Cold And Cough: ಮಳೆಗಾಲದಲ್ಲಿ ಕಾಡುವ ನೆಗಡಿ-ಕೆಮ್ಮು ಕಡಿಮೆ ಮಾಡಲು 2 ವಸ್ತು ಸಾಕು

ಲವಂಗ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದು ಕೆಮ್ಮಿನ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ನೀವು ಬೆಳಿಗ್ಗೆ, ಸಂಜೆ ಮತ್ತು ಮಧ್ಯಾಹ್ನ ಮಕ್ಕಳಿಗೆ ಲವಂಗ ಮತ್ತು ಜೇನುತುಪ್ಪ ಸೇವನೆ ಮಾಡಲು ಸಲಹೆ ನೀಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಳೆಯಲ್ಲಿ (Rain) ನೆಗಡಿ (Cold) ಮತ್ತು ಕೆಮ್ಮು (Cough) ಆರೋಗ್ಯ ತೊಂದರೆ (Health Problem) ಜನರನ್ನು (People) ತುಂಬಾ ಕಾಡುತ್ತದೆ. ಮಳೆಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹೀಗಾಗಿ ನೆಗಡಿ ಮತ್ತು ಕೆಮ್ಮು, ಕಫ ಸಮಸ್ಯೆ ಉಂಟಾಗುತ್ತದೆ. ನೆಗಡಿ ನಿಂತ ನಂತರ ಕಫ, ಕೆಮ್ಮು ಆರೋಗ್ಯ ಸಮಸ್ಯೆ ಸಾಲು ಸಾಲಾಗಿ ವ್ಯಕ್ತಿಯನ್ನು ಬಾಧಿಸುತ್ತದೆ. ಅಂತಹ ಸ್ಥಿತಿಯಲ್ಲಿ ಅನೇಕ ಬಾರಿ ಔಷಧಿಗಳು ಬೇಗ ಆರೋಗ್ಯ ಸುಧಾರಣೆಗೆ ಕೆಲಸ ಮಾಡುವುದಿಲ್ಲ. ಇಂತಹ ಸಮಯದಲ್ಲಿ ಮನೆಮದ್ದುಗಳನ್ನು ಬಳಕೆ ಮಾಡಲಾಗುತ್ತದೆ. ಮನೆಮದ್ದುಗಳು ಹೆಲ್ತ್ ಸುಧಾರಣೆಗೆ ಹೆಚ್ಚು ಪರಿಣಾಮ ಬೀರುತ್ತದೆ. ನಿಮಗೆ ಕೆಮ್ಮು ಹೆಚ್ಚಿದ್ದರೆ ನೀವು ಲವಂಗ ಬಳಕೆ ಮಾಡಬಹುದು.

    ಲವಂಗ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದು

    ಲವಂಗ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದು ಕೆಮ್ಮಿನ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ನೀವು ಬೆಳಿಗ್ಗೆ, ಸಂಜೆ ಮತ್ತು ಮಧ್ಯಾಹ್ನ ಮಕ್ಕಳಿಗೆ ಲವಂಗ ಮತ್ತು ಜೇನುತುಪ್ಪ ಸೇವನೆ ಮಾಡಲು ಸಲಹೆ ನೀಡಬಹುದು. ಜೇನುತುಪ್ಪ ಮತ್ತು ಲವಂಗ ಹೇಗೆ ಮಿಶ್ರಣ ಮಾಡಿ ಸೇವನೆ ಮಾಡಬೇಕು ಎಂದು ಇಲ್ಲಿ ತಿಳಿಯೋಣ.

    ಕೆಮ್ಮು ಕಡಿಮೆ ಮಾಡಲು ಜೇನುತುಪ್ಪ ಮತ್ತು ಲವಂಗ ಸೇವನೆ ಮಾಡಿ

    ಕೆಮ್ಮು ಉಂಟಾದಾಗ ಮಗುವಿಗೆ ಜೇನುತುಪ್ಪ ಮತ್ತು ಲವಂಗ ಸೇವನೆ ಮಾಡುವಂತೆ ತಿಳಿಸಿ ಇಲ್ಲವೇ ತಿನ್ನಿಸಿ. ಇದಕ್ಕಾಗಿ 7-8 ಲವಂಗ ತೆಗೆದುಕೊಂಡು ಅವುಗಳನ್ನು ಪ್ಯಾನ್ ಮೇಲೆ ಲಘುವಾಗಿ ಬಿಸಿ ಮಾಡಿ. ಅದು ತಣ್ಣಗಾದ ಮೇಲೆ ಲವಂಗವನ್ನು ನುಣ್ಣಗೆ ರುಬ್ಬಿ.

    ಇದನ್ನೂ ಓದಿ: ಥೈರಾಯ್ಡ್‌ನಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ

    ಈಗ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಮತ್ತು ಅದಕ್ಕೆ 3-4 ಚಮಚ ಜೇನುತುಪ್ಪ ಸೇರಿಸಿ. ಈಗ ಅದನ್ನು ಲಘುವಾಗಿ ಬಿಸಿ ಮಾಡಿ. ಈಗ ಇದನ್ನು ಬೆಳಿಗ್ಗೆ, ಸಂಜೆ ಮತ್ತು ಮಧ್ಯಾಹ್ನ ತಲಾ ಒಂದು ಚಮಚ ಸೇವನೆ ಮಾಡಿ. ಇದು ಕೆಮ್ಮಿನಲ್ಲಿ ತ್ವರಿತ ಪರಿಹಾರ ನೀಡುತ್ತದೆ. ನೀವು ಇದನ್ನು 1 ರಿಂದ 2 ದಿನ ಮಾತ್ರ ಕುಡಿಯಿರಿ. ಇದು ಗಂಟಲಿಗೆ ಸಾಕಷ್ಟು ಪರಿಹಾರ ನೀಡುತ್ತದೆ.

    ಲವಂಗದ ಆರೋಗ್ಯ ಪ್ರಯೋಜನಗಳು

    ಲವಂಗದಲ್ಲಿ ಉರಿಯೂತ ಕಡಿಮೆ ಮಾಡುವ ಹಲವು ಅಂಶಗಳಿವೆ. ಇದು ದೇಹದ ಉರಿಯೂತ ಕಡಿಮೆ ಮಾಡುವ ಉರಿಯೂತ ಗುಣಲಕ್ಷಣ ಹೊಂದಿದೆ. ಇದು ಸಂಧಿವಾತ ಸಮಸ್ಯೆ ಗುಣಪಡಿಸುತ್ತದೆ.

    ಲವಂಗದಲ್ಲಿ ಯುಜೆನಾಲ್ ಶಕ್ತಿಯುತ ಉತ್ಕರ್ಷಣ ನಿರೋಧಕ ಆಗಿದೆ. ಇದರಲ್ಲಿ ಕಂಡು ಬರುವ ಸ್ವತಂತ್ರ ರಾಡಿಕಲ್‌ಗಳು ಹೃದಯ, ಮಧುಮೇಹ ಮತ್ತು ಕ್ಯಾನ್ಸರ್‌ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.

    ಲವಂಗ ತಿನ್ನುವುದು ಹೊಟ್ಟೆಯ ಹುಣ್ಣುಗಳ ಅಪಾಯ ಕಡಿಮೆ ಮಾಡುತ್ತದೆ. ಹೊಟ್ಟೆಯ ಒಳಪದರ ರಕ್ಷಿಸುತ್ತದೆ. ಲವಂಗ ಲೋಳೆಯನ್ನು ದಪ್ಪವಾಗಿಸುತ್ತದೆ. ಇದು ಹುಣ್ಣುಗಳ ಅಪಾಯ ಕಡಿಮೆ ಮಾಡುತ್ತದೆ.

    ಲವಂಗ ಸೇವನೆ ವಾಯು ಮತ್ತು ಗ್ಯಾಸ್ ಸಮಸ್ಯೆ ಕಡಿಮೆ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಇರುವ ಕಿಣ್ವಗಳ ಉತ್ಪಾದನೆ ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಉತ್ತೇಜಿಸುತ್ತದೆ.

    ಬಾಯಿಯ ಆರೋಗ್ಯ ಸುಧಾರಿಸಲು ನೀವು ಲವಂಗ ಸೇವಿಸಬಹುದು. ಲವಂಗ ಒಸಡು ರೋಗ, ಪ್ಲೇಕ್ ಅಥವಾ ಬಯೋಫಿಲ್ಮ್ ರೋಗ ಗುಣಪಡಿಸುತ್ತದೆ.

    ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನೀರನ್ನು ಹೀಗೆ ಕುಡಿಯಬೇಕಂತೆ

    ಜೇನುತುಪ್ಪ, ನಿಂಬೆ ಮತ್ತು ಏಲಕ್ಕಿ ಮಿಶ್ರಣ

    ಅರ್ಧ ಚಮಚ ಜೇನುತುಪ್ಪಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಕೆಲವು ಹನಿ ನಿಂಬೆ ರಸ ಸೇರಿಸಿ. ಈ ಸಿರಪ್ ಅನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ಕೆಮ್ಮು ಮತ್ತು ಶೀತದಿಂದ ನೀವು ಸಾಕಷ್ಟು ಪರಿಹಾರ ಪಡೆಯುತ್ತೀರಿ.

    ಬಿಸಿ ನೀರು

    ಬಿಸಿ ನೀರು ಕುಡಿಯಿರಿ. ನಿಮ್ಮ ಗಂಟಲಿನ ಕಫವು ತೆರೆದುಕೊಳ್ಳುತ್ತದೆ.
    Published by:renukadariyannavar
    First published: