Miscarriage Problem: ಈ ಕೆಲವು ತಿಂಗಳಲ್ಲಿ ಗರ್ಭ ಧರಿಸಿದರಲ್ಲಿ ಗರ್ಭಪಾತದ ಅಪಾಯ ಹೆಚ್ಚು! ತಜ್ಞರ ಅಭಿಪ್ರಾಯ ಹೀಗಿದೆ

ಬೇಸಿಗೆಯಲ್ಲಿ ಗರ್ಭ ಧರಿಸಿದ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಸಾಕಷ್ಟು ಹೆಚ್ಚಿರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಕಾರಣಗಳು ಹಲವಾರು. ತಜ್ಞರು ಬೇಸಿಗೆಯಲ್ಲಿ ಗರ್ಭಪಾತ ಹೆಚ್ಚಳವಾಗಲು ನಿಜವಾದ ಕಾರಣ ಏನು ಎಂದು ತಿಳಿಸಿದ್ದು, ಅದನ್ನು ಇಲ್ಲಿ ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿಗೆ ನಡೆದ ಅಧ್ಯಯನವೊಂದರಲ್ಲಿ (Study) ಬೇಸಿಗೆ ಋತುವಿನಲ್ಲಿ (Summer Season) ಗರ್ಭ ಧರಿಸಿದ ಗರ್ಭಿಣಿಯರಲ್ಲಿ (Pregnant Women) ಗರ್ಭಪಾತದ (Miscarriage) ಅಪಾಯವು ತುಂಬಾ ಹೆಚ್ಚು ಇರುತ್ತದೆ ಎಂದು ತಿಳಿಸಿದೆ. ಎಂಟು ವರ್ಷಗಳ ಕಾಲ ಈ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದಲ್ಲಿ ಅಮೆರಿಕದ ಸಂಶೋಧಕರ ತಂಡವು ಬೇಸಿಗೆಯಲ್ಲಿ 6,000 ಮಹಿಳೆಯರು ಗರ್ಭಧರಿಸಿರುವುದನ್ನು ಪತ್ತೆ ಮಾಡಿದೆ. ಅಧ್ಯಯನದ ವೇಳೆ ಬೇಸಿಗೆಯಲ್ಲಿ ಗರ್ಭ ಧರಿಸಿದ ಗರ್ಭಿಣಿಯರು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಗರ್ಭಪಾತ ಆಗಿರುವ ಪ್ರಮಾಣವು ಅತ್ಯಧಿಕವಾಗಿದೆ ಎಂದು ಕಂಡು ಬಂದಿದೆ. ಜೊತೆಗೆ ಆಗಸ್ಟ್ ತಿಂಗಳಲ್ಲಿ ಗರ್ಭಪಾತದ ಪ್ರಮಾಣವು ಫೆಬ್ರವರಿಗಿಂತ 44 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

    ಬೇಸಿಗೆಯಲ್ಲಿ ಗರ್ಭ ಧರಿಸಿದ ಗರ್ಭಿಣಿಯರಲ್ಲಿ ಗರ್ಭಪಾತದ ಅಪಾಯ

    ಗರ್ಭಿಣಿಯರಲ್ಲಿ ಗರ್ಭಪಾತದ ಹೆಚ್ಚಿನ ಪ್ರಕರಣಗಳು ಗರ್ಭಧಾರಣೆಯ 8 ವಾರಗಳು ಪೂರ್ಣಗೊಳ್ಳುವ ಮೊದಲು ಕಂಡು ಬರುತ್ತವೆ. ಈ ವೇಳೆ ಭ್ರೂಣದ ಗಾತ್ರವು ರಾಸ್ಪ್ಬೆರಿ ಗಾತ್ರ ಹೋಲುತ್ತದೆ. ಗರ್ಭಪಾತಕ್ಕೆ ಮುಖ್ಯ ಕಾರಣ ಅಂದ್ರೆ ಬಿಸಿ ಋತುವಿನಲ್ಲಿ ಅತಿಯಾದ ಶಾಖ ಮತ್ತು ತಿನ್ನುವ ಆಹಾರ ಮತ್ತು ನಮ್ಮ ಜೀವನಶೈಲಿ ಎಂದು ತಜ್ಞರು ಹೇಳುತ್ತಾರೆ.

    ಆದರೆ ಇದಕ್ಕಾಗಿ ಇನ್ನೂ ಹಲವು ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಧ್ಯಯನದಲ್ಲಿ ಭಾಗಿಯಾಗಿದ್ದ ಬೋಸ್ಟನ್ ವಿಶ್ವವಿದ್ಯಾಲಯದ ಲೇಖಕಿ, ಡಾ. ಅಮೆಲಿಯಾ ವೆಸೆಲಿಂಕ್ ಹೇಳುವ ಪ್ರಕಾರ, ಅಧ್ಯಯನದ ವೇಳೆ ಬೇಸಿಗೆಯ ಅವಧಿಯಲ್ಲಿ ಆರಂಭಿಕ ಗರ್ಭಪಾತದ ಅಪಾಯವು ಹೆಚ್ಚು ಎಂದು ನಾವು ಕಂಡುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಬಿಸಿಲಿನ ಶಾಖದಿಂದ ಸಮಸ್ಯೆಗಳ ಅಪಾಯ

    ಬಿಸಿಲಿನ ಶಾಖದ ಪರಿಣಾಮ ಗರ್ಭಾವಸ್ಥೆಯಲ್ಲಿ ಮಗುವಿನ ಜನನದ ಅವಧಿಗೆ ಮುಂಚಿತವಾಗಿ ಮಗುವಿನ ಜನನ, ಮಗುವಿನ ಕಡಿಮೆ ತೂಕ ಮತ್ತು ವಿಶೇಷವಾಗಿ ಹೊಟ್ಟೆಯಲ್ಲಿ ಮಗುವಿನ ಮರಣ ಸೇರಿದಂತೆ ಅನೇಕ ಇತರ ಸಮಸ್ಯೆಗಳ ಅಪಾಯವು ಹೆಚ್ಚು ಕಂಡು ಬರುತ್ತದೆ ಎಂದು ಹೇಳಿದ್ದಾರೆ.

    ಗರ್ಭಪಾತದ ಬಗ್ಗೆ ಡೇಟಾ ನೀಡಿದ ಮಹಿಳೆಯರಿಂದ ಸಮೀಕ್ಷೆಯ ಡೇಟಾ ಸಂಶೋಧಕರು ವಿಶ್ಲೇಷಣೆ ಮಾಡಿದ್ದಾರೆ. ಇದರಲ್ಲಿ ಮಹಿಳೆಯರು ತಮ್ಮ ಗರ್ಭಪಾತ ಯಾವಾಗ ಸಂಭವಿಸಿತು ಮತ್ತು ಅವರ ಹೆರಿಗೆಗೆ ಎಷ್ಟು ಸಮಯ ಉಳಿದಿದೆ ಎಂದು ತಿಳಿಸಿದ್ದಾರೆ. ಗರ್ಭಾವಸ್ಥೆಯನ್ನು ಯೋಜಿಸಲು ಪ್ರಯತ್ನಿಸುತ್ತಿರುವ ಮಹಿಳೆಯರನ್ನು ಸಂಶೋಧನೆಯಲ್ಲಿ ಸಂಶೋಧಕರು ಸೇರಿಸಿಕೊಂಡಿದ್ದರು.

    ಗರ್ಭಪಾತದ ಅಪಾಯ ಆಗಸ್ಟ್ ಅಂತ್ಯದಲ್ಲಿ 31 ಪ್ರತಿಶತದಷ್ಟು ಹೆಚ್ಚಿರುತ್ತದೆ

    ಸಂಶೋಧನೆಯಲ್ಲಿ ಭಾಗಿಯಾಗಿದ್ದ ಗರ್ಭಿಣಿಯರ ಹೆರಿಗೆ ಆಗುವವರೆಗೆ ಅವರ ಮೇಲೆ ನಿಗಾ ಇಡಲಾಗಿತ್ತು. ಈ ಸಂಶೋಧನೆಯ ಫಲಿತಾಂಶಗಳನ್ನು ಎಪಿಡೆಮಿಯಾಲಜಿ ಜರ್ನಲ್‌ನಲ್ಲಿ ಪ್ರಕಟ ಮಾಡಲಾಗಿದೆ. ಗರ್ಭಧಾರಣೆಯ ಯಾವುದೇ ವಾರದಲ್ಲಿ ಗರ್ಭಪಾತದ ಅಪಾಯವು ಫೆಬ್ರವರಿ ಅಂತ್ಯಕ್ಕಿಂತ ಆಗಸ್ಟ್ ಅಂತ್ಯದಲ್ಲಿ 31 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

    ತಜ್ಞರು ಹೇಳುವ ಪ್ರಕಾರ, ಅತಿ ಹೆಚ್ಚು ಶಾಖವಿರುವ ಸ್ಥಳಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ಗರ್ಭಪಾತದ ಅಪಾಯವು ತುಂಬಾ ಹೆಚ್ಚಾಗಿರುತ್ತದೆ ಎಂದಿದ್ದಾರೆ. ಶಾಖವು ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಆದರೆ ಶಾಖದ ಕಾರಣ ಗರ್ಭಿಣಿ ಮಹಿಳೆಯರಲ್ಲಿ ನೀರಿನ ಕೊರತೆ, ಜರಾಯುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    ಜೊತೆಗೆ ಗರ್ಭಾಶಯದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಇದರಿಂದಾಗಿ ಗರ್ಭಪಾತದ ಅಪಾಯವು ಬೇಸಿಗೆಯಲ್ಲಿ ಇತರ ಋತುಗಳಿಗಿಂತ ಹೆಚ್ಚು ಇರುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ ಎಂದೂ ಸಂಶೋಧಕರು ತಿಳಿಸಿದ್ದಾರೆ.

    ಗರ್ಭಪಾತ ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ?

    ಗರ್ಭಧಾರಣೆಯ ಮೊದಲ 23 ವಾರಗಳಲ್ಲಿ ಗರ್ಭಪಾತ ಸಂಭವಿಸುತ್ತದೆ. ಗರ್ಭಪಾತದ ಸಾಮಾನ್ಯ ಲಕ್ಷಣಗಳೆಂದರೆ ಯೋನಿ ರಕ್ತಸ್ರಾವ, ಸೆಳೆತ ಅಥವಾ ಹೊಟ್ಟೆಯ ಕೆಳಭಾಗದಲ್ಲಿ ನೋವು. ಅನೇಕ ಬಾರಿ ಮಹಿಳೆಯರಿಗೆ ತಾವು ಗರ್ಭಿಣಿಯಾಗಿದ್ದೇವೆ ಮತ್ತು ಗರ್ಭಪಾತವಾಗಿದೆ ಎಂದು ತಿಳಿಯುವುದಿಲ್ಲ.

    ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?

    ಮೂರು ಸತತ ಗರ್ಭಪಾತಗಳನ್ನು ಅಸಹಜವೆಂದು ಪರಿಗಣಿಸಲಾಗುತ್ತದೆ. ಸುಮಾರು 1% ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಮಗುವಿನಲ್ಲಿನ ಅಸಹಜ ಕ್ರೋಮೋಸೋಮ್‌ಗಳಿಂದ ಹೆಚ್ಚಿನ ಗರ್ಭಪಾತಗಳು ಸಂಭವಿಸುತ್ತವೆ. ಗರ್ಭಪಾತ ತಡೆಯಲು ಸಾಧ್ಯವಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಧೂಮಪಾನ, ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆ ತಪ್ಪಿಸಿದರೆ ಅಪಾಯ ಕಡಿಮೆ.
    Published by:renukadariyannavar
    First published: