ಅತಿಯಾದ ಲೈಂಗಿಕ ಕ್ರಿಯೆ ನಿಮ್ಮ ಸಾಮಾನ್ಯ ಸಮಸ್ಯೆಗೆ ಕಾರಣವಾಗಬಹುದು

ಮೊದಲೇ ತಿಳಿಸಿದಂತೆ ಅತಿಯಾದರೆ ಅಮೃತವು ವಿಷ ಎಂಬಂತೆ ಲೈಂಗಿಕ ಕ್ರಿಯೆಯಲ್ಲಿ ಅತಿಯಾಗಿ ತೊಡಗಿಸಿದರೆ ಅದು ದೌರ್ಬಲ್ಯಕ್ಕೆ ಕಾರಣವಾಗಬಹುದು.

news18
Updated:April 17, 2019, 7:12 PM IST
ಅತಿಯಾದ ಲೈಂಗಿಕ ಕ್ರಿಯೆ ನಿಮ್ಮ ಸಾಮಾನ್ಯ ಸಮಸ್ಯೆಗೆ ಕಾರಣವಾಗಬಹುದು
ಸಾಂದರ್ಭಿಕ ಚಿತ್ರ
  • News18
  • Last Updated: April 17, 2019, 7:12 PM IST
  • Share this:
ಅತಿಯಾದರೆ ಅಮೃತವು ವಿಷ ಎಂಬ ಗಾದೆ ಲೈಂಗಿಕ ಜೀವನಕ್ಕೂ ಅನ್ವಯಿಸುತ್ತದೆ. ಮನುಷ್ಯನಲ್ಲಿ ಕಾಮಾಸಕ್ತಿ ಎಂಬುದು ನಿರಂತರವಾಗಿರುತ್ತದೆ. ಅದರಲ್ಲೂ ಹರೆಯದಲ್ಲಿ ಲೈಂಗಿಕತೆಯ ತುಡಿತ ತುಸು ಹೆಚ್ಚಿರುವುದು ವಯೋ ಸಹಜ ಗುಣ. ಪ್ರತಿ ದಿನ ಮಿಲನದಲ್ಲಿ ತೊಡಗುವುದರಿಂದ ಅನೇಕ ಆರೋಗ್ಯಕರ ಲಾಭಗಳಿದ್ದರೂ, ಅದರಿಂದ ಉಂಟಾಗುವ ಅಪಾಯವನ್ನು ಅಲ್ಲಗೆಳೆಯುವಂತಿಲ್ಲ.

ಹೆಚ್ಚಿನವರು ದಿನನಿತ್ಯದ ಒತ್ತಡದ ನಿವಾರಣೆಗಾಗಿ ಸೆಕ್ಸ್​ನಲ್ಲಿ ಭಾಗಿಯಾದರೆ, ಮತ್ತೆ ಕೆಲವರಿಗೆ ಲೈಂಗಿಕತೆ ಎಂಬುದು ರತಿಕ್ರೀಡೆಯಾಗಿದೆ. ಹೀಗಾಗಿ ಒಂದೇ ದಿನದಲ್ಲಿ ಹಲವು ಬಾರಿ ವಿವಿಧ ಭಂಗಿಗಳಲ್ಲಿ ಸಂಪರ್ಕಕ್ಕಾಗಿ ಹಾತೊರೆಯುತ್ತಾರೆ. ಆದರೆ ಇಂತಹ ಅಭ್ಯಾಸದಿಂದ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ನಿರಂತರ ಲೈಂಗಿಕ ಕ್ರಿಯೆ ಅಥವಾ ದೇಹ ಸಂಪರ್ಕವನ್ನು ಚಟವಾಗಿಸಿಕೊಂಡರೆ ದೇಹದ ಮತ್ತು ಆರೋಗ್ಯ ಮೇಲೆ ಮೇಲೆ ಉಂಟಾಗುವ ಪರಿಣಾಮಗಳೇನು? ಇದರಿಂದ ಕಂಡು ಬರುವ ಸಾಮಾನ್ಯ ಸಮಸ್ಯೆಗಳೇನು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಬಳಲಿಕೆ ಮತ್ತು ಆಯಾಸ: ಅತಿಯಾಗಿ ಲೈಂಗಿಕತೆಯು ನಿಮ್ಮ ಜೀವನ ಮೇಲೆ ಪ್ರಭಾವ ಬೀರುತ್ತದೆ. ಸೆಕ್ಸ್​ನಲ್ಲಿ ತೊಡಗಿಸಿಕೊಂಡರೆ ದೇಹದ ಕ್ಯಾಲೊರಿಗಳು ಕಡಿಮೆಯಾಗುತ್ತದೆ. ಇದು ನಿರ್ದಿಷ್ಟಮಟ್ಟದವರೆಗೆ ಮಾತ್ರ ಉತ್ತಮ. ಏಕೆಂದರೆ ಹೆಚ್ಚು ಬಾರಿ ಅಥವಾ ಅಧಿಕ ಸಮಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ದೇಹವು ನೊರ್ಪೈನ್ಫ್ರಿನ್, ಎಪಿನ್ಫ್ರಿನ್ (ಅಡ್ರಿನಾಲಿನ್) ಮತ್ತು ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಹೃದಯಬಡಿತ ಹೆಚ್ಚಾಗುವುದಲ್ಲದೆ, ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಹೃದಯ ಬಡಿತದೊಂದಿಗೆ ರಕ್ತದೊತ್ತಡ ಸಹ ಹೆಚ್ಚಾಗುತ್ತದೆ. ಇದರಿಂದ ದೇಹವು ಬಳಲುವುದಲ್ಲದೆ, ಆಯಾಸದಿಂದ ಕೂಡಿರುತ್ತದೆ. ಹೀಗಾಗಿ ಸಾಮಾನ್ಯ ಚಟುವಟಿಕೆಗಳಲ್ಲೂ ನಿಮ್ಮಲ್ಲಿ ಆಸಕ್ತಿ ಕುಂಠಿತವಾಗುತ್ತದೆ

ಉರಿಯೂತ ಮತ್ತು ಬಾವು: ಹೆಚ್ಚು ಸೆಕ್ಸ್​ನಲ್ಲಿ ತೊಡಗಿದರೆ ಜನನಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಈ ವೇಳೆ ಮಹಿಳೆಯರ ಜನನಾಂಗದ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಅವರ ಜನನಾಂಗದಲ್ಲಿ ಉರಿಯೂತ ಉಂಟಾಗಬಹುದು. ಹಾಗೆಯೇ ಪುರುಷಾಂಗದಲ್ಲಿ ಬಾವಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಉಂಟಾಗುವ ನೋವಿನಿಂದ ನಿಮ್ಮ ಸಂಗಾತಿಗೆ ಸೆಕ್ಸ್​ ಲೈಫ್ ಮೇಲೆ ಜಿಗುಪ್ಸೆ ಸಹ ಮೂಡ ಬಹುದು.

ನಿರ್ಜಲೀಕರಣ: ಸಂಗಾತಿಯೊಂದಿಗಿನ ಮಿಲನ ಕ್ರಿಯೆಯಲ್ಲಿ ಬೆವರುವುದು ಸಹಜ. ಆದರೆ ಇದೇ ಅತಿಯಾದರೆ ದೇಹದಲ್ಲಿ ತೇವಾಂಶ ಕುಂಠಿತವಾಗುತ್ತದೆ. ತುಂಬಾ ಸಮಯದವರೆಗೆ ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯರಾದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಸೆಕ್ಸ್​ನಿಂದ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದರಿಂದ ಚರ್ಮದ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳು ನಿಮಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ಹೆಚ್ಚು ನೀರು ಕುಡಿಯುವುದು ಉತ್ತಮ.

ಮೂತ್ರದ ಸೋಂಕು ಅಥವಾ ಉರಿ ಮೂತ್ರ: ಅತಿಯಾದ ಲೈಂಗಿಕ ಕ್ರಿಯೆಯಿಂದ ಮೂತ್ರನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಸೆಕ್ಸ್ ವೇಳೆ ಜನನಾಂಗಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದೇ ವೇಳೆ ಬ್ಯಾಕ್ಟೀರಿಯಾಗಳು ಉಳಿದುಕೊಳ್ಳುವಂತೆ ಮಾಡುತ್ತದೆ. ತುಂಬಾ ಸಮಯದವರೆಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಇದರ ಅಪಾಯ ಹೆಚ್ಚಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲದೆ ಒತ್ತಡ ಹೆಚ್ಚಾದಂತೆ ಮೂತ್ರನಾಳಗಳ ಭಾಗದಲ್ಲಿ ಹಾನಿಯುಂಟಾಗುವ ಸಾಧ್ಯತೆಯಿರುತ್ತದೆ. ಇದರಿಂದ ಉರಿ ಮೂತ್ರದ ಸಮಸ್ಯೆ ಸೇರಿದಂತೆ ಅನೇಕ ತೊಂದರೆಗಳಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ದೀರ್ಘಾವಧಿಯ ಲೈಂಗಿಕ ಕ್ರಿಯೆ ಮತ್ತು ನಿರಂತರ ಸೆಕ್ಸ್​ನಲ್ಲಿ ತೊಡಗಿಸಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಬೆನ್ನು ನೋವು: ಅತಿಯಾದ ಲೈಂಗಿಕಾಸಕ್ತಿ ನಿಮ್ಮ ಬೆನ್ನು ನೋವಿಗೂ ಕಾರಣವಾಗಬಹುದು. ಏಕೆಂದರೆ ನಿರಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅಥವಾ ವಿವಿಧ ಭಂಗಿಗಳಲ್ಲಿ ರಫ್ ಸೆಕ್ಸ್​ ನಡೆಸಿದರೆ ಸ್ನಾಯುಗಳು ಸವೆತಕ್ಕೊಳಗಾಗುವ ಸಾಧ್ಯತೆಯಿರುತ್ತದೆ. ಏಕೆಂದರೆ ಸಂಭೋಗದ ಸಮಯದಲ್ಲಿ ಬೆನ್ನಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ಒತ್ತಡ ಹೆಚ್ಚಾದಂತೆ ಬೆನ್ನು ನೋವಿನ ಸಮಸ್ಯೆಗಳು ನಿಮ್ಮನ್ನು ಶೀಘ್ರ ಆವರಿಸಿಕೊಳ್ಳುತ್ತದೆ. ಹೀಗಾಗಿ ಕಡಿಮೆ ಅವಧಿಯ ಲೈಂಗಿಕ ಚಟುವಟಿಕೆ ದಾಂಪತ್ಯ ಜೀವನಕ್ಕೆ ಉತ್ತಮ ಎನ್ನುತ್ತಾರೆ ಲೈಂಗಿಕ ತಜ್ಞರು.ಲೈಂಗಿಕ ದೌರ್ಬಲ್ಯ: ಮೊದಲೇ ತಿಳಿಸಿದಂತೆ ಅತಿಯಾದರೆ ಅಮೃತವು ವಿಷ ಎಂಬಂತೆ ಲೈಂಗಿಕ ಕ್ರಿಯೆಯಲ್ಲಿ ಅತಿಯಾಗಿ ತೊಡಗಿಸಿದರೆ ಅದು ದೌರ್ಬಲ್ಯಕ್ಕೆ ಕಾರಣವಾಗಬಹುದು. ಸಂಭೋಗದ ಸಮಯದಲ್ಲಿ ಹೆಚ್ಚಿನ ಹಾರ್ಮೋನುಗಳು ಬಿಡುಗಡೆಯಾಗುತ್ತದೆ. ಇಂತಹ ಸಮಯದಲ್ಲಿ ಪ್ರೊಸ್ಟಗ್ಲಾಂಡಿನ್ ಇ-2 ಹಾರ್ಮೋನು ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ನಿಮ್ಮಲ್ಲಿ ಉರಿಯೂತ, ನೋವು ಮತ್ತು ಜ್ವರದಂತಹ ಸಮಸ್ಯೆಯನ್ನು ಉಂಟು ಮಾಡಬಹುದು. ಹಾಗೆಯೇ ಇದು ಅಂಗಾಂಶಗಳ ಹಾಗೂ ನರಗಳ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಸೆಕ್ಸ್​ನಲ್ಲಿ ಆಸಕ್ತಿ ಕುಂಠಿತವಾಗಿ, ಲೈಂಗಿಕ ದೌರ್ಬಲ್ಯಕ್ಕೆ ತುತ್ತಾಗುವಿರಿ. ಇದು ನಿಮ್ಮ ದಾಂಪತ್ಯದ ಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು.
First published:April 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading