Vitamin D: ಗರ್ಭಿಣಿ ಮಹಿಳೆಯರಿಗೆ ವಿಟಮಿನ್ ಡಿ ಯಾಕಷ್ಟು ಮುಖ್ಯ? ವೈದ್ಯರ ಮಾತಲ್ಲೇ ಕೇಳಿ!

ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಕೊರತೆಯು ಅನೇಕ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಗರ್ಭಿಣಿಯರು ಬೇರೆ ಪೂರಕಗಳಿಗೆ ಕೊಡುವಷ್ಟು ಮಹತ್ವವನ್ನು ವಿಟಮಿನ್ ಡಿ ಸೇವನೆಗೂ ನೀಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗರ್ಭಾವಸ್ಥೆಯಲ್ಲಿ (Pregnancy) ಗರ್ಭಿಣಿ ಮತ್ತು ಮಗುವಿನ ಕಾಳಜಿ ತುಂಬಾ ಅವಶ್ಯಕ. ಹೊತ್ತಿಗೆ ಸರಿಯಾಗಿ ಊಟ, ಒಳ್ಳೆಯ ವಾತಾವರಣ, ಒಳ್ಳೆಯ ಗಾಳಿ, ಉತ್ತಮ ಪೋಷಕಾಂಶ ಎಲ್ಲವೂ ಮಗುವಿನ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ (Women) ವಿವಿಧ ರೀತಿಯ ಜೀವಸತ್ವಗಳು, ಪೋಷಕಾಂಶಗಳು ಮತ್ತು ಖನಿಜಗಳ ಅಗತ್ಯವಿರುತ್ತದೆ. ಮಹಿಳೆಯರು ಸಾಮಾನ್ಯವಾಗಿ ಸಾಕಷ್ಟು ವಿಟಮಿನ್ ಎ (Vitamin A) ಮತ್ತು ಸಿ (Vitamin C) ಸೇವಿಸುತ್ತಾರೆ ಆದರೆ ವಿಟಮಿನ್ ಡಿ (Vitamin D) ಪೂರಕವನ್ನು ನಿರ್ಲಕ್ಷಿಸುತ್ತಾರೆ. ಆದಾಗ್ಯೂ, ಗರ್ಭಾವಸ್ಥೆಯಲ್ಲಿ ಗರ್ಭಿಣಿ ಮಹಿಳೆಯರಿಗೆ (Pregnant Ladies) ವಿಟಮಿನ್ ಡಿ ಇತರ ಯಾವುದೇ ಪೋಷಕಾಂಶಗಳು ಮತ್ತು ಖನಿಜಗಳಂತೆ ಮುಖ್ಯವಾಗಿದೆ.

ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಕೊರತೆಯು ಅನೇಕ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಗರ್ಭಿಣಿಯರು ಬೇರೆ ಪೂರಕಗಳಿಗೆ ಕೊಡುವಷ್ಟು ಮಹತ್ವವನ್ನು ವಿಟಮಿನ್ ಡಿ ಸೇವನೆಗೂ ನೀಡಬೇಕು. ಹಾಗಾದರೆ ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿಯನ್ನು ಏಕೆ ತೆಗೆದುಕೊಳ್ಳಬೇಕು, ಅದು ಗರ್ಭಿಣಿಯರನ್ನು ಹೇಗೆ ಆರೋಗ್ಯವಾಗಿರಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Sugar Benefits: ಸಕ್ಕರೆ ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ

ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಏಕೆ ಮುಖ್ಯ?

1) ಗರ್ಭಿಣಿಯರಲ್ಲಿ ವಿಟಮಿನ್ ಡಿ ರಕ್ತದಲ್ಲಿನ ಫಾಸ್ಫರಸ್ (Phosphorous) ಮತ್ತು ಕ್ಯಾಲ್ಶಿಯಂ (Calcium) ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

2) ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಮತ್ತು ಇದು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಕಾರಣವಾಗುತ್ತದೆ.

3) ವಿಟಮಿನ್ ಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.

4) ಗರ್ಭಾವಸ್ಥೆಯಲ್ಲಿ ಆರೋಗ್ಯವಾಗಿರಲು ಬಯಸುವ ಮಹಿಳೆಯರು ದೇಹದಲ್ಲಿ ವಿಟಮಿನ್ ಡಿ ಕೊರತೆಯನ್ನು ತಪ್ಪಿಸಬೇಕು ಏಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

5) ವಿಟಮಿನ್ ಡಿ ಸೇವನೆ ಮಧುಮೇಹದ ಅಪಾಯವನ್ನು, ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಭ್ರೂಣದ ಸರಿಯಾದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.

6) ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಪ್ರಯೋಜನಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಮೂಳೆಗಳು, ಸ್ನಾಯುಗಳು, ಹಲ್ಲುಗಳನ್ನು ಬಲಪಡಿಸುತ್ತದೆ ಮತ್ತು ಉತ್ತಮ ನಿದ್ರೆಗೆ ವಿಟಮಿನ್ ಡಿ ಸಹಕಾರಿ ಅಲ್ಲದೇ ಅನೇಕ ಚರ್ಮ ಸಮಸ್ಯೆಗಳನ್ನು ಸಹ ಇದು ದೂರ ಮಾಡುತ್ತದೆ.

ವಿಟಮಿನ್ ಡಿ ಕೊರತೆಯ ಅಪಾಯಗಳು

* ವಿಟಮಿನ್ ಡಿ ಕೊರತೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಅಥವಾ ಅವುಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಇದು ಮಗುವಿನ ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗಬಹುದು.

* ವಿಟಮಿನ್ ಡಿ ಕೊರತೆಯು ನವಜಾತ ಶಿಶುವಿನ ತೂಕದ ಮೇಲೂ ಪರಿಣಾಮ ಬೀರುವು ಸಾಧ್ಯತೆಗಳಿವೆ.

* ಗರ್ಭಿಣಿಯರಿಗೆ ರಕ್ತದೊತ್ತಡ ಸಮಸ್ಯೆಗಳಿರಬಹುದು, ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳದಿರುವುದು, ಕಡಿಮೆ ಹೊರಗೆ ಹೋಗುವುದು, ಚರ್ಮದ ಪಿಗ್ಮೆಂಟೇಶನ್, ಹೆಚ್ಚು ಸನ್‌ಸ್ಕ್ರೀನ್ ಬಳಸುವುದು ಮುಂತಾದ ವಿಷಯಗಳು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು.

* ವಿಟಮಿನ್ ಡಿ ಕೊರತೆಯಿರುವ ಗರ್ಭಿಣಿ ರಲ್ಲಿ ಪ್ರಿ-ಎಕ್ಲಾಂಪ್ಸಿಯಾ, ಯೋನಿನೋಸಿಸ್ ಬ್ಯಾಕ್ಟೀರಿಯಾ, ಗರ್ಭಾವಸ್ಥೆಯ ಮಧುಮೇಹ, ಗರ್ಭಪಾತ, ಅವಧಿಪೂರ್ವ ಹೆರಿಗೆ ಅಥವಾ ಭ್ರೂಣದ ಅಸಹಜ ಬೆಳವಣಿಗೆಯ ಅಪಾಯವನ್ನು ಉಂಟುಮಾಡುತ್ತದೆ.

* ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಕೊರತೆಯ ಲಕ್ಷಣಗಳು ಯಾವುವೆಂದರೆ ಮೂಳೆಗಳು ಮತ್ತು ಸ್ನಾಯುಗಳಲ್ಲಿ ನಿರಂತರ ನೋವು, ದಣಿವು, ದೌರ್ಬಲ್ಯ, ಮನಸ್ಥಿತಿ ಬದಲಾವಣೆಗಳು ಮತ್ತು ಕಿರಿಕಿರಿಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Jaundice: ಕಾಮಾಲೆ ರೋಗದ ಬಗ್ಗೆ ಆತಂಕ ಬೇಡ! ಈ ಮನೆ ಮದ್ದುಗಳನ್ನು ಬಳಸಿ ಪರಿಹಾರ ಸಿಗುತ್ತೆ

ಗರ್ಭಿಣಿಯರು ವಿಟಮಿನ್ ಡಿ ಪೂರಕಗಳ ಸೇವನೆ ಜೊತೆಗೆ ಸೂರ್ಯನ ಬೆಳಕು ವಿಟಮಿನ್ ಡಿ ಯ ನೈಸರ್ಗಿಕ ಮತ್ತು ಮೂಲವಾಗಿದ್ದು, ಸ್ವಲ್ಪ ಹೊತ್ತು ಪ್ರತಿನಿತ್ಯ ಸೂರ್ಯನ ಬೆಳಕಲ್ಲಿ ಕುಳಿತುಕೊಳ್ಳುವುದರಿಂದ ನೈಸರ್ಗಿಕವಾಗಿ ವಿಟಮಿನ್ ಡಿಯನ್ನು ಪಡೆಯಬಹುದು. ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳಾದ ಹಾಲು, ಮೊಸರು, ಕಾಟೇಜ್ ಚೀಸ್, ಕೊಬ್ಬಿನ ಮೀನು ಮತ್ತು ಕಿತ್ತಳೆ ರಸದಂತಹ ಆಹಾರ ಪದಾರ್ಥಗಳನ್ನು ಸೇವಿಸಬಹುದು. ಅಂದಹಾಗೆ ಗರ್ಭಿಣಿಯರಿಗೆ ಮಾತ್ರವಲ್ಲದೇ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ನಮಗೆ ವಿಟಮಿನ್ ಡಿ ಅವಶ್ಯಕತೆ ತುಂಬಾನೆ ಮುಖ್ಯ.
Published by:Latha CG
First published: