Eyesight: ಕಣ್ಣಿನ ಆಯಾಸ ನಿವಾರಿಸಲು ಮೂರು ಸರಳ ವ್ಯಾಯಾಮಗಳು: ಹೀಗೆ ಮಾಡಿದ್ರೆ ದೃಷ್ಟಿ ಸಮಸ್ಯೆ ಬರಲ್ವಂತೆ!

ಈ ವ್ಯಾಯಾಮಗಳು ಗಮನ ಮತ್ತು ಜಾಗರೂಕತೆಯನ್ನು ಸುಧಾರಿಸಲು ಸಹ ಒಳ್ಳೆಯದು ಎನ್ನುತ್ತಾರೆ ಯೋಗ ಮತ್ತು ಆಯುರ್ವೇದ ಜೀವನಶೈಲಿ ತಜ್ಞೆ ನಮಿತಾ ಪಿಪರಾಯ. ದೃಷ್ಠಿ ಸುಧಾರಿಸಲು ಇವರು ಶಿಫಾರಸು ಮಾಡಿರುವ ಮೂರು ವ್ಯಾಯಾಮಗಳು ಹೀಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಕಣ್ಣಿನ ಆರೋಗ್ಯವು (Eye Care) ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಕನ್ನಡಿಯಾಗಿದೆ. ನಾವು ದೈನಂದಿನ ಚುಟವಟಿಕೆ (Routine Life) ನಡೆಸಲು ಹಾಗೂ ಎಲ್ಲಾ ರೀತಿಯ ಕೆಲಸ ಕಾರ್ಯಗಳಿಗೆ ಕಣ್ಣು (Eyes) ಅಗತ್ಯವಾಗಿ ಬೇಕೇ ಬೇಕು ಮತ್ತು ಕಡಿಮೆ ದೃಷ್ಟಿಯೊಂದಿಗೆ ಬದುಕುವುದು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ಸಮಸ್ಯೆಗಳು (Eyes Problem) ಸಾಕಷ್ಟು ಸಾಮಾನ್ಯವಾಗಿದೆ ಮತ್ತು WHO ಪ್ರಕಾರ, ಸಾಕಷ್ಟು ದೀರ್ಘಕಾಲ ಬದುಕುವವರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಕಣ್ಣಿನ ತೊಂದರೆ ಅನುಭವಿಸುವ ಸಾಧ್ಯತೆಯಿದೆ ಎಂದು ಹೇಳುತ್ತದೆ. ಕಣ್ಣಿನ ಪೊರೆ, ಕಾರ್ನಿಯಾ ಮತ್ತು ಟ್ರಾಕೋಮಾ (Cornea and Trachoma) ದ ಹಲವಾರು ಸಾಂಕ್ರಾಮಿಕ ರೋಗಗಳು ಕಣ್ಣಿನ ದೃಷ್ಟಿ (Eyesight)ಕಡಿಮೆಯಾಗಲು ಕಾರಣವಾಗಬಹುದು.

ಕೇವಲ ವಯಸ್ಸಿನ ಕಾರಣದಿಂದ ದೃಷ್ಟಿ ಸಮಸ್ಯೆ ಬರುವುದಿಲ್ಲ, ಬದಲಾಗಿ ಹೆಚ್ಚು ಹೆಚ್ಚು ಸ್ಕ್ರೀನ್ ನೋಡುವುದರಿಂದ ಕಣ್ಣಿನ ಸಮಸ್ಯೆಗಳು ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚುತ್ತಿವೆ. ಆನ್‌ ಲೈನ್ ತರಗತಿಗಳು, ಬಿಡುವಿಲ್ಲದೇ ಕಂಪ್ಯೂಟರ್ ನಲ್ಲಿ ಕೆಲಸ ಹೀಗೆ ಮಕ್ಕಳಿಂದ ಹಿಡಿದು ದೊಡ್ಡವರಲ್ಲಿ ದೃಷ್ಟಿ-ಸಂಬಂಧಿತ ಸಮಸ್ಯೆಗಳ ಹೆಚ್ಚಳವನ್ನು ವರದಿ ಮಾಡಲಾಗಿದೆ.

ಕಣ್ಣಿನ ಆಯಾಸ ನಿವಾರಿಸಲು ಕೆಲ ವ್ಯಾಯಾಮಗಳು

ಹೀಗೆ ಕಣ್ಣಿನ ಆಯಾಸವನ್ನು ನಿವಾರಿಸಲು ಕಣ್ಣಿನ ವ್ಯಾಯಾಮಗಳು ಸಾಕಷ್ಟು ಸಹಾಯಕವಾಗಿವೆ. ಈ ವ್ಯಾಯಾಮಗಳು ಗಮನ ಮತ್ತು ಜಾಗರೂಕತೆಯನ್ನು ಸುಧಾರಿಸಲು ಸಹ ಒಳ್ಳೆಯದು ಎನ್ನುತ್ತಾರೆ ಯೋಗ ಮತ್ತು ಆಯುರ್ವೇದ ಜೀವನಶೈಲಿ ತಜ್ಞೆ ನಮಿತಾ ಪಿಪರಾಯ. ದೃಷ್ಠಿ ಸುಧಾರಿಸಲು ಇವರು ಶಿಫಾರಸು ಮಾಡಿರುವ ಮೂರು ವ್ಯಾಯಾಮಗಳು ಹೀಗಿವೆ.

1)ಪಾಮಿಂಗ್ ತಂತ್ರ

ನೀವು ಸ್ವಲ್ಪ ಬೆಚ್ಚಗಾಗುವವರೆಗೆ ನಿಮ್ಮ ಅಂಗೈಗಳನ್ನು ಒಟ್ಟಿಗೆ ಉಜ್ಜಿಕೊಳ್ಳಿ ಮತ್ತು ನಂತರ ನಿಮ್ಮ ಕಣ್ಣುಗಳ ಮೇಲೆ ನಿಧಾನವಾಗಿ ಅವುಗಳ ಸುತ್ತಲೂ ಟೊಳ್ಳಾದ ಕತ್ತಲೆ ಜಾಗವನ್ನು ಸೃಷ್ಟಿಸಿ ಮುಚ್ಚಿಕೊಳ್ಳಿ. ಕನಿಷ್ಠ ಬೆಳಕು ಅಂಗೈಗಳ ಮೂಲಕ ಮತ್ತು ಬೆರಳುಗಳ ಅಂತರಗಳ ಮೂಲಕ ಒಳಬರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಕೆಲವು ಕಾಲ ಉಸಿರಾಟ ಚೆನ್ನಾಗಿ ಮಾಡುತ್ತಾ ಕಣ್ಣುಗಳನ್ನು ಮುಚ್ಚಿ, ನೀವು ಅನುಭವಿಸುವ ಸಂವೇದನೆಗಳನ್ನು ಆನಂದಿಸಿ.

ಇದನ್ನೂ ಓದಿ:  Dinner Timing: ದಿನವೂ ತಡರಾತ್ರಿ ಊಟ ಮಾಡುತ್ತೀರಾ? ಹಾಗಿದ್ದರೆ ಈ ಅಪಾಯಗಳ ಬಗ್ಗೆ ಇರಲಿ ಎಚ್ಚರ!

ನಿಮ್ಮ ಕೈಗಳ ಉಷ್ಣತೆಯು ಕಡಿಮೆಯಾದ ನಂತರ, ನೀವು ಕೈಗಳನ್ನು ಕೆಳಕ್ಕೆ ಇಳಿಸಬಹುದು. ಮತ್ತೆ ಕೈಗಳನ್ನು ಉಜ್ಜಿಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚುವುದನ್ನು ಮುಂದುವರಿಸಬಹುದು. ಕಣ್ಣು ಬಿಡುವಾಗ ಕೆಲವು ಸೌಮ್ಯವಾದ ಮಿಟುಕಿಸುವಿಕೆಯೊಂದಿಗೆ ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ.

ಇದು ಕಣ್ಣುಗಳಿಗೆ ಅಗಾಧವಾಗಿ ವಿಶ್ರಾಂತಿ ನೀಡುತ್ತದೆ ಮತ್ತು ಕೆಲಸದಲ್ಲಿ ಸುಲಭವಾಗಿ ಅಭ್ಯಾಸ ಮಾಡಬಹುದಾದ ಉಪಯುಕ್ತ ತಂತ್ರವಾಗಿದೆ. ಆದ್ದರಿಂದ, ನೀವು ಸ್ವಲ್ಪ ಸಮಯದವರೆಗೆ ನಿಮ್ಮ ಕಂಪ್ಯೂಟರ್ ಪರದೆಯನ್ನು ದಿಟ್ಟಿಸುತ್ತಿದ್ದರೆ, ತ್ವರಿತ ಪಾಮಿಂಗ್ ಬ್ರೇಕ್ ತೆಗೆದುಕೊಳ್ಳಿ ಮತ್ತು ನಿಮ್ಮ ದೃಷ್ಟಿ, ಜಾಗರೂಕತೆ ಮತ್ತು ಒತ್ತಡದ ಮಟ್ಟಗಳಲ್ಲಿನ ವ್ಯತ್ಯಾಸವನ್ನು ನೀವೇ ಗಮನಿಸಿ.

2)ಸೈಡ್ವೇಸ್ ರೋಲಿಂಗ್

ಇವುಗಳು ಕಣ್ಣಿನ ಆರೋಗ್ಯಕ್ಕೆ ಸಾಂಪ್ರದಾಯಿಕ, ಸರಳ ಮತ್ತು ಹೆಚ್ಚು ಪರಿಣಾಮಕಾರಿ ವ್ಯಾಯಾಮಗಳಾಗಿವೆ. ಅವುಗಳನ್ನು ಮಾಡಲು ನೀವು ಪೆನ್ ಅಥವಾ ಪೆನ್ಸಿಲ್ ಅಥವಾ ನಿಮ್ಮ ತೋರು ಬೆರಳನ್ನು ಕಣ್ಣಿನ ಮಟ್ಟದಲ್ಲಿ ನಿಮ್ಮ ಮುಂದೆ ಹಿಡಿದುಕೊಳ್ಳಿ.

ನಿಮ್ಮ ಗಮನವನ್ನು ಬೆರಳು ಅಥವಾ ಪೆನ್ನ ತುದಿಗೆ ತನ್ನಿ. ನಂತರ ಕೈಚಲನೆಯನ್ನು ಪ್ರಾರಂಭಿಸಿರಿ ನೀವು ನಿಮ್ಮ ಕೈಯನ್ನು ಚಲಿಸುವಾಗ, ನಿಮ್ಮ ಗಮನವನ್ನು ಒಂದೇ ಹಂತದಲ್ಲಿ ಇರಿಸಿಕೊಳ್ಳಿ. ನಿಮ್ಮ ಕಣ್ಣುಗಳಿಂದ ನಿಮ್ಮ ಗಮನದ ವಸ್ತುವನ್ನು ಅನುಸರಿಸುವುದನ್ನು ಮುಂದುವರಿಸುವಾಗ ನಿಧಾನವಾಗಿ ಕೈಯನ್ನು ಪಕ್ಕಕ್ಕೆ, ಬಲಕ್ಕೆ ಮತ್ತು ಎಡಕ್ಕೆ ಸರಿಸಿ. ಇದನ್ನು 5-10 ಬಾರಿ ಮಾಡಿ ಮತ್ತು ವಿಶ್ರಾಂತಿ ಪಡೆಯಿರಿ.

ರೋಲಿಂಗ್ ವ್ಯಾಯಾಮಗಳನ್ನು ಪೂರ್ಣ ವೃತ್ತಾಕಾರದ ಚಲನೆಯಲ್ಲಿಯೂ ಮಾಡಬಹುದು, ಅದನ್ನು ಮಾಡಲು ನೀವು ನಿಮ್ಮ ಮುಂದೆ ದೊಡ್ಡ ವೃತ್ತವನ್ನು ಗುರುತಿಸುತ್ತಿರುವಂತೆ ನಿಮ್ಮ ಕಣ್ಣುಗಳನ್ನು ಸುತ್ತಿಸಿ. 5-10 ಸುತ್ತುಗಳ ನಂತರ, ವಿಶ್ರಾಂತಿ ಪಡೆದು ಇನ್ನೊಂದು ದಿಕ್ಕಿನಲ್ಲಿ ಪುನರಾವರ್ತಿಸಿ.

3)ದೂರದ ನೋಟ

ನಮ್ಮ ಮುಂದೆ ಇರುವ ಸಣ್ಣ ಪರದೆಗಳು ಅಥವಾ ವಸ್ತುಗಳ ಮೇಲೆ ಸೂಕ್ಷ್ಮವಾಗಿ ಕೇಂದ್ರೀಕರಿಸುವ ಕಣ್ಣುಗಳಿಗೆ ಇದು ಒಳ್ಳೆಯ ವ್ಯಾಯಮ. ಆದ್ದರಿಂದ, ನಿರ್ದಿಷ್ಟವಾಗಿ ಯಾವುದನ್ನೂ ಕೇಂದ್ರೀಕರಿಸದೆ ದೂರದವರೆಗೆ ನೋಡುವ ಮೂಲಕ ವಿಶ್ರಾಂತಿ ಪಡೆಯಬಹುದು.

ಇದನ್ನೂ ಓದಿ: Health Care: ಮಧುಮೇಹಿಗಳು ಉಪವಾಸ ಮಾಡಬಹುದೇ? ಇಫ್ತಾರ್​ಗೆ ಏನು ತಿನ್ನಬೇಕು? ಏನು ತಿನ್ನಬಾರದು?

ಹೊರಗೆ ಅಥವಾ ಕಿಟಕಿಯ ಮೂಲಕ ಕಣ್ಣುಗಳು ನಿಮಗೆ ನೋಡಲು ಅನುಮತಿಸುವವರೆಗೆ ದೂರ ನೋಡಿ. ನಡೆಯುವಾಗಲೂ ಇದನ್ನು ಮಾಡಬಹುದು, ನಿರ್ದಿಷ್ಟವಾಗಿ ಯಾವುದನ್ನೂ ಕೇಂದ್ರೀಕರಿಸದೆ ಕಣ್ಣುಗಳು ಸ್ವಾಭಾವಿಕವಾಗಿ ಚಲಿಸುವಂತೆ ಮಾಡುತ್ತದೆ. ಇದು ಕಣ್ಣುಗಳಿಗೆ ಮಾತ್ರವಲ್ಲ, ನಮ್ಮ ಮೆದುಳಿಗೆ ಮತ್ತು ನಮ್ಮ ಕಲಿಕೆಯ ಸಾಮರ್ಥ್ಯಕ್ಕೂ ಒಳ್ಳೆಯದು.
Published by:Mahmadrafik K
First published: