Health Tips: ಮೊಸರನ್ನು ಯಾವ ಸಮಯದಲ್ಲಿ ಹೇಗೆ ತಿನ್ಬೇಕು? ಆಯುರ್ವೇದ ತಜ್ಞರು ಏನ್ ಹೇಳ್ತಾರೆ?

ರಾತ್ರಿಯಲ್ಲಿ ಮೊಸರು ತಿನ್ನಬಾರದು. ಮೊಸರು ವಯಸ್ಸಾದ ವಿರೋಧಿ ಅಂಶವಿದೆ. ರಾತ್ರಿ ಮೊಸರು ತಿಂದರೆ ದೇಹದಲ್ಲಿ ಹೆಚ್ಚಿನ ಲೋಳೆ ಉತ್ಪತ್ತಿಯಾಗುತ್ತದೆ. ಇದು ಎದೆಯ ಸೋಂಕು ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಾಮಾನ್ಯವಾಗಿ ಊಟದಲ್ಲಿ (Food), ಪಾನಿ ಪುರಿ ಹಾಗೂ ಪಲ್ಯದ ಜೊತೆಗೆ ಅನ್ನದ (Rice) ಜೊತೆಗೆ ಹಾಗೂ ಊಟದ ನಂತರ ಮೊಸರು (Curd) ಸೇವಿಸುವ ರೂಢಿ ಬಹುತೇಕರಲ್ಲಿ ಇದೆ. ಮೊಸರನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ (Like) ಪಟ್ಟು ತಿನ್ನುತ್ತಾರೆ. ಮೊಸರು ಫ್ರೆಶ್ (Fresh) ಆಗಿದ್ದರೆ ಅಥವಾ ಮನೆಯಲ್ಲಿ ಆಕಳು ಅಥವಾ ಎಮ್ಮೆಯಿಂದ ಕರೆದ ಹಾಲನ್ನು ಕಾಯಿಸಿ ಹೆಪ್ಪು ಹಾಕಿ ಮೊಸರು ಮಾಡಿದರೆ ಅದು ರುಚಿ ಹಾಗೂ ಹೆಲ್ದಿಯಾಗಿ ಇರುತ್ತದೆ. ಹೀಗೆ ಮನೆಯಲ್ಲೇ ಆಕಳ ಹಾಲಿನಿಂದ ಮಾಡಿದ ಮೊಸರು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅದಾಗ್ಯೂ ಕೆಲವರಿಗೆ ಮೊಸರು ಹಾಗೂ ಡೈರಿ ಉತ್ಪನ್ನಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ.

  ಮೊಸರು ಮತ್ತು ಆರೋಗ್ಯ

  ಅವರವರ ದೇಹ ಹಾಗೂ ಆರೋಗ್ಯದ ಮೇಲೆ ಇದು ಅನ್ವಯಿಸುತ್ತದೆ. ಆಹಾರದಲ್ಲಿ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಮೊಸರು ರೈತಾ ಪ್ರತಿದಿನ ತಯಾರಿಸಿ ತಿನ್ನುತ್ತಾರೆ. ಕೆಲವರು ಬೆಳಗ್ಗಿನ ಬ್ರೆಕ್ ಫಾಸ್ಟ್ ಗೂ ಸಹ ಮೊಸರು ಬಳಸುತ್ತಾರೆ. ಮೊಸರು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ ಮೊಸರನ್ನು ಸೂಪರ್‌ಫುಡ್ ಎಂದು ಕರೆಯುತ್ತಾರೆ.

  ಮೊಸರು ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ

  ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಬಿ-12, ಲಿನೋಲಿಕ್ ಆಮ್ಲ ಮತ್ತು ಇತರ ಪ್ರಮುಖ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದ್ದು, ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಎಲ್ಲ ಸೀಸನ್ ನಲ್ಲೂ ಮೊಸರು ಸಿಗುತ್ತದೆ. ಆದರೆ ಬೇಸಿಗೆಯಲ್ಲಿ ಮೊಸರಿನ ಬಳಕೆ ಹೆಚ್ಚಿರುತ್ತದೆ. ಬೆಳಗ್ಗೆ ಮತ್ತು ಸಂಜೆ ಲಸ್ಸಿ ಸೇವನೆ ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ನೀಡುತ್ತದೆ.

  ಇದನ್ನೂ ಓದಿ: ನೀವೆಷ್ಟೇ ಔಷಧ ಸೇವಿಸಿದರೂ ಅಧಿಕ ರಕ್ತದೊತ್ತಡ ನಿವಾರಣೆ ಆಗದಿರುವುದಕ್ಕೆ ಈ ಅಂಶಗಳು ಕಾರಣವಾಗಿರಬಹುದು!

  ಆಯುರ್ವೇದದಲ್ಲಿ ಮೊಸರು ತಿನ್ನುವ ಆರೋಗ್ಯಕರ ವಿಧಾನ ಮತ್ತು ಸಮಯ ಹೀಗಿದೆ

  ಮೊಸರನ್ನು ಕೇವಲ ಊಟಕ್ಕೆ ಮಾತ್ರವಲ್ಲದೇ ಸುಂದರ ತ್ವಚೆ, ಹೊಳೆಯುವ ಮತ್ತು ತಲೆಹೊಟ್ಟು ಮುಕ್ತ ಕೂದಲಿಗೆ ಮನೆಮದ್ದಾಗಿ ಬಳಸುತ್ತಾರೆ. ಮೊಸರಿನ ಜೊತೆ ಯಾವ ಪದಾರ್ಥದ ಜೊತೆಗೆ ತಿನ್ನುವುದು ಸೂಕ್ತ. ಆಯುರ್ವೇದದಲ್ಲಿ ಮೊಸರು ತಿನ್ನುವ ಕೆಲವು ಆರೋಗ್ಯಕರ ವಿಧಾನ ಮತ್ತು ಸಮಯದ ಬಗ್ಗೆ ಹೇಳಲಾಗಿದೆ. ಅದನ್ನು ಇಲ್ಲಿ ತಿಳಿಯೋಣ.

  ಆಯುರ್ವೇದ ವೈದ್ಯೆ ಅಲ್ಕಾ ವಿಜಯನ್ ಪ್ರಕಾರ, ಮೊಸರು ಅನ್ನವನ್ನು ಪ್ರತಿದಿನ ತಿನ್ನಬಾರದು. ನಾಲ್ಕು ದಿನಕ್ಕೊಮ್ಮೆ ಇದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಯಾವುದೇ ಕರುಳಿನ ಸ್ನೇಹಿ ಪ್ರೋಬಯಾಟಿಕ್ ಆಹಾರ ಸರಿಯಾದ ರೀತಿಯಲ್ಲಿ, ಸಮಯ ಮತ್ತು ಪ್ರಮಾಣದಲ್ಲಿ ಸೇವಿಸದಿದ್ದರೆ ಹಾನಿಕಾರಕ.

  ನಾವು ರಾತ್ರಿ ಮೊಸರು ತಿನ್ನಬೇಕೇ?

  ವೈದ್ಯೆ ಅಲ್ಕಾ ಪ್ರಕಾರ, ರಾತ್ರಿಯಲ್ಲಿ ಮೊಸರು ತಿನ್ನಬಾರದು. ಮೊಸರು ವಯಸ್ಸಾದ ವಿರೋಧಿ ಅಂಶವಿದೆ. ರಾತ್ರಿ ಮೊಸರು ತಿಂದರೆ ದೇಹದಲ್ಲಿ ಹೆಚ್ಚಿನ ಲೋಳೆ ಉತ್ಪತ್ತಿಯಾಗುತ್ತದೆ. ಇದು ಎದೆಯ ಸೋಂಕು ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ.

  ಮೊಸರಿನೊಂದಿಗೆ ಚಿಕನ್ ತಿನ್ನುವುದು ತಪ್ಪಿಸಿ

  ನೀವು ನಾನ್ ವೆಜ್ ತಿನ್ನುವವರಾಗಿದ್ದರೆ ಚಿಕನ್ ಅಥವಾ ಚಿಕನ್ ಬಿರಿಯಾನಿ ಜೊತೆಗೆ ಮೊಸರು ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಇದು ಸೋರಿಯಾಸಿಸ್, ಸಂಧಿವಾತ ಮತ್ತು ಹೀಟ್ ಸಮಸ್ಯೆಗೆ ಕಾರಣವಾಗುತ್ತದೆ.

  ಹಾಲಿನೊಂದಿಗೆ ಮೊಸರು ಸೇವನೆ ಬೇಡ

  ಮೊಸರನ್ನು ಹಾಲಿನೊಂದಿಗೆ ಸೇವಿಸಬೇಡಿ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ. ಕೀಲು ನೋವು ಮತ್ತು ಗಾಯಕ್ಕೆ ಕಾರಣವಾಗುತ್ತದೆ.

  ಮೊಸರು ಮತ್ತು ಹಣ್ಣಿನ ಸ್ಮೂಥಿ

  ಮೊಸರು ಮತ್ತು ಹಣ್ಣಿನ ಸ್ಮೂಥಿ ಒಟ್ಟಿಗೆ ತಿನ್ನಬೇಡಿ. ಇದು ನಿಮ್ಮ ಮುಖದ ಮೇಲೆ ಫ್ಲಾಕಿ ಅಲ್ಸರ್ ಜೊತೆಗೆ ಎದೆಯ ಸೋಂಕಿಗೆ ಕಾರಣವಾಗಬಹುದು.

  ಪ್ರತಿದಿನ ಮೊಸರು ಸೇವನೆ ಎಷ್ಟು ಸರಿ?

  ಆಯುರ್ವೇದ ತಜ್ಞರ ಪ್ರಕಾರ, ಪ್ರತಿದಿನ ಮೊಸರು ಸೇವನೆ ಆರೋಗ್ಯಕ್ಕೆ ಪ್ರಯೋಜನ ನೀಡಲ್ಲ. ಇದು ಭಾರ ಮತ್ತು ಹುದುಗುತ್ತದೆ. ಲ್ಯಾಕ್ಟೋಸ್‌ಗೆ ಅಲರ್ಜಿ ಇರುವವರು ಪ್ರತಿದಿನ ಮೊಸರು ಸೇವಿಸಬೇಡಿ.

  ಇದನ್ನೂ ಓದಿ: ಕಬ್ಬಿನ ಹಾಲು ಕುಡಿದ್ರೆ ಆರೋಗ್ಯದ ಮೇಲೆ ಯಾವೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತೆ?

  ಪ್ರತಿದಿನ ಮೊಸರು ಸೇವಿಸುವುದು ಹೇಗೆ?

  ಆಯುರ್ವೇದ ತಜ್ಞರ ಪ್ರಕಾರ, ಉತ್ತಮ ಬ್ಯಾಕ್ಟೀರಿಯಾ ಹೊಂದಿದೆ. ಹಾಗಾಗಿ ಮೊಸರನ್ನು ಮಜ್ಜಿಗೆಯ ರೂಪದಲ್ಲಿ ಸೇವನೆ ಮಾಡಿ. ಇದು ಜೀರ್ಣಕ್ರಿಯೆಗೆ ಸಹಕಾರಿ.
  Published by:renukadariyannavar
  First published: