Exercises: ತಪ್ಪಾಗಿ ಕೂತು ನಿಮ್ಮ ಕುತ್ತಿಗೆ ಮತ್ತು ಬೆನ್ನಿನ ಭಂಗಿ ಹಾಳಾಗಿದ್ಯಾ? ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ

ಪೌಷ್ಟಿಕ ತಜ್ಞರಾದ ನಿಧಿ ಎಸ್ ಅವರು ನೀವು ಎಲ್ಲಿಯೇ ಕುಳಿತುಕೊಂಡರೂ ಬೆನ್ನು ಮತ್ತು ಕುತ್ತಿಗೆಯನ್ನು ನೇರವಾಗಿರಿಸಿಕೊಂಡು ಕುಳಿತುಕೊಳ್ಳಲು ಮತ್ತು ಕೆಲವು ಅಭ್ಯಾಸಗಳನ್ನು ಸುಧಾರಿಸಲು ಮತ್ತು ನಿಮಗೆ ತುಂಬಾ ಸಹಾಯ ಮಾಡುವ ಕೆಲವು ಸರಳ ವ್ಯಾಯಾಮಗಳನ್ನು ಮಾಡಲು ಸಹ ಇಲ್ಲಿ ಸಲಹೆ ನೀಡಿದ್ದಾರೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಈಗಂತೂ ಬಹುತೇಕರು ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಗಿನಿಂದಲೂ ಮನೆಯಲ್ಲಿ (Home) ಕೂತು ತಮ್ಮ ಕಂಪನಿಯ ಮತ್ತು ಕಚೇರಿಯ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಎರಡು ವರ್ಷಗಳಲ್ಲಿ ಅನೇಕರಿಗೆ ಬೆನ್ನು ನೋವು (Back Pain) ಮತ್ತು ಕತ್ತು ನೋವು ಬಂದಿರುವುದಂತೂ ನಿಜ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಂಪ್ಯೂಟರ್ ಪರದೆಯ (Computer Screen) ಮುಂದೆ ಕಣ್ಣು ಮಿಟುಕಿಸದೆ ಬೇರೆ ಬೇರೆ ಭಂಗಿಗಳಲ್ಲಿ ಕೂತು ಕೆಲಸ ಮಾಡಿದರೆ ಇನ್ನೇನು ಆಗುತ್ತದೆ ನೀವೇ ಹೇಳಿ? ನಮ್ಮಲ್ಲಿ ಅನೇಕರು ಕೆಲಸ ಮಾಡುವಾಗ, ಪುಸ್ತಕ ಓದುವಾಗ, ಮೆಸೇಜ್ (Massage) ಮಾಡುವಾಗ ಅಥವಾ ಟಿವಿ ನೋಡುವಾಗ ತಮ್ಮ ಬೆನ್ನನ್ನು ಅವರಿಗೆ ಗೊತ್ತಿರಲಾರದಂತೆ ಬಗ್ಗಿಸಿಕೊಂಡು ಕೂತಿರುತ್ತಾರೆ.

ಕತ್ತು ಸಹ ನೇರವಾಗಿರದೆ ಸ್ವಲ್ಪ ಮೇಲೆ ಅಥವಾ ಸ್ವಲ್ಪ ಕೆಳಗೆ ಇರಿಸಿಕೊಂಡು ಕೂರುವುದರಿಂದ ಕತ್ತಿನ ಮತ್ತು ಬೆನ್ನಿನ ಭಂಗಿಗಳು ಸಂಪೂರ್ಣವಾಗಿ ಹಾಳಾಗಿರುತ್ತವೆ. ಈ ರೀತಿಯ ಕೆಟ್ಟ ಭಂಗಿಗಳು ಬೆನ್ನು, ಭುಜ ಮತ್ತು ಕುತ್ತಿಗೆಯ ಗಂಭೀರವಾದ ಸಮಸ್ಯೆಗಳನ್ನು ತಂದೊಡ್ಡಬಹುದು.

ಈ ಬಗ್ಗೆ ಪೌಷ್ಟಿಕ ತಜ್ಞೆ ನಿಧಿ ಎಸ್ ನೀಡಿದ ಸಲಹೆಗಳಿವು
ಅದಕ್ಕಾಗಿಯೇ ಪೌಷ್ಟಿಕ ತಜ್ಞರಾದ ನಿಧಿ ಎಸ್ ಅವರು ನೀವು ಎಲ್ಲಿಯೇ ಕುಳಿತುಕೊಂಡರೂ ಬೆನ್ನು ಮತ್ತು ಕುತ್ತಿಗೆಯನ್ನು ನೇರವಾಗಿರಿಸಿಕೊಂಡು ಕುಳಿತುಕೊಳ್ಳಲು ಮತ್ತು ಕೆಲವು ಅಭ್ಯಾಸಗಳನ್ನು ಸುಧಾರಿಸಲು ಮತ್ತು ನಿಮಗೆ ತುಂಬಾ ಸಹಾಯ ಮಾಡುವ ಕೆಲವು ಸರಳ ವ್ಯಾಯಾಮಗಳನ್ನು ಮಾಡಲು ಸಹ ಇಲ್ಲಿ ಸಲಹೆ ನೀಡಿದ್ದಾರೆ ನೋಡಿ.

"ನೀವು ಎಲ್ಲಿಯೇ ಕುಳಿತುಕೊಳ್ಳಿ, ಉದಾಹರಣೆಗೆ ನೀವು ಚಲನಚಿತ್ರ ನೋಡುತ್ತಿದ್ದಾಗ, ಪುಸ್ತಕಗಳನ್ನು ಓದುತ್ತಿದ್ದಾಗ, ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವಾಗ ಅಥವಾ ಮೊಬೈಲ್ ಫೋನ್ ನಲ್ಲಿ ಚಾಟಿಂಗ್ ಮಾಡುತ್ತಿದ್ದಾಗ ಕೆಟ್ಟ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ನಿಮ್ಮ ಬೆನ್ನು, ಕುತ್ತಿಗೆ ಮತ್ತು ಭುಜಗಳಲ್ಲಿ ನಿಜವಾಗಿಯೂ ಕೆಟ್ಟ ನೋವು ಕಾಣಿಸಿಕೊಳ್ಳುತ್ತದೆ. ಅಲ್ಪಾವಧಿಯಲ್ಲಿ, ಕೆಟ್ಟ ಭಂಗಿಯು ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ದೀರ್ಘಾವಧಿಯಲ್ಲಿ, ಇದು ನಿಮ್ಮ ಬೆನ್ನುಮೂಳೆಯ ವಿರೂಪಕ್ಕೆ ಕಾರಣವಾಗಬಹುದು" ಎಂದು ಅವರು ಹೇಳಿದರು.

ಸಹಾಯ ಮಾಡಬಲ್ಲ ನಾಲ್ಕು ವ್ಯಾಯಾಮಗಳನ್ನು ಪೌಷ್ಟಿಕ ತಜ್ಞರು ತಿಳಿಸಿದ್ದಾರೆ ನೋಡಿ.

1. ಪ್ರಾರ್ಥನಾ ಭಂಗಿ (ಪ್ರೇಯರ್ ಪೋಸ್)

ಮಾಡುವುದು ಹೇಗೆ ಗೊತ್ತೇ?

 • ನಿಮ್ಮ ಕಾಲುಗಳನ್ನು ನೇರವಾಗಿಸಿರಿಸಿಕೊಂಡು ನಿಂತುಕೊಳ್ಳಿ.

 • ನಿಮ್ಮ ತೋಳುಗಳನ್ನು ನಿಮ್ಮ ಎದೆಯ ಮುಂದೆ ತಂದು ಅಂಗೈಗಳನ್ನು ಪ್ರಾರ್ಥನೆಯ ಭಂಗಿಯಲ್ಲಿ ಮಡಚಿ.

 • ನಿಮ್ಮ ಭುಜಗಳಿಗೆ ವಿಶ್ರಾಂತಿ ನೀಡಿ ಮತ್ತು ನಿಮ್ಮ ಮೊಣಕೈಗಳು ನಿಮ್ಮ ಪಕ್ಕೆಲುಬಿನೊಂದಿಗೆ ಸಮನಾಗಿದೆ ಎಂದು ಖಚಿತಪಡಿಸಿಕೊಳ್ಳಿ.

 • ನೀವು ಇದನ್ನು ಕುರ್ಚಿಯ ಹಿಂಭಾಗವನ್ನು ಸಹ ಹಿಡಿದುಕೊಂಡು ಹೆಚ್ಚು ಆರಾಮದಾಯಕವಾಗಿ ಮಾಡಬಹುದು.

 • ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ದೀರ್ಘವಾಗಿ ಉಸಿರಾಟವಾಡಿ.


ಇದನ್ನೂ ಓದಿ:  Healthy Lifestyle: ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಈ ಸಮಸ್ಯೆ ಬರಬಹುದು, ಎಚ್ಚರ

2. ಭುಜದ ವಿಸ್ತರಣೆ (ಶೋಲ್ಡರ್ ಎಕ್ಸ್ಟೆಂಶನ್)

ಇದನ್ನು ಹೇಗೆ ಮಾಡುವುದು?

 • ನಿಮ್ಮ ಪಾದಗಳು ಸೊಂಟದ ಅಗಲವನ್ನು ಅಗಲಿಸಿ ನಿಲ್ಲಬೇಕು.

 • ನಿಮ್ಮ ಕೈಗಳನ್ನು ನಿಮ್ಮ ಸೊಂಟದ ಹಿಂದೆ ತೆಗೆದುಕೊಂಡು ನಿಮ್ಮ ಬೆರಳುಗಳನ್ನು ಜೋಡಿಸಿ.

 • ನಿಮ್ಮ ಕೈಗಳನ್ನು ನಿಮ್ಮ ಹಿಂಬದಿಯಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಎತ್ತುವಂತೆ ನಿಮ್ಮ ತೋಳುಗಳನ್ನು ಚಾಚಿ.

 • ಕೈಬೆರಳುಗಳು ವಿರುದ್ಧ ದಿಕ್ಕಿನಲ್ಲಿ ಇಂಟರ್ ಲಾಕ್ ಆಗುವಂತೆ ಗ್ರಿಪ್ ಅನ್ನು ಸ್ವಿಚ್ ಮಾಡಿ.


3. ಹಿಂಭಾಗದ ವಿಸ್ತರಣೆ (ಬ್ಯಾಕ್ ಎಕ್ಸ್ಟೆನ್ಷನ್)

ಅದನ್ನು ಮಾಡುವುದು ಹೇಗೆ?

 • ನಿಮ್ಮ ಪಾದಗಳು ಸೊಂಟದ ಅಗಲವನ್ನು ಅಗಲಿಸಿ ನಿಲ್ಲಬೇಕು.

 • ನಿಮ್ಮ ಕೈಗಳಲ್ಲಿ ಟವೆಲ್ ಹಿಡಿದುಕೊಂಡು ನಿಮ್ಮ ಕೈಗಳನ್ನು ಮೇಲಕ್ಕೆತ್ತಿ, ಎಳೆಯುವಂತೆ ಮಾಡಿರಿ.

 • ಭುಜದ ಮಟ್ಟದವರೆಗೆ ನಿಮ್ಮ ಕೈಗಳನ್ನು ಮೇಲೆತ್ತಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.


4. ನಾಗರಹಾವಿನ ಭಂಗಿ (ಕೋಬ್ರಾ ಪೋಸ್)

ಇದನ್ನು ಮಾಡುವುದು ಹೇಗೆ?

 • ನಿಮ್ಮ ಹೊಟ್ಟೆಯ ಮೇಲೆ ನೆಲದ ಮೇಲೆ ಚಪ್ಪಟೆಯಾಗಿ ಮಲಗಿ. ನಿಮ್ಮ ಕಾಲುಗಳನ್ನು ತಟಸ್ಥ ಸ್ಥಿತಿಯಲ್ಲಿ ಇರಿಸುವಾಗ ನಿಮ್ಮ ದೇಹದ ಮೇಲ್ಭಾಗವನ್ನು ತಳ್ಳಿ.

 • ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಿ ನಿಮ್ಮ ಮೊಣಕೈಗಳನ್ನು ಹಿಗ್ಗಿಸಿ.

 • ನಿಮ್ಮ ಭುಜಗಳನ್ನು ಹಿಂದಕ್ಕೆ ತಿರುಗಿಸಿ ಮತ್ತು ನಿಮ್ಮ ಪಕ್ಕೆಲುಬುಗಳನ್ನು ನೆಲದ ಮೇಲೆ ಇರಿಸಿ.

 • ನಿಮ್ಮ ಕುತ್ತಿಗೆಯನ್ನು ತಟಸ್ಥವಾಗಿರಿಸಿಕೊಳ್ಳಿ. ಕೆಲವು ಕ್ಷಣಗಳ ಕಾಲ ಇದೇ ಭಂಗಿಯಲ್ಲಿ ಇರಿ.


ಇದನ್ನೂ ಓದಿ:  Tourist Places: ನೀವೂ ಧ್ಯಾನ, ಯೋಗ ಮಾಡಲು ಒಳ್ಳೆ ಸ್ಥಳ ಹುಡುಕುತ್ತಿದ್ದಿರಾ? ಹಾಗಿದ್ರೆ ಈ ಸ್ಥಳಗಳಿಗೆ ಒಮ್ಮೆ ಭೇಟಿ ಕೊಡಿ

"ಈ ಸರಳವಾದ ಆದರೆ ಅತ್ಯಂತ ಪರಿಣಾಮಕಾರಿ ವ್ಯಾಯಾಮಗಳೊಂದಿಗೆ ನಿಮ್ಮ ಭಂಗಿಯನ್ನು ಸುಧಾರಿಸಲು ಕೆಲಸ ಮಾಡಲು ಪ್ರಾರಂಭಿಸಿ. ಇವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕುರ್ಚಿ, ಟವೆಲ್ ನಂತಹ ವಸ್ತುಗಳನ್ನು ಬಳಸಿ" ಎಂದು ಅವರು ಹೇಳಿದರು.

ಈ ವ್ಯಾಯಾಮಗಳನ್ನು ನೀವು ಎಷ್ಟು ಸಮಯ ಮಾಡಬೇಕು?
ಈ ವ್ಯಾಯಾಮಗಳನ್ನು ಪ್ರತಿದಿನ ತಲಾ 30 ಸೆಕೆಂಡುಗಳಿಗೆ 2 ರಿಂದ 3 ಸೆಟ್ ಗಳನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನೇರವಾಗಿ ಕುಳಿತುಕೊಳ್ಳಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಿ. ಇದು ನಿಧಾನವಾಗಿ ನಿಮ್ಮ ಕತ್ತು ಮತ್ತು ಬೆನ್ನಿನ ಭಂಗಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಬೆನ್ನು, ಕುತ್ತಿಗೆ ಮತ್ತು ಭುಜಗಳಲ್ಲಿನ ನೋವನ್ನು ಕಡಿಮೆ ಮಾಡುತ್ತದೆ ಎಂದು ಪೌಷ್ಟಿಕ ತಜ್ಞರು ಹೇಳಿದರು.
Published by:Ashwini Prabhu
First published: