ಸಂಗಾತಿ ಜೊತೆಗಿನ ವಿರಸಕ್ಕೆ ಇತಿಶ್ರೀ ಹಾಡಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್

ನಿಮ್ಮ ಸಂಗಾತಿ ತೆಗೆದುಕೊಂಡು ಹೋಗುವ ಟಿಫನ್ ಬಾಕ್ಸ್​ನಲ್ಲಿ ಪ್ರೀತಿಯಿಂದ ಸಣ್ಣ ಪ್ರೇಮ ಪತ್ರ ಬರೆಯಿರಿ

zahir
Updated:November 21, 2018, 5:08 PM IST
ಸಂಗಾತಿ ಜೊತೆಗಿನ ವಿರಸಕ್ಕೆ ಇತಿಶ್ರೀ ಹಾಡಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್
love
  • Share this:
ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ಜಗಳ ಸಾಮಾನ್ಯ. ಅದುವೇ ಪ್ರಕೃತಿ ನಿಯಮ. ಆದರೆ ಇದುವೇ ಸಂಬಂಧಗಳ ಬಿರುಕಿಗೆ ಕಾರಣವಾಗುವುದುಂಟು. ಮುಖ್ಯವಾಗಿ ಇಂತಹ ಸನ್ನಿವೇಶಗಳಲ್ಲಿ ಗಂಡ-ಹೆಂಡತಿ ತೆಗೆದುಕೊಳ್ಳುವ ಸಣ್ಣ ಪುಟ್ಟ ತೀರ್ಮಾನಗಳು ಸಂಸಾರವನ್ನು ಸರಿದೂಗಿಸುತ್ತದೆ. ಸಾಮಾನ್ಯವಾಗಿ ಮಹಿಳೆಯರ ಕೋಪ ಕೇವಲ ಸಿಟ್ಟಾಗಿರುತ್ತದೆ. ಆದರೆ ಪುರುಷರ ಕೋಪ ಹಲ್ಲೆಗಳಿಗೂ ಕಾರಣವಾಗಬಹುದು.

ಈ ವೇಳೆ ಮೂಡುವ ವಿರಸ ಇಬ್ಬರ ಅನ್ಯೋನ್ಯತೆಯನ್ನು ದೂರ ಮಾಡುತ್ತದೆ. ಸಂಬಂಧ ಎಂದ ಮೇಲೆ ವಿರಸಗಳು ಮಾಮೂಲಿ. ಆದರೆ ಆನಂತರದ ನಮ್ಮ ವರ್ತನೆಯು ಸಂಬಂಧದ ಮುಂದಿನ ಹಂತವನ್ನು ನಿರ್ಧರಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ಒಡಕುಗಳನ್ನು ಹೋಗಲಾಡಿಸಲು ಪರಸ್ಪರ ಪ್ರೀತಿಗಾಗಿ ಸೋಲಬಹುದು. ಇಲ್ಲ ಕ್ಷಮೆ ಕೇಳಿ ಪರಿಹರಿಸಬಹುದು. ಇದರ ಹೊರತಾಗಿಯು ಸಣ್ಣ ಪುಟ್ಟ ಮುನಿಸುಗಳನ್ನು ತೊಡೆದು ಹಾಕಲು ಕೆಲವೊಂದು ಟಿಪ್ಸ್​ ಇಲ್ಲಿ ನೀಡಲಾಗಿದೆ.

-ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೂ ಒಂದು ಟ್ರಿಕ್ ಅಡಗಿದೆ. ಅದೇನೆಂದರೆ ಮಲಗುವ ಮುನ್ನವೇ ಪುರುಷರ ಮನಸ್ಸನ್ನು ಗೆಲ್ಲಲು ಅವರ ಇಷ್ಟದ ಆಹಾರಗಳನ್ನು ತಯಾರಿಸಿ ಕೊಡಿ. ಇದರಿಂದ ನಿಮ್ಮ ಮೇಲಿನ ಕೋಪವು ಮಲಗುವ ಮುನ್ನವೇ ಕಡಿಮೆಯಾಗುತ್ತದೆ.

- ನಿಮ್ಮ ಸಂಗಾತಿ ಕಚೇರಿಗೆ ಹೋಗಬೇಕಾದರೆ ಅವರನ್ನು ಕರೆದು ಹಣೆಗೆ ಒಂದು ಸಿಹಿ ಮುತ್ತನ್ನು ನೀಡಿ. ಹೀಗೆ ಮಾಡುವುದರಿಂದ ಅವರ ಮೂಡ್​ ಉತ್ತಮಗೊಳ್ಳುವುದಲ್ಲದೆ ನಿಮ್ಮ ಮೇಲಿನ ಕೋಪ ಇಳಿಮುಖವಾಗುತ್ತದೆ.

- ನಿಮ್ಮ ಸಂಗಾತಿ ಮಾತನಾಡದೇ ಇದ್ದರೂ, ಪ್ರತಿ ಬಾರಿ ನೀವು ಪ್ರೀತಿಯಿಂದ ಮಾತನಾಡಿಸಿ. ಇದರಿಂದ ನಿಮ್ಮ ಜೊತೆಗಾರನಿಗೆ ಕೋಪ ಕಡಿಮೆಯಾಗಿ ಪ್ರೀತಿ ಮೂಡಬಹುದು. ಆದರೆ ಕಿರಿ ಕಿರಿಯಾಗುವಂತಹ ವಿಷಯಗಳನ್ನು ಹಾಗೂ ಜಗಳಕ್ಕೆ ಕಾರಣವಾದ ವಿಷಯವನ್ನು ಪ್ರಸ್ತಾಪಿಸಬೇಡಿ.

- ನಿಮ್ಮ ಸಂಗಾತಿಯ ಕೋಪ ಕೊನೆಗೊಳ್ಳದಿದ್ದರೆ, ಅವರು ತೆಗೆದುಕೊಂಡು ಹೋಗುವ ಟಿಫನ್ ಬಾಕ್ಸ್​ನಲ್ಲಿ ಪ್ರೀತಿಯಿಂದ ಸಣ್ಣ ಪ್ರೇಮ ಪತ್ರ ಬರೆಯಿರಿ. ಆ ಪತ್ರವನ್ನು ಓದಿದರೆ ಅವರ ಕೋಪ ತಣ್ಣಗಾಗುವಂತಿರಬೇಕು.

ಇದನ್ನೂ ಓದಿ: ಫೇಸ್​ಬುಕ್-ಇನ್​ಸ್ಟಾಗ್ರಾಂ ಸ್ಥಗಿತ: ಹ್ಯಾಕಿಂಗ್ ಸಾಧ್ಯತೆ?
First published:November 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ