• Home
  • »
  • News
  • »
  • lifestyle
  • »
  • Cauliflower Benefits: ಬಾಯಿಗೆ ರುಚಿಯಾದ ಹೂಕೋಸು, ಆರೋಗ್ಯಕ್ಕೂ ಒಳ್ಳೆಯದೇ!

Cauliflower Benefits: ಬಾಯಿಗೆ ರುಚಿಯಾದ ಹೂಕೋಸು, ಆರೋಗ್ಯಕ್ಕೂ ಒಳ್ಳೆಯದೇ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೂಕೋಸು ಕೇವಲ ರುಚಿ ಮಾತ್ರವಲ್ಲದೇ ಅದು ತನ್ನಲ್ಲಿರುವ ಮುಖ್ಯ ಪೋಷಕಾಂಶಗಳಿಂದಾಗಿ ಆರೋಗ್ಯಕ್ಕೂ ಹಲವು ಲಾಭಗಳನ್ನು ತಂದು ಕೊಡುತ್ತದೆ. ಇದು ಬ್ರಾಸಿಕಾ ಜಾತಿಗೆ ಸೇರಿದೆ. ಹೂಕೋಸು ದೇಹದಲ್ಲಿ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಚಟುವಟಿಕೆ ಹೆಚ್ಚಿಸುತ್ತದೆ.

  • Share this:

    ಹೂಕೋಸಿನಿಂದ (Cauliflower) ತಯಾರಿಸುವ ಗೋಬಿ ಮಂಚೂರಿ ರೆಸಿಪಿ (Recipe) ಬಹುತೇಕರ ಫೇವರೆಟ್ ತಿನಿಸು (Food). ಬೀದಿ ಬದಿಯ ಅಂಗಡಿಗಳಲ್ಲಿ ಮಾಡುವ ಹೂಕೋಸಿನ ಗೋಬಿ ಮಂಚೂರಿ ಸಖತ್ ಟೇಸ್ಟಿ (Tasty) ಆಗಿರುತ್ತದೆ. ಅಂದ ಹಾಗೇ ಹೂಕೋಸು ತರಕಾರಿ (Vegetable) ಉತ್ತಮ ರುಚಿಯಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಹೂಕೋಸನ್ನು ಅನೇಕ ರೆಸಿಪಿ ಮತ್ತು ಖಾದ್ಯಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಹೂಕೋಸಿನಿಂದ ಮಾಡುವ ಪರಾಠ, ಉಪ್ಪಿನಕಾಯಿ, ತರಕಾರಿ ಪಲ್ಯ, ಸಲಾಡ್, ಪಕೋಡ, ಗೋಬಿ ಮಂಚೂರಿ ಎಲ್ಲವೂ ಉತ್ತಮ ರುಚಿ ಹೊಂದಿರುತ್ತವೆ. ಹೂಕೋಸು ಕೇವಲ ರುಚಿ ಮಾತ್ರವಲ್ಲದೇ ಅದು ತನ್ನಲ್ಲಿರುವ ಮುಖ್ಯ ಪೋಷಕಾಂಶಗಳಿಂದಾಗಿ ಆರೋಗ್ಯಕ್ಕೂ ಹಲವು ಲಾಭಗಳನ್ನು ತಂದು ಕೊಡುತ್ತದೆ.


    ಹೂಕೋಸು ನಿಮ್ಮ ಆರೋಗ್ಯಕ್ಕೆ ಏಕೆ ಒಳ್ಳೆಯದು?


    ಹೂಕೋಸು ರುಚಿಯಲ್ಲಿ ಮಾತ್ರವಲ್ಲದೆ, ಆರೋಗ್ಯಕ್ಕೆ ಬೇಕಾದ ಕೆಲವು ಪ್ರಯೋಜನ ಸಹ ನೀಡುತ್ತದೆ. ಆರೋಗ್ಯ ಹೊಂದಲು ನೀವು ನಿಮ್ಮ ಆಹಾರದಲ್ಲಿ ಹೂಕೋಸು ಸೇರಿಸಿ. ಇದು ಬ್ರಾಸಿಕಾ ಜಾತಿಗೆ ಸೇರಿದೆ. ಇದರ ಸಸ್ಯಶಾಸ್ತ್ರೀಯ ಹೆಸರು ಬ್ರಾಸಿಕಾ ಒಲೆರೆಸಿಯಾ ಬೋಟ್ರಿಟಿಸ್ ( Brassica oleracea var Botrytis) ಎಂದಾಗಿದೆ.


    ಎನ್‌ ಸಿಬಿಐ ನಲ್ಲಿ ಪ್ರಕಟವಾದ ಪಬ್ಮೆಡ್ ಸೆಂಟ್ರಲ್‌ ಸಂಶೋಧನೆ ಪ್ರಕಾರ, ಹೂಕೋಸು ಆಸ್ಕೋರ್ಬಿಕ್ ಆಮ್ಲ, ಕ್ಯಾರೊಟಿನಾಯ್ಡ್‌, ಫ್ಲೇವನಾಯ್ಡ್‌, ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ ಮತ್ತು ಅಗತ್ಯ ಖನಿಜಗಳಿಂದ ಸಮೃದ್ಧವಾಗಿದೆ.


    ಹೂಕೋಸು ದೇಹದಲ್ಲಿ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಚಟುವಟಿಕೆ ಹೆಚ್ಚಿಸುತ್ತದೆ. ಹೂಕೋಸು ದೇಹಕ್ಕೆ ಅಗತ್ಯ ಶಕ್ತಿ ನೀಡುತ್ತದೆ. ಯಾಕಂದ್ರೆ 100 ಗ್ರಾಂ ಹೂಕೋಸಿನಲ್ಲಿ ಸುಮಾರು 20 ಕ್ಯಾಲೊರಿ ಇದೆ. ಇದು ಸಾಕಷ್ಟು ಆಹಾರದ ಫೈಬರ್ ಮತ್ತು ಫೋಲೇಟ್ ಹೊಂದಿದೆ. ಹೀಗಾಗಿ ಹೂಕೋಸು ಸೇವನೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ.


    ಹೂಕೋಸು ಆರೋಗ್ಯ ಪ್ರಯೋಜನಗಳು


    ಹೃದಯದ ಆರೋಗ್ಯ ಕಾಪಾಡುತ್ತದೆ


    ಕ್ರೂಸಿಫೆರಸ್ ತರಕಾರಿ ಹೃದಯ ಸಂಬಂಧಿ ಕಾಯಿಲೆ ತಡೆಗಟ್ಟಲು ಬಹಳ ಸಹಾಯಕ. ಎನ್‌ ಸಿಬಿಐ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಕ್ರೂಸಿಫೆರಸ್ ತರಕಾರಿಗಳು ನೈಸರ್ಗಿಕವಾಗಿ ಐಸೋಥಿಯೋಸೈನೇಟ್ಸ್ ಎಂಬ ಅಣು ಹೊಂದಿದೆ. ಈ ಅಣು ಹೃದಯದ ಆರೋಗ್ಯ ಕಾಪಾಡುತ್ತದೆ.


    ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ


    ಎನ್‌ ಸಿಬಿಐನ ಸಂಶೋಧನೆ ಪ್ರಕಾರ, ಹೂಕೋಸಿನಲ್ಲಿರುವ ಸಲ್ಫೊರಾಫೇನ್ ಎಂಬ ಅಂಶವು ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕೊಲೊನ್ ಮತ್ತು ಇತರ ಅನೇಕ ಕ್ಯಾನ್ಸರ ಅಪಾಯ ಕಡಿಮೆ ಮಾಡುತ್ತದೆ. ಸಲ್ಫೊರಾಫೇನ್ ಗೆಡ್ಡೆಯ ಬೆಳವಣಿಗೆ ತಡೆಯುತ್ತದೆ.


    ಉರಿಯೂತ ಕಡಿಮೆ ಮಾಡುತ್ತದೆ


    ಹೂಕೋಸು ಫ್ಲೇವನಾಯ್ಡ್ ಸಂಯುಕ್ತದಲ್ಲಿ ಸಮೃದ್ಧವಾಗಿದೆ. ಇದು ಮಾನವ ದೇಹದ ಮೇಲೆ ಉರಿಯೂತದ ಪರಿಣಾಮ ಹೊಂದಿದೆ. 100 ಗ್ರಾಂ ಹೂಕೋಸಿನಲ್ಲಿ 267.21 ಮಿಗ್ರಾಂ ಫ್ಲೇವನಾಯ್ಡ್‌ಗಳಿವೆ.


    ಮೂಳೆಗಳು ಸ್ಟ್ರಾಂಗ್ ಆಗುತ್ತವೆ


    ಹೂಕೋಸು ವಿಟಮಿನ್ ಕೆ ಹೊಂದಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಅನೇಕ ಜೈವಿಕ ಸಕ್ರಿಯ ಸಂಯುಕ್ತ ಹೊಂದಿದೆ. ಮೂಳೆ ಸಾಂದ್ರತೆ ಸುಧಾರಿಸುತ್ತದೆ. ಮೂಳೆ ಮುರಿತದ ಅಪಾಯ ಕಡಿಮೆ ಮಾಡುತ್ತದೆ. ವಿಟಮಿನ್ ಕೆ ನಿಯಮಿತ ಸೇವನೆ ಮೂಳೆಗಳನ್ನು ಆರೋಗ್ಯವಾಗಿಡುತ್ತದೆ.


    ಇದನ್ನೂ ಓದಿ: ನಿಮ್ಮಲ್ಲಿ ಈ ಸಮಸ್ಯೆಗಳು ಕಂಡು ಬಂದಲ್ಲಿ ಎಚ್ಚರ -ಇದು ಲಿವರ್ ಸಮಸ್ಯೆ ಇರಬಹುದು


    ತೂಕ ನಿಯಂತ್ರಣಕ್ಕೆ ಸಹಕಾರಿ 


    ಹೂಕೋಸು ಫೈಬರ್‌ನ ಉತ್ತಮ ಮೂಲ. ಇದು ಕಡಿಮೆ ಗ್ಲೈಸೆಮಿಕ್ ಲೋಡ್ ಒಳಗೊಂಡಿದೆ. ಗ್ಲೈಸೆಮಿಕ್ ಲೋಡ್ ಆಹಾರದ ಸಂಖ್ಯೆಯಾಗಿದೆ. ಕಡಿಮೆ ಗ್ಲೈಸೆಮಿಕ್ ಲೋಡ್ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ತರಕಾರಿ ಸೇವನೆ ತೂಕ ನಿಯಂತ್ರಣಕ್ಕೆ ಸಹಕಾರಿ.  ತೂಕ ಇಳಿಕೆಗೂ ಸಹಕಾರಿ.

    Published by:renukadariyannavar
    First published: