• Home
  • »
  • News
  • »
  • lifestyle
  • »
  • Raw Coconut: ಹಸಿ ತೆಂಗಿನಕಾಯಿ ತಿಂದ್ರೆ ಸಿಗುವ ಲಾಭಗಳು ಒಂದೆರಡಲ್ಲ..!

Raw Coconut: ಹಸಿ ತೆಂಗಿನಕಾಯಿ ತಿಂದ್ರೆ ಸಿಗುವ ಲಾಭಗಳು ಒಂದೆರಡಲ್ಲ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Raw Coconut Importance: ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಅಂಶಗಳು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

  • Share this:

    ತೆಂಗಿನ ಕಾಯಿಯನ್ನು(Coconut) ಸಾಮಾನ್ಯ ಎಲ್ಲಾ ಭಾರತೀಯ ಅಡುಗೆಗಳಲ್ಲಿಯೂ(Indian Food) ಬಳಸಿಕೊಳ್ಳಲಾಗುತ್ತೆ. ತೆಂಗಿನ ಕಾಯಿಲ್ಲದೆ ಅಡುಗೆಯೇ(Food) ರುಚಿಸುವುದಿಲ್ಲ.(Taste) ಆದರೆ ಕೇವಲ ರುಚಿಗಷ್ಟೇ ತೆಂಗಿನ ಕಾಯನ್ನು ಬಳಸಿಕೊಳ್ಳುವುದಲ್ಲ, ಅದರಲ್ಲಿ ಆರೋಗ್ಯಕ್ಕೆ(Health) ಅನುವಾಗುವ ಹಲವು ಅಂಶಗಳೂ ಅಡಗಿದೆ. ತೆಂಗಿನ ಕಾಯಿ ಆಹಾರ ಮತ್ತು ಔಷಧ(Medicine) ಎರಡರಲ್ಲೂ ಬಳಸಿಕೊಳ್ಳಲಾಗುತ್ತೆ. ಹಸಿ ತೆಂಗಿನ ತಿರುಳಿನಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ಸೆಲೆನಿಯಮ್, ಸತು ಇತ್ಯಾದಿ ಪೋಷಕಾಂಶಗಳಿವೆ. ಇದು ಆರೋಗ್ಯಕರ ಕೊಬ್ಬಿನಿಂದ ಕೂಡಿದ್ದು ಆರೋಗ್ಯಕರ ದೇಹ ಮತ್ತು ಸಕ್ರಿಯ ಮನಸ್ಸಿಗೆ ಒಳ್ಳೆಯದಾಗಿವೆ. ಹಸಿ ತೆಂಗಿನ ತಿರುಳನ್ನು ಪ್ರತಿದಿನ ಸೇವಿಸುವುದರಿಂದ ಫೋಲೇಟ್, ವಿಟಮಿನ್ ಸಿ ಮತ್ತು ಥಿಯಾಮಿನ್ ಮೊದಲಾದವು ಲಭ್ಯವಾಗುವ ಮೂಲಕ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.


    1)ಕೊಲೆಸ್ಟ್ರಾಲ್ ನಿಯಂತ್ರಣ: ಸ್ಯಾಚುರೇಟೆಡ್ ಕೊಬ್ಬು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.  ಆದ್ದರಿಂದ ಪ್ರತಿದಿನ ಸ್ವಲ್ಪ ತೆಂಗಿನಕಾಯಿ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.  ತೆಂಗಿನಕಾಯಿ ಅಂದರೆ ಒಣಗಿರುವ ಕಾಯಿಯನ್ನಾದರೂ ಸೇವಿಸಬಹುದು ಅಥವಾ ಹಸಿ ಕಾಯಿಯಾದರೂ ಸರಿ. ಅದರಲ್ಲಿ ಹೇರಳವಾದ ವಿಟಮಿನ್ ಮಿನರಲ್ ಅಂಶ ಇರುತ್ತದೆ.


    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆ ಇದ್ರೆ ಮಿಸ್​ ಮಾಡ್ದೇ ಇವುಗಳನ್ನು ತಿನ್ನಿ


    2)ರೋಗನಿರೋಧಕ ಶಕ್ತಿ ಹೆಚ್ಚಳ: ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಅಂಶಗಳು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತೆಂಗಿನಕಾಯಿ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ.  ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಮೂಳೆಗಳು ಬಲಿಷ್ಟವಾಗುತ್ತದೆ.


    3)ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ತೆಂಗಿನಕಾಯಿ ಸೇವನೆಯು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದನ್ನು ಬಾದಾಮಿ, ವಾಲ್‌ನಟ್ಸ್ ಮತ್ತು ಸಕ್ಕರೆ ಕ್ಯಾಂಡಿಯೊಂದಿಗೆ ಬೆರೆಸಿ ತಿನ್ನಿರಿ. ತೆಂಗಿನಕಾಯಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.


    4)ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ನಿವಾರಣೆ: ಹಸಿ ತೆಂಗಿನಕಾಯಿಯ ತಿರುಳನ್ನು ತಿನ್ನುವುದರಿಂದ ಹೊಟ್ಟೆಯ ತೊಂದರೆಗಳು, ಮಲಬದ್ಧತೆ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಮಲಬದ್ಧತೆಗೆ ಒಂದು ಪ್ರಮುಖ ಕಾರಣವೆಂದರೆ ಆಹಾರದಲ್ಲಿ ನಾರಿನಂಶದ ಕೊರತೆ. ಅಹಾರದಲ್ಲಿರುವ ಕರಗುವ ಮತ್ತು ಕರಗದ ನಾರುಗಳು ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಹಸಿ ತೆಂಗಿನಕಾಯಿಯಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ ಮತ್ತು ಇದರಿಂದ ಇದು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕರುಳಿನಲ್ಲಿ ಆಹಾರದ ಚಲನೆಯನ್ನೂ ಸುಲಭಗೊಳಿಸುತ್ತದೆ.


    5)ಚರ್ಮುದ ಕಾಂತಿ: ಹಸಿ ತೆಂಗಿನಕಾಯಿಯ ತಿರುಳನ್ನು ಸೇವಿಸುವುದರಿಂದ ನಿಮ್ಮ ತ್ವಚೆ ಮೃದು, ನಯ ಮತ್ತು ಕಾಂತಿಯುಕ್ತವಾಗಲು ಸಾಧ್ಯವಾಗುತ್ತದೆ. ಹಸಿ ತೆಂಗಿನಕಾಯಿಯಲ್ಲಿರುವ ಮೊನೊಲೌರಿನ್ ಮತ್ತು ಲಾರಿಕ್ ಆಮ್ಲ ಗಳು ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿವೆ. ಆದ್ದರಿಂದ, ಹಸಿ ತೆಂಗಿನಕಾಯಿಯ ತಿರುಗಳನ್ನು ಸೇವಿಸುವುದರಿಂದ ಮೊಡವೆ ಮತ್ತು ಚರ್ಮದ ಇತರ ಸಮಸ್ಯೆಗಳನ್ನು ನಿವಾರಿಸುವ ಜೊತೆಗೇ ಇವು ಬಾರದಂತೆ ತಡೆಗಟ್ಟಬಹುದು.


    ಇದನ್ನೂ ಓದಿ: ತೂಕ ಕಡಿಮೆ ಆಗ್ಬೇಕು ಅಂದ್ರೆ ಬೆಳಗ್ಗೆ ಇವುಗಳನ್ನ ತಿನ್ನಲೇಬೇಡಿ


    6)ಜಂತು ಸಮಸ್ಯೆ:ಹೊಟ್ಟೆಯಲ್ಲಿ ಜಂತುಗಳಿದ್ದರೆ, ರಾತ್ರಿ ಮಲಗುವ ಮೊದಲು ಮತ್ತು ಬೆಳಿಗ್ಗೆ 1 ಚಮಚ ತೆಂಗಿನಕಾಯಿ ಪುಡಿಯನ್ನು ಸೇವಿಸಿ. ಇದರಿಂದ ಹೊಟ್ಟೆಯಲ್ಲಿನ ಜಂತು ಹುಳುಗಳ ಸಮಸ್ಯೆ ದೂರವಾಗುತ್ತದೆ.


     

    Published by:ranjumbkgowda1 ranjumbkgowda1
    First published: