Diabetes Problem: ಭಾರತದಲ್ಲಿ ಹೆಚ್ಚಾಗಲಿದೆಯಂತೆ ಮಧುಮೇಹ ರೋಗಿಗಳ ಸಂಖ್ಯೆ, ಮಕ್ಕಳು ಮತ್ತು ಹದಿಹರೆಯದವರಲ್ಲೂ ಕಾಯಿಲೆ ಅಪಾಯ!

ಮಧುಮೇಹ ರೋಗಿಗಳನ್ನು ಹೊಂದಿರುವ ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಭಾರತ ಆಗಿದೆ. ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಸುಮಾರು 150 ಪ್ರತಿಶತದಷ್ಟು ಹೆಚ್ಚಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊರೋನ ವೈರಸ್ (Corona Virus) ಸಾಕಷ್ಟು ಜನರನ್ನು (People) ಬಲಿ ತೆಗೆದುಕೊಂಡಿದೆ. ಹಲವರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೆಲವರಂತೂ ಕೊರೊನಾ ಬಂದು ಹೋದ ನಂತರ ಅನೇಕ ಕಾಯಿಲೆಗೆ (Disease) ತುತ್ತಾಗಿದ್ದಾರೆ. ಈಗ ಮಧುಮೇಹಿಗಳಿಗೆ (Diabetes Patients) ಕೊರೊನಾ ವೈರಸ್ ಸಾಕಷ್ಟು ಮಾರಕವಾಗಿದೆ ಎಂದು ಸಾಬೀತಾಗಿದೆ. SARS-CoV-2 ನಿಂದ ಮಧುಮೇಹ ರೋಗಿಗಳಲ್ಲಿ ಸಾವು ಮತ್ತು ಗಂಭೀರ ಅನಾರೋಗ್ಯದ ಅಪಾಯ ಹೆಚ್ಚಾಗಿದೆ ಎಂದು ಹೇಳಿದೆ. ಈ ಮಧ್ಯೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಟೈಪ್ -1 ಮಧುಮೇಹಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, 2019 ರಲ್ಲಿ ಮಧುಮೇಹದಿಂದ 4 ದಶಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.  

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವರದಿ

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವರದಿಯ ಪ್ರಕಾರ, ಮೂರು ದಶಕಗಳಲ್ಲಿ ಮಧುಮೇಹ ಸಾವು 150% ಹೆಚ್ಚಾಗಿದೆ. ಅಷ್ಟೇ ಅಲ್ಲ, ಮೂತ್ರಪಿಂಡ ಕಾಯಿಲೆ, ಕುರುಡುತನ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಲ್ಬಣಗೊಳ್ಳಲು ಇದು ಕಾರಣವಾಗಿದೆ.

    ಮಧುಮೇಹ ರೋಗಿಗಳನ್ನು ಹೊಂದಿರುವ ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಭಾರತ ಆಗಿದೆ. ಕಳೆದ ಮೂರು ದಶಕಗಳೇ, ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಸುಮಾರು 150 ಪ್ರತಿಶತದಷ್ಟು ಹೆಚ್ಚಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

    ಇದನ್ನೂ ಓದಿ: ರಕ್ತದಲ್ಲಿ ಹೆಚ್ಚಳವಾಗುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಇಲ್ಲಿದೆ ಆಯುರ್ವೇದಿಕ್ ಪರಿಹಾರ

    ಭವಿಷ್ಯದಲ್ಲಿ ಡಯಾಬಿಟಿಸ್ ಪ್ರಕರಣಗಳು ಹೆಚ್ಚಾಗುವ ಅಪಾಯ

    ಭವಿಷ್ಯದಲ್ಲಿ ಪ್ರಕರಣಗಳು ಹೆಚ್ಚಾಗುವ ಅಪಾಯ ದೇಶದಲ್ಲಿ ಕಂಡು ಬಂದಿದೆ. ಅಲ್ಲದೇ ಶೀಘ್ರವಾಗಿ ಹೆಚ್ಚುತ್ತಿರುವ ಪ್ರಿ-ಡಯಾಬಿಟಿಸ್ ಪ್ರಕರಣಗಳು ಭವಿಷ್ಯದಲ್ಲಿ ಡಯಾಬಿಟಿಸ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸೂಚನೆ ನೀಡಿದೆ.

    ಭಾರತದಲ್ಲಿ ಮಧುಮೇಹವು ಅಧಿಕ ಆದಾಯ ಗಳಿಕೆಯ ಜನರು, ಮಧ್ಯಮ ಆದಾಯ ಗಳಿಕೆಯ ಜನರು ಮತ್ತು ವಂಚಿತ ವರ್ಗಗಳಿಗೆ ತಲುಪಿದೆ. ಮುನ್ನೆಲೆಗೆ ಬರುತ್ತಿರುವ ಟೈಪ್ 2 ಡಯಾಬಿಟಿಸ್ ಪ್ರಕರಣಗಳಲ್ಲಿ ವಯಸ್ಸಿನಲ್ಲಿ ಪ್ರಗತಿಯ ಕೊರತೆ ಇದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳ 25-34 ವರ್ಷ ವಯಸ್ಸಿನ ಜನರನ್ನು ಒಳಗೊಂಡಿದ್ದು, ಕಳವಳಕಾರಿ ಸಂಗತಿಯಾಗಿದೆ.

    ವಿಶ್ವದಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ಬಲಿ

    ಮಕ್ಕಳು ಮತ್ತು ಹದಿಹರೆಯದವರು ಸೇರಿದಂತೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ರೋಗಿಗಳು ಟೈಪ್-1 ಡಯಾಬಿಟಿಸ್‌ಗೆ ಬಲಿಯಾಗಿದ್ದಾರೆ. ವಿಶ್ವದಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ಟೈಪ್-1 ಮಧುಮೇಹಕ್ಕೆ ಬಲಿಯಾಗಿದ್ದಾರೆ.

    ಭಾರತದಲ್ಲಿ ಅತಿ ಹೆಚ್ಚು ಟೈಪ್ 1 ಮಧುಮೇಹದ ಪ್ರಕರಣಗಳಿವೆ ಎಂದು 'ಇಂಟರ್ ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್'ನ ಇತ್ತೀಚಿನ ಅಂದಾಜಿನ ಪ್ರಕಾರ ಮಾಹಿತಿ ನೀಡಿದೆ. ಟೈಪ್ 1 ಮಧುಮೇಹ ಹೊಂದಿರುವ ರೋಗಿಗಳಿಗೆ ಬದುಕಲು ಬೆಂಬಲ, ಇನ್ಸುಲಿನ್ ಬಳಕೆ ಮತ್ತು ಚಿಕಿತ್ಸೆಗಳ ಅಗತ್ಯವಿದೆ.

    ಕಾಯಿಲೆಯಿಂದಾಗಿ, ಅವರು ಕಳಂಕ, ನಿರ್ಬಂಧ ಮತ್ತು ಅನೇಕ ರೀತಿಯ ತೊಡಕು ಹೊಂದಿದ್ದಾರೆ. ಮಧುಮೇಹದ ಎಲ್ಲಾ ಅಂಶಗಳ ಮಧುಮೇಹ ನಿರ್ವಹಣೆ ಪ್ರಗತಿ, ವಿಶೇಷವಾಗಿ ಗ್ಲೈಸೆಮಿಕ್ ನಿಯಂತ್ರಣ ಈಗ ಟೈಪ್ 1 ಮಧುಮೇಹ ನಿರ್ವಹಣೆಯ ಮಾನದಂಡವಾಗಿದೆ.

    ಮಧುಮೇಹದ ಆರೈಕೆಗಾಗಿ ತಂತ್ರಜ್ಞಾನದಲ್ಲಿ ದೊಡ್ಡ ಪ್ರಗತಿ

    ಮಧುಮೇಹದ ಆರೈಕೆಗಾಗಿ ತಂತ್ರಜ್ಞಾನದಲ್ಲಿ ದೊಡ್ಡ ಪ್ರಗತಿ ಕಂಡು ಬಂದಿದೆ. ಇದು ಹೊಸ ಇನ್ಸುಲಿನ್ ಅನಲಾಗ್‌ಗಳು, ಪಂಪ್‌ಗಳು, ಸ್ವಯಂಚಾಲಿತ ಇನ್ಸುಲಿನ್ ವಿತರಣಾ ವ್ಯವಸ್ಥೆ ಮತ್ತು ಸಂವೇದಕಗಳಂತಹ ತಂತ್ರಜ್ಞಾನ ಹೊಂದಿದೆ. ಇದರ ಜೊತೆಗೆ, ಮಧುಮೇಹ ನಿರ್ವಹಣೆಗೆ ಬಹುಶಿಸ್ತೀಯ ಪೂರೈಕೆದಾರರ ತಂಡದ ಅಗತ್ಯವಿದೆ.

    ಭಾರತದಲ್ಲಿ ಮಧುಮೇಹ ಆರೈಕೆಯ ಸ್ಥಿತಿ ಹೇಗಿದೆ?

    ಭಾರತದಲ್ಲಿ ಮಧುಮೇಹದ ಆರೈಕೆಯ ಗುಣಮಟ್ಟವು ಅನೇಕ ಅಂಶಗಳನ್ನು ಅವಲಂಬಿಸಿದೆ. ಸೇವೆಗಳ ಲಭ್ಯತೆ, ಔಷಧಿ ಲಭ್ಯತೆ, ಆರೈಕೆ ಮಾಡುವವರ ವರ್ತನೆ ಮತ್ತು ನಡವಳಿಕೆ, ಮಧುಮೇಹದ ಜ್ಞಾನ ಮತ್ತು ತಜ್ಞರ ಕೊರತೆ, ಪ್ರಮಾಣಿತ ಪ್ರಯೋಗಾಲಯಗಳು ಮತ್ತು ಚಿಕಿತ್ಸಾ ಮಾರ್ಗಸೂಚಿಗಳ ಕೊರತೆ ಇದೆ.

    ಟೈಪ್ 1 ಮಧುಮೇಹ ನಿರ್ವಹಣೆಗೆ ಹಲವು ಅಂತಾರಾಷ್ಟ್ರೀಯ ಮಾರ್ಗಸೂಚಿಗಳಿವೆ. ICMR ಟೈಪ್-1 ಮಧುಮೇಹ ಮಾರ್ಗಸೂಚಿ ಪ್ರಕಾರ, ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರಲ್ಲಿ ಮಧುಮೇಹದ ಆರೈಕೆಯ ಕುರಿತು ಸಲಹೆಯನ್ನು ಒದಗಿಸುವ ಸಮಗ್ರ ದಾಖಲೆಯಾಗಿದೆ.

    ಇದನ್ನೂ ಓದಿ: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ

    ಟೈಪ್ 1 ಡಯಾಬಿಟಿಸ್ ಕೇರ್‌ನಲ್ಲಿ ಮಾಡಿದ ಪ್ರಗತಿಯ ಬಗ್ಗೆ ವೈದ್ಯರು ಮತ್ತು ಮಧುಮೇಹ ಆರೈಕೆ ಪೂರೈಕೆದಾರರಿಗೆ ತಿಳಿಸಲು ICMR ಕಾಲಕಾಲಕ್ಕೆ ಈ ಡಾಕ್ಯುಮೆಂಟ್ ನವೀಕರಣ ಮಾಡುತ್ತದೆ.
    Published by:renukadariyannavar
    First published: