Healthy Relationship: ಆರೋಗ್ಯಕರ ಸಂಬಂಧದಲ್ಲಿ ಎಂದಿಗೂ ಈ ವಿಷಯಗಳಲ್ಲಿ ಮಾತ್ರ ರಾಜಿ ಮಾಡ್ಕೋಬೇಡಿ

ಮದುವೆಯಾದ ನಂತರ ಗಂಡನ ಸಲುವಾಗಿ ತನ್ನ ಇಷ್ಟ ಕಷ್ಟಗಳನ್ನೆಲ್ಲಾ ಗಂಟುಮೂಟೆ ಕಟ್ಟಿ ಮನೆಯ ಕೋಣೆಯ ಆಟ್ಟದ ಮೇಲೇರಿಸಿದೆ ಎಂದು ಹೇಳುವ ಮಹಿಳೆಯರನ್ನು ನಾವು ನೋಡಿರುತ್ತೇವೆ. ಹಾಗೆಯೇ ಮದುವೆಯಾಗಿ ತನ್ನ ಹೆಂಡತಿಯೇ ಸರ್ವಸ್ವ ಅಂತ ತನ್ನ ಹೆತ್ತವರನ್ನು ಬಿಟ್ಟು ಹೆಂಡತಿಯ ಮನೆಯಲ್ಲಿ ಬಂದಿರುವ ಗಂಡನ ಕಷ್ಟ ಬೇರೆಯದ್ದೆ ಆಗಿರುತ್ತದೆ. ಒಟ್ಟಿನಲ್ಲಿ ಸಂಬಂಧದಲ್ಲಿ ಈ ರಾಜಿ ಆಗುವುದು ಇದೆಯಲ್ಲಾ ಅದು ಸಂಬಂಧವನ್ನು ಹಾಳು ಮಾಡಬಹುದು ಎಚ್ಚರವಿರಲಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಪ್ರೀತಿ (Love) ಮತ್ತು ಮದುವೆಯಲ್ಲಿ (Marriage) ಯಾರಾದರೊಬ್ಬರು ಸ್ವಲ್ಪ ತಾಳ್ಮೆಯಿಂದ ಇರಬೇಕು ಮತ್ತು ಕೆಲವೊಂದು ವಿಷಯಗಳಲ್ಲಿ ಯಾರಾದರೊಬ್ಬರು ರಾಜಿ ಮಾಡಿಕೊಳ್ಳಬೇಕು. ಆದರೆ ಈ ರಾಜಿ (Compromise) ಮಾಡಿಕೊಳ್ಳುವುದು ಬರೀ ಒಬ್ಬರೇ ಆದಲ್ಲಿ ಸಂಬಂಧ ಆರೋಗ್ಯಕರವಾಗಿ ಉಳಿಯುವುದು ಸ್ವಲ್ಪ ಕಷ್ಟವಾಗುತ್ತದೆ. ಹೌದು.. ಮದುವೆಯಾದ ನಂತರ ಗಂಡನ (Husband) ಸಲುವಾಗಿ ತನ್ನ ಇಷ್ಟ ಕಷ್ಟಗಳನ್ನೆಲ್ಲಾ ಗಂಟುಮೂಟೆ ಕಟ್ಟಿ ಮನೆಯ ಕೋಣೆಯ ಆಟ್ಟದ ಮೇಲೇರಿಸಿದೆ ಎಂದು ಹೇಳುವ ಮಹಿಳೆಯರನ್ನು(Women's) ನಾವು ನೋಡಿರುತ್ತೇವೆ. ಹಾಗೆಯೇ ಮದುವೆಯಾಗಿ ತನ್ನ ಹೆಂಡತಿಯೇ ಸರ್ವಸ್ವ ಅಂತ ತನ್ನ ಹೆತ್ತವರನ್ನು ಬಿಟ್ಟು ಹೆಂಡತಿಯ ಮನೆಯಲ್ಲಿ ಬಂದಿರುವ ಗಂಡನ ಕಷ್ಟ ಬೇರೆಯದ್ದೆ ಆಗಿರುತ್ತದೆ. ಒಟ್ಟಿನಲ್ಲಿ ಸಂಬಂಧದಲ್ಲಿ (Relationship) ಈ ರಾಜಿ ಆಗುವುದು ಇದೆಯಲ್ಲಾ ಅದು ಸಂಬಂಧವನ್ನು ಹಾಳು ಮಾಡಬಹುದು ಎಚ್ಚರವಿರಲಿ.

ಹೊಂದಾಣಿಕೆಗಳು ಮತ್ತು ರಾಜಿಗಳು ಯಾವ ಸಮಯದಲ್ಲಿ ಒಳ್ಳೆಯದು 
'ಇಂಡಿಯನ್ ಮ್ಯಾಚ್ ಮೇಕಿಂಗ್' ನ ಸಿಮಾ ತಪಾರಿಯಾ ಹೇಳುವಂತೆ, "ಹೊಂದಾಣಿಕೆಗಳು ಮತ್ತು ರಾಜಿಗಳು ಒಳ್ಳೆಯದೇ, ಆದರೆ ಯಾವಾಗಲೂ ಅಲ್ಲ ಮತ್ತು ಈ ರಾಜಿ ಮಾಡಿಕೊಳ್ಳುವ ಬಗ್ಗೆ ಇತಿ ಮಿತಿಗಳನ್ನು ಹೊಂದಿರಬೇಕು. ಒಬ್ಬ ವ್ಯಕ್ತಿಯನ್ನು ತೃಪ್ತಿ ಪಡಿಸುವ ಪ್ರಯತ್ನದಲ್ಲಿ ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡುವುದು ಸಮಂಜಸವಲ್ಲ." ನಾವು ರಾಜಿ ಮಾಡಿಕೊಂಡರೆ ಅಥವಾ ರಾಜಿ ಮಾಡಿಕೊಳ್ಳುವಂತೆ ಒಬ್ಬ ವ್ಯಕ್ತಿಯನ್ನು ಬಲವಂತಪಡಿಸಿದರೆ ಆ ಸಂಬಂಧವು ಸುಧಾರಿಸುತ್ತದೆಯೇ ಅಥವಾ ಹದಗೆಡುತ್ತದೆಯೇ ಎಂಬ ಪ್ರಶ್ನೆ ಬಹುತೇಕರ ತಲೆಯಲ್ಲಿ ಓಡಾಡುತ್ತಾ ಇರುತ್ತದೆ ಎಂದು ಹೇಳಬಹುದು.

ಮನೋವೈದ್ಯ ಡಾ.ಸಾರ್ಥಕ್ ಡೇವ್ ಅವರು ನಿಮ್ಮ ಸಂಗಾತಿಯನ್ನು ಸಂಬಂಧದಲ್ಲಿ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವ ಕಾರ್ಯ ಸಾಧ್ಯತೆಯ ಬಗ್ಗೆ ಇನ್‌ಸ್ಟಾಗ್ರಾಮ್ ಮೂಲಕ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ ನೋಡಿ.

ಇದನ್ನೂ ಓದಿ:  Two Marriage: ಒಂದಲ್ಲಾ, ಎರಡು ಮದುವೆ ಆಗಲೇಬೇಕು! ಇಲ್ಲಾ ಅಂದ್ರೆ ಈ ದೇಶದಲ್ಲಿ ಜೈಲಿಗೆ ಹಾಕ್ತಾರೆ

ತಜ್ಞರ ಪ್ರಕಾರ, ನಿಮ್ಮ ಸಂಗಾತಿಗಾಗಿ ನಿಮ್ಮ ಸ್ವಂತ ಬಯಕೆಗಳು ಅಥವಾ ಅಭ್ಯಾಸಗಳ ಬಗ್ಗೆ ನೀವು ರಾಜಿ ಮಾಡಿಕೊಂಡರೆ, ಅವರು ಒಂದಲ್ಲ ಒಂದು ಹಂತದಲ್ಲಿ ನಿಮ್ಮಿಂದ ಇನ್ನೂ ಹೆಚ್ಚು ನಿರೀಕ್ಷೆಗಳನ್ನು ಬೆಳೆಸಿಕೊಳ್ಳುತ್ತಾರೆ. ಆಗ ನೀವು ಅವರ ನಿರೀಕ್ಷೆಗಳನ್ನು ಪೂರೈಸಲು ವಿಫಲರಾದರೆ, ನಿಮ್ಮ ಬಗ್ಗೆ ಅವರಿಗೆ ದ್ವೇಷ ಹುಟ್ಟುವುದು ಖಚಿತ. ಅಂತಿಮವಾಗಿ, ಎಲ್ಲಾ ಕೋಪವು ಒಂದಲ್ಲ ಒಂದು ರೀತಿಯಲ್ಲಿ ಹೊರಗೆ ಬಂದು ವಾದ ವಿವಾದಕ್ಕೆ ಕಾರಣವಾಗುತ್ತದೆ ಮತ್ತು ಇದು ಆರೋಗ್ಯಕರ ಸಂಬಂಧವನ್ನು ಹಾಳು ಮಾಡುತ್ತದೆ.

ಸಂಬಂಧದಲ್ಲಿ ನೀವು ಎಂದಿಗೂ ರಾಜಿ ಮಾಡಿಕೊಳ್ಳಬಾರದ ವಿಷಯಗಳು ಇಲ್ಲಿವೆ ನೋಡಿ:

 • ನಿಮ್ಮ ವೃತ್ತಿಪರ ಗುರಿಗಳು
  ನಿಮ್ಮ ಸಂಬಂಧದಷ್ಟೇ ನಿಮ್ಮ ಗುರಿಗಳು ಮುಖ್ಯ ಎಂದು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕವಾಗಿಡುವುದು ಉತ್ತಮ. ನಿಮ್ಮ ಕನಸುಗಳು ನಿಮ್ಮ ಸಂಗಾತಿಯ ಕನಸುಗಳಷ್ಟೇ ಮುಖ್ಯ. ಆರೋಗ್ಯಕರ ಸಂಬಂಧದಲ್ಲಿ, ನೀವು ಪರಸ್ಪರರ ಪ್ರಯತ್ನಗಳನ್ನು ಬೆಂಬಲಿಸಬೇಕು. ಒಬ್ಬ ಉತ್ತಮ ಸಂಗಾತಿಯು ಯಾವಾಗಲೂ ನಿಮ್ಮ ಮಹತ್ವಾಕಾಂಕ್ಷೆಗಳೊಂದಿಗೆ ನಿಮ್ಮನ್ನು ಬೆಂಬಲಿಸುತ್ತಾನೆ/ಳೆ ಮತ್ತು ನಿಮ್ಮ ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳಲು ನಿಮ್ಮನ್ನು ಕೇಳುವುದಿಲ್ಲ ಎಂದು ತಿಳಿಯಿರಿ. • ನಿಮ್ಮ ಸ್ನೇಹಿತರು ಮತ್ತು ಕುಟುಂಬ
  ಉತ್ತಮ ಸಂಬಂಧದಲ್ಲಿ, ನಿಮ್ಮ ಸಂಗಾತಿ ನಿಮ್ಮ ಸ್ನೇಹವನ್ನು ಉಳಿಸಿಕೊಳ್ಳಲು ಮತ್ತು ನಿಮ್ಮ ಕುಟುಂಬವನ್ನು ನೋಡಿಕೊಳ್ಳಲು ನಿಮ್ಮನ್ನು ಬೆಂಬಲಿಸುತ್ತಾರೆ. ನಿಮ್ಮ ಸಂಗಾತಿಯು ನಿಮ್ಮ ಸ್ನೇಹಿತರು ಅಥವಾ ಕುಟುಂಬವನ್ನು ಇಷ್ಟಪಡದಿದ್ದರೆ ಅಥವಾ ನೀವು ಅವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕೆಂದು ಬಯಸಿದರೆ, ಇದನ್ನು ನೀವು ನಿರ್ಲಕ್ಷಿಸಬಾರದು. ಅವರು ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸುವುದನ್ನು ನೀವು ಕಂಡುಕೊಂಡರೆ, ಅಂತಹ ಸಂಬಂಧದಿಂದ ದೂರವಿರುವುದು ಉತ್ತಮ.


ಇದನ್ನೂ ಓದಿ: Cockroach: ಒಂದು ಜಿರಳೆ ಕೂಡ ಅಪಾಯಕಾರಿ! ಕಾಕ್ರೋಚ್‌ಗಳನ್ನು ಮನೆಯಿಂದ ಹೀಗೆ ದೂರ ಓಡಿಸಿ 

 • ನಿಮ್ಮ ಹವ್ಯಾಸಗಳು ಮತ್ತು ಉತ್ಸಾಹಗಳು
  ನಾವು ಪ್ರತಿಯೊಬ್ಬರೂ ವಿಭಿನ್ನರಾಗಿರುತ್ತೇವೆ ಮತ್ತು ಆದ್ದರಿಂದ ನಮ್ಮ ಇಷ್ಟಗಳು ಸಹ ಬೇರೆ ಬೇರೆ ಆಗಿರುತ್ತವೆ. ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಏನು ಮಾಡಲು ಬಯಸುತ್ತೀರೋ ಅದು ನಿಮ್ಮ ಸಂಗಾತಿ ಬಯಸುವಂತೆಯೇ ಇರುವುದು ಯಾವಾಗಲೂ ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯು ಯಾವುದರಲ್ಲೂ ತೊಡಗಿಲ್ಲ ಎಂದ ಮಾತ್ರಕ್ಕೆ, ನೀವು ಅದನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಅರ್ಥವಲ್ಲ. ನಿಮ್ಮ ಏಕಾಂಗಿ ಸಮಯವನ್ನು ಆನಂದಿಸುವ ಹಕ್ಕು ನೀವಿಬ್ಬರಿಗೂ ಇದೆ. ನಿಮ್ಮ ಆಸಕ್ತಿಗಳನ್ನು ಮುಂದುವರಿಸಲು ಸ್ವಾತಂತ್ರ್ಯವಿರಬೇಕು. ನೀವಿಬ್ಬರೂ ಪರಸ್ಪರರ ಹಿತಾಸಕ್ತಿಗಳನ್ನು ಗೌರವಿಸಿದರೆ, ನೀವು ಬಹುಶಃ ಬಲವಾದ ಸಂಬಂಧವನ್ನು ಹೊಂದುತ್ತೀರಿ. • ನಿಮ್ಮ ವ್ಯಕ್ತಿತ್ವ
  ಇತರರ ಮೇಲೆ ಅತಿಯಾದ ಅವಲಂಬನೆಯು ಕೆಲವೊಮ್ಮೆ ನಿಮ್ಮನ್ನು ಅಸಹಾಯಕ ಮತ್ತು ಅಯೋಗ್ಯ ಭಾವನೆಯನ್ನು ಉಂಟು ಮಾಡಬಹುದು. ಅವರು ನಿಮಗಾಗಿ ನಿರಂತರವಾಗಿ ಇರಬೇಕು ಎಂದು ನಿಮ್ಮ ಸಂಗಾತಿ ಭಾವಿಸಿದರೆ, ಅದು ನಿಮ್ಮ ಸಂಬಂಧವನ್ನು ನಿರ್ಬಂಧಿಸಬಹುದು. ನಿಮ್ಮ ಸ್ವಾತಂತ್ರ್ಯವನ್ನು ನೀವು ಆನಂದಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ವಿವಾಹಿತ ಮಹಿಳೆಯಾಗಿ ಆರ್ಥಿಕವಾಗಿ ಸ್ವತಂತ್ರರಾಗಿರುವುದು ಬಹಳ ಮುಖ್ಯ. ನಿಮ್ಮ ಸಂಬಂಧವನ್ನು ಉಳಿಸಲು ನೀವು ನಿಮ್ಮ ಸ್ವಾತಂತ್ರ್ಯದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿಲ್ಲ.

 • ಕೊನೆಯದಾಗಿ ನೀವು ನೀವಾಗಿರುವುದು ಒಳ್ಳೆಯದು
  ಪ್ರತಿಯೊಬ್ಬ ವ್ಯಕ್ತಿಯೂ ತಾವು ಹೇಗಿರುತ್ತಾರೋ, ಹಾಗೆಯೇ ಇರುವುದು ಒಳ್ಳೆಯದು. ನೀವು ವ್ಯಕ್ತಿಯನ್ನು ರಾಜಿ ಮಾಡಿಕೊಳ್ಳುವಂತೆ ಮಾಡುವ ಮೂಲಕ ಅವರನ್ನು ಬದಲಾಯಿಸಬಹುದು, ಆದರೆ ಅದು ಅವರನ್ನು ಸಂತೋಷವಾಗಿರಲು ಬಿಡುವುದಿಲ್ಲ. ಅವರು ಸಂತೋಷವಿಲ್ಲದೆ, ನೀವು ಸಂತೋಷವಾಗಿರಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ.

Published by:Ashwini Prabhu
First published: