Cholesterol Problem: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣಗಳೇನು, ಪರಿಹಾರ ಹೇಗೆ?

ಕೊಲೆಸ್ಟ್ರಾಲ್ ಯಕೃತ್ತಿನಿಂದ ಉತ್ಪತ್ತಿಯಾಗುವ ಮೇಣದಂಥ ವಸ್ತುವಾಗಿದೆ. ಇದು ಮಾನವನ ಜೀವಕೋಶ ಪೊರೆ ಸೇರಿದಂತೆ ದೇಹದ ಪ್ರತಿಯೊಂದು ಭಾಗದಲ್ಲೂ ಕಂಡು ಬರುತ್ತದೆ. ಇದು ದೇಹದೊಳಗಿನ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಳಪೆ ಆಹಾರ (Bad Food) ಮತ್ತು ಹದಗೆಟ್ಟ ಜೀವನಶೈಲಿಯಿಂದಾಗಿ (Bad Lifestyle) ಇಂದಿನ ದಿನಗಳಲ್ಲಿ ಹದಿಹರೆಯದಲ್ಲೇ (Young) ಜನರು (People) ಅನೇಕ ಕಾಯಿಲೆಗಳಿಗೆ (Disease) ತುತ್ತಾಗುತ್ತಿದ್ದಾರೆ. ಅನೇಕ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲಿಯೇ ಜನರನ್ನು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿವೆ. ವೃದ್ಧಾಪ್ಯದಲ್ಲಿ ಬರುವ ರೋಗಗಳು ಈಗ ಚಿಕ್ಕ ವಯಸ್ಸಿನಲ್ಲಿಯೇ ಜನರನ್ನು ಆಕ್ರಮಿಸಿಕೊಳ್ಳುತ್ತಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಜನರನ್ನು ಅನಾರೋಗ್ಯಕ್ಕೆ ಈಡು ಮಾಡಿವೆ. ಅದರಲ್ಲಿ ಒಂದು ಕಾಯಿಲೆ ಅಂದ್ರೆ ಅಧಿಕ ಕೊಲೆಸ್ಟ್ರಾಲ್. ಇದರ ಬಗ್ಗೆ ನೀವು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲೇಬೇಕು. ಯಾಕೆಂದರೆ ಅಧಿಕ ಕೊಲೆಸ್ಟ್ರಾಲ್ ಹೆಚ್ಚಿನ ಜನರನ್ನು ಚಿಂತೆಗೀಡು ಮಾಡಿರುವ ಕಾಯಿಲೆಯಾಗಿದೆ.

    ಮಾನವನ ಜೀವಕೋಶ ಪೊರೆ ಹಾಗೂ ದೇಹದ ಪ್ರತಿ ಭಾಗದಲ್ಲೂ ಇರುತ್ತೆ ಕೊಲೆಸ್ಟ್ರಾಲ್

    ಕೊಲೆಸ್ಟ್ರಾಲ್ ಯಕೃತ್ತಿನಿಂದ ಉತ್ಪತ್ತಿಯಾಗುವ ಮೇಣದಂಥ ವಸ್ತುವಾಗಿದೆ. ಇದು ಮಾನವನ ಜೀವಕೋಶ ಪೊರೆ ಸೇರಿದಂತೆ ದೇಹದ ಪ್ರತಿಯೊಂದು ಭಾಗದಲ್ಲೂ ಕಂಡು ಬರುತ್ತದೆ. ಕೊಲೆಸ್ಟ್ರಾಲ್ ದೇಹದಲ್ಲಿ ವಿಟಮಿನ್ ಡಿ, ಹಾರ್ಮೋನುಗಳು ಮತ್ತು ಪಿತ್ತರಸ ಉತ್ಪಾದಿಸುತ್ತದೆ. ಇದು ದೇಹದೊಳಗಿನ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

    ಮೊಟ್ಟೆ, ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳಂತಹ ಮಾಂಸಾಹಾರ ಆಹಾರದ ಮೂಲಕವೂ ದೇಹದಲ್ಲಿ ಕೊಲೆಸ್ಟ್ರಾಲ್ ತಲುಪುತ್ತದೆ. ಮನುಷ್ಯನ ದೇಹಕ್ಕೆ ಜೀವಕೋಶಗಳು ಮತ್ತು ಹಾರ್ಮೋನುಗಳನ್ನು ನಿರ್ಮಿಸಲು ಕೊಲೆಸ್ಟ್ರಾಲ್ ಅತ್ಯಗತ್ಯವಾಗಿದೆ. ಕೊಲೆಸ್ಟ್ರಾಲ್‌ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ.

    ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು

    ಕೆಟ್ಟ ಕೊಲೆಸ್ಟ್ರಾಲ್ ನಿಂದ ಪಾರ್ಕಿನ್ಸನ್ ಕಾಯಿಲೆಯ ಅಪಾಯ

    ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ದೇಹದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಫಿನ್‌ಲ್ಯಾಂಡ್‌ನ ರಾಜಧಾನಿ ಹೆಲ್ಸಿಂಕಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಪ್ರಮುಖ ಸಂಶೋಧಕ ಡಾ. ಗ್ಯಾಂಗ್ ಹು ಹೇಳುವ ಪ್ರಕಾರ, ಅಧಿಕ ಕೊಲೆಸ್ಟ್ರಾಲ್ ಪಾರ್ಕಿನ್ಸನ್ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ.

    ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ

    ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ. ಅಧಿಕ ತೂಕ ಹೊಂದಿರುವ ಅಥವಾ ಹೆಚ್ಚಿನ ಪ್ರಮಾಣದ ದೇಹದ ಕೊಬ್ಬನ್ನು ಹೊಂದಿರುವ ಜನರು ಕೊಲೆಸ್ಟ್ರಾಲ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ.

    ಉಸಿರಾಟ, ಕಾಲುಗಳಲ್ಲಿ ನೋವು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ

    ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ, ಅದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಡೆಯುವಾಗ ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಮತ್ತು ಕಾಲುಗಳಲ್ಲಿ ನೋವು ಇರುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಪರೀಕ್ಷೆಯ ಮೂಲಕ ಕಂಡು ಹಿಡಿಯಬಹುದು.

    ಕೆಟ್ಟ ಕೊಲೆಸ್ಟ್ರಾಲ್‌ ನಿಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದರೆ ಅದರಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಕೆಲವು ವಿಶೇಷ ಒಣ ಹಣ್ಣುಗಳನ್ನು ಸೇವಿಸಿ. ಇದು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಕಾರಿ.

    ವಾಲ್‌ನಟ್ಸ್

    ನೀವು ಕೊಲೆಸ್ಟ್ರಾಲ್ ನಿಯಂತ್ರಿಸಲು ಬಯಸಿದರೆ, ಆಹಾರದಲ್ಲಿ ಒಂದು ಹಿಡಿ ವಾಲ್‌ನಟ್‌ಗಳನ್ನು ಸೇವಿಸಿ. ವಾಲ್ ನಟ್ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಜ್ಞಾಪಕ ಶಕ್ತಿಯು ಉತ್ತಮವಾಗಿ ಉಳಿಯುತ್ತದೆ. ವಾಲ್್ನಟ್ಸ್ ಆರೋಗ್ಯಕರ ಕೊಬ್ಬನ್ನು ಹೊಂದಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್್ನಟ್ಸ್ ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಕಾರಿ.

    ಬಾದಾಮಿ

    ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿನ್ನಿ. ಬಾದಾಮಿ ಸೇವನೆಯು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಮತ್ತು ದೇಹವನ್ನು ಬಲವಾಗಿರಿಸುತ್ತದೆ. ಬಾದಾಮಿ ಚಯಾಪಚಯ ಹೆಚ್ಚಿಸುತ್ತದೆ ಮತ್ತು ತೂಕ ನಿಯಂತ್ರಿಸುತ್ತದೆ.

    ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!

    ಪಿಸ್ತಾ

    ಪಿಸ್ತಾ ಒಂದು ಉತ್ತಮವಾದ ಒಣ ಹಣ್ಣು. ಇದು ತಿನ್ನಲು ರುಚಿ. ಜೊತೆಗೆ ದೇಹವನ್ನು ಆರೋಗ್ಯವಾಗಿಡುತ್ತದೆ. ಆಂಟಿಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿರುವ ಪಿಸ್ತಾ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಪ್ರತಿದಿನ ತಿನ್ನುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
    Published by:renukadariyannavar
    First published: