Breakfast: ಬೆಳಗಿನ ತಿಂಡಿಗೆ ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿ ಮಾಡಿ

ರಾಜಗಿರಾ ಆರೋಗ್ಯ ಪ್ರಯೋಜನಗಳ ದೃಷ್ಟಿಯಿಂದ ಇದನ್ನು ದೈನಂದಿನ ಆಹಾರವಾಗಿ ಸಹ ಸೇವನೆ ಮಾಡಲಾಗುತ್ತದೆ. ರಾಜಗಿರಾ ಹಾಗೂ ಸಕ್ಕರೆ ಪಾಕದಿಂದ ಮಾಡಿದ ಲಡ್ಡೂ ಚಿಕ್ಕಿ ಸೇವನೆ ಮಾಡುವುದು ಉತ್ತಮ. ಹಾಗಾದರೆ ನಾವು ಇಂದು ರಾಜಗಿರಾ ಬಾಳೆಹಣ್ಣಿನ ರೆಸಿಪಿ ಮಾಡುವುದು ಹೇಗೆಂದು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾಜಗಿರಾ (Rajgira) ಇದನ್ನು ಚೌಲೈ ಎಂದೂ ಕರೆಯುತ್ತಾರೆ. ಉಪವಾಸದ (Fasting) ವೇಳೆ ರಾಜಗಿರಾವನ್ನು ಹೆಚ್ಚು ಬಳಕೆ ಮಾಡುವುದನ್ನು ನೀವು ನೋಡಿರಬಹುದು. ಇಂದು ನಾವು ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿ (Rajgira Banana Puri Recipe) ಮಾಡುವುದು ಹೇಗೆ ಎಂದು ನೋಡೋಣ. ಅದಾಗ್ಯೂ ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿಯನ್ನು ನೀವು ಬೆಳಗಿನ ತಿಂಡಿಯಾಗಿ (Breakfast) ಸಹ ಸೇವನೆ ಮಾಡಬಹುದು. ಜೊತೆಗೆ ರಾಜಗಿರಾ ಆರೋಗ್ಯ ಪ್ರಯೋಜನಗಳ ದೃಷ್ಟಿಯಿಂದ ಇದನ್ನು ದೈನಂದಿನ ಆಹಾರವಾಗಿ ಸಹ ಸೇವನೆ ಮಾಡಲಾಗುತ್ತದೆ. ರಾಜಗಿರಾ ಹಾಗೂ ಸಕ್ಕರೆ ಪಾಕದಿಂದ ಮಾಡಿದ ಲಡ್ಡೂ, ಚಿಕ್ಕಿಗಳ ಸೇವನೆ ಮಾಡುವುದು ಉತ್ತಮ. ಹಾಗಾದರೆ ನಾವು ಇಂದು ರಾಜಗಿರಾ ಬಾಳೆಹಣ್ಣಿನ ರೆಸಿಪಿ ಮಾಡುವುದು ಹೇಗೆಂದು ನೋಡೋಣ.

  ರಾಜ್‌ಗಿರಾ ಬಾಳೆಹಣ್ಣು ಪುರಿ ರೆಸಿಪಿ

  ಉಪವಾಸದ ಸಮಯದಲ್ಲಿ ನೀವು ಸಾಬುದಾನ ಖಿಚಡಿ, ಹಣ್ಣು, ಬಕ್‌ವೀಟ್ ಡಂಪ್ಲಿಂಗ್‌ ಇತ್ಯಾದಿ ರೆಸಿಪಿಗಳ ರುಚಿ ಸವಿದಿರಬಹುದು. ಹಾಗೆಯೇ ಬೆಳಗಿನ ತಿಂಡಿಗೆ ದೋಸೆ, ಉಪ್ಪಿಟ್ಟು, ಅವಲಕ್ಕಿ ಸೇವಿಸಿರಬಹುದು. ಇಂದು ನೀವು ಹೊಸ ರೆಸಿಪಿ ರಾಜಗಿರಾ ಬಾಳೆಹಣ್ಣು ಪುರಿ ಮಾಡಿ ಸವಿಯುವುದು ಹೇಗೆ ಎಂಬುದನ್ನು ಹೇಳುತ್ತಿದ್ದೇವೆ.

  ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳು

  2 ಕಪ್ ರಾಜಗೀರಾ ಹಿಟ್ಟು,

  1 ಹಸಿ ಹಿಸುಕಿದ ಬಾಳೆಹಣ್ಣು,

  1/2 ಟೀಸ್ಪೂನ್ ಜೀರಿಗೆ,

  1/2 ಟೀಸ್ಪೂನ್ ಶುಂಠಿ

  ಹಸಿರು ಮೆಣಸಿನಕಾಯಿ ಪೇಸ್ಟ್

  ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

  ಕಲ್ಲು ಉಪ್ಪು ರುಚಿಗೆ ತಕ್ಕಂತೆ

  2 ಚಮಚ ತುಪ್ಪ

  ಕಡಲೆಕಾಯಿ ಎಣ್ಣೆ

  ಅಗತ್ಯವಿರುವಷ್ಟು ನೀರು

  ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿ ಮಾಡುವ ವಿಧಾನ

  ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ರಾಜಗೀರಾ ಹಿಟ್ಟು, ಹಿಸುಕಿದ ಬಾಳೆಹಣ್ಣು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಕಲ್ಲು ಉಪ್ಪು, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್, ಜೀರಿಗೆ ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಕ್ರಮೇಣ ನೀರು ಸೇರಿಸಿ ಮತ್ತು ಮೃದುವಾದ ಹಿಟ್ಟನ್ನು ಬೆರೆಸಿ. ಚೆನ್ನಾಗಿ ನಾದಿಕೊಳ್ಳಿ. ನಂತರ ಪುರಿ ಲಟ್ಟಿಸಲು ಹಿಟ್ಟಿನ ಉಂಡೆ ಮಾಡಿ.

  ಕಡಲೆಕಾಯಿ ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಲು ಮಧ್ಯಮ ಉರಿಯಲ್ಲಿ ಇಡಿ. ಹಿಟ್ಟಿನ ಉಂಡೆಗಳನ್ನು ವೃತ್ತಾಕಾರವಾಗಿ ಲಟ್ಟಿಸಿ. ಎಣ್ಣೆ ಕಾದ ನಂತರ ಲಟ್ಟಿಸಿದ ಪುರಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿ. ಗೋಲ್ಡನ್ ಆಗುವವರೆಗೆ ಪುರಿ ಬೇಯಿಸಿ. ಈಗ ನಿಮ್ಮ ರಾಜಗಿರಾ ಬಾಳೆಹಣ್ಣು ಪುರಿ ರೆಸಿಪಿ ಸಿದ್ಧವಾಗಿದೆ. ಇದನ್ನು ನಿಮ್ಮಿಷ್ಟದ ತರಕಾರಿ ಪಲ್ಯ, ರೈತಾ ಅಥವಾ ಚಟ್ನಿ ಜೊತೆ ಸೇವಿಸಿ.

  ರಾಜಗಿರಾ ಎಂದರೇನು?

  ರಾಜಗಿರಾವನ್ನು ಚೌಲೈ ಅಥವಾ ರಾಮದಾನ ಎಂದೂ ಕರೆಯುತ್ತಾರೆ. ಇವು ಚಿಕ್ಕ ಬೀಜಗಳು. ಇದು ಅಮರಂಥ್ ಸಸ್ಯದಲ್ಲಿ ಸಿಗುವ ಬೀಜಗಳಾಗಿವೆ. ಈ ಬೀಜಗಳು ಹಣ್ಣಾದ ನಂತರ ಸಸ್ಯಗಳನ್ನು ಕತ್ತರಿಸಿ ಹೊರ ತೆಗೆಯುತ್ತಾರೆ.

  ರಾಜಗಿರಾ ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ರಾಜಗಿರಾ ವೈಜ್ಞಾನಿಕ ಹೆಸರು ಅಮರಾಂತಸ್ ಮತ್ತು ಇದನ್ನು ಇಂಗ್ಲಿಷ್‌ನಲ್ಲಿ ಅಮರಂತ್ ಎಂದು ಕರೆಯುತ್ತಾರೆ.

  ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

  ರಾಜಗಿರಾವನ್ನು ಲಾಡೂ, ಚಿಕ್ಕಿ, ರಾಜಗಿರಾ ಹಲ್ವಾ ಸೇರಿದಂತೆ ಮುಂತಾದ ವಿವಿಧ ರೂಪಗಳಲ್ಲಿ ಬಳಕೆ ಮಾಡುತ್ತಾರೆ. ಇದು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಅಂಟು ಮುಕ್ತ ಆಹಾರವಾಗಿ ಬಳಸಬಹುದು. ರಾಜ್‌ಗಿರಾ ಗ್ಲುಟನ್‌ ಮುಕ್ತವಾಗಿದೆ. ಇದು ಕಾಯಿಲೆಯಿಂದ ರಕ್ಷಿಸುತ್ತದೆ. ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
  Published by:renukadariyannavar
  First published: