Winter Immunity Booster: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸೂಪರ್ ಜ್ಯೂಸ್​ಗಳು

Immunity Booster Juice: ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವುದನ್ನು ಮುಂದುವರಿಸಲು ಚಳಿಗಾಲದ ವಿಶೇಷ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಹೌದು, ಚಳಿಗಾಲದಲ್ಲಿ ನಾವು ಸೇವನೆ ಮಾಡುವ ಆಹಾರ ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಮುಖವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ(Corona) ಕಾರಣಗಳಿಂದ ಆರೋಗ್ಯದ ಬಗ್ಗೆ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದ್ದ ವ್ಯಕ್ತಿ ಕೂಡ ಈ ವರ್ಷ ಆರೋಗ್ಯದ(Health) ಬಗ್ಗೆ ಹೆಚ್ಚು ಕಾಳಜಿವಹಿಸುವಂತೆ ಕಾಲ ಬದಲಾಯಿತು. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ರೋಗನಿರೋಧಕ(immunity Power) ಶಕ್ತಿಯನ್ನು ಸುಧಾರಿಸಲು ಯಾವುದೇ ಅವಕಾಶ ಬಿಡಲಿಲ್ಲ. ನಮ್ಮಲ್ಲಿ ಹೆಚ್ಚಿನವರು ನಮ್ಮ ಇಮ್ಯುನಿಟಿ ಡಯಟ್ ಚಾರ್ಟ್‌ನಲ್ಲಿ ನಿರ್ದಿಷ್ಟವಾದ ಆಹಾರಗಳು ಮತ್ತು ಪಾಕವಿಧಾನಗಳನ್ನು ಹೊಂದಿದ್ದೇವೆ. ಆದರೆ ಋತುವಿನ ಬದಲಾವಣೆಯೊಂದಿಗೆ, ಈಗ ನಮ್ಮ ಪ್ಯಾಂಟ್ರಿಯಲ್ಲಿ ಹೊಸ ಆಹಾರಗಳಿವೆ. ಆದ್ದರಿಂದ, ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವುದನ್ನು ಮುಂದುವರಿಸಲು ಚಳಿಗಾಲದ ವಿಶೇಷ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಹೌದು, ಚಳಿಗಾಲದಲ್ಲಿ ನಾವು ಸೇವನೆ ಮಾಡುವ ಆಹಾರ ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಮುಖವಾಗುತ್ತದೆ.

 ನಿಮ್ಮ ಚಳಿಗಾಲದ ಆಹಾರದಲ್ಲಿ ನೀವು ಸೇರಿಸಬಹುದಾದ ಕೆಲವು ಪರಿಣಾಮಕಾರಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜ್ಯೂಸ್​ಗಳು ಇಲ್ಲಿವೆ.

 ಬೀಟ್ರೂಟ್-ಕ್ಯಾರೆಟ್-ಆಪಲ್ ಜ್ಯೂಸ್

ಈ ಚಳಿಗಾಲದಲ್ಲಿ ವಿಶೇಷ ಬೀಟ್‌ರೂಟ್ ಮತ್ತು ಕ್ಯಾರೆಟ್‌ಗಳನ್ನು ಸೇಬು ಹಣ್ಣುಗಳ ಮಿಶ್ರಣ ಈ ಶಕ್ತಿಯುತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಒಂದು ಹನಿ ನಿಂಬೆ ರಸವು ಪ್ರತಿ ಸಿಪ್ ಅನ್ನು ಸೂಪರ್ ರಿಫ್ರೆಶ್ ಮಾಡುತ್ತದೆ. ಅಲ್ಲದೇ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಸ್ಪೈಸಿ ಮಸಾಲೆ ರೊಟ್ಟಿ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ

 ಆಪಲ್ ಮತ್ತು ಕಿನ್ನು ವಿಂಟರ್ ಪಂಚ್

ಚಳಿಗಾಲ ಆರಂಭವಾಗಿದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.  ಈ ಸಮಯದಲ್ಲಿ ಸೇಬು, ಕಿತ್ತಳೆ ಮತ್ತು ಅನಾನಸ್ ಹಣ್ಣಿನಿಂದ ಮಾಡಿದ ಈ ಬೆಚ್ಚಗಿನ ಮಾಕ್‌ಟೈಲ್  ಇದಕ್ಕೆ ಹೇಳಿ ಮಾಡಿಸಿದ ಆಹಾರ ಪದಾರ್ಥ. ಇದನ್ನು ಇನ್ನೂ ರುಚಿಕರವಾಗಿರಿಸಲು ದಾಲ್ಚಿನ್ನಿ, ಜಾಯಿಕಾಯಿ, ನಿಂಬೆ ಮತ್ತು ಲವಂಗವನ್ನು ಸಹ ಸೇರಿಸಲಾಗುತ್ತದೆ. ಅಲ್ಲದೇ ಇದಕ್ಕೆ ಜೇನುತುಪ್ಪ ಸೇರಿಸಿದರೆ ಇನ್ನೂ ಆರೋಗ್ಯಕರ.

 ಸಾಂಬಾ

ದಾಲ್ಚಿನ್ನಿ, ಶುಂಠಿ, ಕಿತ್ತಳೆ ರಸ, ಸೇಬಿನ ರಸ, ಜೇನು ಮತ್ತು ನಿಂಬೆ . ಈ ಎಲ್ಲಾವನ್ನು ಒಟ್ಟಿಗೆ ಬೆರೆಸಿದರೆ ಸಾಂಬಾ ಪಾನೀಯ ಸಿದ್ಧವಾಗುತ್ತದೆ. ಇವೆಲ್ಲ ಒಟ್ಟಿಗೆ ಸೇರಿದರೆ ಬಹಳ ಆರೋಗ್ಯಕರ. ಇದನ್ನು ಚಳಿಗಾಲದಲ್ಲಿ ನಿಯಮಿತವಾಗಿ ಸೇವನೆ ಮಾಡುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೀಟ್ರೂಟ್-ದಾಳಿಂಬೆ ಜ್ಯೂಸ್

ಈ ಬಿಸಿ ಗುಲಾಬಿ ಬಣ್ಣದ ಪಾನೀಯವು ಆರೋಗ್ಯಕ್ಕೆ ಹೆಚ್ಚು ಉತ್ತಮ. ಬೀಟ್‌ರೂಟ್ ಮತ್ತು ದಾಳಿಂಬೆಯನ್ನು ಅಲೋವೆರಾವನ್ನು ಸೇರಿಸಿದರೆ ಬಹಳ ಆರೋಗ್ಯಕರ. ಅಲ್ಲದೇ ಇದು ನಿಮಗೆ ಸ್ವಲ್ಪ ಸ್ಪೈಸಿಯಾಗಿ ಬೇಕು ಎಂದರೆ ನೀವು ಕರಿಮೆಣಸಿನ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ ಸೇವನೆ ಮಾಡುವುದು ಉತ್ತಮ. ಇದು ನಿಜಕ್ಕೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಕಿತ್ತಳೆ ಮತ್ತು ತುಳಸಿ ಜ್ಯೂಸ್​

ರಸಭರಿತವಾದ ಕಿತ್ತಳೆ ಚಳಿಗಾಲದ ಉತ್ಪನ್ನಗಳ ಪ್ರಮುಖ ಅಂಶವಾಗಿದೆ. ಇದಕ್ಕೆ ತಾಜಾ ತುಳಸಿ ಎಲೆಗಳನ್ನು ಸೇರಿಸಿ ಮತ್ತು ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸಿ. ಉತ್ತಮ ಆರೋಗ್ಯ ಮತ್ತು ರುಚಿಗೆ ವಿಟಮಿನ್ ಸಿ ಭರಿತ ಈ ಜ್ಯೂಸ್​ ನಿಜಕ್ಕೂ ಆರೋಗ್ಯದಾಯಕ. ಇದು ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ನೀಡುವುದಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಕಿತ್ತಳೆ ಮತ್ತು ಕ್ಯಾರೆಟ್ ಜ್ಯೂಸ್

ಇದನ್ನೂ ಓದಿ: 10 ನಿಮಿಷದಲ್ಲಿ ರೆಡಿ ಮಾಡ್ಬಹುದು ಈ ಮಂಗಳೂರು ಸ್ಟೈಲ್ ತಿಂಡಿ, ಮಕ್ಕಳಿಗೆ ಸಖತ್ ಇಷ್ಟ!

ತಾಜಾ ಕಿತ್ತಳೆ ಮತ್ತು ಚಳಿಗಾಲದ-ವಿಶೇಷ ಕೆಂಪು ಕ್ಯಾರೆಟ್‌ಗಳನ್ನು ಒಟ್ಟಿಗೆ ಬೆರೆಸಿದಾಗ ಅಗಾಧವಾದ ಫಲಿತಾಂಶವನ್ನು ನೀಡುತ್ತದೆ. ಚಳಿಗಾಲದಲ್ಲಿ ಈ ಹಣ್ಣು ಮತ್ತು ತರಕಾರಿ ಜ್ಯೂಸ್ ಹೆಚ್ಚು ಪ್ರಯೋಜನಕಾರಿ.
Published by:Sandhya M
First published: