Health Tips: ನಕಾರಾತ್ಮಕ ಚಿಂತೆಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?

Mental Health: ನಮ್ಮ ಚಿಂತನೆಗಳು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ಹೆಚ್ಚು ನಕಾರಾತ್ಮಕವಾಗಿ ಚಿಂತಿಸಿದಷ್ಟು , ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಧ್ಯದ ಒತ್ತಡದ ಜೀವನದ ನಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿದೆ. ಆದರೆ ಕೆಲವೊಮ್ಮೆ ನಮಗೆ ನಾವೇ ಸಮಸ್ಯೆಗಳನ್ನು ತಂದುಕೊಳ್ಳುತ್ತೇವೆ. ನೆನಪಿಡಿ, ನಿಮ್ಮ ತಲೆಯಲ್ಲಿ ಒಂದು ಆಲೋಚನೆ ಇರುವುದರಿಂದ, ಅದು ನಿಜ ಎಂದು ಅರ್ಥವಲ್ಲ. ನೀವೇ ನಿಮಗೆ ಇಷ್ಟ ಬಂದ ಸನ್ನಿವೇಶವನ್ನು ಊಹಿಸಿಕೊಂಡು ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ತಪ್ಪು. ಈ ಆಧುನಿಕ ಯುಗದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯ. ನಮ್ಮನ್ನ ಕಾಡುವ ನಕಾರಾತ್ಮಕ ಯೋಚನೆಗಳು ನಮ್ಮ ಜೀವನವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತದೆ.

ಈ ಬಗ್ಗೆ ಹಲವು ಬಾರಿ ಯೋಚಿಸಬೇಕಾದ ಅಗತ್ಯವಿದೆ. , ಇಂದು ನಿಮಗೆ ಒಂದು ವಿಷಯ ತಪ್ಪಾದರೆ ಮತ್ತು ನೂರಾರು ಸರಿ ಹೋದರೆ, ನೀವು ತಪ್ಪಾಗಿ ಹೋದ ಒಂದು ವಿಷಯದ ಬಗ್ಗೆ ಯೋಚಿಸುವ ಸಾಧ್ಯತೆಯಿದೆ. ಅಲ್ಲದೇ ಅದೇ ವಿಚಾರ ನಿಮ್ಮ ದಿನದ ಮೇಲೂ ಪರಿಣಾಮ ಬೀರುತ್ತದೆ. ಅದರ ಬದಲು ಆ ನೂರು ಸರಿ ವಿಚಾರಗಳ ಬಗ್ಗೆ ಯೋಚಿಸಿದರೆ, ಇನ್ನು ಒಳ್ಳೆಯ ವಿಚಾರಗಳು ತಲೆಯಲ್ಲಿ ಬರುತ್ತವೆ. ನಮ್ಮ ಆಲೋಚನೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯ ಎಂದರೆ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ , ಮಾನಸಿಕ ಆರೋಗ್ಯ ಸಹ ಮುಖ್ಯವಾಗುತ್ತದೆ. ಒಂದು ಕಡೆ ಆರೋಗ್ಯ ಸರಿ ಇಲ್ಲದಿದ್ದಲ್ಲಿ ಇನ್ನೊಂದು ಕಡೆ ಸಹ ಆರೋಗ್ಯ ಹಾಳಾಗುತ್ತದೆ. ಅವೆಲ್ಲವೂ ಒಂದು ವ್ಯವಸ್ಥೆಯ ಅಡಿಯಲ್ಲಿ ಬರುತ್ತದೆ.

ನಮ್ಮ ದೇಹದ ಯಾವುದೇ ರೀತಿಯ ಬೇಡಿಕೆ ಅಥವಾ ಬೆದರಿಕೆಗೆ ಪ್ರತಿಕ್ರಿಯಿಸುವ ನೈಸರ್ಗಿಕ ವಿಧಾನವೆಂದರೆ ಒತ್ತಡ. ನಾವು ಬಹು ಬೇಗನೆ ಒತ್ತಡಕ್ಕೆ ಸಿಲುಕುತ್ತೇವೆ. ನಕಾರಾತ್ಮಕವಾಗಿ ಚಿಂತಿಸಲು ಆರಂಭ ಮಾಡುತ್ತೇವೆ. ಈ ಅಭ್ಯಾಸವನ್ನು ನಾವು ಬಿಡಬೇಕು.

ನಮಗೆ ಏನೋ ಸಮಸ್ಯೆಯಾಗಿದೆ, ಅಥವಾ ಅಪಾಯವಿದೆ ಎಂಬುದು ಗೋಚರಿಸಿದಾಗ ನಮ್ಮ ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ನಮ್ಮೆಲ್ಲ ಗಮನವೂ ಆ ಸಮಸ್ಯೆಯ ಕಡೆ ತಿರುಗುತ್ತದೆ. ನಮ್ಮ ಉಳಿದ ಎಲ್ಲಾ ಕಾರ್ಯಗಳು ಸ್ಥಗಿತಗೊಳ್ಳುತ್ತದೆ. ಇವೆಲ್ಲವೂ ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆ, ಪ್ರತಿರಕ್ಷಣಾ ವ್ಯವಸ್ಥೆ, ಮೂಲಭೂತವಾಗಿ ಜೀವನದ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಎಲ್ಲಾವೂ ಬದಲಾಗುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಸುಲಭ ಉಪಾಯ

ನಮ್ಮ ಸಮಸ್ಯೆಯೆಂದರೆ, ನಾವು ಆಧುನಿಕ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ನಮ್ಮನ್ನ ನಮ್ಮ ಆಲೋಚನೆಗಳೇ ಕಾಡುತ್ತವೆ, ಬೆನ್ನಟ್ಟಿ ಬರುತ್ತವೆ. ಸಣ್ಣ ಅಹಿತಕರ ಘಟನೆಗಳನ್ನು ನಾವು ದೊಡ್ಡದು ಮಾಡುತ್ತೇವೆ. ಆಫೀಸಿನ ವಿಚಾರಗಳನ್ನು ಮನೆಯಲ್ಲಿ ಚಿಂತಿಸುತ್ತೇವೆ. ನಾವು ಮಾಡುವ ಈ ತಪ್ಪುಗಳೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.
ಹಾಗಾದರೆ ನಕಾರಾತ್ಮಕ ಆಲೋಚನೆಗಳ ವಿರುದ್ಧ ಈ ಯುದ್ಧವನ್ನು ನಾವು ಗೆಲ್ಲುವುದು ಹೇಗೆ?

ಯಾವಾಗಲೂ ಹೆಚ್ಚು ನಕಾರಾತ್ಮಕ ಅಂಶಗಳಿಂದ ದೂರವಿರಿ. ಸಣ್ಣ ವಿಚಾರಗಳಿಗೆ ಚಿಂತೆ ಮಾಡುವುದನ್ನ ಬಿಡಿ. ನಿಮ್ಮ ಮನಸಿಗೆ ನೆಮ್ಮದಿ ನೀಡುವ ಕೆಲಸಗಳತ್ತ ಗಮನಹರಿಸಿ.

ಧ್ಯಾನ , ಪ್ರಾಣಯಾಮ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸಿ.

ಅಲ್ಲದೇ ಒಳ್ಳೆಯ ವಿಚಾರಗಳನ್ನು ಮಾತ್ರ ಚಿಂತಿಸಿ, ಸಾವಿರ ಸಂತೋಷದ ಮಧ್ಯೆ ಒಂದು ಕ್ಷುಲ್ಲಕ ನೋವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡಬಾರದು.

ನೀವು ನಕಾರಾತ್ಮಕವಾಗಿ ಚಿಂತಿಸುವುದರಿಂದ ನಿಮಗೆ ತೊಂದರೆಗಳೇ ಜಾಸ್ತಿ ಹೊರತು ಒಳಿತಾಗುವುದಿಲ್ಲ ಎಂಬುದನ್ನ ಅರಿತುಕೊಳ್ಳಿ.

ನಿಮ್ಮ ದಿನವನ್ನು ವ್ಯಾಯಾಮ ,ಕೆಲಸ ಎಂದು ಬ್ಯೂಸಿಯಾಗಿರಿಸಿ,ಆಗ ನಕಾರಾತ್ಮಕ ಚಿಂತನೆಗಳಿಂದ ದೂರವಿಡಲು ಸಹಾಯ ಮಾಡುತ್ತದೆ.
Published by:Sandhya M
First published: