Hand Writing: ಮಕ್ಕಳ ಬರವಣಿಗೆಯ ಅಂದ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಮಕ್ಕಳು ಬರೆಯುವಾಗ ಸಾಧ್ಯವಾದಷ್ಟು ಪೋಷಕರ ಅವರೊಂದಿಗೆ ಇದ್ದು, ದುಂಡಾಗಿ ಬರೆಯುವಂತೆ ಹೇಳುತ್ತಿರುವುದು ಒಳ್ಳೆಯದು, ಆಗತಾನೇ ಬರೆಯಲು ಕಲಿಯುತ್ತಿರುವ ಮಕ್ಕಳಿಗೆ ಬರೆಯಲು ನಾವು ಹಾಕುವ ಅಡಿಪಾಯ ಅತಿ ಮುಖ್ಯವಾಗಿರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಡಿಜಿಟಲ್‌ ಯುಗದಲ್ಲಿ ಕೈಬರಹ ತನ್ನ ಸ್ಥಾನವನ್ನು ಬಿಟ್ಟುಕೊಡದೇ ಉಳಿಸಿಕೊಂಡಿದೆ. ಏನೇ (Technology)ತಂತ್ರಜ್ಞಾನ ಬಂದರೂ, ಕೈಬರಹಕ್ಕೆ (Hand Writing)ಯಾವುದು ಸರಿಸಾಟಿ ಇಲ್ಲ, ಅಂತಹ ಸುಂದರವಾದ ಕೈ ಬರಹ ವಕ್ತಿತ್ವದ ಬಿಂಬವೂ ಹೌದು. ಅಲ್ಲದೆ, ಕೈಬರಹಕ್ಕೆ ತನ್ನದೇ ಆದ ಬಹಳಷ್ಟು ಇತರ ವೈಶಿಷ್ಠ್ಯಗಳು ಇವೆ. ಕಂಪ್ಯೂಟರ್‌ ಮತ್ತಿತ್ತರ (Computer's Other Electronic) ವಿದ್ಯುನ್ಮಾನ ಉಪಕರಣಗಳು ಕೈಬರಹವನ್ನು ಬದಿಗೆ ಸರಿಸಿದ್ದರೂ, ಅದರ ಸ್ಥಾನವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಅವಕ್ಕೆ ಸಾಧ್ಯವಾಗಿಲ್ಲ. ಕೈಬರಹದ ಅನನ್ಯತೆಯೇ ಅಂತಹುದು ಅಲ್ಲವೇ. ಇಂತಹ ಕೈಬರಹವನ್ನು ನಾವು ಮಕ್ಕಳಿಗೆ ಚಿಕ್ಕನಿಂದಲೇ ಹೇಳಿಕೊಟ್ಟರೇ ಮಾತ್ರ ಅದರ ಅಂದ ಚೆಂದ ಹೆಚ್ಚುವುದು.

  ಇದನ್ನು ಓದಿ:ಕೈಗಳಿಲ್ಲದಿದ್ದರೂ ಬರವಣಿಗೆಯ ಮೂಲಕ ಅಭೂತಪೂರ್ವ ಸಾಧನೆ ಮಾಡಿದಳು

  ಡ್ರಾಯಿಂಗ್ ಪಜಲ್ ಆಟಗಳನ್ನು ಪ್ರೋತ್ಸಾಹಿಸಿ(Encourage drawing puzzle games)

  ಮಕ್ಕಳು ಬರೆಯುವಾಗ ಸಾಧ್ಯವಾದಷ್ಟು ಪೋಷಕರ ಅವರೊಂದಿಗೆ ಇದ್ದು, ದುಂಡಾಗಿ ಬರೆಯುವಂತೆ ಹೇಳುತ್ತಿರುವುದು ಒಳ್ಳೆಯದು, ಆಗತಾನೇ ಬರೆಯಲು ಕಲಿಯುತ್ತಿರುವ ಮಕ್ಕಳಿಗೆ ಬರೆಯಲು ನಾವು ಹಾಕುವ ಅಡಿಪಾಯ ಅತಿ ಮುಖ್ಯವಾಗಿರುತ್ತದೆ. ಹಾಗಾಗಿ ಅವರ ಬರವಣಿಗೆ ಅಭಿವೃದ್ಧಿಪಡಿಸುವ ಸಲುವಾಗಿ ಪೆನ್ಸಿಲ್ ಅನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳುವುದು, ಭಂಗಿ, ನಿಯಂತ್ರಣ, ಕೌಶಲ್ಯ ಬಗ್ಗೆ ನಿಗಾವಹಿಸಿ ಹೇಳಿಕೊಡುತ್ತೀರಿ. ಮೊದ ಮೊದಲು ಅಕ್ಷರಗಳನೇ ಬರಯುವಂತೆ ಒತ್ತಡ ಹಾಕದೇ ಡ್ರಾಯಿಂಗ್‌ ಹಾಗೂ ಪಜಲ್‌ ಆಟಗಳನ್ನು ಪರಿಚಯಿಸಿ, ಆಗ ಅವರು ಬರವಣಿಗೆ ಜೊತೆಗೆ ಕೌಶಲ್ಯ ವೃದ್ಧಿಗೆ ನೆರವಾಗಲಿದೆ.

  ಶಾಲೆಯಲ್ಲಿ ಬರೆಯುವುದು ಮಗುವಿನ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯ ಕೈಬರಹದ ಸಮಸ್ಯೆಗಳೆಂದರೆ ಅಕ್ಷರ ರಚನೆ, ಗಾತ್ರ, ಪದಗಳ ನಡುವಿನ ಸ್ಥಳಗಳು ಮತ್ತು ಸಾಲು-ಜೋಡಣೆ ಆಗಿವೆ. ನಿಮ್ಮ ಮಗು ಅಕ್ಷರ ಬರೆಯುವಾಗ ಅಕ್ಷರಗಳ ಮೇಲೆ ಕೇಂದ್ರೀಕರಿಸಿ , ಬರೆಯುವ ಪುಸ್ತಕ, ಹಾಳೆಯನ್ನು ಅಥಾವ ಇತರೆ ವಸ್ತುಗಳನ್ನು ಅವರು ಹೇಗೆ ನಿಯಂತ್ರಿಸುತ್ತಾರೆ ಎಂದು ನೋಡಿಕೊಳ್ಳಿ. ಬರೆಯುವಾಗ ತಪ್ಪುಗಳಾದರೇ ಅದಕ್ಕೆ ಇರುವ ಪರಿಹಾರ ಮಾರ್ಗಗಳನ್ನು ಹೇಳಿಕೊಡಿ.

  ಬಣ್ಣ ಬಣ್ಣದ ಪೆನ್ಸಿಲ್‌ ಕೊಡಿ(Give colored pencils)
  ಮಕ್ಕಳು ಅಕ್ಷರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಲು ಬಣ್ಣ ಬಣ್ಣದ ಪೆನ್ಸಿಲ್‌ ಗಳನ್ನು ಬಳಸಿ ಬರೆಯಲು ಹೇಳಿ, ಇನ್ನು ಬರೆಯುವಾ ಬಾಕ್ಸ್‌ ಯಿಂದ ಹೊರಗೆ ಬಂದು, ಓರೆಯಾಗಿ ಬರೆಯುತ್ತಿದ್ದರೇ, ಅಥಾವ ತಪ್ಪಾದ ಜಾಗದಲ್ಲಿ ಬರೆಯುತ್ತಿದ್ದರೇ ಅದನ್ನು ತಿಳಿಸಿಕೊಡಿ. ಮಕ್ಕಳಿಗೆ ಮೊದಲ ಅಕ್ಷರಗಳ ಪರಿಚಯ ಮಾಡಿಕೊಡುವುದು ಅಗತ್ಯವಿದೆ. ಅದರಲ್ಲಿ ಬರುವ ಅಲ್ಪಪ್ರಾಣ, ಮಹಾ ಪ್ರಾಣ, ಸೇರಿದಂತೆ ಉಚ್ಚಾರಣೆಗಳನ್ನು ಮಾಡುತ್ತ ಬರೆಯುವ ಸಾಮರ್ಥ್ಯ ಹೆಚ್ಚಿಸುವುದು ಅವಶ್ಯಕವಾಗಿ ಮಾಡಬೇಕು.

  ಕಾಫಿ ರೈಟಿಂಗ್‌ ಕಲಿಸಿ(Teach Coffee Writing)
  ಮಕ್ಕಳು ಗುಣಿತಾಕ್ಷಾರಗಳನ್ನು ಬರೆಯುವಾಗ ಸ್ಪಷ್ಟತೆ ಜೊತೆಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಹೇಳಿಕೊಡಬೇಕು. ಇದ್ದರಿಂದ ಬರವಣಿಗೆ ಶುದ್ಧ ಹಾಗೂ ಸ್ಪಷ್ಟವಾಗಿ ಕಲಿಯಲು ಸಹಕಾರಿಯಾಗುವುದು. ಮಕ್ಕಳು ಮೊದಲು ತಮ್ಮ ಪೆನ್ಸಿಲ್‌ ಅಥಾವ ಲೇಖನಿಯನ್ನು ಹೇಗೆ ಹಿಡಿಯುತ್ತಾರೆ ಎಂದು ಗಮನಿಸಿ, ಸರಿಯಾಗಿ ಮೂರು ಬೆರಳು ಬಳಸಿ ಬರೆಯುವಂತೆ ಪ್ರೇರಿಪಿಸಬೇಕು. ಇದರ ಜೊತೆಗೆ ಬರವಣಿಗೆ ಚಿಹ್ನೆಗಳನ್ನು ಪರಿಚಯಿಸುವುದು ಉತ್ತಮ. ಪ್ರತಿದಿನ ಕಾಫಿ ರೈಟಿಂಗ್‌ ಬರೆಯುವುದರಿಂದ ಕೂಡ ಮುದ್ದಾದ ಅಕ್ಷರಗಳನ್ನು ಬರೆಯುವ ಅಭ್ಯಾಸ ಮಾಡಬಹುದು, ಹಾಗಾಗಿ ದಿನ ಒಂದು ಪೇಜ್‌ ಕಾಫಿ ರೈಟಿಂಗ್‌ ಬರೆಯುವಂತೆ ಮಕ್ಕಳಿಗೆ ಹೇಳಿಕೊಡುವುದು, ಇದರ ಜೊತೆಗೆ ತಪ್ಪಿಲದಂತೆ ಬರೆದರೆ ಉಡುಗೊರೆ ಕೊಡುವುದಾಗಿ ಹೇಳಿ ಅವರನ್ನು ಆಸಕ್ತಿ ತುಂಬುವುದು ಪೋಷಕರ ಕರ್ತವ್ಯವಾಗಿದೆ.

  ಕೊರೊನಾ ಪೆಟ್ಟು(Corona)
  ಕೊರೊನಾ ಮಾಹಾಮಾರಿ ದೇಶಕ್ಕೆ ಕಾಲಿಡುವ ಮುನ್ನ ಮಕ್ಕಳು ನಿತ್ಯ ಶಾಲೆಗೆ ಹೋಗುತ್ತಿದ್ದರು, ಸಹಪಾಠಿಗಳೆಲ್ಲ ಒಟ್ಟಾಗಿ ಕುಳಿತು ಪಾಠ ಕೆಳುತ್ತಿದ್ದರು, ನಿತ್ಯ ಶಿಕ್ಷಕರಿಂದ ನೇರ ಮಾರ್ಗದರ್ಶನ ಪಡೆಯುತ್ತಿದ್ದರು. ಹೋಂ ವರ್ಕ್‌, ಕ್ಲಾಸ್ ವರ್ಕ್‌, ನೋಟ್ಸ್‌ ಅಬ್ಬಾ ಎಷ್ಟೆಲ್ಲಾ ಓದಬೇಕು, ಬರೀಬೇಕು ಒತ್ತಡದ ನಡುವೆ ಓದುತ್ತಿದ್ದರು, ಆದರೆ ಕೊರೊನಾದಿಂದಾಗಿ ಮಕ್ಕಳು ಆನ್‌ ಲೈನ್‌ ಶಿಕ್ಷಣಕ್ಕೆ ಜೋತು ಬಿದ್ದು ಬರೆಯುವುದನ್ನು ಮರೆತಿದ್ದಾರೆ. ಹಾಗಾಗಿ ಪೋಷಕರು ಮಕ್ಕಳಿಗೆ ಮತ್ತೆ ಬರೆಯುವ ಬಗ್ಗೆ ಹೆಚ್ಚು ಹೇಳುವುದು ಅನಿವಾರ್ಯವಾಗಿದೆ.

  ಇದನ್ನು ಓದಿ:Health Tips: ಚಳಿಗಾಲದಲ್ಲಿ ಸ್ನಾನ ಮಾಡಲು ಹಿಂದೆ ಮುಂದೆ ಯೋಚನೆ ಮಾಡ್ತಿದ್ದೀರಾ? ಸಂಶೋಧಕರು ಏನ್ ಹೇಳ್ತಾರೆ ನೋಡಿ

  ಸಂಶೋಧನೆ(Research)
  ಕೈಬರಹವು ಸ್ನಾಯು ಮತ್ತು ನರಗಳ ಸುಸಂಬಂಧ ಸಂಯೋಜನೆಗಳ ವಿವಿಧ ಕೌಶಲ್ಯಗಳು ಸೇರಿವೆ. ಹಾಗಾಗೊ ಸಂವೇದನೆಯನ್ನು, ಸೃಜನಶೀಲತೆಯನ್ನು ಮತ್ತು ಉತ್ತಮ ಚಲನಾ ಕೌಶಲವನ್ನು ಪ್ರಚೋದಿಸುವ ಕೈಯಿಂದ ಬರೆಯುವ ಪ್ರಕ್ರಿಯೆಯು ಅರಿವಿನ ಸಾಮರ್ಥ್ಯ‌ವನ್ನು ಹೆಚ್ಚಿಸುವಲ್ಲಿ ಕೀಬೋರ್ಡ್‌ನಲ್ಲಿ ಬೆರಳಚ್ಚು ಮಾಡುವುದಕ್ಕಿಂತ ಹೆಚ್ಚು ಸಹಕಾರಿ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ.
  Published by:vanithasanjevani vanithasanjevani
  First published: