Life Partner Height: ಮದುವೆಯಾಗಲು ಹೈಟ್ ಮುಖ್ಯವಲ್ಲ, ಭಾವನೆ-ಹೊಂದಾಣಿಕೆ ಅಂತಾರೆ ಈ ಜೋಡಿ!

ಗಂಡನ ಎತ್ತರ ತಮಗಿಂತ ಆರು ಇಂಚು ಕಡಿಮೆ ಇರುವ ಮಹಿಳೆಯೊಬ್ಬರು ಇದ್ದಾರೆ. ತನ್ನ ಗಂಡನ ಎತ್ತರ ತಮಗಿಂತ ಕಡಿಮೆಯಿದ್ದರೂ ಈ ಮಹಿಳೆ ತುಂಬಾ ಸಂತೋಷದಿಂದ ಮತ್ತು ತನ್ನ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾಳೆ.

ಜೆಸ್ಸಿಕಾ ಮತ್ತು ಹಂಟರ್ ಜೋಡಿ

ಜೆಸ್ಸಿಕಾ ಮತ್ತು ಹಂಟರ್ ಜೋಡಿ

  • Share this:
    ಪ್ರತಿಯೊಬ್ಬರ ಸಂಗಾತಿ (Life Partner) ಆಯ್ಕೆಯಲ್ಲಿನ ಭಾವನೆಗಳು (Feelings), ಇಷ್ಟಗಳು (Likes) ಸಾಕಷ್ಟು ವಿಭಿನ್ನವಾಗಿರುತ್ತವೆ (Difference). ಕೆಲವರು ಎತ್ತರದ ಸಂಗಾತಿಯನ್ನು ಇಷ್ಟ ಪಡುತ್ತಾರೆ. ಕೆಲವರು ತಮ್ಮ ಎತ್ತರಕ್ಕೆ ಸರಿ ಹೊಂದುವ ಹುಡುಗನನ್ನು ಇಷ್ಟ ಪಡುತ್ತಾರೆ. ಆದರೆ ಹುಡುಗಿಯು ತನ್ನ ಎತ್ತರಕ್ಕಿಂತ ಕಡಿಮೆ ಎತ್ತರದ ಹುಡುಗನನ್ನು ಇಷ್ಟ ಪಡಲು ಸಾಧ್ಯವಿಲ್ಲ ಎನ್ನುವುದು ನಿಮ್ಮ ಆಲೋಚನೆ ಆಗಿದ್ದರೆ ಅದನ್ನು ತೆಗೆದು ಹಾಕಿ ಬಿಡಿ. ಯಾಕೆಂದರೆ ಇಲ್ಲೊಬ್ಬ ಹುಡುಗಿ ತನಗಿಂತ ಕಡಿಮೆ ಎತ್ತರದ ಹುಡುಗನನ್ನು ಇಷ್ಟ ಪಟ್ಟಿದ್ದಾಳೆ. ಇವರಿಬ್ಬರ ಜೋಡಿ ಜನರನ್ನು ಹುಬ್ಬೇರಿಸುವಂತೆ ಮಾಡಿದೆ. ತನ್ನ ಹುಡುಗನ ಎತ್ತರ ಎಷ್ಟಿರಬೇಕು ಎಂದು ಮಹಿಳೆಯರನ್ನು ಕೇಳಿದರೆ ಉತ್ತರ ಹೀಗಿರುತ್ತದೆ.

    ಗಂಡನ ಎತ್ತರ ತಮಗಿಂತ ಆರು ಇಂಚು ಕಡಿಮೆ ಇರುವ ಮಹಿಳೆ ಏನ್ಹೇಳ್ತಾರೆ?

    ಹೆಚ್ಚಿನ ಮಹಿಳೆಯರು ತಮ್ಮ ಗಂಡನ ಎತ್ತರವು ತಮಗಿಂತ ಹೆಚ್ಚಿರಬೇಕು ಎಂದು ಉತ್ತರಿಸುತ್ತಾರೆ. ಇನ್ನು ಕೆಲವರು ಗಂಡನ ಎತ್ತರವು ತಮ್ಮ ಎತ್ತರಕ್ಕೆ ಸಮಾನವಾಗಿರಬೇಕು ಎಂದು ಉತ್ತರಿಸುತ್ತಾರೆ.

    ಇಲ್ಲಿ ಗಂಡನ ಎತ್ತರ ತಮಗಿಂತ ಆರು ಇಂಚು ಕಡಿಮೆ ಇರುವ ಮಹಿಳೆಯೊಬ್ಬರು ಇದ್ದಾರೆ. ತನ್ನ ಗಂಡನ ಎತ್ತರ ತಮಗಿಂತ ಕಡಿಮೆಯಿದ್ದರೂ ಈ ಮಹಿಳೆ ತುಂಬಾ ಸಂತೋಷದಿಂದ ಮತ್ತು ತನ್ನ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾಳೆ.

    ಸಂದರ್ಶನವೊಂದರಲ್ಲಿ ಮಹಿಳೆ ತಮ್ಮ ಸಂಗಾತಿ ಆಯ್ಕೆ ಮತ್ತು ವೈವಾಹಿಕ ಜೀವನದ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಯಾಕೆಂದರೆ ಮಹಿಳೆ ಮತ್ತು ಆಕೆಯ ಸಂಗಾತಿಯನ್ನು ಹಲವರು ತಮಾಷೆ ಮಾಡಿದ್ದಾರೆ,

    ಗೇಲಿ ಮಾಡಿದ್ದಾರೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ, ಈ ಜೋಡಿ ಖುಷಿಯಾಗಿ ತಮ್ಮ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಯಾರು ಈ ಮಹಿಳೆ? ಅವರು ಮದುವೆಯಾಗಿದ್ದು ಹೇಗೆ? ಎಂದು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

    ಯಾರು ಆ ಮಹಿಳೆ?

    ಅಮೆರಿಕದ ಅರಿಜೋನಾದಲ್ಲಿ ವಾಸಿಸುತ್ತಿರುವ ಮೂವತ್ತು ವರ್ಷದ ಮಹಿಳೆಯ ಹೆಸರು ಜೆಸ್ಸಿಕಾ ಮತ್ತು ಆಕೆಯ ಗಂಡನ ಹೆಸರು ಹಂಟರ್. ಜೆಸ್ಸಿಕಾಳ ಎತ್ತರ ಐದು ಅಡಿ ಏಳು ಇಂಚು. ಮತ್ತು ಅವಳ ಪತಿ ಹಂಟರ್ ಎತ್ತರ ಐದು ಅಡಿ ಒಂದು ಇಂಚು. ಅಂದರೆ, ಜೆಸ್ಸಿಕಾ ಎತ್ತರ ಪತಿ ಹಂಟರ್‌ಗಿಂತ ಸುಮಾರು 6 ಇಂಚು ಎತ್ತರವಿದ್ದಾಳೆ.

    ಸಂದರ್ಶನದ ವೇಳೆ ಜೆಸ್ಸಿಕಾ ಮಾತನಾಡಿ, 2020 ರಲ್ಲಿ ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾದೆವು. ಮತ್ತು ನಂತರ ನಾವು ಮದುವೆಯಾಗಲು ನಿರ್ಧರಿಸಿದೆವು ಎಂದಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಂತೆ ನಾವಿಬ್ಬರೂ ಹತ್ತಿರವಾದೆವು. ಆದರೆ ನಮ್ಮಿಬ್ಬರ ಎತ್ತರದ ಮಿಸ್ ಮ್ಯಾಚ್ ಸಾಕಷ್ಟು ಗೇಲಿ, ತಮಾಷೆಗೆ ಒಳಗಾಯಿತು ಎಂದಿದ್ದಾರೆ.

    ಜನರು ಅಪಹಾಸ್ಯ ಮಾಡಿದರು - ಜೆಸ್ಸಿಕಾ

    ಜೆಸ್ಸಿಕಾ ಪ್ರಕಾರ, ನಾವು ಎಲ್ಲಾದರೂ ಹೊರಗೆ ಸುತ್ತಾಡಲು ಹೋದಾಗ ಜನರು ನಮ್ಮಿಬರ ಎತ್ತರ ನೋಡಿ ತಮಾಷೆ, ಅಪಹಾಸ್ಯ ಮಾಡ್ತಿದ್ದರು. ಕೆಲವೊಮ್ಮೆ ಜನರು, ನನ್ನ ಪತಿ ಹಂಟರ್ ನನ್ನು ನಿಮ್ಮ ಮಗನೇ ಎಂದು ಕೇಳುತ್ತಾರೆ. ಆದರೆ ಯಾರು ಏನೇ ಅಂದುಕೊಳ್ಳಲಿ ನಾವಿಬ್ಬರೂ ತುಂಬಾ ಖುಷಿಯಾಗಿದ್ದೇವೆ. ಮತ್ತು ಅದು ನಮಗೆ ಮುಖ್ಯವಾಗಿದೆ.

    ಹಂಟರ್ ಒಬ್ಬ ವೈಯಕ್ತಿಕ ತರಬೇತುದಾರ. ಹಾಗಾಗಿ ಅವರು ತುಂಬಾ ದಿನಗಳವರೆಗೆ ನಗರದಿಂದ ದೂರ ಹೋಗಬೇಕಾಗುತ್ತದೆ. ಜೆಸ್ಸಿಕಾ, ಯಾರೊಬ್ಬರ ತೂಕ ಹಾಗೂ ಎತ್ತರವನ್ನು ಗೇಲಿ ಮಾಡುವುದು ತಪ್ಪು ಎನ್ನುತ್ತಾರೆ.

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

    ಪತಿ ಹಂಟರ್ ತುಂಬಾ ರೋಮ್ಯಾಂಟಿಕ್ ಸ್ವಭಾವ ಹೊಂದಿದ್ದಾರೆ- ಜೆಸ್ಸಿಕಾ

    ಜೆಸ್ಸಿಕಾ ಪ್ರಕಾರ, ಪತಿ ಹಂಟರ್, ತುಂಬಾ ರೋಮ್ಯಾಂಟಿಕ್. ತಾವು ಸಾಕಷ್ಟು ಸಂತೋಷ ಮತ್ತು ಎಂಜಾಯ್ ಮಾಡುವುದಾಗಿ ಜೆಸ್ಸಿಕಾ ಹೇಳಿದ್ದಾರೆ. ಪ್ರಣಯದ ವಿಷಯದಲ್ಲಿ ನಾವಿಬ್ಬರೂ ತೃಪ್ತಿ ಹೊಂದಿದ್ದೇವೆ. ಫೆಬ್ರವರಿ 2022 ರಲ್ಲಿ ಮದುವೆಯಾಗಿದ್ದೇವೆ. ನಮ್ಮ ಲೈಫ್ ಸುಂದರವಾಗಿದೆ ಎಂದಿದ್ದಾರೆ.
    Published by:renukadariyannavar
    First published: