• Home
  • »
  • News
  • »
  • lifestyle
  • »
  • Green Peas: ಹೃದಯದ ಆರೋಗ್ಯ ಮತ್ತು ಮಧುಮೇಹ ನಿಯಂತ್ರಣಕ್ಕೆ ಹಸಿರು ಬಟಾಣಿ ಬೆಸ್ಟ್​!

Green Peas: ಹೃದಯದ ಆರೋಗ್ಯ ಮತ್ತು ಮಧುಮೇಹ ನಿಯಂತ್ರಣಕ್ಕೆ ಹಸಿರು ಬಟಾಣಿ ಬೆಸ್ಟ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಜಾ ಹಸಿರು ಹಸಿ ಬಟಾಣಿ ಕಾಳು ಪ್ರಮುಖ ಪೋಷಕಾಂಶ ಹೊಂದಿದೆ. ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಟಾಣಿ ಕಾಳುಗಳನ್ನು ಬಳಸಲಾಗುತ್ತದೆ. ರೊಟ್ಟಿ ಸೇರಿ ವಿವಿಧ ರೀತಿಯ ಪದಾರ್ಥಗಳಿಗೆ ಹಸಿರು ಹಸಿ ಬಟಾಣಿ ಕಾಳು ಪಲ್ಯ ಉತ್ತಮ ಕಾಂಬೀನೇಷನ್ ಆಗಿದೆ. ಹಸಿರು ಹಸಿ ಬಟಾಣಿ ಕಾಳನ್ನು ಹಸಿಯಾಗಿ ಸಹ ತಿನ್ನಬಹುದು. ಇದು ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ಕ್ಯಾರೆಟ್ , ಮೂಲಂಗಿ ಸೇರಿದಂತೆ ಹಲವು ಆಹಾರ ತರಕಾರಿಗಳು (Vegetables) ಮಾರುಕಟ್ಟೆಗೆ ಬರುತ್ತವೆ. ಅಂತಹ ಪೋಷಕ ತತ್ವವುಳ್ಳ ತರಕಾರಿಯಲ್ಲಿ ಹಸಿರು ಬಟಾಣಿ (Green Peas) ಕೂಡ ಒಂದು. ಈಗ ಅವರೆಕಾಳು ಮತ್ತು ಹಸಿರು ಬಟಾಣಿ ಕಾಳು ಸೀಸನ್ (Season) ಶುರುವಾಗಿದೆ. ಹಸಿರು ಹಸಿ ಬಟಾಣಿ ಕಾಳುಗಳನ್ನು ವರ್ಷವಿಡೀ ನೋಡಬಹುದು. ಆದರೆ ಅವುಗಳನ್ನು ವರ್ಷಕ್ಕೆಂದೇ ಸಂರಕ್ಷಗಳಿಂದ ಪ್ಯಾಕ್ ಮಾಡಿ ಸಂಗ್ರಹಿಸಲಾಗುತ್ತದೆ. ಆದರೆ ಈಗ ಫ್ರೆಶ್ ಮತ್ತು ಗುಣಮಟ್ಟದ ಹಸಿರು ಹಸಿ ಬಟಾಣಿ ಕಾಳು ನಿಮಗೆ ಸುಲಭವಾಗಿ ಲಭ್ಯ ಇವೆ. ಪ್ಯಾಕ್ ಮಾಡಿದ ಹಸಿರು ಹಸಿ ಬಟಾಣಿ ಕಾಳುಗಳಲ್ಲಿ ಗುಣಮಟ್ಟ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸಿಗುವ ತಾಜಾ ಬಟಾಣಿ ಆರೋಗ್ಯಕ್ಕೆ ಒಳ್ಳೆಯದು.


    ಹಸಿರು ಹಸಿ ಬಟಾಣಿ ಕಾಳು ಮತ್ತು ಆರೋಗ್ಯ


    ತಾಜಾ ಹಸಿರು ಹಸಿ ಬಟಾಣಿ ಕಾಳು ಪ್ರಮುಖ ಪೋಷಕಾಂಶ ಹೊಂದಿದೆ. ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಟಾಣಿ ಕಾಳುಗಳನ್ನು ಬಳಸಲಾಗುತ್ತದೆ. ರೊಟ್ಟಿ ಹೀಗೆ ವಿವಿಧ ರೀತಿಯ ಪದಾರ್ಥಗಳಿಗೆ ಹಸಿರು ಹಸಿ ಬಟಾಣಿ ಕಾಳು ಪಲ್ಯ ಉತ್ತಮ ಕಾಂಬೀನೇಷನ್ ಆಗಿದೆ.


    ನೀವು ಹಸಿರು ಹಸಿ ಬಟಾಣಿ ಕಾಳನ್ನು ಹಸಿಯಾಗಿ ಸಹ ತಿನ್ನಬಹುದು. ಇದು ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಹಸಿರು ಹಸಿ ಬಟಾಣಿ ಕಾಳು ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶ ಒದಗಿಸುತ್ತದೆ.




    ಹಸಿರು ಬಟಾಣಿ ಏಕೆ ವಿಶೇಷವಾಗಿದೆ?


    ಹಸಿರು ಬಟಾಣಿಯಲ್ಲಿ ಹಲವು ವಿಧದ ಪ್ರಮುಖ ಪೋಷಕಾಂಶಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‌ ಗಳಿವೆ. ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೌಷ್ಟಿಕಾಂಶದ ಮಾಹಿತಿಯ ಪ್ರಕಾರ, ಹಸಿರು ಬಟಾಣಿಗಳಲ್ಲಿ ಅನೇಕ ಪ್ರಮುಖ ಜೀವಸತ್ವ ಮತ್ತು ಖನಿಜಗಳು ಇದರಲ್ಲಿವೆ.


    ವಿಟಮಿನ್ ಎ, ಸಿ, ಡಿ, ಎ, ಕೆ, ಬಿ6, ರಿಬೋಫ್ಲಾವಿನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ತಾಮ್ರ, ಸೆಲೆನಿಯಮ್, ಫ್ಲೋರೈಡ್ ಮತ್ತು ಸತು ಸೇರಿದಂತೆ ಹಲವು ಖನಿಜಗಳು ಸಮೃದ್ಧವಾಗಿವೆ.


    ಹಸಿರು ಹಸಿ ಬಟಾಣಿ ಕಾಳು ಬಹುಅಪರ್ಯಾಪ್ತ ಕೊಬ್ಬು, ಮೊನೊಸಾಚುರೇಟೆಡ್ ಕೊಬ್ಬು, ಒಮೆಗಾ 3 ಕೊಬ್ಬಿನಾಮ್ಲ ಪೋಷಕಾಂಶಗಳ ಅತ್ಯುತ್ತಮ ಮೂಲ. ಪ್ರೋಟೀನ್ ಮತ್ತು ಫೈಬರ್ ಹೊಂದಿದೆ.


    ಹಸಿರು ಹಸಿ ಬಟಾಣಿ ಕಾಳುಗಳ ಪ್ರಮುಖ ಆರೋಗ್ಯ ಪ್ರಯೋಜನಗಳು


    ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ


    ಹಸಿರು ಹಸಿ ಬಟಾಣಿ ಕಾಳು ಬಹಳ ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿವೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ತುಂಬಾ ಒಳ್ಳೆಯದು. ಪ್ರೋಟೀನ್ ಮತ್ತು ಫೈಬರ್ ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡುತ್ತದೆ. ಹಸಿರು ಬಟಾಣಿಗಳಲ್ಲಿ ಕಂಡು ಬರುವ ಪೋಷಕಾಂಶಗಳಾದ ಮೆಗ್ನೀಸಿಯಮ್, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಮಧುಮೇಹ ಸಮಸ್ಯೆ ನಿಯಂತ್ರಿಸುತ್ತವೆ.


    ಜೀರ್ಣಕ್ರಿಯೆ ಸಮತೋಲನ ಕಾಪಾಡುತ್ತದೆ


    ಹಸಿರು ಹಸಿ ಬಟಾಣಿ ಕಾಳು ಸಾಕಷ್ಟು ಪ್ರಮಾಣದ ಫೈಬರ್ ಹೊಂದಿವೆ. ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಫೈಬರ್ ಪ್ರಮಾಣವು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಿಸುತ್ತದೆ. ಮಲಬದ್ಧತೆ, ಅಜೀರ್ಣ ಇತ್ಯಾದಿ ಹೊಟ್ಟೆ ಸಂಬಂಧಿತ ಸಮಸ್ಯೆ ನಿವಾರಿಸುತ್ತದೆ.


    ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ


    ಹಸಿರು ಹಸಿ ಬಟಾಣಿ ಕಾಳು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಹೃದಯದ ಆರೋಗ್ಯ ಕಾಪಾಡುತ್ತದೆ. ಉತ್ಕರ್ಷಣ ನಿರೋಧಕಗಳು ಹೃದಯದ ಆರೋಗ್ಯ ಕಾಪಾಡುತ್ತವೆ. ಫೈಬರ್ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ. ಪೋಷಕಾಂಶಗಳು ರಕ್ತದೊತ್ತಡದ ಮಟ್ಟ ನಿರ್ವಹಿಸುತ್ತದೆ.


    ದೃಷ್ಟಿ ಸಮಸ್ಯೆ ನಿವಾರಿಸುತ್ತದೆ


    ಹಸಿರು ಹಸಿ ಬಟಾಣಿ ಕಾಳು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಕ್ಯಾರೊಟಿನಾಯ್ಡ್‌ ಹೊಂದಿದೆ. ಸ್ನಾಯುವಿನ ಅವನತಿ ಮತ್ತು ದುರ್ಬಲ ದೃಷ್ಟಿ ಸಾಧ್ಯತೆ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಜೋಳ ತಿಂದ್ರೆ ಬೇಗ ತೂಕ ಇಳಿಯುತ್ತಂತೆ ನೋಡಿ; ಚಪಾತಿ ಬದಲು ಇದೇ ಬೆಟರ್ ಅಂತಾರೆ ತಜ್ಞರು !


    ಚರ್ಮಕ್ಕೆ ಹೊಳಪು ನೀಡುತ್ತದೆ


    ಹಸಿರು ಹಸಿ ಬಟಾಣಿ ಕಾಳು ವಿಟಮಿನ್ ಸಿ ಹೊಂದಿದೆ. ಕಾಲಜನ್ ಉತ್ಪಾದನೆ ಉತ್ತೇಜಿಸುತ್ತದೆ. ಚರ್ಮವು ಹೊಳೆಯುವ ಮತ್ತು ಸುಂದರವಾಗಿ ಕಾಣುತ್ತದೆ.

    Published by:renukadariyannavar
    First published: