ಕಣ್ಣಿನ ದೃಷ್ಟಿ ಹೆಚ್ಚಿಸಲು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಒಮೆಗಾ -3 ಕೊಬ್ಬಿನಾಮ್ಲಗಳು ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಕಣ್ಣುಗಳಿಗೂ ಪ್ರಯೋಜನಕಾರಿ. ನಿಮ್ಮ ಆಹಾರದಲ್ಲಿ ಪೌಷ್ಠಿಕಾಂಶ, ಸೋಯಾಬೀನ್ ಎಣ್ಣೆ ಇತ್ಯಾದಿಗಳನ್ನು ಸೇರಿಸಿ.

Eyes

Eyes

 • Share this:
  ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೀವು ಸತತ ಹಲವು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೆ, ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಅದಕ್ಕಾಗಿ ನೀವು ಖಂಡಿತವಾಗಿಯೂ ಕೆಲವು ಆಹಾರಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು. ಎನ್‌ಡಿಟಿವಿಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವನೆಯು ನಿಮ್ಮ ಕಣ್ಣಿನ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ತಿಳಿಸಿದೆ. ಅದಕ್ಕಾಗಿ ನಾವು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  * ಕಣ್ಣುಗಳ ದೃಷ್ಟಿ ಹೆಚ್ಚಿಸಲು ಮತ್ತು ಅವುಗಳನ್ನು ಆರೋಗ್ಯವಾಗಿಡಲು ಹೆಚ್ಚಾಗಿ ಕ್ಯಾರೆಟ್ ಸೇವಿಸಿ. ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ಕಣ್ಣುಗಳಿಗೆ ಬಹಳ ಪ್ರಯೋಜನಕಾರಿ. ಇದು ರಾತ್ರಿ ಕುರುಡುತನದಿಂದ ರಕ್ಷಿಸುತ್ತದೆ. ಹಾಗೆಯೇ ವಯಸ್ಸಿನ ದೃಷ್ಟಿ ಸಮಸ್ಯೆಯನ್ನು ತಡೆಯಲು ಸಹಕಾರಿಯಾಗಿದೆ. ಇದಲ್ಲದೆ, ಹಸಿರು ಎಲೆಗಳ ತರಕಾರಿಗಳು, ಕೋಸುಗಡ್ಡೆ ಮತ್ತು ಕಿತ್ತಳೆ ಮುಂತಾದ ಆಹಾರಗಳನ್ನು ಸೇವಿಸುವುದು ಕೂಡ ಕಣ್ಣಿನ ಆರೋಗ್ಯಕ್ಕೆ ಉತ್ತಮ.

  * ಒಮೆಗಾ -3 ಕೊಬ್ಬಿನಾಮ್ಲಗಳು ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಕಣ್ಣುಗಳಿಗೂ ಪ್ರಯೋಜನಕಾರಿ. ನಿಮ್ಮ ಆಹಾರದಲ್ಲಿ ಪೌಷ್ಠಿಕಾಂಶ, ಸೋಯಾಬೀನ್ ಎಣ್ಣೆ ಇತ್ಯಾದಿಗಳನ್ನು ಸೇರಿಸಿ. ಒಮೆಗಾ -3 ಅಂಶವಿರುವ ವಸ್ತುಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿ.

  * ವಿಟಮಿನ್ ಸಿ ಮೂಳೆಗಳಿಗೆ ಮಾತ್ರವಲ್ಲದೆ ಕಣ್ಣುಗಳಿಗೂ ತುಂಬಾ ಪ್ರಯೋಜನಕಾರಿ. ಕಿತ್ತಳೆ, ನಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಸಹ ವಿಟಮಿನ್ ಸಿ ಯ ಉತ್ತಮ ಮೂಲಗಳಾಗಿವೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ವಸ್ತುಗಳನ್ನು ಸೇರಿಸಿ.

  * ವಿಟಮಿನ್ ಇ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಹಾಗೆಯೇ ಇದು ನಿಮ್ಮ ಕಣ್ಣುಗಳಿಗೂ ಒಳ್ಳೆಯದು. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದರ ಉತ್ತಮ ಮೂಲಗಳು ಬಾದಾಮಿ, ಪಾಲಕ, ಆವಕಾಡೊ ಇತ್ಯಾದಿ. ಅವುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

  * ಕಣ್ಣುಗಳ ದೃಷ್ಟಿ ಹೆಚ್ಚಿಸಲು , ಆಹಾರದಲ್ಲಿ ಜಿಂಕ್ ಅಂಶವಿರುವ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಜಿಂಕ್​ ಕೊರತೆಯು ರಾತ್ರಿ ಕುರುಡುತನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಒಯಿಸ್ಟರ್, ಮಾಂಸ, ಕುಂಬಳಕಾಯಿ ಬೀಜಗಳು, ಕಡಲೆ ಮತ್ತು ಬಾದಾಮಿ ಹೆಚ್ಚಾಗಿ ಸೇರಿಸಿ.
  Published by:HR Ramesh
  First published: