Walking And Health: ಪ್ರತಿದಿನ ಒಂದು ಕಿಮೀ ವಾಕಿಂಗ್ ಮಾಡಿ ಸಾಕು, ಜೀರ್ಣಕ್ರಿಯೆ ಸಮಸ್ಯೆ ಬರಲ್ಲ

ನಡಿಗೆಯ ದೊಡ್ಡ ಪ್ರಯೋಜನವೆಂದರೆ ಅದನ್ನು ಎಲ್ಲಾ ವಯಸ್ಸಿನ ಜನರು ಆರಾಮವಾಗಿ ಮಾಡಬಹುದು. ಹೆಚ್ಚಿನ ರೋಗಿಗಳಿಗೆ ವೈದ್ಯರು ದಿನವೂ ವಾಕಿಂಗ್ ಮಾಡುವಂತೆ ಸಲಹೆ ನೀಡುತ್ತಾರೆ. ಇಡೀ ದೇಹವು ಸಕ್ರಿಯವಾಗಲು ವಾಕಿಂಗ್ ಒಂದು ವ್ಯಾಯಾಮ ಎಂದು ನಂಬಲಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

Kannada news, Karnataka news

Kannada news, Karnataka news

  • Share this:
    ಫಿಟ್‌ನೆಸ್‌ (Fitness) ಆಗಿರೋಕೆ ಯೋಗ (Yoga), ವ್ಯಾಯಾಮದ (Exercise) ಜೊತೆಗೆ ಆಹಾರ (Food) ಸೇವನೆಯತ್ತಲೂ ಗಮನ ಹರಿಸಬೇಕು. ವ್ಯಕ್ತಿಯು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡಿದಾಗ ದೇಹಕ್ಕೆ (Body) ಶಕ್ತಿ ಮತ್ತು ವಿಟಮಿನ್ (Vitamin) ಸಿಗುತ್ತದೆ. ಅದೇ ರೀತಿಯಲ್ಲಿ ದಿನವೂ ದೂರದವರೆಗೆ ನಡಿಯುವುದು ನಿಮ್ಮ ಫಿಟ್‌ನೆಸ್ ದಿನಚರಿಯಲ್ಲಿ ಸೇರಿಸುವುದು ಮುಖ್ಯ. ಈಗ ಹೆಚ್ಚಿನವರು ದಿನವೂ ವಾಕಿಂಗ್ ಮಾಡುವುದು ಹೃದಯದ ಜೊತೆಗೆ ಇಡೀ ಆರೋಗ್ಯ ಕಾಪಾಡುತ್ತದೆ. ಈ ವಿಷಯ ಈಗ ಬಹುತೇಕರಿಗೆ ಮನವರಿಕೆ ಆಗಿದೆ. ಹಾಗಾಗಿ ಕೆಲವರು ಬೆಳಗ್ಗೆ ಅಥವಾ ಸಂಜೆ ಸಮಯ ಸಿಕ್ಕಾಗಲೆಲ್ಲ ವಾಕಿಂಗ್ ಮಾಡುತ್ತಾರೆ. ನಡಿಗೆಯಿಂದ ದೇಹವು ಕ್ರಿಯಾಶೀಲ ಆಗಿರುತ್ತದೆ.

    ತೂಕ ನಷ್ಟಕ್ಕೆ ದಿನವೂ ನಡೆಯುವುದು

    ನಡಿಗೆಯ ದೊಡ್ಡ ಪ್ರಯೋಜನವೆಂದರೆ ಅದನ್ನು ಎಲ್ಲಾ ವಯಸ್ಸಿನ ಜನರು ಆರಾಮವಾಗಿ ಮಾಡಬಹುದು. ಹೆಚ್ಚಿನ ರೋಗಿಗಳಿಗೆ ವೈದ್ಯರು ದಿನವೂ ವಾಕಿಂಗ್ ಮಾಡುವಂತೆ ಸಲಹೆ ನೀಡುತ್ತಾರೆ. ಇಡೀ ದೇಹವು ಸಕ್ರಿಯವಾಗಲು ವಾಕಿಂಗ್ ಒಂದು ವ್ಯಾಯಾಮ ಎಂದು ನಂಬಲಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    ಸುಮ್ಮನೆ ನಡೆದಾಡಿದರೆ ಸಾಕೆ?

    ನ್ಯೂಟ್ರಿಷಿಯನ್ ಮತ್ತು ವ್ಯಾಯಾಮ ವಿಜ್ಞಾನ ತಜ್ಞ ರುಜುತಾ ದಿವೇಕರ್ ಅವರು ಹೇಳುವ ಪ್ರಕಾರ, ವಾಕಿಂಗ್ ದೇಹಕ್ಕೆ ಪ್ರಯೋಜನ ನೀಡುತ್ತದೆ ಎಂದು ಹೇಳುತ್ತಾರೆ. ಆದರೆ ವಾಕಿಂಗ್ ಜೊತೆಗೆ ದೇಹದ ಇತರೆ ಅನೇಕ ಚಲನೆಗಳಿಗೆ ಬೆಂಬಲ ಬೇಕಾಗುತ್ತದೆ. ಆಗ ಮಾತ್ರ ತೂಕ ಇಳಿಸುವುದರಲ್ಲಿ ಲಾಭವಿದೆ.

    ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

    ಅಂತಹ ಪೋಸ್ಟ್ ನ್ನು ಶೇರ್ ಮಾಡುತ್ತಾ ಅವರು ವಾಕಿಂಗ್ ಮಾಡುವುದು ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಆದರೆ ನೀವು ಅದರೊಂದಿಗೆ ಇನ್ನೂ ಕೆಲವು ವ್ಯಾಯಾಮ ಮಾಡಿದರೆ ನಿಮ್ಮ ಫಿಟ್ನೆಸ್ ಜರ್ನಿಗೆ ಇದು ಡಬಲ್ ಪ್ರಯೋಜನ ಪಡೆಯಬಹುದು.

    ವಾಕಿಂಗ್‌ ಪ್ರಯೋಜನಗಳು

    ಭಾರತದ ಯೋಗ ವಿಜ್ಞಾನದ ಜೊತೆಗೆ ಪಶ್ಚಿಮದ ವೈದ್ಯಕೀಯ ಪ್ರಪಂಚವೂ ವಾಕಿಂಗ್‌ ನಿಂದ ಅನೇಕ ಪ್ರಯೋಜನ ನೀಡುತ್ತದೆ. ಪ್ರತಿದಿನ ನಿಗದಿತ ಸಮಯದಲ್ಲಿ ನಿಗದಿತ ಅವಧಿಯವರೆಗೆ ನಡೆಯುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ.

    ರಕ್ತ ಪರಿಚಲನೆಯಲ್ಲಿ ಸುಧಾರಣೆ

    ನೀವು ನಿಯಮಿತವಾಗಿ ವಾಕಿಂಗ್ ಮಾಡುತ್ತಿದ್ದರೆ ಅದು ದೇಹದಾದ್ಯಂತ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ರಕ್ತದೊತ್ತಡ ನಿಯಂತ್ರಿಸಲು ಮತ್ತು ಕಾಲಿನ ಸ್ನಾಯುಗಳನ್ನು ಸಂಕುಚಿತಗೊಳಿಸಲು ವಾಕಿಂಗ್ ಉತ್ತಮ ಮಾರ್ಗ.

    ಜೀರ್ಣಾಂಗ ವ್ಯವಸ್ಥೆ ಸರಿಪಡಿಸುತ್ತದೆ

    ನಡಿಗೆಯಿಂದ ಆಹಾರವು ಹೊಟ್ಟೆಯಿಂದ ಸಣ್ಣ ಕರುಳಿಗೆ ಚಲಿಸುವ ಸಮಯವನ್ನು ವೇಗಗೊಳಿಸುತ್ತದೆ ಎಂದು ಸಂಶೋಧನೆಯಿಂದ ಹೇಳಿದೆ. ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ.

    ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ

    ವಾಕಿಂಗ್ ಉತ್ತಮ ನಿದ್ರೆಗೆ ಸಹಕಾರಿ. ನಿತ್ಯವೂ ವಾಕಿಂಗ್ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಉತ್ತಮ ಫಿಟ್‌ ನೆಸ್‌ ಗೆ ವಾಕಿಂಗ್‌ ಜೊತೆಗೆ ಯೋಗ ಮತ್ತು ಸ್ಟ್ರೆಚ್ ತರಬೇತಿ ಮಾಡಿ. ಸುಮ್ಮನೆ ನಡೆದರೆ ಅದು ತೂಕ ಇಳಿಸಲು ಹೆಚ್ಚು ಸಹಾಯ ಮಾಡಲ್ಲ ಎನ್ನುತ್ತಾರೆ ತಜ್ಞೆ ರುಜುತಾ ಹೇಳುತ್ತಾರೆ.

    ನೀವು ನಡೆಯುವಾಗ ನಿಮ್ಮ ಕೈಗಳನ್ನು ಚಲಿಸುತ್ತಿರಿ. ಮತ್ತು ಅದು ತೂಕ ನಷ್ಟಕ್ಕೆ ಸಹಕಾರಿ. ಇದು ಹೆಚ್ಚಿನ ಪ್ರಯೋಜನ ನೀಡಲ್ಲ. ನಡಿಗೆಗೆ ಇನ್ನೂ ಕೆಲವು ವ್ಯಾಯಾಮ ಮಾಡಿದರೆ, ನಡಿಗೆಯ ಜೊತೆಗೆ ಸ್ಟ್ರೆಚಿಂಗ್ ವ್ಯಾಯಾಮ ಮತ್ತು ಯೋಗ ಮಾಡಿದರೆ ಅದರಿಂದ ಹೆಚ್ಚಿನ ಲಾಭ ಸಿಗುತ್ತದೆ.

    ವಾಕಿಂಗ್ ಮತ್ತು ಸ್ಟ್ರೆಚಿಂಗ್ ವ್ಯಾಯಾಮ ಶಕ್ತಿ ನೀಡುತ್ತದೆ

    ನೀವು ವಾಕಿಂಗ್ ಜೊತೆಗೆ ಸ್ಟ್ರೆಚಿಂಗ್ ವ್ಯಾಯಾಮ ಮಾಡಿದರೆ ಇದು ಶಕ್ತಿ ನೀಡುತ್ತದೆ. ದೇಹದ ತ್ರಾಣ ಮತ್ತು ಹಿಗ್ಗಿಸುವ ಸಾಮರ್ಥ್ಯದ ಜೊತೆಗೆ ಸ್ಥಿರತೆ ಸುಧಾರಿಸುತ್ತದೆ. ಆದ್ದರಿಂದ ನಡಿಗೆಯೊಂದಿಗೆ ವ್ಯಾಯಾಮ ಮತ್ತು ಸ್ಟ್ರೆಚಿಂಗ್ ವ್ಯಾಯಾಮ ಒಟ್ಟಿಗೆ ಮಾಡಿ.

    ನಡಿಗೆ ಜೊತೆ ಯೋಗಾಭ್ಯಾಸ ಪ್ರಯೋಜನಗಳು

    ಯೋಗ ಮತ್ತು ಆಸನ ಹಾಕುವುದು ಮಾನಸಿಕ ಆರೋಗ್ಯ ಬಲಪಡಿಸುತ್ತದೆ. ದೈಹಿಕ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಪ್ರಾಣಾಯಾಮ ನಿಮ್ಮ ದೇಹದ ಎಲ್ಲಾ ಭಾಗಗಳಿಗೆ ಅಗತ್ಯವಾದ ಆಮ್ಲಜನಕ ತಲುಪಿಸುತ್ತದೆ. ಆಸನವು ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಜೀವನಶೈಲಿಯ ಕಾಯಿಲೆಗಳಿಂದ ರಕ್ಷಿಸುತ್ತದೆ.

    ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

    ನಡಿಗೆಗೆ ಹೋಗುವ ಮೊದಲು ಅರ್ಧ ಘಂಟೆಯ ಯೋಗ, ನಿಮ್ಮ ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ. ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
    Published by:renukadariyannavar
    First published: