ಉತ್ತಮ ಆರೋಗ್ಯದ ಪ್ರಾಮುಖ್ಯತೆ; ನಿಮ್ಮ ಜೀವನಶೈಲಿ ಸುಧಾರಿಸಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ...!

ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಉಪಾಹಾರವನ್ನು ಎಂದಿಗೂ ಬಿಡಬಾರದು. ಆರೋಗ್ಯಕರ ಉಪಹಾರವು ನಿಮ್ಮನ್ನು ದಿನವಿಡೀ ಸದೃಢವಾಗಿ ಮತ್ತು ತುಂಬಾ ಆಕ್ಟೀವ್ ಆಗಿ ಇಡುತ್ತದೆ. ದಿನದ ಯಾವುದೇ ಊಟಕ್ಕೆ ಹೋಲಿಸಿದರೂ ಇದು ಹೆಚ್ಚಿನ ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ನೀಡುತ್ತದೆ.

ಆರೋಗ್ಯ

ಆರೋಗ್ಯ

 • Share this:
  ಆರೋಗ್ಯಕರ ಜೀವನ ಎಂದರೆ ಉತ್ತಮ ಆರೋಗ್ಯ ಮತ್ತು ವಿವೇಕಯುತ ಮನಸ್ಸು. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ನಿಮ್ಮ ಮನಸ್ಸು ಮತ್ತು ದೇಹಕ್ಕೆ ಸೂಕ್ತವಾಗಿರುವುದನ್ನು ನೀವು ಮಾಡಬೇಕು. ನಿಮ್ಮ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಮೂಡುತ್ತದೆ. ಇದು ನಿಮ್ಮ ಸ್ವಾಭಿಮಾನ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸುವುದು ಮುಖ್ಯ. ಧೂಮಪಾನ, ಮಾದಕ ದ್ರವ್ಯ ಸೇವನೆ ಮತ್ತು ಮದ್ಯ ಸೇವನೆಯಂತಹ ಕೆಟ್ಟ ಅಭ್ಯಾಸಗಳಿಗೆ ಯಾರೂ ಬಲಿಯಾಗಬಾರದು. ಈ ಕೆಟ್ಟ ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಅಪಾರ ಹಾನಿಯುಂಟು ಮಾಡುತ್ತವೆ. ಒಮ್ಮೆ ನೀವು ವ್ಯಸನಿಯಾಗಿದರೆ ಸಾಕು ಅದರಿಂದ ಹೊರಬರುವುದು ಕಷ್ಟಕರ.

  ಆರೋಗ್ಯವಾಗಿರಲು ಸಾಕಷ್ಟು ಮಾರ್ಗಗಳಿವೆ. ಆರೋಗ್ಯಕರ ಜೀವನಶೈಲಿ ರೋಗಗಳನ್ನು ತಡೆಯುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಒಳ್ಳೆಯ ಅಭ್ಯಾಸಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ. ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವು ಅವನು ಹೇಗೆ ತನ್ನ ಜೀವನವನ್ನು ಆರಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಜಂಕ್ಫುಡ್ ತಿನ್ನುವುದು ಮತ್ತು ತಡವಾಗಿ ಮಲಗುವ ದಿನಚರಿಯನ್ನು ತಪ್ಪಿಸಿ. ಆರೋಗ್ಯವಾಗಿರಲು ಸಾಕಷ್ಟು ವ್ಯಾಯಾಮ, ನಿದ್ರೆ ಮತ್ತು ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ.

  ಈಗಾಗಲೇ ಅನಾರೋಗ್ಯಕರ ಜೀವನಶೈಲಿಗೆ ನೀವು ಒಗ್ಗಿಕೊಂಡಿದ್ದರೆ ಅದನ್ನು ಸುಧಾರಿಸಲು ಇಂದಿನಿಂದಲೇ ಬದಲಾಯಿಸಿಕೊಳ್ಳಲು ಒಂದು ಉತ್ತಮ ಅವಕಾಶವಿದೆ. ಪ್ರತಿದಿನದ ನಿಮ್ಮ ದಿನಚರಿಯಲ್ಲಿ ಪಾಲಿಸಬೇಕಾದ ಕೆಲವು ಆರೋಗ್ಯಕರ ಅಭ್ಯಾಸಗಳಿವೆ. ಇವುಗಳು ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

  ರಾಮನ ಲೆಕ್ಕ ಕೇಳೋಕೆ ಇವರ್ಯಾರು?; ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಸಚಿವ ಆರ್.ಅಶೋಕ್ ತಿರುಗೇಟು

  ನಿಮ್ಮ ಜೀವನಶೈಲಿ ಸುಧಾರಿಸಲು 5 ಅಭ್ಯಾಸಗಳು

  ಹೆಚ್ಚು ವ್ಯಾಯಾಮ ಮಾಡಿ:

  ಆರೋಗ್ಯವನ್ನು ಕಾಪಾಡಿಕೊಳ್ಳಲು ಕೇವಲ ಕೆಲಸ ಮಾಡುವುದು ಸಾಕಾಗುವುದಿಲ್ಲ. ನಿಮ್ಮನ್ನು ಸದೃಢವಾಗಿರಿಸಿಕೊಳ್ಳಲು ನೀವು ಪ್ರತಿದಿನವೂ ವ್ಯಾಯಾಮ ಮಾಡಬೇಕು. ದೈಹಿಕವಾಗಿ ಸಕ್ರಿಯರಾಗಿರುವುದು ಬಹಳ ಮುಖ್ಯ. ನಿಮ್ಮ ಒಟ್ಟಾರೆ ದೇಹದ ಬೆಳವಣಿಗೆಗೆ ಪ್ರತಿದಿನ ತಪ್ಪದೇ ವ್ಯಾಯಾಮ ಮಾಡಬೇಕು. ನಿಮ್ಮ ಜೀವನಶೈಲಿ ಸುಧಾರಿಸಲು ಬಯಸಿದರೆ ಬೆಳಿಗ್ಗೆ ಮತ್ತು ಸಂಜೆ ನಡಿಗೆ ಕೂಡ ಪ್ರಯೋಜನಕಾರಿಯಾಗಿದೆ.

  ಒತ್ತಡದ ಮಟ್ಟ ನಿರ್ವಹಿಸಿ:

  ಅತಿಯಾದ ಒತ್ತಡವು ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ನಿಮ್ಮ ಮಾನಸಿಕ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿದ ನಂತರ ಇದು ನಿಮ್ಮ ದೈಹಿಕ ಆರೋಗ್ಯಕ್ಕೂ ಗಂಭೀರ ನಷ್ಟವನ್ನುಂಟುಮಾಡುತ್ತದೆ. ನಿಮ್ಮ ಆತಂಕವನ್ನು ಹೇಗೆ ಶಾಂತಗೊಳಿಸಬೇಕು ಮತ್ತು ಖಿನ್ನತೆಗೆ ಒಳಗಾದಾಗ ನಿಮ್ಮ ಮನಸ್ಥಿತಿಯನ್ನು ಹೇಗೆ ಸುಧಾರಿಸಿಕೊಳ್ಳಬೇಕೆಂಬುದನ್ನು ನೀವು ಕಲಿಯಬೇಕು. ಒತ್ತಡಮಯ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ತಿಳಿಯುವುದು ಬಹಳ ಮುಖ್ಯ.

  ಬೆಳಗಿನ ಉಪಾಹಾರ ಬಿಡಬೇಡಿ:

  ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಉಪಾಹಾರವನ್ನು ಎಂದಿಗೂ ಬಿಡಬಾರದು. ಆರೋಗ್ಯಕರ ಉಪಹಾರವು ನಿಮ್ಮನ್ನು ದಿನವಿಡೀ ಸದೃಢವಾಗಿ ಮತ್ತು ತುಂಬಾ ಆಕ್ಟೀವ್ ಆಗಿ ಇಡುತ್ತದೆ. ದಿನದ ಯಾವುದೇ ಊಟಕ್ಕೆ ಹೋಲಿಸಿದರೂ ಇದು ಹೆಚ್ಚಿನ ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ನೀಡುತ್ತದೆ.

  ಸರಿಯಾದ ಸಮಯಕ್ಕೆ ನಿದ್ರೆ:

  ನಿಮ್ಮ ಮಲಗುವ ಮಾದರಿಯು ನಿಮ್ಮ ಮನಸ್ಥಿತಿ ಮತ್ತು ಆರೋಗ್ಯವನ್ನು ನಿರ್ಧರಿಸುತ್ತದೆ. ನೀವು ಸರಿಯಾದ ಸಮಯಕ್ಕೆ ಮಲಗುವ ದಿನಚರಿಯನ್ನು ರೂಡಿಸಿಕೊಳ್ಳದಿದ್ದರೆ ಅದು ದಿನವಿಡೀ ನಿಮ್ಮ ಜೀವನಶೈಲಿಯ ಮೇಲೆ ಪ್ರಭಾವ ಬೀರುತ್ತದೆ. ತಪ್ಪಾದ ನಿದ್ರಾ ವೇಳಾಪಟ್ಟಿಯು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಆರೋಗ್ಯಕರ ಜೀವನ ನಡೆಸಲು ಮೊದಲು ನೀವು ಸಾಕಷ್ಟು ನಿದ್ರೆ ಮಾಡಬೇಕು. ತಡವಾಗಿ ಮಲಗುವುದನ್ನು ಆದಷ್ಟು ತಪ್ಪಿಸಿರಿ.

  ಉತ್ತಮ ಆಹಾರ ಸೇವಿಸಿ:

  ಆರೋಗ್ಯವಾಗಿರಲು ನೀವು ಆರೋಗ್ಯಕರ ಆಹಾರ ಸೇವಿಸಬೇಕು. ಸಮತೋಲಿತ ಆಹಾರವು ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ನಿಮ್ಮ ದೇಹ ಮತ್ತು ಮನಸ್ಸಿನ ಸುಗಮ ಕಾರ್ಯನಿರ್ವಹಣೆ ಸರಿಯಾಗಿರಬೇಕೆಂದರೆ ನಿಮ್ಮ ಆಹಾರಕ್ರಮದತ್ತ ಗಮನ ಹರಿಸಬೇಕು. ನಿಮ್ಮ ಆಹಾರಕ್ರಮ ಸುಧಾರಿಸುವುದು ನಿಮ್ಮ ಜೀವನಶೈಲಿಯನ್ನು ಸುಧಾರಿಸುವ ಪ್ರಮುಖ ಹೆಜ್ಜೆಯಾಗಿದೆ.

  ಈ ಎಲ್ಲಾ ಆರೋಗ್ಯಕರ ಅಭ್ಯಾಸಗಳು ನಿಮ್ಮ ಜೀವನಶೈಲಿಯನ್ನು ಸುಧಾರಿಸುತ್ತವೆ. ಹೀಗಾಗಿ ಉತ್ತಮ ಆರೋಗ್ಯ ಮತ್ತು ಜೀವನಶೈಲಿಗೆ ಪ್ರತಿದಿನವೂ ಇವುಗಳನ್ನು ಪಾಲಿಸುವುದು ಬಹಳ ಮುಖ್ಯ.
  Published by:Latha CG
  First published: