳಿಗೂ ಅಂಟಿಕೊಳ್ಳುತ್ತಿವೆ.

    ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ

    ಅನೇಕ ಬಾರಿ ಮಕ್ಕಳ ಆಹಾರ ಕ್ರಮ ಹಾಗೂ ದೈಹಿಕ ಚಟುವಟಿಕೆಗಳ ಬಗ್ಗೆ ಪೋಷಕರು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚುತ್ತಿದೆ. ಮತ್ತು ಇದರಿಂದಾಗಿ ಅನೇಕ ರೀತಿಯ ರೋಗಗಳ ಅಪಾಯ ಹೆಚ್ಚುತ್ತಾ ಹೋಗುತ್ತಿದೆ. ತುಂಬಾ ಬೊಜ್ಜು ಹೊಂದಿರುವ ಮಕ್ಕಳು 6 ವರ್ಷ ವಯಸ್ಸಿನ ನಂತರ ಅನೇಕ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸಂಶೋಧನೆ  ಬಹಿರಂಗ ಪಡಿಸಿದೆ.

    ಮಕ್ಕಳ ಮೇಲೆ ನಡೆದಿರುವ ಅಧ್ಯಯನದ ಪ್ರಕಾರ, ಅಧಿಕ ತೂಕ ಹೊಂದಿರುವ ಮಕ್ಕಳಲ್ಲಿ 6 ವರ್ಷ ವಯಸ್ಸಿನ ನಂತರ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹ ಕಾಯಿಲೆಗಳ ರೋಗ ಲಕ್ಷಣಗಳು ಕಂಡು ಬಂದಿವೆ. ಇದು ಮುಂದೆ ಹೆಚ್ಚುವ ಎಲ್ಲಾ ಸಾಧ್ಯತೆಯಿದೆ ಎಂದು ಕಂಡು ಹಿಡಿದಿದೆ.

    ಇದನ್ನೂ ಓದಿ: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?

    ಅಧ್ಯಯನವು ಏನು ಹೇಳುತ್ತದೆ?

    ಅಧ್ಯಯನಕ್ಕಾಗಿ ಡ್ಯಾನಿಶ್ ಸಂಶೋಧಕರು 2 ರಿಂದ 8 ವರ್ಷ ವಯಸ್ಸಿನ ಸುಮಾರು ಒಂದು ಸಾವಿರ ಮಕ್ಕಳನ್ನು ಪ್ರಯೋಗಕ್ಕೆ ಬಳಕೆ ಮಾಡಿದ್ದರು. ಹೀಗೆ ಪತ್ತೆ ಹಚ್ಚಿದ್ದ ಎಲ್ಲಾ ಮಕ್ಕಳ ರಕ್ತ ಪರೀಕ್ಷೆ ಮಾಡಲಾಗಿತ್ತು.

    ಇದರಲ್ಲಿ ಆರೋಗ್ಯಕರ ತೂಕ ಹೊಂದಿರುವ ಮಕ್ಕಳಿಗೆ ಹೋಲಿಸಿದರೆ ಪ್ರಿಸ್ಕೂಲಿಗೆ ಹೋಗುವ ಸ್ಥೂಲಕಾಯದ ಮಕ್ಕಳಲ್ಲಿ ಹೆಚ್ಚಿನ ಅಪಾಯ ಕಂಡು ಬಂದಿಲ್ಲ. ಅದೇ ಸಮಯದಲ್ಲಿ 6 ವರ್ಷ ವಯಸ್ಸಿನ ಮಕ್ಕಳಿಗೆ ಈ ಪರೀಕ್ಷೆ ಮಾಡಿದಾಗ ಅಧಿಕ ತೂಕ ಮತ್ತು ತೆಳ್ಳಗಿನ ಮಕ್ಕಳ ನಡುವೆ ಈ ವ್ಯತ್ಯಾಸವು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಅಧ್ಯಯನ ಹೇಳಿದೆ.

    ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕ ಡಾ ಕ್ರಿಸ್ಟೀನ್ ಫ್ರಿಥಿಯೋಫ್-ಬೋಜ್ ಹೇಳುವ ಪ್ರಕಾರ, 'ಬಾಲ್ಯದಲ್ಲಿ ಅಧಿಕ ತೂಕ ಹೊಂದಿರುವ ಮಕ್ಕಳು ನಂತರ ಹೃದಯ ಮತ್ತು ಯಕೃತ್ತಿನ ಕಾಯಿಲೆ, ಟೈಪ್ 2 ಮಧುಮೇಹ ಮತ್ತು ಚಯಾಪಚಯ ಪ್ರಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆ  ಎದುರಿಸಬೇಕಾಯಿತು.

    ಬಾಲ್ಯದಲ್ಲಿ ಅಧಿಕ ತೂಕ ಹೊಂದಿರುವ ಮಕ್ಕಳಲ್ಲಿ ಸ್ಥೂಲಕಾಯತೆ ಸಮಸ್ಯೆ

    ಬಾಲ್ಯದಲ್ಲಿ ಅಧಿಕ ತೂಕ ಹೊಂದಿರುವ ಮಕ್ಕಳಲ್ಲಿ ಮುಂದೆ ಹೆಚ್ಚು ಬೊಜ್ಜು ಅಂದರೆ ಸ್ಥೂಲಕಾಯಕ್ಕೆ ಒಳಗಾಗುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ. ಅತಿಯಾದ ಸ್ಥೂಲಕಾಯತೆ ಮಧುಮೇಹ, ಹೃದಯ ಮತ್ತು ಯಕೃತ್ತಿನ ಸಂಬಂಧಿತ ಕಾಯಿಲೆಗಳು ಮತ್ತು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

    ಆರೋಗ್ಯಕರ ತೂಕ ಮತ್ತು ಸ್ಥೂಲಕಾಯತೆಯ ನಡುವಿನ ವ್ಯತ್ಯಾಸವನ್ನು ಪೋಷಕರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಸರಿಯಾದ ಚಿಕಿತ್ಸೆ ನೀಡುವ ಮೂಲಕ ಭವಿಷ್ಯದಲ್ಲಿ ಮಕ್ಕಳನ್ನು ಕಾಡುವ ಈ ಎಲ್ಲಾ ರೋಗಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಬಹುದು ಎನ್ನುತ್ತಾರೆ ಸಂಶೋಧಕರು.

    ಸ್ಥೂಲಕಾಯದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ

    ಮಕ್ಕಳ ಸ್ಥೂಲಕಾಯ ಸಮಸ್ಯೆ ತಡೆಗೆ ಆರೋಗ್ಯ ತಜ್ಞರು ಕೆಲವು ವಿಶೇಷ ಸಲಹೆ ನೀಡಿದ್ದಾರೆ. ಮಕ್ಕಳು ಹೆತ್ತವರನ್ನು ನೋಡಿ ಎಲ್ಲವನ್ನ ಕಲಿಯುತ್ತಾರೆ. ಮಗುವಿನ ಆರೋಗ್ಯಕರ ತೂಕ ಕಾಪಾಡಲು ಪೋಷಕರು ಜಂಕ್ ಫುಡ್ ಸೇವನೆ ಮಾಡಬಾರದು.

    ಇದನ್ನೂ ಓದಿ: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು

    ಪ್ರತಿದಿನ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಿ. ಮಗುವಿನ ವಯಸ್ಸಿಗೆ ಅನುಗುಣವಾಗಿ ಆಹಾರ ನೀಡುವುದು ಮತ್ತು ಆಹಾರದಲ್ಲಿ ಹಸಿರು ತರಕಾರಿ ಸೇರಿಸಿ. ಮಕ್ಕಳನ್ನು ಫೋನ್ ನಿಂದ ಆದಷ್ಟು ದೂರವಿಡಿ ಎಂದು ಸಲಹೆ ನೀಡಿದ್ದಾರೆ.
    Published by:renukadariyannavar
    First published: