ದೇಹದ ಬೊಜ್ಜು(Cholesterol), ಅತಿಯಾದ ತೂಕ ಹಲವು ರೋಗಗಳಿಗೆ ಎಡೆಮಾಡಿಕೊಡುತ್ತದೆ, ಅನೇಕ ಕಾಯಿಲೆಗಳು ಕೂಡ ಬರುತ್ತವೆ. ಹೀಗಾಗಿ ತೂಕ ನಷ್ಟಕ್ಕೆ(Weight Loss)ನಮ್ಮಲ್ಲಿ ಹೆಚ್ಚಿನ ಜನರು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುವುದನ್ನು ನಾವು ನೋಡಿದ್ದೇವೆ. ತೂಕ ನಷ್ಟಕ್ಕೆ ನಾವು ಸೇವಿಸುವ ಆಹಾರ (Food)ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಾವು ಸೇವಿಸುವ ಆಹಾರ ನಮ್ಮ ದೇಹದ (Body)ತೂಕ ಮತ್ತು ಒಟ್ಟಾರೆ ಆರೋಗ್ಯದ (Health)ಮೇಲೆ ಪರಿಣಾಮ ಬೀರುತ್ತದೆ. ಹಾಗೆಂದ ಮಾತ್ರಕ್ಕೆ ತೂಕನಷ್ಟ ವಿಷಯಕ್ಕೆ ಬಂದಾಗ ಆಹಾರ ಸೇವನೆಯನ್ನು ನಾವು ಕಡಿಮೆ ಮಾಡಬಾರದು. ನಾವು ಸೇವಿಸುವ ಆಹಾರದಲ್ಲಿ ಯಾವ ರೀತಿ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಮ್ಮ ತೂಕ ನಿಯಂತ್ರಣಕ್ಕೆ ಬರುತ್ತದೆ ಅಥವಾ ನಮ್ಮ ತೂಕ ಕಡಿಮೆಯಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಬೇಕು.
ಇನ್ನು ಅಧಿಕ ಬೊಜ್ಜಿನ ಸಮಸ್ಯೆಯಿಂದ ಟೈಪ್ 2 ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಕೀಲು ನೋವಿನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಿರುವಾಗ ನಿಮ್ಮ ದೇಹದ ತೂಕ ನಿಯಂತ್ರಿಸುವುದು ಅವಶ್ಯಕ.ಹೀಗಾಗಿ ತೂಕ ಇಳಿಸಿಕೊಳ್ಳುವವರು ತಮ್ಮ ಆಹಾರದಲ್ಲಿ ಕೆಲವೊಂದಷ್ಟು ಪದಾರ್ಥಗಳನ್ನು ಸೇವಿಸುವುದು ಬಹುಮುಖ್ಯ. ಹೌದು ನಮ್ಮ ಆಹಾರದಲ್ಲಿ ಸಾಸಿವೆ ಎಂತಹ ಪದಾರ್ಥಗಳನ್ನು ಸೇರಿಸಿ ಕೊಳ್ಳುವುದರಿಂದ ಬಹುಬೇಗ ತೂಕನಷ್ಟ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಈ ಡಯೆಟ್ ಟಿಪ್ಸ್ ಫಾಲೋ ಮಾಡಿದ್ರೆ ಸಣ್ಣ ಆಗ್ತೀರಂತೆ!
ಸಾಸಿವೆಯಿಂದ ಇಳಿಯಲಿದೆ ಅಧಿಕ ಪ್ರಮಾಣದ ತೂಕ...
ಎಲ್ಲರ ಅಡುಗೆ ಮನೆಯಲ್ಲಿ ನಿತ್ಯ ಸಿಗುವ ವಸ್ತುಗಳಲ್ಲಿ ಸಾಸಿವೆ ಕೂಡ ಒಂದು.. ಸಾಸಿವೆ ಇಲ್ಲದೆ ಅಡುಗೆ ಯಾವ ಒಗ್ಗರಣೆ ಸಾಧ್ಯವೇ ಇಲ್ಲ. ರುಚಿರುಚಿಯಾದ ಚಟ್ನಿಯಿಂದ ಹಿಡಿದು ಸಾಂಬಾರಿಗೂ ಒಗ್ಗರಣೆ ಹಾಕಲು ಸಾಸಿವೆ ಅಗತ್ಯ. ಸಾಸಿವೆ ಬಳಸಿ ಹಾಕಿದ ಒಗ್ಗರಣೆ ಅಡುಗೆಗೆ ಹೊಸ ರುಚಿಯನ್ನು ನೀಡುತ್ತದೆ. ಜೊತೆಗೆ ಸಾಸಿವೆ ಹಾಕಿದ ಅಡುಗೆ ತಿನ್ನುವುದರಿಂದ ನಮ್ಮ ದೇಹದಲ್ಲಿನ ಹಲವು ರೋಗಗಳು ನಮ್ಮನ್ನ ಬಿಟ್ಟು ಹೋಗಿ ಆರೋಗ್ಯ ಪಡೆದುಕೊಳ್ಳಲು ಸಹಾಯಕಾರಿ. ಇದರ ಜೊತೆಗೆ ತೂಕನಷ್ಟ ಮಾಡಿಕೊಳ್ಳಬೇಕು ಎಂದು ಕಾಯುತ್ತಿರುವರಿಗೆ ಸಾಸಿವೆ ಕಾಳಿನಿಂದ ಉಪಯೋಗವಾಗಲಿದೆ
ಸಾಸಿವೆ ಕಾಳಿನಿಂದ ಸಿಗಲಿದೆ ಮಹತ್ತರ ಪ್ರಯೋಜನ
ಅಡುಗೆಗಳಲ್ಲಿ ಸಾಸಿವೆ ಕಾಳುಗಳನ್ನು ಸೇರಿಸಿರುವುದರಿಂದ ನಮ್ಮಲ್ಲಿ ಪೌಷ್ಟಿಕಾಂಶದ ಅಂಶ ಹೆಚ್ಚುತ್ತದೆ.. ಹೀಗಾಗಿ ದೇಹದ ಅಂಗಾಂಗಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದರಲ್ಲೂ ತೂಕನಷ್ಟ ಮಾಡಿಕೊಳ್ಳಬೇಕು ಎಂದು ಡಯಟ್ ಜಿಮ್ ವ್ಯಾಯಾಮ ಸೇರಿ ಹಲವಾರು ಮಾರ್ಗಗಳನ್ನು ಅನುಸರಿಸುತ್ತಿರುವವರಿಗೆ ಸಾಸಿವೆಕಾಳು ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ..
ಪ್ರಸ್ತುತ ದಿನಮಾನಗಳಲ್ಲಿ ಜನರು ಕುಳಿತಲ್ಲೇ ಕುಳಿತು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.. ಅದರಲ್ಲೂ ಕೊರೋನಾ ಬಂದಮೇಲೆ ವರ್ಕ್ ಫ್ರಮ್ ಹೋಮ್ ಎಂಬುದು ಹೆಚ್ಚಾಗಿದೆ.
ಹೀಗಾಗಿ ಮನೆಯಲ್ಲಿ ಮಾಡಿದ ಅಡುಗೆಗಳನ್ನು ಹೆಚ್ಚು ಸೇವನೆ ಮಾಡುತ್ತಾರೆ ರುಚಿಯಾಗಿ ತಿನಿಸುಗಳನ್ನು ತಿನ್ನುತ್ತಿರುವುದರಿಂದ, ದೈಹಿಕ ಚಟುವಟಿಕೆಗಳು ಕಡಿಮೆಯಾಗಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದು ಅತ್ಯಗತ್ಯ.
ಇದೇ ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದರ ಜೊತೆಗೆ ನಾವು ತಿನ್ನುವ ಆಹಾರದಲ್ಲಿ ಸಾಸಿವೆಯನ್ನು ನಿಯಮಿತವಾಗಿ ಸೇರಿಸುತ್ತಾ ಬಂದರೆ ತೂಕ ಇಳಿಕೆ ಮಾಡಿಕೊಳ್ಳಲು ಸುಲಭವಾಗುತ್ತದೆ. ಇನ್ನು ವಿಶೇಷ ಅಂದರೆ ಸಾಸಿವೆಕಾಳು ಮಾತ್ರವಲ್ಲ ಸಾಸಿವೆ ಸಸ್ಯದ ಭಾಗಗಳು ಸಹ ತೂಕ ಇಳಿಸಿಕೊಳ್ಳಲು ಉಪಯೋಗವಾಗಿವೆ.
ತೂಕ ಇಳಿಕೆಗೆ ಸಾಸಿವೇಕಾಳು ಹೇಗೆ ಸಹಕಾರಿ..?
ಸಾಸಿವೆ ಬೀಜಗಳು ವಿವಿಧ ರೀತಿಯ ಪೋಷಕಾಂಶಗಳಿಂದ ತುಂಬಿವೆ.. ಸಾಸಿವೆ ಕಬ್ಬಿಣ, ಕ್ಯಾಲ್ಸಿಯಂ ಸೆಲೆನಿಯಮ್ ಮತ್ತು ರಂಜಕವನ್ನು ಹೊಂದಿರುತ್ತದೆ ಮತ್ತು ಈ ಎಲ್ಲಾ ಖನಿಜಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಿಧಾನವಾಗಿ ತೂಕ ಕಡಿಮೆಯಾಗುತ್ತಾ ಹೋಗುತ್ತದೆ.
ಇನ್ನು ಸಾಸಿವೆಗಳು ತುಲನಾತ್ಮಕವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಆದ್ದರಿಂದ ನಿಮ್ಮ ದೈನಂದಿನ ಕ್ಯಾಲೋರಿಗಳ ಸೇವನೆಯ ಬಗ್ಗೆ ಚಿಂತಿಸದೆ ನೀವು ಅವುಗಳನ್ನು ನಿಮ್ಮ ಆಹಾರದಲ್ಲಿ ಸುಲಭವಾಗಿ ಸೇರಿಸಬಹುದು. ಸಾಸಿವೆ ಪೇಸ್ಟ್ನ್ನು ಸಲಾಡ್ಗೆ ಹಾಕಿಕೊಂಡು ಸೇವಿಸಬಹುದು.
ಸಾಸಿವೆ ಎಣ್ಣೆಯಲ್ಲಿ ಅಡುಗೆ ಮಾಡುವುದು ಉತ್ತಮ ಆರೋಗ್ಯ ಮತ್ತು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.
ಇದನ್ನೂ ಓದಿ: ಮುಸುಕಿನ ಜೋಳ ತಿನ್ನಿ, ಈ 10 ಲಾಭಗಳನ್ನು ಪಡೆಯಿರಿ
ಯಾರು ಸಾಸಿವೆ ಸೇವನೆ ಮಾಡಬಾರದು..?
ಸಾಸಿವೆ ಸೇವನೆ ತೂಕ ನಷ್ಟಕ್ಕೆ ಸಹಾಯಮಾಡುತ್ತದೆ ಹೀಗೆಂದ ಮಾತ್ರಕ್ಕೆ ಎಲ್ಲರೂ ಸಾಸಿವೆ ತಿನ್ನುವಂತಿಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಸಾಸಿವೆ ಸೇವನೆ ಮಾಡುವುದರಿಂದ ಅತಿಸಾರ ಹಾಗೂ ಹೊಟ್ಟೆ ನೋವು ಬರಬಹುದು.
ಮಧುಮೇಹ ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಸೀಮಿತ ಪ್ರಮಾಣದಲ್ಲಿ ಸಾಸಿವೆ ತಿನ್ನಬೇಕು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಸಹ ಸಾಸಿವೆಯನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ