Pitru Paksha 2021: ಇಂದಿನಿಂದ ಪಿತೃಪಕ್ಷ ಆರಂಭ- ಆಚರಣೆ ಹಿಂದಿನ ಇತಿಹಾಸ ಮತ್ತು ಮಹತ್ವ ಇಲ್ಲಿದೆ..

Importance Of Pitru Paksha: ಪೂರ್ವಜರು ತಮ್ಮ ಪಾಲನ್ನು ಪಡೆದು ಸಂತೋಷಪಡುತ್ತಾರೆ ಮತ್ತು ಆಶೀರ್ವದಿಸುತ್ತಾರೆ  ಎನ್ನುವ ನಂಬಿಕೆ ಸಹ ಇದೆ.  ಶ್ರಾದ್ಧವನ್ನು ಮಾಡದವರ ಹಿರಿಯರಿಗೆ ಮೋಕ್ಷ ಸಿಗುವುದಿಲ್ಲ ಮತ್ತು ನಂತರ ಪಿತೃದೋಷ ಲಭಿಸುತ್ತದೆ ಎಂಬುದು ಮತ್ತೊಂದು ನಂಬಿಕೆ. ಪಿತೃದೋಷದಿಂದ ಪರಿಹಾರ ಪಡೆಯಲು , ಪೂರ್ವಜರಿಗೆ ಶ್ರಾದ್ಧ ಅಥವಾ ಪೂಜೆಯನ್ನು ಮಾಡುವುದು ಬಹಳ  ಅವಶ್ಯಕ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಂದೂ ಧರ್ಮದಲ್ಲಿ ಶಾದ್ಧ ಕಾರ್ಯಕ್ಕೆ ವಿಶೇಷವಾದ ದೈವಿ  ಸ್ಥಾನವಿದೆ. ಪಿತೃ ಪಕ್ಷದಲ್ಲಿ(Pitru Paksha) ತಮ್ಮ ಕುಟುಂಬದ ಸದಸ್ಯರಿಂದ ಪಿತೃ ದಾನವನ್ನು ಸ್ವೀಕರಿಸಲು ಎಲ್ಲಾ ಪಿತೃಗಳನ್ನು ಯಮರಾಜನುYama) ತನ್ನ ಸೆರೆಯಿಂದ ಮುಕ್ತಗೊಳಿಸುತ್ತಾನೆ ಎನ್ನುವ ನಂಬಿಕೆಯಿದೆ.ಹಾಗಾಗಿ  ಪೂರ್ವಜರ ಆತ್ಮದ ಶಾಂತಿಗಾಗಿ, ಭಾದ್ರಪದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಅಶ್ವಿನ್ ಮಾಸದ ಅಮಾವಾಸ್ಯೆಯವರೆಗೆ ಪಿತೃ ಪಕ್ಷ ಆಚರಣೆ ಮಾಡಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರ ಅದರ ಹಿಂದಿನ ಪುರಾಣವೇನು? ಆಚರಣೆ ಮಾಡುವ ವಿಧಾನ ಹೇಗೆ? ಎಂಬುದು ಇಲ್ಲಿದೆ.

ಪಿತೃ ಪಕ್ಷದ ಮಹತ್ವ

ಪುರಾಣಗಳಲ್ಲಿ ಸಹ ಈ ಪಿತೃಪಕ್ಷದ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ವಿವರಣೆ ನೀಡಿದ್ದಾರೆ.  ಪ್ರಕಾರ, ಪಿತೃ ಪಕ್ಷದಲ್ಲಿ ವಿಧಿ-ವಿಧಾನದಿಂದ ತರ್ಪಣ  ನೀಡಿದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಪಿತೃ ಪಕ್ಷದ ಸಮಯದಲ್ಲಿ ಏನನ್ನು ಅರ್ಪಿಸಿದರೂ ಪೂರ್ವಜರು ಅದನ್ನು  ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

ಪೂರ್ವಜರು ತಮ್ಮ ಪಾಲನ್ನು ಪಡೆದು  ಸಂತೋಷಪಡುತ್ತಾರೆ ಮತ್ತು ಆಶೀರ್ವದಿಸುತ್ತಾರೆ  ಎನ್ನುವ ನಂಬಿಕೆ ಸಹ ಇದೆ.  ಶ್ರಾದ್ಧವನ್ನು ಮಾಡದವರ ಹಿರಿಯರಿಗೆ ಮೋಕ್ಷ ಸಿಗುವುದಿಲ್ಲ ಮತ್ತು ನಂತರ ಪಿತೃದೋಷ ಲಭಿಸುತ್ತದೆ ಎಂಬುದು ಮತ್ತೊಂದು ನಂಬಿಕೆ. ಪಿತೃದೋಷದಿಂದ ಪರಿಹಾರ ಪಡೆಯಲು , ಪೂರ್ವಜರಿಗೆ ಶ್ರಾದ್ಧ ಅಥವಾ ಪೂಜೆಯನ್ನು ಮಾಡುವುದು ಬಹಳ  ಅವಶ್ಯಕ. ಮಕ್ಕಳಿಗಾಗಿ ಮಾತಾ-ಪಿತೃಗಳು ಮಾಡಿದ ತ್ಯಾಗ, ಕರ್ತವ್ಯಗಳ ಋಣದ ಭಾರವನ್ನು ಹಗುರ ಮಾಡಿಕೊಳ್ಳಲು ಮನುಷ್ಯ ಕಂಡುಕೊಂಡ ಸುಲಭ ಮಾರ್ಗವೇ ಈ ಪಿತೃಕಾರ್ಯವೆಂದರೆ ತಪ್ಪಾಗುವುದಿಲ್ಲ.  ಧರ್ಮಗ್ರಂಥಗಳ ಪ್ರಕಾರ, ಪ್ರತಿಯೊಬ್ಬ ಮನುಷ್ಯನ ಮೇಲೆ ಮೂರು ವಿಧದ ಸಾಲಗಳಿವೆ. ಇವುಗಳಲ್ಲಿ ದೇವ ಸಾಲ, ಋಷಿ ಸಾಲ ಮತ್ತು ಪಿತೃ ಸಾಲ ಸೇರಿವೆ. ನಮ್ಮ ಜೀವಿತಾವಧಿಯಲ್ಲಿ ನಾವು ಎಲ್ಲಾ ಮೂರು ಸಾಲಗಳನ್ನು ತೀರಿಸಬೇಕು. ಪಿತೃ ಪಕ್ಷದಲ್ಲಿ ಪಿತೃಗಳಿಗೆ ತರ್ಪಣ ನೀಡುವುದರಿಂದ, ಶ್ರಾದ್ಧ ಮಾಡುವುದರಿಂದ ಈ ಮೂರು ಸಾಲಗಳು ತೀರುತ್ತದೆ.

ಇದನ್ನೂ ಓದಿ: ಅನಂತ ಚತುರ್ದಶಿ ದಿನದ ಮಹತ್ವವೇನು? ಪೂಜೆಯ ವಿಧಾನ ಹೇಗೆ? ಇಲ್ಲಿದೆ..

ಪಿತೃಪಕ್ಷದ ಶ್ರಾದ್ಧದ ದಿನಗಳು

ಪೂರ್ಣಿಮಾ ಶ್ರಾದ್ಧ - 20 ಸೆಪ್ಟೆಂಬರ್

ಪ್ರತಿಪಾದ ಶ್ರಾದ್ಧ - 21 ಸೆಪ್ಟೆಂಬರ್

ದ್ವಿತೀಯ ಶ್ರಾದ್ಧ - 22 ಸೆಪ್ಟೆಂಬರ್

ತೃತೀಯ ಶ್ರಾದ್ಧ - 23 ಸೆಪ್ಟೆಂಬರ್

ಚತುರ್ಥಿ ಶ್ರಾದ್ಧ - 24 ಸೆಪ್ಟೆಂಬರ್

ಪಂಚಮಿ ಶ್ರಾದ್ಧ - 25 ಸೆಪ್ಟೆಂಬರ್

ಷಷ್ಠಿ ಶ್ರಾದ್ಧ - 27 ಸೆಪ್ಟೆಂಬರ್

ಸಪ್ತಮಿ ಶ್ರಾದ್ಧ - 28 ಸೆಪ್ಟೆಂಬರ್

ಅಷ್ಟಮಿ ಶ್ರಾದ್ಧ - 29 ಸೆಪ್ಟೆಂಬರ್

ನವಮಿ ಶ್ರಾದ್ಧ - 30 ಸೆಪ್ಟೆಂಬರ್

ದಶಮಿ ಶ್ರಾದ್ಧ - 1 ಅಕ್ಟೋಬರ್

ಏಕಾದಶಿ ಶ್ರಾದ್ಧ - 2 ಅಕ್ಟೋಬರ್

ದ್ವಾದಶಿ ಶ್ರಾದ್ಧ - 3 ಅಕ್ಟೋಬರ್

ತ್ರಯೋದಶಿ ಶ್ರಾದ್ಧ - 4 ಅಕ್ಟೋಬರ್

ಚತುರ್ದಶಿ ಶ್ರಾದ್ಧ - 5 ಅಕ್ಟೋಬರ್

ಅಮಾವಾಸ್ಯೆ ಶ್ರಾದ್ಧ - 6 ಅಕ್ಟೋಬರ್

ಪಿಂಡ ಪ್ರಧಾನದ ಮಹತ್ವ

ಮಹಾಭಾರತ ಯುದ್ಧದ ಸಮಯದಲ್ಲಿ ಕರ್ಣ ಮರಣಹೊಂದಿದಾಗ, ಅವನ ಆತ್ಮವು ಸ್ವರ್ಗಕ್ಕೆ ಹೋಯಿತು. ಅಲ್ಲಿ ಅವನಿಗೆ ತಿನ್ನಲು ಚಿನ್ನ ಮತ್ತು ಇತರ ಆಭರಣಗಳನ್ನು ನೀಡಲಾಯಿತು, ಅವನಿಗೆ ಏನೂ ಅರ್ಥವಾಗಲಿಲ್ಲ. ಬಹಳ ಹಸಿವಾದಾಗ ಅವನು ನನಗೆ ಆಹಾರ ಯಾಕೆ ನೀಡುತ್ತಿಲ್ಲ ಎಮದು ಕೇಳಿದಾಗ ಇಂದ್ರದೇವನು, ನೀವು ಕೇವಲ ಚಿನ್ನ, ಬೆಳ್ಳಿ ಇನ್ನಿತರ ಆಭರಣಗಳನ್ನು ಮಾತ್ರ ದಾನ ಮಾಡಿದ್ದು , ಆದರೆ, ಪಿತೃಗಳಿಗೆ ಎಂದಿಗೂ ಅನ್ನದಾನ ಮಾಡಿರಲಿಲ್ಲ. ಆದ್ದರಿಂದ ನಿಮಗೆ ತಿನ್ನಲು ನಾವು ಆಭರಣಗಳನ್ನು ನೀಡುತ್ತಿದ್ದೇವೆ ಎಂದು ಹೇಳುತ್ತಾನೆ.

ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಕುಟುಂಬ ಸದಸ್ಯರಿಂದ ಕಿರಿಕಿರಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಪೂರ್ವಜರ ಬಗ್ಗೆ ತನಗೆ ತಿಳಿದಿರಲಿಲ್ಲ, ನನ್ನನ್ನು ಕ್ಷಮಿಸಿ ಭೂಮಿಗೆ ಹೋಗುವ ಮೂಲಕ ನನ್ನ ತಪ್ಪನ್ನು ಸರಿಪಡಿಸಲು ನನಗೆ ಇನ್ನೊಂದು ಅವಕಾಶ ನೀಡಿ ಎಂದು ಬೇಡಿಕೊಳ್ಳುತ್ತಾನೆ, ಇಂದ್ರನು ಒಪ್ಪಿಕೊಂಡು ಮತ್ತೆ 15 ದಿನಗಳ ಕಾಲ  ಭೂ ಲೋಕಕ್ಕೆ ಕಳುಹಿಸಿದನು ಎನ್ನಲಾಗುತ್ತದೆ ಹಾಗೂ ಈ 15 ದಿನಗಳನ್ನೇ ಪಿತೃ ಪಕ್ಷ ಎಂದು ಕರೆಯಲಾಗುತ್ತದೆ.
Published by:Sandhya M
First published: