• Home
  • »
  • News
  • »
  • lifestyle
  • »
  • Health Care: ಚಳಿಗಾಲದಲ್ಲಿ ಹೆಚ್ಚು ಲಭ್ಯವಿರುವ ಮೂಲಂಗಿ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?

Health Care: ಚಳಿಗಾಲದಲ್ಲಿ ಹೆಚ್ಚು ಲಭ್ಯವಿರುವ ಮೂಲಂಗಿ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಕಾಯಿಲೆಗಳನ್ನು ಮತ್ತು ದೇಹದ ಅಸ್ವಸ್ಥತೆ ಗುಣಪಡಿಸಲು ಮೂಲಂಗಿ ಸಹಾಯ ಮಾಡುತ್ತದೆ. ಮೂಲಂಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೂಲಂಗಿಯನ್ನು ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ಮೂಲಂಗಿ ತರಕಾರಿ ಹೆಚ್ಚಿನ ಸಂಖ್ಯೆಯ ಔಷಧೀಯ ಗುಣ ಹೊಂದಿದೆ.

  • Share this:

    ಚಳಿಗಾಲದಲ್ಲಿ (Winter) ಸಾಕಷ್ಟು ತಾಜಾ ಮತ್ತು ಆರೋಗ್ಯಕರ ತರಕಾರಿಗಳು (Fresh And Healthy Vegetables) ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈ ಋತುವಿನಲ್ಲಿ ಸಿಗುವ ಅಂತಹ ಒಂದು ತರಕಾರಿ ಮೂಲಂಗಿ (Radish). ಅನೇಕ ಜನರು ಮೂಲಂಗಿಯನ್ನು ಆಹಾರದಲ್ಲಿ ಸೇರಿಸುತ್ತಾರೆ. ಮೂಲಂಗಿ ಗೆಡ್ಡೆ ಮತ್ತು ಸೊಪ್ಪು ಎರಡನ್ನೂ ಹಸಿಯಾಗಿ ರೊಟ್ಟಿ ಮತ್ತು ಚಪಾತಿ ಜೊತೆ ತಿನ್ನುತ್ತಾರೆ. ಹಾಗೆಯೇ ತರಕಾರಿ ಸಲಾಡ್ ನಲ್ಲಿ ಸೇವನೆ ಮಾಡ್ತಾರೆ. ಅದೇ ಸಮಯದಲ್ಲಿ, ಕೆಲವರು ಅದನ್ನು ತಿನ್ನಲು ತುಂಬಾ ಮುಜುಗರ ಪಡ್ತಾರೆ. ಆದರೆ ಹಾಗೇ ಮಾಡ್ಬೇಡಿ. ಯಾಕಂದ್ರೆ ಮೂಲಂಗಿಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗುವ ಹಲವು ಪ್ರಯೋಜನಗಳು ಅಡಗಿವೆ.


    ಅನೇಕ ಕಾಯಿಲೆಗಳನ್ನು ಮತ್ತು ದೇಹದ ಅಸ್ವಸ್ಥತೆ ಗುಣಪಡಿಸಲು ಮೂಲಂಗಿ ಸಹಾಯ ಮಾಡುತ್ತದೆ. ಮೂಲಂಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ಪ್ರಶಸ್ತಿ ವಿಜೇತ ಪೌಷ್ಟಿಕತಜ್ಞ ಲವನೀತ್ ಬಾತ್ರಾ. ಅಂದ ಹಾಗೆ ಮೂಲಂಗಿಯನ್ನು ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ.


    ಮೂಲಂಗಿ ತರಕಾರಿ ಹೆಚ್ಚಿನ ಸಂಖ್ಯೆಯ ಔಷಧೀಯ ಗುಣ ಹೊಂದಿದೆ. ಇದು ಮಲಬದ್ಧತೆ ನಿವಾರಿಸುತ್ತದೆ. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆ ತಡೆಯುತ್ತದೆ. ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ರಕ್ತದ ಕೊರತೆ ನಿವಾರಿಸುತ್ತೆ ಪಾಲಕ್ ಸೂಪ್, ಕಣ್ಣುಗಳ ಆರೋಗ್ಯಕ್ಕೂ ಇದರಿಂದ ಲಾಭ!


    ಯಾವೆಲ್ಲಾ ಪೋಷಕಾಂಶಗಳು ಮೂಲಂಗಿಯಲ್ಲಿವೆ?


    ವೆಬ್ಮೆಡ್ ಪ್ರಕಾರ, ಮೂಲಂಗಿಯಲ್ಲಿ ಕ್ಯಾಟೆಚಿನ್‌, ಪೈರೊಗಲ್ಲೋಲ್, ವೆನಿಲಿಕ್ ಆಮ್ಲ ಮತ್ತು ಇತರ ಫೀನಾಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳಿವೆ. ಈ ಬೇರು ತರಕಾರಿಯು ಉತ್ತಮ ಪ್ರಮಾಣದ ವಿಟಮಿನ್ ಸಿ ಹೊಂದಿದೆ. ಇದು ನಿಮ್ಮ ಕೋಶಗಳನ್ನು ಹಾನಿಯಿಂದ ರಕ್ಷಿಸಲು ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ.


    ಮೂಲಂಗಿಯಲ್ಲಿ ಕ್ಯಾನ್ಸರ್ ವಿರೋಧಿ ಗುಣವಿದೆ


    ಮೂಲಂಗಿ ಕ್ರೂಸಿಫೆರಸ್ ತರಕಾರಿಯಾಗಿದ್ದು, ಇದರ ಸೇವನೆ ಕ್ಯಾನ್ಸರ್ ನ್ನು ತಡೆಯಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಕ್ರೂಸಿಫೆರಸ್ ತರಕಾರಿಗಳು ನೀರಿನೊಂದಿಗೆ ಬೆರೆಸಿದಾಗ ಐಸೊಥಿಯೋಸೈನೇಟ್‌ಗಳಾಗಿ ಒಡೆಯುವ ಸಂಯುಕ್ತ ಹೊಂದಿವೆ. ಐಸೊಥಿಯೋಸೈನೇಟ್‌ಗಳು ಕ್ಯಾನ್ಸರ್-ಉಂಟು ಮಾಡುವ ವಸ್ತುಗಳನ್ನು ದೇಹದಿಂದ ದೂರವಿರಿಸುತ್ತವೆ.


    ಮೂಲಂಗಿ ಮಧುಮೇಹ ನಿಯಂತ್ರಿಸುತ್ತದೆ


    ಮೂಲಂಗಿಯ ಪ್ರಬಲ ಮಧುಮೇಹ ವಿರೋಧಿ ಗುಣಲಕ್ಷಣಗಳು ಪ್ರತಿರಕ್ಷಣಾ ಪ್ರತಿಕ್ರಿಯೆ ಪ್ರಚೋದಿಸುತ್ತದೆ. ಗ್ಲೂಕೋಸ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತವೆ. ಮೂಲಂಗಿಯಲ್ಲಿರುವ ಅಡಿಪೋನೆಕ್ಟಿನ್ ಹಾರ್ಮೋನ್ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಕೆಲಸ ಮಾಡುತ್ತದೆ.


    ಜೊತೆಗೆ ಮೂಲಂಗಿ ಅಡಿಪೋನೆಕ್ಟಿನ್ ಅನ್ನು ಮಾಡ್ಯುಲೇಟ್ ಮಾಡುವ ಜೈವಿಕ ಸಕ್ರಿಯ ಸಂಯುಕ್ತ ಹೊಂದಿದೆ. ಮತ್ತು ಗ್ಲೂಕೋಸ್ ಹೋಮಿಯೋಸ್ಟಾಸಿಸ್ ನಿಯಂತ್ರಿಸುತ್ತದೆ.


    ಮೂಲಂಗಿ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳಿಸುವ ತರಕಾರಿ


    ಮೂಲಂಗಿ ತರಕಾರಿ ಕರಗಬಲ್ಲ ಮತ್ತು ಕರಗದ ನಾರಿನ ಸಂಯೋಜನೆ ಒದಗಿಸುತ್ತದೆ. ಆಹಾರ ತಜ್ಞರ ಪ್ರಕಾರ, ಮೂಲಂಗಿ ಜೀರ್ಣಾಂಗ ವ್ಯವಸ್ಥೆಗೆ ಉತ್ತಮ ಪದಾರ್ಥ ಆಗಿದೆ. ಇದು ನಿಮ್ಮ GI ಟ್ರಾಕ್ಟ್‌ಗೆ ಉತ್ತಮ ಆಗಿದೆ. ಫೈಬರ್ ನಿಮ್ಮ ಕರುಳನ್ನು ಸ್ವಚ್ಛಗೊಳಿಸಲು ಮತ್ತು ಮಲಬದ್ಧತೆ ತಡೆಯಲು ಕೆಲಸ ಮಾಡುವ ತರಕಾರಿ ಆಗಿದೆ.


    ಮೂಲಂಗಿ ತಿಂದರೆ ರಕ್ತದೊತ್ತಡ ಸಾಮಾನ್ಯ ಮಟ್ಟದಲ್ಲಿರುತ್ತದೆ


    ಮೂಲಂಗಿಯು ಪೊಟ್ಯಾಸಿಯಮ್‌ನ ಉತ್ತಮ ಮೂಲ ಆಗಿದೆ. ಮೂಲಂಗಿ ತಿಂದರೆ ಅದು ರಕ್ತದೊತ್ತಡದ ಮಟ್ಟ ನಿಯಂತ್ರಿಸಲು ಮತ್ತು ಹೃದಯದ ಕಾರ್ಯ ಚಟುವಟಿಕೆ ಚೆನ್ನಾಗಿ ನಡೆಯಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಕಪ್ಪು ತುಟಿಗೆ ನೈಸರ್ಗಿಕವಾಗಿ ಪಿಂಕ್ ಬಣ್ಣ ಬರಬೇಕಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ!


    ರಕ್ತ ಪರಿಚಲನೆ ಸುಧಾರಿಸಲು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುವ ಆಂಥೋಸಯಾನಿನ್‌ ಗಳು ಎಂಬ ಸಂಯುಕ್ತ ಮೂಲಂಗಿ ಹೊಂದಿದ್ದು, ಆರೋಗ್ಯಕ್ಕೆ ಉತ್ತಮ ತರಕಾರಿ ಆಗಿದೆ.

    Published by:renukadariyannavar
    First published: