Health Tips: ಇದೊಂದು ಪದಾರ್ಥ ಇದ್ರೆ ಸಾಕು ನಿಮ್ಮ ಜೀರ್ಣಕ್ರಿಯೆ ಸಮಸ್ಯೆ ಮಾಯವಾಗುತ್ತೆ

ಸೋಂಪು ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ನೀವು ಇದನ್ನು ಮಸಾಲೆಯಾಗಿ ಆಹಾರಕ್ಕೆ ಪರಿಮಳವನ್ನು ಸೇರಿಸಲು ಬಳಕೆ ಮಾಡಬಹುದು. ಸೋಂಪು ಇದು ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ. ಮತ್ತು ಇದರ ಪ್ರಯೋಜನಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಕಷ್ಟು ಪದಾರ್ಥಗಳನ್ನು (Ingredients) ನಾವು ಸೇವಿಸುತ್ತೇವೆ. ಅದರಲ್ಲಿ ಊಟ ಮತ್ತು ತಿಂಡಿಯ (Dinner And Breakfast) ನಂತರ ನಾವು ಸೋಂಪು (Fennel) ಸೇವನೆ ಮಾಡುತ್ತೇವೆ. ಭಾರವಾದ ಊಟದ ನಂತರ ಸೋಂಪು ಸೇವನೆ ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತದೆ ಎಂದು ತುಂಬಾ ಜನರು ನಂಬಿದ್ದಾರೆ. ಹೋಟೆಲ್ ಗೆ ಹೋದಾಗ ತಿಂಡಿಯ ನಂತರ ಬಿಲ್ ಕೊಡೋಕೆ ಹೋದಾಗ ಅಲ್ಲಿ ಸೋಂಪು ಇಡಲಾಗಿರುತ್ತದೆ. ವ್ಯಕ್ತಿಯು ಅಲ್ಲಿಂದ ಸೋಂಪು ತಿನ್ನುತ್ತಾ ಹೋಟೆಲ್ ನಿಂದ ಹೊರಗೆ ಹೋಗುತ್ತಾರೆ. ಸೋಂಪು ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ನೀವು ಇದನ್ನು ಮಸಾಲೆಯಾಗಿ ಆಹಾರಕ್ಕೆ ಪರಿಮಳವನ್ನು ಸೇರಿಸಲು ಬಳಕೆ ಮಾಡಬಹುದು.

    ಸೋಂಪು ಇದು ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ. ಮತ್ತು ಇದರ ಪ್ರಯೋಜನಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ. ತುಂಬಾ ಜನರಿಗೆ ಸೋಂಪು ಪ್ರಯೋಜನಗಳ ಬಗ್ಗೆ ಗೊತ್ತಿಲ್ಲ. ಹಾಗಾಗಿ ಮೊದಲು ಫೆನ್ನೆಲ್‌ ನಲ್ಲಿ ಯಾವ ಪೋಷಕಾಂಶಗಳು ಇವೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.

    ಸೋಂಪು ಯಾವ ಪೋಷಕಾಂಶಗಳನ್ನು ಹೊಂದಿದೆ?

    ಸೋಂಪು ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ. ಇದರ ಜೊತೆ ಹಲವು ಔಷಧೀಯ ಗುಣಗಳೂ ಇದರಲ್ಲಿವೆ. ತೂಕ ಕಡಿಮೆ ಮಾಡಿ ಹೃದಯದ ಆರೋಗ್ಯವಾಗಿಡಲು ಇದು ಸಹಾಯ ಮಾಡುತ್ತದೆ. ಈ ಚಿಕ್ಕ ಸೋಂಪು ಬೀಜಗಳು ಚರ್ಮದ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತವೆ.

    ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

    ಪೌಷ್ಟಿಕತಜ್ಞ ಲವನೀತ್ ಬಾತ್ರಾ ಅವರು ಇತ್ತೀಚೆಗೆ Instagram ನಲ್ಲಿ ಸೋಂಪನ್ನು ನಿಯಮಿತವಾಗಿ ಸೇವಿಸುವ ಪ್ರಯೋಜನಗಳನ್ನು ಶೇರ್ ಮಾಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೆಚ್ಚಿನ ಭಾರತೀಯ ಮನೆಗಳಲ್ಲಿ ಊಟದ ನಂತರ ಸ್ವಲ್ಪ ಸೋಂಪು ಸೇವನೆ ಮಾಡುವುದು ಸಾಮಾನ್ಯ ರೂಢಿ ಎಂದು ಬರೆದಿದ್ದಾರೆ.

    ಇದರ ಸೇವನೆ ನಿಮಗೆ ಗೊತ್ತಿಲ್ಲದ ಹಲವು ಪ್ರಯೋಜನಗಳನ್ನು ನೀಡುತ್ತದೆ. ಅಂತಹ ವೇಳೆ ಇಲ್ಲಿ ಸೋಂಪು ಅಗಾಧ ಪ್ರಯೋಜನಗಳ ಬಗ್ಗೆ ಹೇಳಿದ್ದಾರೆ. ನೀವೂ ಅದನ್ನು ನಿಮ್ಮ ದಿನಚರಿಯ ಭಾಗವಾಗಿ ಮಾಡಿಕೊಳ್ಳಬಹುದು.

    ಸೋಂಪು ಜೀರ್ಣಕ್ರಿಯೆ ಸುಧಾರಿಸುತ್ತದೆ

    ಸೋಂಪು ಬೀಜಗಳು ಅನೆಥೋಲ್, ಫೆನ್‌ಕೋನ್ ಮತ್ತು ಎಸ್ಟ್ರಾಗೋಲ್ ಅನ್ನು ಒಳಗೊಂಡಿದೆ. ಇದು ಆಂಟಿಸ್ಪಾಸ್ಮೊಡಿಕ್ ಮತ್ತು ಉರಿಯೂತ ಕ್ರಿಯೆಯಾಗಿ ಕಾರ್ಯ ನಿರ್ವಹಿಸುತ್ತದೆ. ಅಂತಹ ವೇಳೆ ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆ ಉಬ್ಬುವಿಕೆ ವೇಳೆ ಸೋಂಪು ಸೇವನೆಯು ನಿಮಗೆ ಪ್ರಯೋಜನಕಾರಿಯಾಗಿದೆ ಎಂದು ನಂಬಲಾಗಿದೆ.

    ರಕ್ತದೊತ್ತಡ ನಿಯಂತ್ರಿಸಲು ಸೋಂಪು ಸಹಾಯ ಮಾಡುತ್ತದೆ

    ಸೋಂಪ ಚೂಯಿಂಗ್ ಲಾಲಾರಸದಲ್ಲಿ ನೈಟ್ರೈಟ್‌ಗಳ ಪ್ರಮಾಣ ಹೆಚ್ಚಿಸುತ್ತದೆ. ಇದು ರಕ್ತದೊತ್ತಡದ ಮಟ್ಟ ಕಾಪಾಡಿಕೊಳ್ಳಲು ನೈಸರ್ಗಿಕ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ರಕ್ತದೊತ್ತಡ ರೋಗಿಗಳು ನಿಯಮಿತವಾಗಿ ಸೋಂಪು ಅನ್ನು ಸೇವಿಸುವುದು ಪ್ರಯೋಜನಕಾರಿ.

    ಸೋಂಪು ವಿರೋಧಿ ಆಮ್ಲ ಪರಿಣಾಮ ಹೊಂದಿದೆ

    ಕಳಪೆ ಆಹಾರ ಪದ್ಧತಿ, ಜೀವನಶೈಲಿ ಮತ್ತು ಅಧಿಕ ತೂಕದಿಂದ ಅಡಚಣೆಯಾಗುವ ಕರುಳಿನ ಆಮ್ಲೀಯತೆ ತಟಸ್ಥಗೊಳಿಸಲು ಸೋಂಪು ಸಹಾಯ ಮಾಡುತ್ತದೆ. ಅಂತಹ ವೇಳೆ ನೀವು ತಿಂದ ತಕ್ಷಣ ಸೋಂಪು ಅನ್ನು ಜಗಿಯುವುದು ಎದೆಯುರಿ ಮತ್ತು ವಾಂತಿ ಪರಿಣಾಮ ಕಡಿಮೆ ಮಾಡುವ ಪರಿಣಾಮ ನೀಡುತ್ತದೆ.

    ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

    ಸೋಂಪು ಉರಿಯೂತ ಗುಣಲಕ್ಷಣಗಳು ಋಣಾತ್ಮಕ ಪರಿಣಾಮ ಹೋಗಲಾಡಿಸುತ್ತದೆ

    ಸೋಂಪು ದೇಹದ ಸ್ನಾಯುಗಳನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಉರಿಯೂತ, ಉತ್ಕರ್ಷಣ ನಿರೋಧಕ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣ ಹೊಂದಿವೆ. ಸೋಂಪು ಕೆಂಪು ಮತ್ತು ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇದು ರಕ್ತ ಕಣಗಳ ಸ್ವತಂತ್ರ ರಾಡಿಕಲ್ಗಳ ಋಣಾತ್ಮಕ ಪರಿಣಾಮ ಕಡಿಮೆ ಮಾಡಲು ಕೆಲಸ ಮಾಡುತ್ತದೆ.
    Published by:renukadariyannavar
    First published: