Heart Cholesterol: ಹೃದಯಾಘಾತ ಮತ್ತು ಅಧಿಕ ಕೊಲೆಸ್ಟ್ರಾಲ್ ತಪ್ಪಿಸಲು ನಿಮ್ಮ ಜೀವನಶೈಲಿ ಹೀಗಿರಲಿ

ನೀವು ನಿಮ್ಮ ಜೀವನಶೈಲಿಯನ್ನು ಕೆಟ್ಟದಾಗಿ ಮತ್ತು ಅನಿಯಂತ್ರಿತವಾಗಿ ಇಟ್ಟುಕೊಂಡಿದ್ದರೆ 40 ವರ್ಷ ವಯಸ್ಸಿನ ನಂತರ ನಿಮ್ಮ ದೇಹದಲ್ಲಿ ಈ ರೋಗಗಳು ಹೆಚ್ಚಿರುವ ಸ್ಥಿತಿ ಉಂಟಾಗುತ್ತದೆ. ಈ ರೋಗಗಳು ನಿಮ್ಮನ್ನು ಎಂದಿಗೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೃದಯಾಘಾತ (Heart Attack) ಮತ್ತು ಅಧಿಕ ಕೊಲೆಸ್ಟ್ರಾಲ್ (High Cholesterol) ಎರಡು ಮಾರಣಾಂತಿಕ ಕಾಯಿಲೆಗಳು (Disease). ವ್ಯಕ್ತಿಯನ್ನು (Person) ಸಾಕಷ್ಟು ಬಾಧಿಸುತ್ತವೆ. ಇದು ಮುಖ್ಯವಾಗಿ 40 ವರ್ಷ ವಯಸ್ಸಿನ ನಂತರ ದೇಹವನ್ನು ಆಕ್ರಮಿಸಲು ಪ್ರಾರಂಭ ಮಾಡುತ್ತದೆ. ಹೃದಯಾಘಾತ ಹೆಚ್ಚುವ ಬೊಜ್ಜು ಸೇರಿದಂತೆ ಅನೇಕ ಕಾರಣಗಳಿಂದ ಉಂಟಾಗುತ್ತದೆ. ಹೃದಯಾಘಾತ ಮತ್ತು ಅಧಿಕ ಕೊಲೆಸ್ಟ್ರಾಲ್ ಕಾಯಿಲೆಗಳು ಮನುಷ್ಯನನ್ನು ಬಾಧಿಸುತ್ತವೆ. ಕೆಲವೊಮ್ಮೆ ವ್ಯಕ್ತಿ ಬಲಿಯಾಗುವ ಸಾಧ್ಯತೆಯೂ ಹೆಚ್ಚು. ಯಾವ ವಯಸ್ಸಿನಲ್ಲಿ ಹೃದಯಾಘಾತ ಮತ್ತು ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ? ಇದು ನಿಮ್ಮ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಜೀವನಶೈಲಿ ಚೆನ್ನಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ.

    ಒಳ್ಳೆಯ ಜೀವನಶೈಲಿ ರೂಢಿಸಿಕೊಳ್ಳಿ

    ನೀವು ನಿಮ್ಮ ಜೀವನಶೈಲಿಯನ್ನು ಕೆಟ್ಟದಾಗಿ ಮತ್ತು ಅನಿಯಂತ್ರಿತವಾಗಿ ಇಟ್ಟುಕೊಂಡಿದ್ದರೆ 40 ವರ್ಷ ವಯಸ್ಸಿನ ನಂತರ ನಿಮ್ಮ ದೇಹದಲ್ಲಿ ಈ ರೋಗಗಳು ಹೆಚ್ಚಿರುವ ಸ್ಥಿತಿ ಉಂಟಾಗುತ್ತದೆ. ಈ ರೋಗಗಳು ನಿಮ್ಮನ್ನು ಎಂದಿಗೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ.

    ಮತ್ತು ಹೆಚ್ಚಿನ ಮಾರಣಾಂತಿಕ ಕಾಯಿಲೆಗಳು ನಿಮ್ಮನ್ನು ಸ್ಪರ್ಶಿಸದಂತೆ ಎಚ್ಚರ ವಹಿಸಿ. ನಿಮ್ಮ ಜೀವನಶೈಲಿ ಸುಧಾರಣೆಗೆ ಅತ್ಯಂತ ಸುಲಭವಾದ ಮಾರ್ಗಗಳು ಹೀಗಿದೆ ನೋಡಿ.

    ಇದನ್ನೂ ಓದಿ: ಮಹಿಳೆಯರನ್ನು ಹೆಚ್ಚು ಬಾಧಿಸುವ ಮೈಗ್ರೇನ್ ಗೆ ಕಾರಣಗಳು ಮತ್ತು ಪರಿಹಾರ ಹೇಗೆ?

    ತಪ್ಪು ಜೀವನಶೈಲಿಯಿಂದ ಯಾವ ರೋಗಗಳು ಉಂಟಾಗುತ್ತವೆ?

    ಹೃದಯಾಘಾತ

    ಅಧಿಕ ಕೊಲೆಸ್ಟ್ರಾಲ್

    ಅಧಿಕ ಬಿಪಿ

    ಹೈಪರ್ ಥೈರಾಯ್ಡಿಸಮ್

    ಎಚ್ಐವಿ / ಏಡ್ಸ್

    ನಿಯಂತ್ರಿಸಲಾಗದ ಹೃದಯ ಬಡಿತ

    ಅಂಗ ವೈಫಲ್ಯ ಸಮಸ್ಯೆ

    ಕ್ಯಾನ್ಸರ್

    ಮಧುಮೇಹ ಟೈಪ್-2

    ನಿದ್ರಾಹೀನತೆ

    ಖಿನ್ನತೆ

    ಮೆದುಳಿನ ಸ್ಟ್ರೋಕ್

    ಈ ಖಾಯಿಲೆಗಳ ಪಟ್ಟಿ ನೋಡಿ ಆಶ್ಚರ್ಯ ಆಯ್ತು ಅಲ್ವಾ? ಆದರೆ ಸರಿಯಾದ ಜೀವನಶೈಲಿ ಅಳವಡಿಸಿಕೊಂಡರೆ ನೀವು ಈ ಎಲ್ಲಾ ಕಾಯಿಲೆಗಳನ್ನು ತಪ್ಪಿಸಬಹುದು.

    ಮಾರಣಾಂತಿಕ ಕಾಯಿಲೆ ತಪ್ಪಿಸುವ ಮಾರ್ಗಗಳು ಯಾವುವು?

    ಸೂರ್ಯೋದಯಕ್ಕೆ ಮೊದಲು ನಿಮ್ಮ ದಿನವನ್ನು ಪ್ರಾರಂಭಿಸಿ. ನೀವು ರಾತ್ರಿ ತಡವಾಗಿ ಮಲಗುತ್ತಿದ್ದರೆ ಈ ಹವ್ಯಾಸ ಬದಲಾಯಿಸಿ. ಬೆಳಿಗ್ಗೆ ಒಮ್ಮೆ ಎದ್ದು ಫ್ರೆಶ್ ಆಗಿ ಯೋಗ ಮಾಡಿ,. ಉಪಹಾರ ಸೇವಿಸಿ ನಂತರ ಮತ್ತೆ ಮಲಗಬಹುದು.

    ಆದರೆ ನೀವು ಬೆಳಿಗ್ಗೆ ಪಡೆಯುವ ಶಕ್ತಿ ಮತ್ತು ತಾಜಾತನದಿಂದ ನಿಮ್ಮನ್ನು ವಂಚಿತಗೊಳಿಸಿಕೊಳ್ಳಬೇಡಿ. ಮಾನಸಿಕವಾಗಿ ಆರೋಗ್ಯವಾಗಿರಲು ಬೆಳಗಿನ ತಾಜಾತನ ಮತ್ತು ಬೆಳಕು ಬಹಳ ಅವಶ್ಯಕ.

    ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ

    ಹಸಿ ಮತ್ತು ಬೇಯಿಸಿದ ಆಹಾರ ಒಟ್ಟಿಗೆ ತಿನ್ನಬೇಡಿ. ಸೌತೆಕಾಯಿ ಸಲಾಡ್ ಅನ್ನು ಆಹಾರದೊಂದಿಗೆ ತಿನ್ನುವ ಅಭ್ಯಾಸ ರೋಗ ಹೆಚ್ಚಿಸುತ್ತದೆ. ನೀವು ಯಾವಾಗಲೂ ಕಚ್ಚಾ ಸಲಾಡ್ ಮಧ್ಯಾಹ್ನ ಲಘು ಸಮಯದಲ್ಲಿ ಸೇವಿಸಬೇಕು. ಮತ್ತು ಊಟದೊಂದಿಗೆ ಅಲ್ಲ.

    ತೂಕವನ್ನು ನಿಯಂತ್ರಣದಲ್ಲಿಡಿ

    ಯಾವುದೇ ಕಾರಣದಿಂದ ನಿಮ್ಮ ತೂಕ ಹೆಚ್ಚಿದ್ದರೆ, ಪ್ರತಿದಿನ ಯೋಗ ಮಾಡುವ ಮೂಲಕ ನೀವು ಅದನ್ನು ಕಡಿಮೆ ಮಾಡಬಹುದು. ನಿಮಗೆ ಯೋಗ ಮಾಡಲು ಸಾಧ್ಯವಾಗದಿದ್ದರೆ ವಾಕ್ ಮಾಡಿ.

    ಧೂಮಪಾನ, ತಂಬಾಕು ಮತ್ತು ಅಮಲು ಪದಾರ್ಥಗಳ ಸೇವನೆಯ ಅಭ್ಯಾಸವು ನಿಮ್ಮನ್ನು ರೋಗಗಳ ಕಡೆಗೆ ನೂಕುತ್ತದೆ.

    ಆರೋಗ್ಯವಾಗಿರಲು ಏನು ಮಾಡಬೇಕು?

    ಸೂರ್ಯೋದಯಕ್ಕೂ ಮೊದಲೇ ಏಳುವುದನ್ನು ರೂಢಿಸಿಕೊಳ್ಳಿ.

    ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್ ಇಲ್ಲವೇ ವ್ಯಾಯಾಮ ಮಾಡಿ.

    ಆಹಾರದಲ್ಲಿ ಕಡಿಮೆ ಉಪ್ಪು ಸೇವಿಸಿ.

    ಸೋಡಾ, ತಂಪು ಪಾನೀಯ ಸೇವಿಸಬೇಡಿ. ಲಸ್ಸಿ, ಮಜ್ಜಿಗೆ ಮತ್ತು ಶರಬತ್ತು ಸೇವಿಸಿ.

    ಮಾದಕ ವಸ್ತುಗಳಿಂದ ದೂರವಿರಿ.

    ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಿಸಲು ಮತ್ತು ವಯಸ್ಸಾಗುವಿಕೆ ತಡೆಯಲು ವಿಟಮಿನ್ ಸಿ ಪ್ರಯೋಜನಕಾರಿ

    ಬಿಳಿ ಮೊಸರನ್ನು ಉಪ್ಪು ಸೇರಿಸಿ ತಿನ್ನಬೇಡಿ. ಮತ್ತು ಖಾರದ ಪದಾರ್ಥಗಳೊಂದಿಗೆ ತಿನ್ನಬೇಡಿ.

    ಪ್ರತಿದಿನ ಕೇವಲ 15 ನಿಮಿಷಗಳ ಕಾಲ ಧ್ಯಾನ ಮಾಡಿ.
    Published by:renukadariyannavar
    First published: