ಮಳೆಗಾಲದ ಆರೋಗ್ಯಕ್ಕೆ ಏಳು ಬಗೆಯ ವಿಶಿಷ್ಟ ಚಹಾ

news18
Updated:July 17, 2018, 6:59 PM IST
ಮಳೆಗಾಲದ ಆರೋಗ್ಯಕ್ಕೆ ಏಳು ಬಗೆಯ ವಿಶಿಷ್ಟ ಚಹಾ
news18
Updated: July 17, 2018, 6:59 PM IST
-ನ್ಯೂಸ್ 18 ಕನ್ನಡ 

ಟೀ ಎಂಬುದು ಭಾರತೀಯರ ಆಹಾರ ಪದ್ದತಿಯ ಅವಿಭಾಜ್ಯ ಭಾಗವಾಗಿದೆ. ಚೀನಿಯರ ಈ ಪಾನೀಯವನ್ನು ಆಯಾ ಪ್ರದೇಶಕ್ಕೆ ತಕ್ಕಂತೆ ತಮ್ಮದೇ ರುಚಿಗೆ ಮಾರ್ಪಡಿಸಿಕೊಂಡಿದ್ದಾರೆ. ಅಲ್ಲದೆ, ಇದರಲ್ಲಿ ಔಷಧೀಯ ಗುಣಗಳನ್ನು ಸೇರಿಸುವ ಮೂಲಕ ಮನೆಮದ್ದಾಗಿ  ಬಳಸಲಾಗುತ್ತಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಶೀತ, ಕೆಮ್ಮು, ಜ್ವರ, ನ್ಯುಮೋನಿಯಾ ಕಾಯಿಲೆಗಳಿಗೆ ಚಹಾ ಸೇವನೆ ಕೂಡ ಉತ್ತಮ ಪರಿಹಾರ. ಮಾನ್ಸೂನ್​ನಲ್ಲಿ ಹರಡುವ ಅಲರ್ಜಿಯನ್ನು ದೂರ ಮಾಡಲು ಇಲ್ಲಿವೆ  7 ವಿವಿಧ ಚಹಾ ರುಚಿಗಳು.

ಹರ್ಬಲ್ ಟೀ : ದೇಹದ ಪ್ರತಿರಕ್ಷಣೆ ಹೆಚ್ಚಿಸಿ ಮೆದುಳಿನ ಚಟುವಟಿಕೆಯನ್ನು ಕ್ರೀಯಾಶೀಲವಾಗಿಸಲು ಹರ್ಬಲ್ ಟೀ ಕುಡಿಯುವುದು ಉತ್ತಮ. ವಿಟಮಿನ್ ಸಿ ಹೆಚ್ಚಿರುವ ಗಿಡಮೂಲಿಕೆಯಿಂದ ತಯಾರಿಸಲಾಗುವ ಹರ್ಬಲ್​ ಟೀ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಪಾನೀಯವನ್ನು ಕುಡಿಯುವುದರಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ವೈಟ್ ಟೀ : ಮಳೆಗಾಲದಲ್ಲಿ ಕುಡಿಯಬೇಕಾದ ಅತ್ಯುತ್ತಮ ಚಹಾ ಇದಾಗಿದ್ದು, ಇದರಲ್ಲಿ ಅಂಟಿ-ಆ್ಯಕ್ಸಿಡೆಂಟ್​​ ಅಂಶಗಳು ಹೇರಳವಾಗಿರುತ್ತದೆ. ನೈಸರ್ಗಿಕವಾಗಿ ಚರ್ಮದ ಸಮಸ್ಯೆಯನ್ನು ದೂರ ಮಾಡುವಲ್ಲಿಯೂ ವೈಟ್​ ಟೀ ಪ್ರಮುಖ ಪಾತ್ರವಹಿಸುತ್ತದೆ. ಬ್ಯಾಕ್ಟೀರಿಯಾ, ಯುವಿ ಕಿರಣಗಳಿಂದ ಹಾನಿಗೊಳಗಾದ ಚರ್ಮವನ್ನು ಈ ಪಾನೀಯ ರಕ್ಷಿಸುತ್ತದೆ. ಇದಲ್ಲದೆ, ಚರ್ಮವು ಟ್ಯಾನ್​ ಆಗುವುದನ್ನು ವೈಟ್​ ಟೀ ತಡೆಯುತ್ತದೆ.

ಗ್ರೀನ್ ಟೀ : ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುವ ಗ್ರೀನ್ ಟೀ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಚಹಾ ಪೊಟ್ಯಾಶಿಯಂ, ಐರನ್, ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಸಿ ಮತ್ತು ಎ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ, ಒಟ್ಟಾರೆ ದೃಷ್ಟಿಯಿಂದ ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ಪೆಪ್ಪರ್ ಮಿಂಟ್ ಟೀ : ಪುದೀನಾ ಎಲೆಗಳ ಮಿಶ್ರಣದಿಂದ ತಯಾರಿಸಲಾಗುವ ಪೆಪ್ಪರ್ ಮಿಂಟ್ ಟೀ ಸೇವನೆಯಿಂದ ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ಒಣ ಕೆಮ್ಮಿಗೂ ಈ ಚಹಾ ಪರಿಣಾಮಕಾರಿಯಾಗಿದೆ. ಗ್ಯಾಸ್ಟಿಕ್ , ಹೊಟ್ಟೆ ಉಬ್ಬಿನ ಸಮಸ್ಯೆ, ಸ್ನಾಯು ಸೆಳೆತ ಮತ್ತು ವಾಕರಿಕೆಯನ್ನು ನಿವಾರಿಸುವಲ್ಲಿ ಪೆಪ್ಪರ್ ಮಿಂಟ್ ಟೀ ಸೇವನೆ ಪ್ರಯೋಜನಕಾರಿ.

ಮಸಾಲ ಟೀ : ಮಳೆಗಾಲದಲ್ಲಿ ಮಸಾಲ ಟೀಯನ್ನು ಕುಡಿಯುವುದರಿಂದ ಹಲವು ಸೋಂಕುಗಳನ್ನು ತಡೆಯಬಹುದು. ಕೆಮ್ಮು, ಶೀತ ಮತ್ತು ಜ್ವರ ಉಂಟಾಗದಿರಲು ಮಸಾಲ ಟೀ ಕುಡಿಯುವುದು ಉತ್ತಮ.
Loading...

ಹೈಬಿಸ್ಕಸ್ ಟೀ : ಹೈಬಿಸ್ಕಸ್ ಚಹಾದಲ್ಲಿ ವಿಟಮಿನ್ ಸಿ, ಆಂಥೋಸ್ಯಾನಿನ್ ಮತ್ತು ಆಂಟಿ ಆಕ್ಸಿಡೆಂಟ್​ಗಳು ಸಮೃದ್ಧವಾಗಿರುತ್ತದೆ. ಇದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಮಳೆಗಾಲದಲ್ಲಿ ಉಂಟಾಗುವ ಸೋಂಕುಗಳನ್ನು ತಡೆಯುತ್ತದೆ ಎಂದು ಬಿಎಲ್​ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೀನಿಯರ್ ಡಯಟಿಸಿಯನ್ ಪೂಜಾ ಹಜ್ರಾಯಿ ತಿಳಿಸಿದ್ದಾರೆ.

ಸ್ಪೈಸ್ಡ್​ ರೋಸ್ ಟೀ : ರೋಸ್ ಮತ್ತು ಮಸಾಲೆ ರುಚಿಯನ್ನು ಒಳಗೊಂಡಿರುವ ಈ ಚಹಾ ಸೇವನೆಯಿಂದ ಮೂಡ್​ ಉತ್ತಮಗೊಳ್ಳುತ್ತದೆ. ಮಳೆಗಾಲದಲ್ಲಿ ಕುಡಿಯಬಹುದಾದ ಅತ್ಯುತ್ತಮ ಪಾನೀಯಗಳಲ್ಲಿ ಸ್ಪೈಸ್ಡ್​ ರೋಸ್ ಟೀ ಕೂಡ ಒಂದು.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ