Post Office Scheme: ಫೋಸ್ಟ್ ಆಫೀಸ್​​ನಲ್ಲಿ ಕೇವಲ 100 ರೂ. ಹೂಡಿಕೆ ಮಾಡಿ 5 ವರ್ಷದಲ್ಲಿ ₹20 ಲಕ್ಷ ಗಳಿಸಿ

ಪೋಸ್ಟ್ ಆಫೀಸ್ ಯೋಜನೆಗಳು ಒಂದು ರೀತಿಯಲ್ಲಿ ಸುರಕ್ಷಿತ ಹೂಡಿಕೆ ಯೋಜನೆಗಳಾಗಿವೆ. ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಮತ್ತು ಇತರ ಯಾವುದೇ ಮೂಲಗಳಿಗಿಂತ ಹೆಚ್ಚಿನ ಲಾಭವನ್ನು ನೀಡಲು ಪೋಸ್ಟ್ ಆಫೀಸ್ ಅನೇಕ ಪ್ರಯೋಜನಕಾರಿ ಯೋಜನೆಗಳನ್ನು ನೀಡುತ್ತದೆ.

ಅಂಚೆ ಕಚೇರಿ

ಅಂಚೆ ಕಚೇರಿ

  • Share this:
National Saving Certificate : ಹಣ ಹಣವನ್ನು ದುಡಿಯಬೇಕು ಎನ್ನುತ್ತಾರೆ. ಜನ ಸಾಮಾನ್ಯರು ದುಡಿದ ಹಣವನ್ನು ಖರ್ಚು ಮಾಡಿ ಬದುಕುತ್ತಾರೆ. ಶ್ರೀಮಂತರು ತಮ್ಮ ಬಳಿಯಿರುವ ಹಣ ನಿರಂತರವಾಗಿ ದೊಡ್ಡದಾಗುವಂತೆ ಯೋಜನೆಗಳನ್ನು ರೂಪಿಸುತ್ತಾರೆ. ಕೇವಲ ಹಣ ಉಳಿತಾಯ ಮಾಡಿದ್ರೆ ನಾವು ಶ್ರೀಮಂತರಾಗಲ್ಲ. ಅದನ್ನು ಇಂತಿಷ್ಟು ವರ್ಷಗಳಲ್ಲಿ ದುಪ್ಪಟ್ಟಾಗುವಂತೆ ನೋಡಿಕೊಳ್ಳಬೇಕು. ಹಣದಿಂದ ಹಣ ಗಳಿಸುವವನೇ ಹಣವಂತನಾಗಲು ಸಾಧ್ಯ. ಹಾಗಂತ ಸಿಕ್ಕ ಸಿಕ್ಕ ಕಡೆ ಹಣ ಹೂಡಿಕೆ ಮಾಡಿದ್ರೆ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚು. ಅದೇ ಸರ್ಕಾರಿ ಬೆಂಬಲಿತ ಅಂಚೆ ಕಚೇರಿಯನ್ನು ಎಂದಿಗೂ ನಾವು ನಂಬಬಹುದು. ಹೂಡಿಕೆ ಮಾಡಿದ ಹಣಕ್ಕೆ ಮೋಸ ಮಾಡದೆ ಒಳ್ಳೆಯ ಬಡ್ಡಿಯನ್ನು ಫೋಸ್ಟ್​​ ಆಫೀಸ್​​​ ಯೋಜನೆಗಳು ನೀಡುತ್ತವೆ.

ಪೋಸ್ಟ್ ಆಫೀಸ್ ಯೋಜನೆಗಳು ಒಂದು ರೀತಿಯಲ್ಲಿ ಸುರಕ್ಷಿತ ಹೂಡಿಕೆ ಯೋಜನೆಗಳಾಗಿವೆ. ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಮತ್ತು ಇತರ ಯಾವುದೇ ಮೂಲಗಳಿಗಿಂತ ಹೆಚ್ಚಿನ ಲಾಭವನ್ನು ನೀಡಲು ಪೋಸ್ಟ್ ಆಫೀಸ್ ಅನೇಕ ಪ್ರಯೋಜನಕಾರಿ ಯೋಜನೆಗಳನ್ನು ನೀಡುತ್ತದೆ. ತಿಂಗಳಿಗೆ ಕೇವಲ 100 ರೂಪಾಯಿಗಳಷ್ಟು ಸಣ್ಣ ಉಳಿತಾಯವು ನಿಮ್ಮನ್ನು ಕೆಲವು ವರ್ಷಗಳಲ್ಲಿ ಮಿಲಿಯನೇರ್ ಮಾಡಬಹುದು.

ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (National Saving Certificate)

ಈ ಯೋಜನೆಯಲ್ಲಿ ನೀವು ಕೆಲವು ವರ್ಷಗಳಲ್ಲಿ ದೊಡ್ಡ ಹಣವನ್ನು ಸೇರಿಸಬಹುದು. ನಿಮ್ಮ ಹಣ ಅಂಚೆ ಕಚೇರಿಯಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಆದ್ದರಿಂದ, ನೀವು ನಿಮ್ಮ ಹಣವನ್ನು ಯಾವುದೇ ಅಪಾಯವಿಲ್ಲದೆ ಹೂಡಿಕೆ ಮಾಡಬಹುದು. ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿ ಮಾಡಬಹುದು.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಪ್ರಯೋಜನಗಳು(Benefits of National Saving Certificate)

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಮುಕ್ತಾಯ ಅವಧಿಯನ್ನು 5 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಆದಾಗ್ಯೂ, ಕೆಲವು ಷರತ್ತುಗಳೊಂದಿಗೆ 1 ವರ್ಷದ ನಂತರ ನೀವು ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಹಣಕಾಸು ವರ್ಷದ ಪ್ರತಿ ತ್ರೈಮಾಸಿಕದ ಆರಂಭದಲ್ಲಿ (3 ತಿಂಗಳುಗಳು) ಸರ್ಕಾರವು ಬಡ್ಡಿ ದರಗಳನ್ನು ನಿಗದಿಪಡಿಸುತ್ತದೆ.

ನೀವು ಎಷ್ಟು ಹೂಡಿಕೆ ಮಾಡಬೇಕು? (How much should you invest?)

ಈ ಯೋಜನೆಯಲ್ಲಿ ನೀವು ತಿಂಗಳಿಗೆ 100 ರೂಪಾಯಿಯಂತೆ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ನೀವು 20.85 ಲಕ್ಷ ಮೊತ್ತವನ್ನು 5 ವರ್ಷಗಳ ನಂತರ ಶೇ 6.8ರ ಬಡ್ಡಿದರದಲ್ಲಿ ಬಯಸಿದರೆ ನೀವು 5 ವರ್ಷಗಳಲ್ಲಿ 15 ಲಕ್ಷ ರೂಪಾಯಿಗಳ ಹೂಡಿಕೆಯನ್ನು ಮಾಡಬೇಕಾಗುತ್ತದೆ. ನೀವು ಬಡ್ಡಿಯಾಗಿ ಸುಮಾರು 6 ಲಕ್ಷ ಲಾಭವನ್ನು ಪಡೆಯುತ್ತೀರಿ.

ಬಡ್ಡಿ ದರ ಎಷ್ಟು? (What is the interest rate?)

ಪ್ರಸ್ತುತ ಯೋಜನೆಯು ವಾರ್ಷಿಕವಾಗಿ ಶೇ 6.8  ಬಡ್ಡಿಯನ್ನು ಪಡೆಯುತ್ತಿದೆ. ಈ ಯೋಜನೆಯಡಿ, ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ನೀವು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: 786 Series Note: ನಿಮ್ಮ ಬಳಿಯಿರುವ ಯಾವುದೇ ನೋಟಿನ ಮೇಲೆ 786 ನಂಬರ್ ಇದ್ದರೆ 3 ಲಕ್ಷ ರೂ. ಗಳಿಸಬಹುದು

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತ ಹೂಡಿಕೆ ಮೂಲಕ ದುಪ್ಪಟ್ಟಾಗಿಸುವ, ನಿರಂತರವಾಗಿ ಬಡ್ಡಿ-ಲಾಭ ಬರುವಂತೆ ಹೂಡಿಕೆ ಮಾಡುವ ಕನಸು ಪ್ರತಿಯೊಬ್ಬರಲ್ಲೂ ಇರುತ್ತೆ. ಹಣ ಹಣವನ್ನು ದುಡಿಯಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಸರಿಯಾದ ಯೋಜನೆಯಲ್ಲಿ ಹಣವನ್ನು ತೊಡಗಿಸುವುದು ಮುಖ್ಯ. ಸುರಕ್ಷಿತ ಹಣ ಹೂಡಿಕೆ ಎಂದೊಡನೆ ಭಾರತೀಯರಿಗೆ ನೆನಪಾಗೋದು ಫೋಸ್ಟ್​​ ಆಫೀಸ್​ ಸ್ಕೀಮ್​​. ಅಂಚೆ ಕಚೇರಿ ಯೋಜನೆಗಳಲ್ಲಿ ಖಾತರಿ ರಿಟರ್ನ್ಸ್​​​ ಇರುವುದರಿಂದ ಸೇಫ್​ ಆಯ್ಕೆ ಆಗಿದೆ. ಹೀಗಾಗಿ ಮೇಲೆ ಹೇಳಿರುವ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ಕೆಲವೇ ವರ್ಷಗಳಲ್ಲಿ ಲಕ್ಷಾಧಿಪತಿಗಳಾಗಿ. ಇನ್ನೇಕೆ ತಡ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಯೋಜನೆಯನ್ನು ಶುರು ಮಾಡಿ.
Published by:Kavya V
First published: