Monsoon And Health: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಬಲಪಡಿಸಲು ಯಾವ ಆಯುರ್ವೇದ ಸಲಹೆ ಪಾಲಿಸಬಹುದು?

ಮಳೆಗಾಲದ ಋತುವಿನಲ್ಲಿ ಹೆಚ್ಚು ಜನರು ಹೊಟ್ಟೆಯ ಸಮಸ್ಯೆ ಎದುರಿಸುತ್ತಾರೆ. ಅದಕ್ಕಾಗಿ ಆರೋಗ್ಯ ತಜ್ಞರು ರೋಗ ತಡೆಯಲು ಮತ್ತು ಅವುಗಳ ತೀವ್ರತೆ ಕಡಿಮೆ ಮಾಡಲು ಕೆಲವು ಸಲಹೆ ನೀಡುತ್ತಾರೆ. ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಒತ್ತು ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
     ಮಳೆಗಾಲದಲ್ಲಿ (Monsoon) ಜ್ವರ (Fever), ಕಫ, ನೆಗಡಿ ಸೇರಿದಂತೆ ಅನೇಕ ಕಾಯಿಲೆಗಳು (Disease) ಸಾಕಷ್ಟು ಹೈರಾಣಾಗಿಸುತ್ತವೆ. ಜೊತೆಗೆ ಸೊಳ್ಳೆಗಳ ಉತ್ಪತ್ತಿಯಿಂದ ಹುಟ್ಟಿಕೊಳ್ಳುವ ಸಮಸ್ಯೆಗಳು (Problem) ವ್ಯಕ್ತಿಯನ್ನು ರೋಗಕ್ಕೆ ತುತ್ತಾಗುವಂತೆ ಮಾಡುತ್ತವೆ. ಮಳೆಗಾಲವು ತಂಪು ವಾತಾವರಣದಲ್ಲಿ ಸಾಕಷ್ಟು ಆರೋಗ್ಯ ತೊಂದರೆ ಬಾಧಿಸುತ್ತವೆ. ಮಳೆಗಾಲವು ಮುಂದುವರೆಯುತ್ತದೆ. ಮತ್ತು ಈ ಸಮಯದಲ್ಲಿ ಮಳೆಯ ಕಾರಣದಿಂದ ರೋಗ ನಿರೋಧಕ ಶಕ್ತಿ ದುರ್ಬಲವಾಗುವ ಮತ್ತು ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು. ಈ ಕಾರಣದಿಂದ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಮಳೆಗಾಲವು ಜ್ವರ, ನೆಗಡಿ, ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ ವಿವಿಧ ಸೋಂಕು ಅಪಾಯವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

    ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ

    ಈ ಋತುವಿನಲ್ಲಿ ಹೆಚ್ಚು ಜನರು ಹೊಟ್ಟೆಯ ಸಮಸ್ಯೆ ಎದುರಿಸುತ್ತಾರೆ. ಅದಕ್ಕಾಗಿ ಆರೋಗ್ಯ ತಜ್ಞರು ರೋಗ ತಡೆಯಲು ಮತ್ತು ಅವುಗಳ ತೀವ್ರತೆ ಕಡಿಮೆ ಮಾಡಲು ಕೆಲವು ಸಲಹೆ ನೀಡುತ್ತಾರೆ. ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಒತ್ತು ನೀಡುತ್ತದೆ. ಈಗ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.

    ಈ ಪ್ರಶ್ನೆಗೆ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಲವನೀತ್ ಬಾತ್ರಾ ಕೆಲವು ಟಿಪ್ಸ್ ನೀಡಿದ್ದಾರೆ. ಮಳೆಗಾಲದ ದಿನಗಳಲ್ಲಿ ಅಡುಗೆ ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳು ಆಹಾರದಲ್ಲಿ ಸೇರಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಪಡಿಸಬಹುದು. ಮತ್ತು ರೋಗಗಳ ಅಪಾಯ ಕಡಿಮೆ ಮಾಡಬಹುದು ಎಂದು ಅವರು ತಮ್ಮ ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ನಲ್ಲಿ ಅವರು ವಿವರಿಸಿದ್ದಾರೆ.

    ಇದನ್ನೂ ಓದಿ: ಥೈರಾಯ್ಡ್‌ನಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ

    ಕರಿ ಮೆಣಸು

    ಸಂಪೂರ್ಣ ಕರಿಮೆಣಸು ಅಥವಾ ಪುಡಿ ಕಾರ್ಮಿನೇಟಿವ್ ಗುಣಲಕ್ಷಣ ಹೊಂದಿದೆ. ಅದು ಕರುಳಿನ ಅನಿಲ ಮತ್ತು ಇತರ ಜಠರಗರುಳಿನ ಸಮಸ್ಯೆಗಳ ಸಾಧ್ಯತೆ ಕಡಿಮೆ ಮಾಡುತ್ತದೆ. ಇದು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಜ್ವರ ಕಡಿಮೆ ಮಾಡುವ ಗುಣ ಹೊಂದಿದೆ ಅಲ್ಲದೆ ಇದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

    ಶುಂಠಿ

    ಶುಂಠಿಯಲ್ಲಿ ಜಿಂಜರಾಲ್, ಪ್ಯಾರಾಡೋಲ್, ಸೆಸ್ಕ್ವಿಟರ್‌ಪೀನ್, ಶೋಗಾಲ್ ಮತ್ತು ಜಿಂಜರೋನ್ ಇದೆ. ಈ ಎಲ್ಲಾ ಪೋಷಕಾಂಶಗಳು ಶಕ್ತಿಯುತವಾದ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿವೆ. ಜೊತೆಗೆ ಶುಂಠಿ ದೇಹದ ಅಂಗಾಂಶಗಳಿಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಸಾಗಣೆ ಸುಧಾರಿಸುತ್ತದೆ. ಇದು ಶೀತ ಮತ್ತು ಜ್ವರ ನಿಯಂತ್ರಿಸಲು ಇದು ಬಹಳ ಅವಶ್ಯಕ ಆಗಿದೆ.

    ತುಳಸಿ

    ತುಳಸಿ ಒತ್ತಡ ನಿವಾರಿಸಲು ಮತ್ತು ಶಕ್ತಿಯ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ತುಳಸಿಯು ಉತ್ಕರ್ಷಣ ನಿರೋಧಕ, ಉರಿಯೂತ ಮತ್ತು ವಯಸ್ಸಾದ ವಿರೋಧಿ ಗುಣ ಹೊಂದಿದೆ. ಇದು ದೇಹದ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ.

    ಅರಿಶಿನ

    ಅರಿಶಿನ ಒಂದು ಸೂಪರ್ ಮೂಲಿಕೆ. ಮತ್ತು ಅದನ್ನು ಅಲ್ಲಗಳೆಯುವಂತಿಲ್ಲ. ಇದರ ಉರಿಯೂತ ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಸಾರ ನಿಮಗೆ ಸೋಂಕು ವಿರುದ್ಧ ಹೋರಾಡಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಈ ಮಾಂತ್ರಿಕ ಮಸಾಲೆ ಒಟ್ಟಾರೆ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ.

    ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನೀರನ್ನು ಹೀಗೆ ಕುಡಿಯಬೇಕಂತೆ

    ಬೆಳ್ಳುಳ್ಳಿ

    ಮತ್ತೊಂದು ಸೂಪರ್ ಆಹಾರ ಅಂದ್ರೆ ಬೆಳ್ಳುಳ್ಳಿ ಇದನ್ನು ನೀವು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ವಿಶೇಷವಾಗಿ ಮಳೆಗಾಲದಲ್ಲಿ. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತ ಇದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಮ್ಮ ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
    Published by:renukadariyannavar
    First published: